ಯಪ್ಪೋ, ಇದೆಂಥಾ ಹೋಟೆಲ್ ಮೆನುನೋ! ಕನ್ನಡದೋರು ತಿನ್ಬೇಕೋ, ಬೇಡ್ವೋ!?

Published : Jul 19, 2025, 02:38 PM ISTUpdated : Jul 23, 2025, 04:27 PM IST
viral post

ಸಾರಾಂಶ

ಅಲ್ಲಿನ ಶೆಫ್‌ಗಳು ಒಂದು ವೇಳೆ ಅಡುಗೆ ಚೆನ್ನಾಗಿ ಮಾಡಿದ್ದರೂ ಮೆನು ಬೋರ್ಡ್‌ ನೋಡಿದವ ತಿನ್ನಲು ಹಿಂದೇಟು ಹಾಕಿದರೂ ಅಡ್ಡಿಯೇನಿಲ್ಲ ಬಿಡಿ. ಯಾಕೆ ಅಂತೀರಾ..? 

ಬಹುತೇಕರು ಹೋಟೆಲ್‌ ಒಳಗೆ ಎಂಟ್ರಿ ಕೊಟ್ಟಾಗ ಅಥವಾ ಹೊರಗಿನ ಬೋರ್ಡ್‌ನಲ್ಲಿ ಇಲ್ಲಿನ ಮೆನು ಏನಿರಬಹುದು ಎಂದು ನೋಡಿ ಊಟಕ್ಕೆ ಅಥವಾ ತಿಂಡಿಗೆ ಕೂರುತ್ತಾರೆ. ಆದರೆ ರೆಡ್ಡಿಟ್‌ನಲ್ಲಿ ಒಂದು ಪೋಸ್ಟ್‌ ವೈರಲ್ ಆಗಿದೆ. ಅದನ್ನು ನೋಡಿದ ನಂತ್ರ ನೀವು ತಿನ್ನಬೇಕೋ ಬೇಡ್ವೋ ಎಂದು ಸಾವಿರ ಬಾರಿ ಯೋಚಿಸುತ್ತೀರಿ. ಯಾಕೆ ಅಂಥದ್ದು ಅದರಲ್ಲೇನಿದೆ ಎಂದು ನೀವಂದು ಅಂದುಕೊಳ್ಳಬಹುದು. ಅಲ್ಲೇ ಇರುವುದು ಟ್ವಿಸ್ಟ್.

ಇತ್ತೀಚೆಗೆ ಒಂದು ಹೋಟೆಲ್‌ನ ಮೆನು ಬೋರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಮೆನು ವಿಶೇಷವಾಗಿರುವುದು ಆಹಾರಕ್ಕಾಗಿ ಅಲ್ಲ, ಬದಲಾಗಿ ಉಪಯೋಗಿಸಿದ ತಪ್ಪು ಕನ್ನಡ ಪದಗಳಿಂದ. ಒಂದಲ್ಲ, ಎರಡಲ್ಲ, ಅಲ್ಲಿರುವ ಎಲ್ಲಾ ಪದಗಳನ್ನು ತಪ್ಪಾಗಿ ಉಚ್ಛರಿಸಿದ್ದು, ಕನ್ನಡ ಬರೆಯುವ ವಿಧಾನದಲ್ಲೂ ಅಪಾರ ದೋಷಗಳು ಕಂಡುಬಂದಿವೆ.

ಪಾಪ ಅಲ್ಲಿನ ಶೆಫ್‌ಗಳು ಒಂದು ವೇಳೆ ಅಡುಗೆ ಚೆನ್ನಾಗಿ ಮಾಡಿದ್ದರೂ ಮೆನು ಬೋರ್ಡ್‌ ನೋಡಿದವ ತಿನ್ನಲು ಹಿಂದೇಟು ಹಾಕಿದರೂ ಅಡ್ಡಿಯೇನಿಲ್ಲ ಬಿಡಿ. ಯಾಕೆ ಅಂತೀರಾ?, ಸದ್ಯ ವೈರಲ್ ಆಗಿರುವ ಪೋಸ್ಟ್‌ನ ಬೋರ್ಡ್‌ ನೋಡಿದರೆ ನೀವು ಹಾಗೆ ಅನ್ನುತ್ತೀರಿ. ಹಾಗಾದರೆ ಬೋರ್ಡ್ ಮೇಲೆ ಏನು ಬರೆಯಲಾಗಿದೆ ಎಂದು ನೋಡುವುದಾದರೆ...ಕುಚ್ಚಾ, ಪನೀರ್‌ ತಿಕಾ, ಹಣಬೆ ತಿಕಾ, ತಂದೂರಿ ಚಕ್ಕನ್‌, ಫಿಶ್‌ ತಿಕಾ, ದೌಲಾ ಮಕ್ಕನಿ, ಬಟರೌ ಚಿಕ್ಕನ್, ಮಟನ್, ಕೂಲಾ ಡಿಕ್ಸ್‌, ಹಲವ ಎಂದು ಕನ್ನಡದಲ್ಲಿ ಬರೆಯಲಾಗಿದೆ.

ಸದ್ಯ ವೈರಲ್‌ ಆಗುತ್ತಿರುವ ಈ ಪೋಸ್ಟ್‌ಗೆ Eat well and Drink well! Stay ಹೆಲ್thy ಎಂಬ ಶೀರ್ಷಿಕೆ ಕೊಡಲಾಗಿದ್ದು, ಬೋರ್ಡ್ ನೋಡಿದ ನಂತರ ನಿಮಗೆ ನಗಬೇಕೋ ಅಥವಾ ಈತನಿಗೆ ಕನ್ನಡ ಬರುತ್ತೋ ಅಥವಾ ಕಲಿಸಬೇಕೋ ಎಂದು ಗೊಂದಲವುಂಟಾಗುವುದು ಗ್ಯಾರಂಟಿ. ಆದರೆ ಇದನ್ನು ಓದಿದ ಕನ್ನಡಿಗರು ಸುಮ್ಮಿರುತ್ತಾರಾ ತರಹವೇವಾರಿ ಕಾಮೆಂಟ್‌ಗಳನ್ನು ಮಾಡಿದ್ದು, ಅವರೇನು ಹೇಳಿದ್ದಾರೆಂದು ನೋಡಿ, ನೀವು ಎಂಜಾಯ್‌ ಮಾಡಿ.

ಬಳಕೆದಾರರು ಹೇಳಿದ್ದೇನು?

1.ಅಣ್ಣ ನಮಸ್ಕಾರ...

ನಿಮ್ ಹೆಸ್ರು ಏನಂತ ಗೊತ್ತಿಲ್ಲ ಆದ್ರು ಕೂಡ ಇದ್ಯಾವ್ಡೋ ಸರಿಯಾಗಿರೋದೆ ಹಾಕಿದ್ದೀರಾ...

ಈ ರೀತಿ ಕೇಳ್ದೆ ಅಂತ ಬೇಸರ ಮಾಡಿಕೊಳ್ಳಬಾರದು...

ಒಮ್ಮೆ ಅದರ ಅರ್ಥವನ್ನು ಗಬ್ಬುನಾರ್ಥಿಯರಿಗೆ ಓದಿ ಅರ್ಥಮಾಡಿಸಿ ಬೇಕಿದೆ ಅಂತ ನನಗೆ ಅನಿಸುತ್ತಿದೆ...

2.ಕನ್ನಡ ಮೇಷ್ಟರು ಯೆಲ್ಲಪ್ಪ

3.ಧನ್ಯೋಸ್ಮಿ! ಅರ್ಧ ಹುಚ್ಚರೆಲ್ಲಾ ಕನ್ನಡ ಬರಿದ್ರೆ ಹಿಂಗೆ ಯಡವಟ್ ಆಗೋದು

4. ಮೂರನೆಯದು ಏನದು?

5 ಲಾಸ್ಟ್ ನಲ್ಲಿ ಇತ್ಯಾದಿ ಥರ ಹಲವೂ ಅಂತ ಬರ್ದಿದ್ದಾರೆ ಅನ್ಕೊಂಡೆ. ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಿಮಗೂ ಈ ಕಾಮೆಂಟ್‌ ನೋಡಿ ಮತ್ತು ಬೋರ್ಡ್ ಮೇಲಿನ ಕನ್ನಡ ನೋಡಿ ಏನನಿಸಿತು ಅಂತ ನಮ್ಮೊಂದಿಗೆ ಹಂಚಿಕೊಳ್ಳಬಹುದು.

ಆಗಾಗ ರೆಡ್ಡಿಟ್‌ನಲ್ಲಿ ಇಂತಹ ಪೋಸ್ಟ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಈ ಪೋಸ್ಟ್‌ ನೋಡಿದ ನಂತರ ಕನ್ನಡಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಬಳಕೆದಾರರು "ಕನ್ನಡ ಬರೆದರೆ ಸರಿಯಾಗಿ ಬರೆಯಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಷೆ ನಮ್ಮ ಸಂಸ್ಕೃತಿ, ಆದುದರಿಂದ ತಪ್ಪು ಕನ್ನಡ ಬಳಸಿ ತಮಾಷೆಯ ಅರ್ಥ ಬರುವಂತಾಗಬಾರದು ಎನ್ನುವುದು ಅವರ ಅಭಿಪ್ರಾಯ.

ನಿಂದನೆ ಅಲ್ಲ, ಮಾರ್ಗದರ್ಶನ ಬೇಕು..
ಒಂದು ವೇಳೆ ಇದನ್ನು ಬರೆದವರು ಭಾಷೆ ಕಲಿಯುತ್ತಿರುವವರಾದರೆ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಕನ್ನಡವನ್ನು ಸರಿ ರೀತಿಯಲ್ಲಿ ಉಪಯೋಗಿಸಬೇಕು. ಯಾವುದೇ ಭಾಷೆ ಬರೆಯುವಾಗ ಶ್ರದ್ಧೆಯಿಂದ ಬರೆದು, ಸ್ಪೆಲ್ಲಿಂಗ್ ಮತ್ತು ಲಿಪಿಗೆ ಆದ್ಯತೆ ನೀಡುವುದು ಮುಖ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ