
ಮಳೆಗಾಲದಲ್ಲಿ ನಿಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸುವುದು ಮುಖ್ಯ. ಈ ಸಮಯದಲ್ಲಿ ಸೋಂಕಿನ ಅಪಾಯ ಹೆಚ್ಚಾಗುವುದರಿಂದ, ಕೋಳಿ ಮಾಂಸ ಅಥವಾ ಕುರಿ ಮಾಂಸ ತಿನ್ನುವುದು ಉತ್ತಮವೇ ಎಂದು ಅನೇಕ ಜನರು ಯೋಚನೆ ಮಾಡುತ್ತಾರೆ. ಎರಡೂ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಾಗಿದ್ದರೂ, ಪೋಷಣೆ, ಕೊಬ್ಬಿನ ಅಂಶ, ಜೀರ್ಣಕ್ರಿಯೆ ಮತ್ತು ಕ್ಯಾಲೋರಿ ಕೌಂಟ್ ವಿಷಯದಲ್ಲಿ ಅವುಗಳ ನಡುವೆ ತುಂಬಾನೆ ವ್ಯತ್ಯಾಸಗಳಿವೆ. ಮಳೆಗಾಲದಲ್ಲಿ ನಿಮ್ಮ ಆರೋಗ್ಯಕ್ಕೆ ಯಾವ ಆಯ್ಕೆ ಉತ್ತಮ ನೋಡೋಣ.
ಮಳೆಗಾಲದಲ್ಲಿ ನೀವು ಕಡಿಮೆ ಕೊಬ್ಬು, ಹೆಚ್ಚಿನ ಪ್ರೋಟೀನ್ ಆಹಾರದ ಆಯ್ಕೆಯನ್ನು ಹುಡುಕುತ್ತಿದ್ದರೆ, ಸ್ಕಿನ್ ಲೆಸ್ ಚಿಕನ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಮಸಲ್ ರಿಪೇರಿ ಮತ್ತು ದೈಹಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಉತ್ತಮ ಗುಣಮಟ್ಟದ ಪ್ರೋಟೀನ್ ಹೊಂದಿರುತ್ತದೆ. ಸಾಮಾನ್ಯವಾಗಿ, ಕೋಳಿ ಮಾಂಸವು ಮಟನ್ ಗಿಂತ ಜೀರ್ಣಿಸಿಕೊಳ್ಳಲು ಸುಲಭ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ; ಆದ್ದರಿಂದ, ತಮ್ಮ ತೂಕವನ್ನು ನಿರ್ವಹಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆ.
ಮಟನ್ ಪ್ರೋಟೀನ್ ಜೊತೆಗೆ ಕಬ್ಬಿಣ, ಸತು ಮತ್ತು ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಈ ಪೋಷಕಾಂಶಗಳು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಕೋಳಿ ಮಾಂಸಕ್ಕೆ ಹೋಲಿಸಿದರೆ, ಮಟನ್ ಹೆಚ್ಚಿನ ಮಟ್ಟದ ಸ್ಯಾಚುರೇಟೆಡ್ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದ್ದರಿಂದ, ಇದನ್ನು ಮಿತವಾಗಿ ಸೇವಿಸುವುದು ಒಳ್ಳೆಯದು, ವಿಶೇಷವಾಗಿ ಹೃದಯ ಕಾಯಿಲೆ ಅಥವಾ ಹೆಚ್ಚಿನ ಕೊಲೆಸ್ಟ್ರಾಲ್ ಇರುವವರು ಕಡಿಮೆ ತಿನ್ನಬೇಕು.
ಮಳೆಗಾಲದಲ್ಲಿ ಯಾವಾಗಲೂ ಫ್ರೆಶ್ ಮತ್ತು ಸಂಪೂರ್ಣವಾಗಿ ಬೇಯಿಸಿದ ಮಾಂಸವನ್ನು ಸೇವಿಸಿ. ಸರಿಯಾಗಿ ಬೇಯಿಸದ ಮಾಂಸ ಅಥವಾ ದೀರ್ಘಕಾಲದವರೆಗೆ ಹೊರಗೆ ಇಟ್ಟ ಮಾಂಸವು ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ನೈರ್ಮಲ್ಯದ ಬಗ್ಗೆ ವಿಶೇಷ ಗಮನ ಕೊಡಿ ಮತ್ತು ಯಾವಾಗಲೂ ವಿಶ್ವಾಸಾರ್ಹ ಅಂಗಡಿಗಳಿಂದ ಮಾಂಸವನ್ನು ಖರೀದಿಸಿ.
ಶಕ್ತಿಯು ಒಂದೇ ಆಹಾರ ಪದಾರ್ಥದಿಂದಲ್ಲ, ಬದಲಾಗಿ ಸಂಪೂರ್ಣ ಮತ್ತು ಸಮತೋಲಿತ ಆಹಾರದಿಂದ ಬರುತ್ತದೆ. ಕೋಳಿ ಮತ್ತು ಕುರಿ ಎರಡೂ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಒದಗಿಸುತ್ತವೆ. ಕಡಿಮೆ ಕೊಬ್ಬಿನೊಂದಿಗೆ ಹೆಚ್ಚಿನ ಪ್ರೋಟೀನ್ ಸೇವಿಸುವುದು ನಿಮ್ಮ ಗುರಿಯಾಗಿದ್ದರೆ, ಚಿಕನ್ ಉತ್ತಮ ಆಯ್ಕೆ. ಆದರೆ, ನಿಮಗೆ ಕಬ್ಬಿಣ ಮತ್ತು ವಿಟಮಿನ್ ಬಿ 12 ಅಗತ್ಯವಿದ್ದರೆ, ಮಟನ್ ಅನ್ನು ಮಿತವಾಗಿ ಸೇವಿಸುವುದು ಪ್ರಯೋಜನಕಾರಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.