ರಾತ್ರಿ ಊಟ (Dinner) ಮಾಡಿದ ನಂತರ ಸುಮ್ನೆ ಮೊಬೈಲ್ ನೋಡ್ತಾ ಕೂರೋ ಬದಲು ಜಸ್ಟ್ 30 ನಿಮಿಷ ವಾಕ್ (Walk) ಮಾಡಿ ಸಾಕು. ಚೆನ್ನಾಗಿ ನಿದ್ರೆ (Sleep) ಬರುತ್ತೆ. ತೂಕ ಸಹ ಕಡಿಮೆಯಾಗುತ್ತೆ. ಬೇರೆನೆಲ್ಲಾ ಪ್ರಯೋಜನವಿದೆ ತಿಳ್ಕೊಳ್ಳಿ.
ಕೊರೋನಾ ಕಾಲಾನಂತರದ ಜನಜೀವನದಲ್ಲಿ ಆಗಿರುವ ಬದಲಾವಣೆಯೆಂದರೆ ಎಲ್ಲರೂ ಆರೋಗ್ಯ (Health)ದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅದರಲ್ಲೂ ಫಿಟ್ನೆಸ್ (Fitness) ಬಗ್ಗೆ ಜನರು ಹೆಚ್ಚು ಮುತುವರ್ಜಿ ವಹಿಸುತ್ತಿದ್ದಾರೆ. ಪ್ರತಿದಿನ ಯೋಗ, ಎಕ್ಸರ್‌ಸೈಸ್, ಧ್ಯಾನ ಹಾಗೂ ಮೊದಲಾದ ಕ್ರಮಗಳನ್ನು ಅನುಸರಿಸುವ ಮೂಲಕ ಹೆಚ್ಚು ಆರೋಗ್ಯವಾಗಿರಲು ಯತ್ನಿಸುತ್ತಿದ್ದಾರೆ. ಇವೆಲ್ಲದರ ಜತೆಯೂ ವಾಕಿಂಗ್, ಜಾಗಿಂಗ್ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಓಡುವುದು ಅಥವಾ ರನ್ನಿಂಗ್ ಮಾಡುವುದರಿಂದ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತದೆ ಎಂಬುದು ಹಲವರಿಗೆ ತಿಳಿದಿರುವ ವಿಷಯ. ಓಡುವುದರಿಂದ ದೇಹದಲ್ಲಿರುವ ಅನಾವಶ್ಯಕ ಕೊಬ್ಬು ಕರಗುತ್ತದೆ. ಮಾನಸಿಕ ಸ್ಥೈರ್ಯ ಹಾಗೂ ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಇದಲ್ಲದೆ ರಾತ್ರಿ ಊಟದ ನಂತರ ಸ್ಪಲ್ಪ ಹೊತ್ತು ನಡೆಯೋದ್ರಿಂದ ಅದೆಷ್ಟು ಪ್ರಯೋಜನವಿದೆ ನಿಮ್ಗೆ ಗೊತ್ತಾ ?
undefined
Health Tips : ವಾಕಿಂಗ್ ಬೋರ್ ಆಗಿದ್ರೆ ಹಿಮ್ಮುಖ ನಡಿಗೆ ಶುರು ಮಾಡಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ
ಕೆಲವರು ರಾತ್ರಿ ಊಟ ಮಾಡಿದ ತಕ್ಷಣ ಮಲಗುತ್ತಾರೆ. ಹೀಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಅದೇ ರೀತಿ ಮಾಡುತ್ತಿದ್ದರೆ, ತಕ್ಷಣ ಈ ಅಭ್ಯಾಸವನ್ನು ಬದಲಿಸಿ. ಆಹಾರ (Food) ತಿಂದ ಕೂಡಲೇ ಮಲಗಲು ಹೊರಟರೆ ಆಹಾರ ಬೇಗ ಜೀರ್ಣವಾಗುವುದಿಲ್ಲ ಮತ್ತು ಇದರಿಂದ ತೂಕವೂ ಹೆಚ್ಚಾಗುತ್ತದೆ. ತೂಕ (Weight) ಕಡಿಮೆ ಮಾಡಿಕೊಳ್ಳುವುದು ನಿಮ್ಮ ಮುಖ್ಯ ಉದ್ದೇಶವಾಗಿದ್ದರೆ ರಾತ್ರಿ ಊಟದ ನಂತರ ನಡೆಯುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ತಿನ್ನುವುದು ಮತ್ತು ನಡೆಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲ ರಾತ್ರಿ ತಂಪಾದ ಗಾಳಿಯಲ್ಲಿ ವಾಕ್ ಮಾಡಿ ಮನೆಗೆ ಮರಳಿದಾಗ ನಿದ್ದೆಯೂ ಚೆನ್ನಾಗಿ ಬರುತ್ತದೆ. ರಾತ್ರಿ ಊಟದ ನಂತರ ವಾಕಿಂಗ್ ಮಾಡುವುದರಿಂದ ಆಗುವ ಇತರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ರಾತ್ರಿ ಊಟದ ನಂತರ ವಾಕ್ ಮಾಡುವುದರಿಂದ ಸಿಗುವ ಪ್ರಯೋಜನಗಳು
ರಾತ್ರಿ ಊಟ ಮಾಡಿದ ನಂತರ 15ರಿಂದ 30 ನಿಮಿಷಗಳ ಕಾಲ ವಾಕ್ (Walk) ಮಾಡುವುದರಿಂದ ಜೀರ್ಣ ಶಕ್ತಿ ಸುಧಾರಿಸುತ್ತದೆ. ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ನೀವು ತಿಂದ ತಕ್ಷಣ ನಿದ್ರೆಗೆ ಹೋದಾಗ, ಜೀರ್ಣಕ್ರಿಯೆಯ ಪ್ರಕ್ರಿಯೆಯು ಇನ್ನಷ್ಟು ನಿಧಾನಗೊಳ್ಳುತ್ತದೆ. ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಬಹುದು.
Health Tips: ಊಟ ಮಾಡಿದ್ಮೇಲೆ ನಡೀಬೇಕಾ ? ಎಕ್ಸ್‌ಪರ್ಟ್ಸ್ ಏನ್ ಹೇಳ್ತಾರೆ ಕೇಳಿ
ಅಧ್ಯಯನವೊಂದರ ಪ್ರಕಾರ, ಊಟದ ನಂತರ ಸ್ವಲ್ಪ ಸಮಯದವರೆಗೆ ನಡೆಯುವುದು ರಕ್ತದಲ್ಲಿನ ಗ್ಲೂಕೋಸ್ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ವ್ಯಾಯಾಮ (Exercise) ಮಾಡುವುದರಿಂದ ಗ್ಯಾಸ್ ಸಮಸ್ಯೆ, ಹೊಟ್ಟೆ ಉಬ್ಬರ, ನಿದ್ರಾಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ, ಹೃದಯ ಆರೋಗ್ಯಕರವಾಗಿರುತ್ತದೆ. ಆದರೆ ಊಟದ ನಂತರ ಈ ರೀತಿ ವಾಕಿಂಗ್‌ಗೆ ಹೋಗುವಾಗ ಸಮಯ, ದೂರವನ್ನು ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ, ಇಲ್ಲದಿದ್ದರೆ ನಿಮಗೆ ಅಜೀರ್ಣ ಮತ್ತು ಹೊಟ್ಟೆ ನೋವು ಬರಬಹುದು.
ತಿಂದ ನಂತರ ವಾಕಿಂಗ್ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಏಕೆಂದರೆ ವಾಕಿಂಗ್ ಒತ್ತಡದ ಹಾರ್ಮೋನ್ ಕಾರ್ಟಿಸೋಲ್‌ನ್ನು ಕಡಿಮೆ ಮಾಡುತ್ತದೆ. ಒಬ್ಬ ವ್ಯಕ್ತಿಯು ನಡೆಯಲು ಹೋದಾಗ, ದೇಹದಲ್ಲಿ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ. ಇದು ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಆತಂಕ (Pressure)ವನ್ನು ಕಡಿಮೆ ಮಾಡುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.
ಆಹಾರ ಮತ್ತು ವಾಕಿಂಗ್ ಉತ್ತಮ ನಿದ್ರೆ (Sleep) ಪಡೆಯಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ವ್ಯಾಯಾಮ ಮಾಡಿದರೆ, ನಿದ್ರಾಹೀನತೆಯ ಕಾಯಿಲೆ ದೂರವಾಗುತ್ತದೆ. ಆದ್ದರಿಂದ ನಿಮಗೆ ರಾತ್ರಿ ಬೇಗ ನಿದ್ದೆ ಬರದಿದ್ದರೆ, ಊಟ ಮಾಡಿದ ನಂತರ 10-15 ನಿಮಿಷಗಳ ಕಾಲ ನಡೆಯಿರಿ. ರಕ್ತದೊತ್ತಡ ಹೆಚ್ಚಿದ್ದರೂ ರಾತ್ರಿಯಲ್ಲಿ ನಡೆಯುವುದು ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ನೀವು ಹೃದ್ರೋಗ, ಪಾರ್ಶ್ವವಾಯುಗಳಿಂದ ಪಾರಾಗುತ್ತೀರಿ. ಅಧಿಕ ರಕ್ತದೊತ್ತಡ, ಎಲ್ ಡಿಎಲ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಆರೋಗ್ಯಕರ ಹೃದಯಕ್ಕಾಗಿ, ಒಬ್ಬ ವ್ಯಕ್ತಿಯು ಪ್ರತಿ ವಾರ 5 ದಿನಗಳ ಕನಿಷ್ಠ 30 ನಿಮಿಷಗಳ ಮಧ್ಯಮ-ತೀವ್ರತೆಯ ವ್ಯಾಯಾಮವನ್ನು ಮಾಡಬೇಕು. ನೀವು ಬಯಸಿದರೆ, ಊಟದ ನಂತರ 30 ನಿಮಿಷಗಳ ಕಾಲ ನಡೆಯಿರಿ ಅಥವಾ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ ಮೂರು ಬಾರಿ 10 ನಿಮಿಷಗಳ ಕಾಲ ನಡೆಯಿರಿ. ಒಟ್ನಲ್ಲಿ ಫಿಟ್ ಆಂಡ್ ಫೈನ್ ಆಗಿರಬೇಲು ತಿನ್ನೋದೆಲ್ಲಾ ಬಿಟ್ಟು ಕಷ್ಟಪಡುವ ಮೊದಲು ಸ್ಪಲ್ಪ ನಡೀರಿ ಸಾಕು.