ಕ್ಯಾಬೇಜ್ ಮಂಚೂರಿಯನ್ ಐಟಂ ಅಂದರೆ ಬಾಯಲ್ಲಿ ನೀರೂರಿಸಿಕೊಂಡು ತಿಂತಾರೆ ಮನೆಯಲ್ಲಿ ಎಲ್ಲರೂ. ಒಂದು ಸಲ ನೀವೇ ಅದನ್ನು ಮನೆಯಲ್ಲಿ ಮಾಡಿ ಸರ್‌ಪ್ರೈಸ್ ಕೊಡಬಹುದಲ್ವಾ?
ಗೋಬಿ ಮಂಜೂರಿಯನ್ ಅಂದ್ರೆ ಆ ಟೇಸ್ಟ್ ನೆನಪಾಗಿ ಬಾಯಲ್ಲಿ ನೀರೂರುತ್ತೆ. ನಮ್ಮ ದೇಶದ ಭಲೇ ಜನಪ್ರಿಯ ಖಾದ್ಯವಿದು. ಚೈನೀಸ್ ಅಡುಗೆಯಿಂದ ಪ್ರೇರಿತವಾಗಿ ಸಿದ್ಧಗೊಂಡಿರೋ ಇಂಡಿಯನ್ ರೆಸಿಪಿ. ಹಿಂದೆ ಅಂದರೆ ನಮ್ಮ ದೇಶದಲ್ಲಿ ಬ್ರಿಟೀಷರ ಆಳ್ವಿಕೆ ಇದ್ದ ಕಾಲದಲ್ಲಿ ಕೊಲ್ಕೊತ್ತಾದಲ್ಲಿ ಒಂದು ಚಿಕ್ಕ ಚೈನೀಸ್ ಸಮುದಾಯ ಇತ್ತು. ಅಲ್ಲೊಬ್ಬ ಚಾಣಾಕ್ಷ ಚೀನೀ ವ್ಯಕ್ತಿ ಗೋಬಿ ಮಂಚೂರಿಯನ್ ಎಂಬ ಅದ್ಭುತ ರೆಸಿಪಿ ಕಂಡುಹಿಡಿದ ಅನ್ನುತ್ತೆ ಹಿಸ್ಟರಿ. ಆ ಕಾಲದಿಂದ ಈ ಕಾಲದವರೆಗೂ ಗೋಬಿ ಅಂದರೆ ಬೇಡ ಅನ್ನೋರಿಲ್ಲ. ಅಂದಹಾಗೆ ಇಲ್ಲಿ ಹೇಳೋದು ಗೋಬಿ ಮಂಚೂರಿ ರೀತಿಯದ್ದೇ ಇನ್ನೊಂದು ರೆಸಿಪಿ. ಇದು ಕ್ಯಾಬೇಜ್ ಮಂಚೂರಿಯನ್. ಈಗಿನ ಸಣ್ಣ ಚಳಿಯ ಸಂಜೆ ಸವಿಯಲು ಹೇಳಿ ಮಾಡಿಸಿದಂಥಾ ರೆಸಿಪಿ. ಸ್ಟ್ರೀಟ್ ಫುಡ್ ಆಗಿ ಇದು ಫೇಮಸ್. ಆದರೆ ಮನೆಯಲ್ಲೂ ಅಷ್ಟೇ ರುಚಿಯಾಗಿ, ಅಲ್ಲಿಗಿಂತ ಶುಚಿಯಾಗಿ ಇದನ್ನು ತಯಾರಿಸಬಹುದು. ಈ ಕ್ಯಾಬೇಜ್ ಮಂಚೂರಿಯನ್ ಮಾಡುವಾಗ ಕ್ಯಾಬೇಜ್‌ಅನ್ನು ಸಣ್ಣದಾಗಿ ಹೆಚ್ಚೋದು ಕಡ್ಡಾಯ. ಇಲ್ಲವಾದರೆ ನಿಮಗೇ ಪ್ರಾಬ್ಲೆಂ. ಇದು ಮೈದಾ ಮತ್ತು ಕಾರ್ನ್ ಫ್ಲೋರ್‌ನ ಜೊತೆಗೆ ಸರಿಯಾಗಿ ಮಿಕ್ಸ್ ಆಗಲ್ಲ. ಸರಿಯಾಗಿ ಮಿಕ್ಸ್ ಆಗದಿದ್ದರೆ ಎಣ್ಣೆಯಲ್ಲಿ ಕರಿಯುವಾಗ ಓಪನ್ ಆಗಿ ಕ್ಯಾಬೇಜ್ ಮಂಚೂರಿ ನಿಮ್ಮ ಕೈಮೀರಿ ಮತ್ತೇನೋ ಆಗಬಹುದು.
ಕ್ಯಾಬೇಜ್ ಮಾತ್ರ ಅಲ್ಲ, ಕ್ಯಾಪ್ಸಿಕಂ, ಬೀನ್ಸ್, ಆನಿಯನ್‌ಅನ್ನು ಈ ಕ್ಯಾಬೆಜ್‌ಗೆ ಬದಲಾಗಿ ಹಾಕಿಯೂ ಈ ರೆಸಿಪಿ ಟ್ರೈ ಮಾಡಬಹುದು ಅಂತಾರೆ ಚೆಫ್‌ಗಳು.
ಕ್ಯಾಬೇಜ್ ರೆಸಿಪಿ ಮಾಡಲು ಬೇಕಾಗುವ ಸಮಯ - 30 ನಿಮಿಷ
ಸಂದರ್ಭ : ಪಾರ್ಟಿ, ಸಂಜೆಯ ಸ್ನಾಕ್ಸ್
ಮಟನ್ ಬಿರಿಯಾನಿ ಮಾಡೋದು ಹೇಗೆ?
ಏನೆಲ್ಲ ಸಾಮಗ್ರಿ ಬೇಕು?
2 ಕಪ್‌ಚಿಕ್ಕದಾಗಿ ಹೆಚ್ಚಿರುವ ಕ್ಯಾಬೇಜ್
1 ಕಪ್ ಹೆಚ್ಚಿರುವ ಕ್ಯಾರೆಟ್
ಅರ್ಧ ಸ್ಕೂನ್ ಅಚ್ಚ ಖಾರದ ಪುಡಿ
ಅರ್ಧ ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್
2 ಸ್ಪೂನ್ ಕಾರ್ನ್ ಫ್ಲೋರ್
ಅರ್ಧ ಚಮಚ ಉಪ್ಪು
ಅರ್ಧ ಕಪ್ ಮೈದಾ
2 ಸ್ಪೂನ್ ನೀರು
ಕರಿಯಲು ಎಣ್ಣೆ
ಮಿಕ್ಸಿಂಗ್‌ಗೆ
2 ಸ್ಪೂನ್ ಎಣ್ಣೆ
2 ಎಸಳು ಚಿಕ್ಕದಾಗಿ ಹೆಚ್ಚಿರುವ ಬೆಳ್ಳುಳ್ಳಿ
4 ಸ್ಪೂನ್ ಈರುಳ್ಳಿ ಚಿಗುರು (ಸ್ಟ್ರಿಂಗ್ ಆನಿಯನ್)
ಸ್ವಲ ಚಿಕ್ಕದಾಗಿ ಹೆಚ್ಚಿರುವ ಈರುಳ್ಳಿ
1 ಹಸಿ ಮೆಣಸಿನ ಕಾಯಿ
ಅರ್ಧ ಕ್ಯಾಪ್ಸಿಕಂ
1 ಸ್ಪೂನ್ ಚಿಲ್ಲಿ ಸಾಸ್
2 ಸ್ಪೂನ್ ಸೋಯಾ ಸಾಸ್
2 ಸ್ಪೂನ್ ವಿನಿಗರ್
1/4 ಸ್ಪೂನ್ ಉಪ್ಪು
2 ಸ್ಪೂನ್ ಟೊಮ್ಯಾಟೋ ಸಾಸ್
1/4 ಸ್ಪೂನ್ ಕಾಳು ಮೆಣಸಿನ ಪೌಡರ್
ಪ್ರೋಟೀನ್ ಬಾರ್ ಮಾಡೋದು ಹೀಗೆ
ಮಾಡುವ ವಿಧಾನ
- ಒಂದು ಬೌಲ್‌ಗೆ ಹೆಚ್ಚಿರುವ ಕ್ಯಾಬೇಜ್ ಮತ್ತು ಕ್ಯಾರೆಟ್ ಹಾಕಿ.
- ಇದಕ್ಕೆ ಖಾರದ ಪುಡಿ, ಜಿಂಜರ್ ಗಾರ್ಲಿಕ್ ಪೇಸ್ಟ್, ಉಪ್ಪು, ಮೈದಾ ಮತ್ತು ಕಾರ್ನ್‌ಫೆä್ಲೕರ್ ಹಾಕಿ.
- ಇದನ್ನೆ ಚೆನ್ನಾಗಿ ಮಿಕ್ಸ್ ಮಾಡಿ.
- ಚಪಾತಿ ಹಿಟ್ಟಿನ ಹದಕ್ಕೆ ತನ್ನಿ.
- ಐದು ನಿಮಿಷ ಬಿಟ್ಟು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.
- ಇದನ್ನು ಎಣ್ಣೆಯಲ್ಲಿ ಕರಿಯಿರಿ. ಅರೆ ಬೇಯದಂತೆ ನೋಡಿಕೊಳ್ಳಿ. ಕ್ಯಾಬೇಜ್ ಚೆನ್ನಾಗಿ ಬೇಯಲು ಸ್ವಲ್ಪ ಹೆಚ್ಚೇ ಸಮಯ ಬೇಕಾಗಬಹುದು.
- ಚೆನ್ನಾಗಿ ಕ್ರಿಸ್ಪಿ ಉಂಡೆಗಳನ್ನು ನಂತರ ಹೊರ ತೆಗೆಯಿರಿ.
- ಈಗ ಒಂದುಬಾಣಲೆಯನ್ನು ಒಲೆಯ ಮೇಲಿಡಿ. ಇದಕ್ಕೆ ಎಣ್ಣೆ ಹಾಕಿ. ಕಾದ ಮೇಲೆ ಬೆಳ್ಳುಳ್ಳಿ ಚೂರು ಹಾಕಿ.
- ಆ ಬಳಿಕ ಈರುಳ್ಳಿ ಚಿಗುರು, ಈರುಳ್ಳಿ ಮತ್ತು ಹಸಿ ಮೆಣಸನ್ನು ಹಾಕಿ ಕರಿಯಿರಿ.
- ನಂತರ ಇದಕ್ಕೆ ಚಿಲ್ಲಿ ಸಾಸ್ ಹಾಕಿ. ಸೋಯಾ ಸಾಸ್, ವಿನಿಗರ್ ಸೇರಿಸಿ. ಟೊಮ್ಯಾಟೋ ಸಾಸ್ ಹಾಕಿ, ಬಳಿಕ ಉಪ್ಪು ಮತ್ತು ಪೆಪ್ಪರ್ ಉದುರಿಸಿ.
- ಉರಿ ಹೆಚ್ಚು ಮಾಡಿ ಇದು ಚೆನ್ನಾಗಿ ಮಿಕ್ಸ್ ಆಗುವಂತೆ ನೋಡಿಕೊಳ್ಳಿ.
- ಇದಕ್ಕೆ ಕರಿದಿಟ್ಟ ಕ್ಯಾಬೇಜ್ ಉಂಡೆಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
- ಇದನ್ನು ಈರುಳ್ಳಿ ಚಿಗುರಿನಿಂದ ಅಲಂಕರಿಸಿ ಸರ್ವ್ ಮಾಡಿ.