ಬಿಸಿ ಬಿಸಿ ಒಬ್ಬಟ್ಟು – ರೊಟ್ಟಿನಾ ನ್ಯೂಸ್ ಪೇಪರ್ ಮೇಲೆ ಹಾಕೋ ಅಭ್ಯಾಸ ನಿಮಗೂ ಇದ್ಯಾ?

Published : Oct 23, 2026, 02:42 PM IST
newspaper

ಸಾರಾಂಶ

health tips : ನ್ಯೂಸ್ ಪೇಪರನ್ನು ನಾವು ನಿತ್ಯದ ಅನೇಕ ಕೆಲಸಗಳಿಗೆ ಬಳಕೆ ಮಾಡ್ತೇವೆ. ಬಿಸಿ ಬಿಸಿ ಆಹಾರವನ್ನು ನ್ಯೂಸ್ ಪೇಪರ್ ಮೇಲಿಡುವ ಅಭ್ಯಾಸ ನಮ್ಮಲ್ಲಿ ಅನೇಕರಿಗಿದೆ. ಇದ್ರಿಂದ ಆಗೋದೇನು?

ರೊಟ್ಟಿ, ಚಪಾತಿ ಮಾಡಿದಾಗ ಅದನ್ನು ನೇರವಾಗಿ ಪಾತ್ರೆಗೆ ಹಾಕುವ ಬದಲು ಪೇಪರ್ ಮೇಲೆ ಹರಡುವವರ ಸಂಖ್ಯೆ ಹೆಚ್ಚು. ಇದು ಬರೀ ರೊಟ್ಟಿ, ಚಪಾತಿಗೆ ಸೀಮಿತವಾಗಿಲ್ಲ. ನಿಮ್ಮಿಷ್ಟದ ಒಬ್ಬಟ್ಟು ಮಾಡುವಾಗ್ಲೂ ಇದನ್ನೇ ಮಾಡ್ತಾರೆ. ಆದ್ರೆ ಬಿಸಿ ಬಿಸಿ ರೊಟ್ಟಿ, ಒಬ್ಬಟ್ಟನ್ನು ಪೇಪರ್ ಮೇಲೆ ಹಾಕಿದ್ರೆ ಏನಾಗುತ್ತೆ ಗೊತ್ತಾ?

ರೊಟ್ಟಿ ಸೇರುವ ಕೆಮಿಕಲ್‌ ಇಂಕ್

ನ್ಯೂಸ್ಪೇಪರ್ ಪ್ರಿಂಟ್ ಮಾಡಲು ಬಳಸುವ ಇಂಕ್ನಲ್ಲಿ ಹಲವು ರೀತಿಯ ಕೆಮಿಕಲ್ಸ್ ಇರುತ್ತದೆ. ಬಿಸಿ ರೊಟ್ಟಿ ನೇರವಾಗಿ ಪೇಪರ್ಗೆ ತಾಗಿದಾಗ, ಇಂಕ್ನಲ್ಲಿರುವ ಕೆಲವು ಅಂಶಗಳು ಆಹಾರಕ್ಕೆ ವರ್ಗಾವಣೆಯಾಗುತ್ತದೆ. ಇಂತಹ ಆಹಾರವನ್ನು ಪದೇಪದೇ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿಯೇ FSSAI ಕೂಡ ಆಹಾರವನ್ನು ನ್ಯೂಸ್ಪೇಪರ್ನಲ್ಲಿ ಸುತ್ತಿಡುವುದು ಅಥವಾ ಅದರಲ್ಲಿ ಸರ್ವ್ ಮಾಡುವುದನ್ನು ತಪ್ಪಿಸುವಂತೆ ಸಲಹೆ ನೀಡುತ್ತದೆ.

ಇದೂ ಅಪಾಯ

ನೀವು ನ್ಯೂಸ್‌ ಪೇಪರ್‌ ಮೇಲೆ ರೊಟ್ಟಿ, ಒಬ್ಬಟ್ಟು ಸೇರಿದಂತೆ ಬಿಸಿ ಆಹಾರವನ್ನು ಮಾತ್ರವಲ್ಲ ತಣ್ಣಗಿನ ಆಹಾರ ಹಾಕಿದ್ರೂ ಅದು ಯೋಗ್ಯ ಕೆಲಸವಲ್ಲ. ಪೇಪರ್‌ ನಲ್ಲಿರುವ ಕೆಮಿಕಲ್‌ ಹೊಟ್ಟೆ ಸೇರೋದು ಮಾತ್ರವಲ್ಲ, ಬೇರೆ ಕೊಳಕು ಕೂಡ ಹೊಟ್ಟೆ ಸೇರುತ್ತದೆ. ಪೇಪರ್‌ ಅನೇಕ ಕೈಗಳನ್ನು, ಅನೇಕ ಸ್ಥಳಗಳನ್ನು ದಾಟಿ ನಿಮ್ಮ ಮನೆಗೆ ಬಂದಿರುತ್ತದೆ. ವಿಶೇಷವಾಗಿ ಮಕ್ಕಳಿಗೆ ಆಹಾರ ನೀಡುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು.

ರೊಟ್ಟಿ ಎಲ್ಲಿಡಬೇಕು?

ಬಿಸಿ ರೊಟ್ಟಿಯನ್ನು ಇಡಲು ಸ್ವಚ್ಛವಾದ ಹತ್ತಿ ಬಟ್ಟೆ, ಸ್ಟೀಲ್ ಡಬ್ಬಿ ಅಥವಾ ಸ್ವಚ್ಛವಾದ ಗಾಜಿನ ಪಾತ್ರೆ ಬಳಸಬಹುದು. ಪೇಪರ್ ಬಳಸಲೇಬೇಕಾದರೆ, ಆಹಾರ ಬಳಕೆಗೆ ಸುರಕ್ಷಿತವಾಗಿರುವ ಪೇಪರ್ ಆಯ್ಕೆ ಮಾಡಿ. ನೆನಪಿಡಿ, ರೊಟ್ಟಿ ಬಿಸಿಯಾಗಿರಲಿ, ಮೃದುವಾಗಿರಲಿ ಅನ್ನೋದು ಎಷ್ಟು ಮುಖ್ಯವೋ, ಅದನ್ನು ಸ್ವಚ್ಛವಾಗಿ ಇಡುವುದೂ ಅಷ್ಟೇ ಮುಖ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಲಸಿಟ್ಟ ಚಪಾತಿ ಹಿಟ್ಟು ಕಪ್ಪಾಗುತ್ತಾ, ಗಟ್ಟಿಯಾಗುತ್ತಾ? ಎಣ್ಣೆ ಪ್ಯಾಕೆಟ್ ಬಳಸಿ ಸಾಕು.. ವಾರವಾದ್ರೂ ಹೂವಂತೆ ಸಾಫ್ಟ್ ಆಗಿರುತ್ತೆ
ಮನೆಯಲ್ಲಿ ಕೊತ್ತಂಬರಿ ಸೊಪ್ಪಿದೆಯಾ? ಹಾಗಿದ್ರೆ ಒಮ್ಮೆ ಈ ರುಚಿಯಾದ ರೈಸ್ ಮಾಡಿ ನೋಡಿ!