ಫ್ರಿಡ್ಜ್ ಇಲ್ಲದ ಕಾಲದಲ್ಲಿ ನಮ್ಮ ಪೂರ್ವಜರು ಆಹಾರ ಕೆಡದಂತೆ ಮಾಡ್ತಿದ್ದ ಈ ತಂತ್ರಗಳು ತಿಳಿದ್ರೆ ಅಚ್ಚರಿ ಪಡ್ತೀರಿ!

Published : Aug 26, 2026, 12:57 PM IST
How Did Ancient People Preserve Food Without Refrigerators Surprising Methods

ಸಾರಾಂಶ

ರೆಫ್ರಿಜರೇಟರ್ ಇಲ್ಲದ ಪ್ರಾಚೀನ ಕಾಲದಲ್ಲಿ ಜನರು ಆಹಾರವನ್ನು ಹೇಗೆ ಸಂರಕ್ಷಿಸುತ್ತಿದ್ದರು ಎಂಬುದನ್ನು ಈ ಲೇಖನ ವಿವರಿಸುತ್ತದೆ. ಆಹಾರ ಕೆಡದಂತೆ ತಡೆಯಲು ಅವರು ಮಂಜುಗಡ್ಡೆ, ಬಿಸಿಲಿನಲ್ಲಿ ಒಣಗಿಸುವುದು, ಉಪ್ಪು ಹಾಕುವುದು ಮತ್ತು ಹೊಗೆಯಂತಹ ನೈಸರ್ಗಿಕ ವಿಧಾನಗಳನ್ನು ಬಳಸುತ್ತಿದ್ದರು.

ಇವತ್ತು ಪ್ರತಿ ಮನೆಗಳಲ್ಲಿ ಫ್ರಿಡ್ಜ್(ರೆಫ್ರಿಜರೇಟರ್)ಗಳಿವೆ. ತರಕಾರಿಯಿಂದ ಹಿಡಿದು ರಾತ್ರಿ ಉಳಿದ ಅನ್ನ ಸಾಂಬಾರಿನವರೆಗೆ ಪ್ರತಿಯೊಂದನ್ನೂ ಫ್ರಿಡ್ಜ್‌ನಲ್ಲಟ್ಟು ಆಹಾರ ಕೆಡದಂತೆ ಸಂಗ್ರಹಿಸಲಾಗುತ್ತಿದೆ. ಆದರೆ ರೆಫ್ರಿಜರೇಟರ್ ಇಲ್ಲದ ಪ್ರಾಚೀನ ಕಾಲದ ಜನರು ಆಹಾರ ಕೆಡದಂತಿರಲು ಏನು ಮಾಡುತ್ತಿದ್ದರು? ಈ ಬಗ್ಗೆ ಯಾವತ್ತಾದ್ರೂ ನೀವು ಯೋಚಿಸಿದ್ದೀರಾ? ಹೌದು ಪ್ರಾಚೀನ ಕಾಲದ ಜನರು ಕೂಡ ಆಹಾರ ಸಂರಕ್ಷಣೆ ಮಾಡುತ್ತಿದ್ದರೂ ಅದು ಹೇಗೆ ಎಂಬುದು ಇಲ್ಲಿ ತಿಳಿದುಕೊಳ್ಳೋಣ.

ಪ್ರಾಚೀನ ಕಾಲದ ಜನರಿಗೆ ಈಗಿನಂತೆ ಆಧುನಿಕ ಸೌಲಭ್ಯಗಳಿಲ್ಲದಿದ್ರೂ ಪ್ರಕೃತಿಯ ಸಹಾಯದಿಂದ ಆಹಾರವನ್ನ ಕೆಡದಂತೆ ಸಂಗ್ರಹಿಸುತ್ತಿದ್ದರು. ಅನೇಕ ಸ್ಥಳಗಳಲ್ಲಿ ಈ ವಿಧಾನಗಳನ್ನು ಕಂಡು ಹಿಡಿದ ವಿಜ್ಞಾನಿಗಳು ಮತ್ತು ಇತಿಹಾಸಕಾರರು ಅಂದಿನ ಜನರ ರಹಸ್ಯಗಳನ್ನು ಬಿಚ್ಚಿಟ್ಟದ್ದಾರೆ.

ಆಹಾರ ಕೆಡದಂತೆ ಮಂಜುಗಡ್ಡೆ ಬಳಕೆ

ಪ್ರಾಚೀನ ಕಾಲದ ಜನರು ಮೊದಲು ನೀರಿನ ಜಾಗ, ತಂಪಾದ ಸ್ಥಳಗಳನ್ನು ಆಶ್ರಯಿಸಿದರು. ಪರ್ವತ ಪ್ರದೇಶಗಳಲ್ಲಿ ವಾಸಿಸುವವರು ಹಿಮ ಮತ್ತು ಮಂಜುಗಡ್ಡೆಯ ಗುಹೆಗಳಲ್ಲಿ ಆಹಾರ ಸಂಗ್ರಹಿಸುತ್ತಿದ್ದರು. ತುಂಬಾ ಶೀತದ ವಾತಾವರಣ ಇರುತ್ತಿದ್ದರಿಂದ ಸಂಗ್ರಹಿಸಿದ ಮಾಂಸ ಇತರೆ ಆಹಾರಗಳನ್ನ ನೆಲದಡಿ ಗುಂಡಿಗಳನ್ನು ತೋಡಿ ಮುಚ್ಚಿಡುತ್ತಿದ್ದರು.

ಕೆಲವು ಆಹಾರಗಳನ್ನ ಬಿಸಿಲಿನಲ್ಲಿ ಒಣಗಿಸುವ ಮೂಲಕ

ಆಹಾರವನ್ನು ಸಂರಕ್ಷಿಸುವ ಸರಳ ಮಾರ್ಗವೆಂದರೆ ಬಿಸಿಲಿನಲ್ಲಿ ಒಣಗಿಸುವುದು, ಈ ವಿಧಾನ ಈಗಲೂ ಜನರು ಬಳಸುತ್ತಾರೆ. ಉದಾಹಾರಣೆಗೆ ಮಾಂಸ ಹೆಚ್ಚು ದಿನ ಬಳಸಲು ಬಿಸಿಲಿನಲ್ಲಿ ಒಣಗಿಸಿ ಅದನ್ನ ಇಟ್ಟುಕೊಳ್ಳುತ್ತಾರೆ. ಬಿಸಿಲಿಗೆ ಒಣಗಿದ ಮಾಂಸ ಬೇಗ ಕೆಡುವುದಿಲ್ಲವಂತೆ. ಪ್ರಾಚೀನ ಜನರು ಮಾಂಸ, ಮೀನು, ಹಣ್ಣು, ಧಾನ್ಯಗಳನ್ನು ಸಂಗ್ರಹಿಸುವ ಮುಂಚೆ ಬಿಸಿಲಿನಲ್ಲಿ ಒಣಗಿಸುತ್ತಿದ್ದರು. ಇದು ಆಹಾರದಲ್ಲಿನ ನೀರಿನ ಅಂಶವನ್ನು ಕಡಿಮೆ ಮಾಡಿ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯುತ್ತಿದ್ದರಿಂದ ಹೆಚ್ಚು ದಿನ ಉಪಯೋಗಕ್ಕೆ ಬರುತ್ತಿತ್ತು. ಒಣಗಿದ ಹಣ್ಣುಗಳು, ಪಾಪಡ್‌ಗಳು ಮತ್ತು ಉಪ್ಪಿನಕಾಯಿಗಳನ್ನು ತಯಾರಿಸಲು ಈ ವಿಧಾನವನ್ನು ಇಂದಿಗೂ ಬಳಸಲಾಗುತ್ತದೆ ಎಂಬುದು ಗಮನಾರ್ಹ.

ಉಪ್ಪಿನ ಕಾಯಿ ಬಳಕೆ:

ಫ್ರಿಡ್ಜ್ ಇಲ್ದ ಕಾಲದಲ್ಲಿ ಜನರು ಆಹಾರ ಸಂರಕ್ಷಿಸಲು ಹೆಚ್ಚು ಬಳಸಿದ್ದೆಂದರೆ ಉಪ್ಪು. ತೇವಾಂಶವನ್ನು ಹೊರತೆಗೆಯಲು ಮಾಂಸದ ತುಂಡುಗಳಿಗೆ ಉಪ್ಪು ಹಾಕುತ್ತಿದ್ದರು. ಬ್ಯಾಕ್ಟೀರಿಯಾದ ಬೆಳವಣಿಗೆ ಕಡಿಮೆ ಮಾಡುತ್ತಿತ್ತು. ಇದನ್ನೇ ಉಪ್ಪು ಹಾಕುವಿಕೆ ಎಂದು ಕರೆಯಲಾಗುತ್ತಿತ್ತು. ಈ ವಿಧಾನವು ಮಾವಿನಕಾಯಿ ಗೊಜ್ಜು ಮಾಡುವ ಮೊದಲು ಇದೇ ರೀತಿ ಒಣಗಿಸಲಾಗುತ್ತೆ. ಹೀಗಾಗಿ ಇದನ್ನು ಇಂದಿಗೂ ಉಪ್ಪಿನಕಾಯಿ, ಉಪ್ಪಿನ ಮೀನು ಮತ್ತು ಇತರ ಮಸಾಲೆಯುಕ್ತ ಆಹಾರಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಹೊಗೆಯಿಂದ ಸಂರಕ್ಷಣೆ:

ಬೆಂಕಿ ಬಳಕೆಗೆ ಬಂದ ನಂತರ ಪ್ರಾಚೀನ ಕಾಲದ ಜನರು ಮತ್ತೊಂದು ವಿಧಾನ ಬಳಸಲಾರಂಭಿಸಿದರು. ಹೊಗೆಯಿಂದ ಒಣಗಿಸುವುದು. ಮಾಂಸದ ತುಂಡುಗಳನ್ನು ಬೆಂಕಿಯ ಮೇಲೆ ನೇತುಹಾಕಿ ಕಡಿಮೆ ಹೊಗೆಯಾಡುವ ಒಲೆಯ ಮೇಲೆ ನೇತಾಕುತ್ತಿದ್ದರು. ಇದು ಆಹಾರದಲ್ಲಿನ ನೀರನ್ನು ಒಣಗಿಸುವುದಲ್ಲದೆ, ಹೊಗೆಯಲ್ಲಿರುವ ಕೆಲವು ಸಂಯುಕ್ತಗಳು ಆಹಾರ ಹಾಳಾಗಲು ಕಾರಣವಾಗುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತಿತ್ತು.. ಈ ವಿಧಾನದಿಂದ ಮಾಂಸವನ್ನು ವಾರಗಳವರೆಗೆ, ಕೆಲವೊಮ್ಮೆ ತಿಂಗಳುಗಳವರೆಗೆ ಸಂರಕ್ಷಿಸಲು ಸಾಧ್ಯವಾಯ್ತು. ನೀವು ಬೆಂಗಳೂರಿನಂತ ನಗರಗಳಲ್ಲಿ ಕೆಲವು ರೆಸ್ಟೊರೆಂಟ್ ಬಿರಿಯಾನಿ ಹಟ್‌ಗಳಲ್ಲಿ ಈ ರೀತಿ ದುಂಡಗೆ ಮಾಂಸದ ತುಣುಕುಗಳನ್ನ ಸುತ್ತಿ ನೇತುಹಾಕಿರುವುದು ಗಮನಿಸಹುದು, ಕೆಲಸ ಒಗೆಯಾಡುತ್ತಿರುತ್ತದೆ. ಅದರ ಬಿಸಿ ನಿರಂತರವಾಗಿ ನೇತುಹಾಕಿದ ಮಾಂಸಕ್ಕೆ ತಾಗುತ್ತದೆ. ಗ್ರಾಹಕರ ಬಂದಾಗ ಅಗತ್ಯವಿದ್ದಷ್ಟು ಕತ್ತರಿಸಲಾಗುತ್ತೆ. ಇದು ಒಮ್ಮೆ ನೇತುಹಾಕಿ ವಾರಗಳ ಕಾಲ ಗ್ರಾಹಕರಿಗೆ ಬಡಿಸಲಾಗುತ್ತೆ.

ಸಾವಿರಾರು ವರ್ಷಗಳ ಹಿಂದೆ, ಪ್ರಾಚೀನ ಮಾಂಸವನ್ನು ಕೆಡದಂತೆ ಇರಲು ಏನು ಮಾಡುತ್ತಿದ್ದರೆಂದರೆ ಜೌಗು ಪ್ರದೇಶವಾದ ಪೀಟ್ ಜೌಗು ಪ್ರದೇಶಗಳಲ್ಲಿ ಮುಳುಗಿಸಲಾಗುತ್ತಿತ್ತು ಈ ಬಗ್ಗೆ ವಿಜ್ಞಾನಿಗಳ ಸಂಶೋಧನೆಯು ಬಹಿರಂಗಪಡಿಸಿದೆ. ಇದು ಸಾಮಾನ್ಯ ಜೌಗು ಪ್ರದೇಶವಾಗಿರಲಿಲ್ಲ. ಈ ಜೌಗು ಪ್ರದೇಶ ತುಂಬಾ ತಂಪಾಗಿರುತ್ತಿತ್ತು. ಹಲವಾರು ಯುರೋಪಿಯನ್ ದೇಶಗಳಲ್ಲಿ ಇಂತಹ ಜೌಗು ಪ್ರದೇಶಗಳಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯದಾದ ಮಾಂಸ ಮತ್ತು ಬೆಣ್ಣೆಯನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ ಇವು ಹೆಚ್ಚಾಗಿ ಹಾಗೆಯೇ ಉಳಿದಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಒಂದೇ ಒಂದು ಪದಾರ್ಥ ಹಾಕಿದರೆ ಸಾಕು, ಬೇಳೆಕಾಳುಗಳಿಗೆ ಹುಳ ಹಿಡಿಯಲ್ಲ..ಫ್ರೆಶ್ ಆಗಿರುತ್ತೆ
ಎರಡೇ ಚಮಚ ಎಣ್ಣೆ ಬಳಸಿ ಬದನೇಕಾಯಿ, ಆಲೂಗಡ್ಡೆಯ ಕ್ರಿಸ್ಪಿ, ಟೇಸ್ಟಿ ಫ್ರೈ ಮಾಡೋದು ಹೇಗೆ ಗೊತ್ತಾ