ನವರಾತ್ರಿ ಹಬ್ಬದ ಸಮಯದಲ್ಲಿ ವಿಶೇಷವಾಗಿ ತಯಾರಿಸಬಹುದಾದ ಕಡಲೆ ಹುಸುಲಿ ಅಥವಾ ಚಾನಾ ಎಂದು ಕರೆಯಲ್ಪಡುವ ಅತಿ ಸುಲಭ ಮತ್ತು ರುಚಿಕರವಾದ ಪಾಕ ವಿಧಾನ ಹೀಗಿದೆ ನೋಡಿ. ನಿಮ್ಮ ಮನೆಯಲ್ಲಿ ಈ ಪಾಕ ವಿಧಾನ ಪ್ರಯತ್ನಿಸಿ ನಿಮ್ಮ ಮನೆಯವರು, ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಇದರ ರುಚಿಯನ್ನು ಸವಿಯಿರಿ..
ನವರಾತ್ರಿ ಹಬ್ಬದ ಸೀಸನ್ ಇಲ್ಲಿದೆ. ಮತ್ತು ಹಾಗೆಯೇ ನವ ದೇವತೆಯರನ್ನು ಆರಾಧಿಸುವ ಈ ಹಬ್ಬದಲ್ಲಿ ಮತ್ತೊಂದು ವಿಶೇಷ ವಿಚಾರವೆಂದರೆ, ಬಾಯಿಯಲ್ಲಿ ನೀರೂರಿಸುವ ಭಕ್ಷ್ಯಗಳ ಸಾಲುಗಳು. ನವರಾತ್ರಿ ಎಂದರೆ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಹಬ್ಬವನ್ನು ಕಳೆಯಲು ಮನೆಗೆ ಹಿಂದಿರುಗುವ ಸಮಯ. ಹತ್ತು ದಿನಗಳ ಉತ್ಸವವು ಶಕ್ತಿ ದೇವತೆ ಅಥವಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಈ ರೀತಿಯ ನವ ದೇವಿಯರ ಆರಾಧನೆಯು ಸಂತೋಷ, ಸಡಗರ, ಭಕ್ತಿ, ಎಲ್ಲವುಗಳ ಒಂದು ಒಕ್ಕೂಟ ವಾಗುತ್ತದೆ.
ದೇಶದಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತದೆ. ಗುಜರಾತ್ ನಲ್ಲಿ ನವರಾತ್ರಿಯನ್ನು ಆಚರಿಸಿದರೆ, ಪಶ್ಚಿಮ ಬಂಗಾಳವು ಈ ಸಮಯದಲ್ಲಿ ದುರ್ಗಾ ಪೂಜೆಯನ್ನು ಆಚರಿಸುತ್ತದೆ. ಬೀದಿಗಳು ಮತ್ತು ಮನೆಗಳು ಬಣ್ಣ ಮತ್ತು ದೀಪಗಳಲ್ಲಿ ಅಲಂಕೃತವಾಗಿರುತ್ತವೆ, ಜನರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ತಮ್ಮ ಸಂಜೆಯ ಸಮಯದಲ್ಲಿ ಹಾಡು, ಕುಣಿತ ಮತ್ತು ದೇವಿಯನ್ನು ಪೂಜಿಸುತ್ತಾರೆ. ಜನರು ತಮ್ಮ ಪೂಜೆಯನ್ನು ದೇವಿಗೆ ಸಲ್ಲಿಸಲು ಮತ್ತು ಅವರ ಕುಟುಂಬಕ್ಕಾಗಿ ದೇವಿಯ ಆಶೀರ್ವಾದವನ್ನು (Blessings) ಪಡೆಯಲು ಹಗಲಿನಲ್ಲಿ ಉಪವಾಸವನ್ನು ಮಾಡುತ್ತಾರೆ. ನವರಾತ್ರಿಯಲ್ಲಿ ಮಹಿಳೆಯರು ಉಪವಾಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸೇವನೆ ಮಾಡಲು ಚಾನಾ ಅಥವಾ ಹುಸುಲಿ ಒಂದು ಉತ್ತಮ ಭಕ್ಷ್ಯವಾಗಿದೆ.
ಇದನ್ನೂ ಓದಿ: Navratri Special: ಹಬ್ಬಕ್ಕೆ ಕುಂಬಳಕಾಯಿಯ ಈ ತಿಂಡಿ ಟ್ರೈ ಮಾಡಿ!
ನವರಾತ್ರಿ ವ್ರತದ ಸಮಯದಲ್ಲಿ ಪೋಷಕಾಂಶಗಳಿಂದ (Nutrients) ತುಂಬಿರುವ, ಚಾನಾ ಅಥವಾ ಕಡಲೆ ಕಾಳಿನ ಹಸುಲಿ ತಿನ್ನುವುದು, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆಯನ್ನು (Sugar) ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆಯನ್ನು ಹೆಚ್ಚಿಸಲು, ಮೆದುಳಿನ ಆರೋಗ್ಯವನ್ನು (Health) ಉತ್ತೇಜಿಸಲು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ನಿವಾರಿಸಲು ಸಹಾಯ (Help) ಮಾಡುತ್ತದೆ. ನವರಾತ್ರಿಯ ಸಂಜೆಗೆ ಅತ್ಯಂತ ಸೂಕ್ತವಾದ ತಿನಿಸು ಚಾನಾ ಪಾಕವಿಧಾನವನ್ನು ನೀವಿಲ್ಲಿ ನೋಡಬಹುದು. ಈ ಖಾದ್ಯವನ್ನು ಸ್ನೇಹಿತರು, ಕುಟುಂಬಗಳು (Family), ಹತ್ತಿರದವರು ಮತ್ತು ಆತ್ಮೀಯರೊಂದಿಗೆ ಸವಿಯಿರಿ..
ಬೇಕಾಗುವ ಸಾಮಗ್ರಿಗಳು (Ingredients):
ಇದನ್ನೂ ಓದಿ: Recipe Tips : ರುಚಿ ರುಚಿ, ಉಬ್ಬಿದ ಪೂರಿ ತಯಾರಿಸೋದು ಹೀಗೆ
ತಯಾರಿಸುವ ವಿಧಾನ:
ಬಾಣಲೆ ಅಥವಾ ನಾನ್ ಸ್ಟಿಕ್ ಪ್ಯಾನ್ ನಲ್ಲಿ ತುಪ್ಪ ಹಾಕಿ ಜೀರಿಗೆ ಪುಡಿ, ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಅರಿಶಿನ ಪುಡಿ ಹಾಕಿ ಒಂದು ನಿಮಿಷ ಚೆನ್ನಾಗಿ ಹುರಿಯಿರಿ (Fry). ನಂತರ ಅದಕ್ಕೆ ಮೊದಲೇ ಬೇಯಿಸಿ ಇಟ್ಟುಕೊಂಡಿದ್ದ ಕಪ್ಪು ಕಡಲೆ, ಉಪ್ಪು ಮತ್ತು ಗರಂ ಮಸಾಲಾ ಮಿಶ್ರಣವನ್ನು ಹಾಕಿ ಮುಚ್ಚಿ 2 ರಿಂದ 3 ನಿಮಿಷಗಳ ಕಾಲ ಬೇಯಿಸಿ. ಬಳಿಕ ಅದನ್ನು ತಟ್ಟೆಗೆ ವರ್ಗಾಯಿಸಿ ಮತ್ತು ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿಯಾದ ಪೂರಿಗಳೊಂದಿಗೆ ನಿಮ್ಮ ಮನೆಯವರು ಮತ್ತು ಸ್ನೇಹಿತರಿಗೆ (Family) ಉಣ ಬಡಿಸಿ. ಈ ಪಾಕವಿಧಾನವು ಬಾಣಸಿಗರಾದ ಸಂಜೀವ್ ಕಪೂರ ಅವರದಾಗಿದೆ.