ವಿಟಮಿನ್ ಡಿ ದೇಹಕ್ಕೆ ಬಹಳ ಅತ್ಯಗತ್ಯ. ಅನೇಕ ಅನಾರೋಗಕ್ಕೆ ವಿಟಮಿನ್ ಡಿ ಕೊರತೆಯೇ ಕಾರಣವಾಗಿರುತ್ತದೆ. ಸೂರ್ಯನ ಬೆಳಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಇದು ನಮ್ಮ ದೇಹ ಸೇರುತ್ತದೆ. ಕೆಲ ಆಹಾರದ ಮೂಲಕ ಕೂಡ ನಾವು ವಿಟಮಿನ್ ಡಿ ಪಡೆಯಬಹುದು.
ದೇಹವನ್ನು ರೋಗಗಳಿಂದ ದೂರವಿಡಲು ನಾವು ನಮ್ಮ ಆಹಾರದಲ್ಲಿ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಸೇರಿಸಬೇಕು. ನೀವು ಜೀವಸತ್ವಗಳು, ಖನಿಜಗಳು, ಪ್ರೋಟೀನ್ಗಳು ಮತ್ತು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ದೇಹವನ್ನು ಬಲಪಡಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಡಿ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ನಗರ ಜೀವನಶೈಲಿಯಲ್ಲಿ, ವಿಟಮಿನ್ ಡಿ ಕೊರತೆಯು ಜನರಲ್ಲಿ ಹೆಚ್ಚಾಗಿ ಕಾಣಿಸ್ತಿದೆ. ಫ್ಲಾಟ್‌ಗಳಲ್ಲಿ ವಾಸಿಸುವ ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಜನರು ದಿನವಿಡೀ ಸೂರ್ಯನ ಬೆಳಕಿಗೆ ಹೋಗುವುದಿಲ್ಲ. ಇದರಿಂದಾಗಿ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಾಣಿಸುತ್ತದೆ. ಸೂರ್ಯನ ಕಿರಣ ವಿಟಮಿನ್ ಡಿಗೆ ಒಳ್ಳೆಯ ಮೂಲ. ಇದನ್ನು ಹೊರತುಪಡಿಸಿ ನೀವು ನಿಮ್ಮ ಆಹಾರದಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬಹುದು. ವಿಟಮಿನ್ ಡಿ ಕೊರತೆಯನ್ನು ಕೆಲ ಆಹಾರಗಳ ಸೇವನೆಯಿಂದ ನೀಗಿಸಬಹುದು. ಸಸ್ಯಹಾರಿಗಳು ವಿಟಮಿನ್ ಡಿ ಕೊರತೆ ಹೋಗಲಾಡಿಸಲು ಯಾವ ಆಹಾರ ಸೇವನೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಸಸ್ಯಹಾರಿ (Vegetarians) ಗಳಿಗೆ ವಿಟಮಿನ್ ಡಿ (Vitamin D) ಆಹಾರ :
undefined
ಹಾಲು (Milk) : ಹಾಲನ್ನು ಪೋಷಕಾಂಶಗಳ ಉಗ್ರಾಣ ಎಂದು ಹೇಳಲಾಗುತ್ತದೆ. ಹಾಲಿನಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ (Calcium) ಹೆಚ್ಚಿನ ಪ್ರಮಾಣದಲ್ಲಿ ಇವೆ. ಹಸುವಿನ ಹಾಲು ಸಿಗುವುದಾದರೆ ಇನ್ನೂ ಉತ್ತಮ. ಹಸುವಿನ ಹಾಲಿನಲ್ಲಿ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಪ್ರತಿದಿನ 1 ಗ್ಲಾಸ್ ಹಸುವಿನ ಹಾಲನ್ನು ಕುಡಿಯುವುದರಿಂದ ವಿಟಮಿನ್ ಡಿ ಕೊರತೆ ನೀಗಿಸಬಹುದು.
ಮೊಸರು : ಪ್ರತಿದಿನ ಮೊಸರು ತಿನ್ನುವುದರಿಂದ ವಿಟಮಿನ್ ಡಿ ಕೊರತೆಯನ್ನು ಪೂರೈಸುವುದು ಮಾತ್ರವಲ್ಲ, ಇದು ಕ್ಯಾಲ್ಸಿಯಂ ಅನ್ನು ಸಹ ನೀಡುತ್ತದೆ. ಮೊಸರು ಮೂಳೆಗಳನ್ನು ಬಲಗೊಳಿಸುತ್ತದೆ. ಮೊಸರು ತಿನ್ನುವುದರಿಂದ ಹೊಟ್ಟೆ ಸಮಸ್ಯೆ ಕಡಿಮೆಯಾಗುತ್ತದೆ.
ಕಿತ್ತಳೆ ಹಣ್ಣು (Orange Fruit) : ಜನರು ಕಿತ್ತಳೆಯನ್ನು ವಿಟಮಿನ್ ಸಿ ಮೂಲವೆಂದು ಪರಿಗಣಿಸುತ್ತಾರೆ. ಆದರೆ ಕಿತ್ತಳೆ ಹಣ್ಣು ತಿನ್ನುವುದರಿಂದ ದೇಹವು ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಯನ್ನು ಸಹ ಪಡೆಯುತ್ತದೆ. ನೀವು ಕಿತ್ತಳೆ ರಸವನ್ನು ಸಹ ಕುಡಿಯಬಹುದು. ಕಿತ್ತಳೆ ಹಣ್ಣು ತಿನ್ನುವ ಮೂಲಕ ನೀವು ವಿಟಮಿನ್-ಡಿ ಯ ದೈನಂದಿನ ಅಗತ್ಯಗಳನ್ನು ಪೂರೈಸಬಹುದು.
ಧಾನ್ಯಗಳು (Cereals) : ವಿಟಮಿನ್ ಡಿ ಧಾನ್ಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ವಿಟಮಿನ್ ಡಿ ಕೊರತೆಯನ್ನು ನೀಗಿಸಲು ನೀವು ಗೋಧಿ, ಬಾರ್ಲಿ ಮತ್ತು ಇತರ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಧಾನ್ಯಗಳನ್ನು ತಿನ್ನುವುದರಿಂದ ದೇಹಕ್ಕೆ ಫೈಬರ್ ಮತ್ತು ಇತರ ಪೋಷಕಾಂಶಗಳು ಸಹ ದೊರೆಯುತ್ತವೆ.
ಚಕ್ಕೋತ…. ಚಕ್ಕೋತಾ…. ಬನ್ನಿ ಹಣ್ಣಿನ ಪ್ರಯೋಜನ ತಿಳಿಯೋಣ
ಓಟ್ಸ್ : ನೀವು ಬೆಳಗಿನ ಉಪಾಹಾರದಲ್ಲಿ ಓಟ್ಸ್ ಅನ್ನು ತಿನ್ನುತ್ತಿದ್ದರೆ ಅದು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಓಟ್ಸ್ ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಬೆಳಿಗಿನ ಉಪಹಾರಕ್ಕೆ ಮಾತ್ರವಲ್ಲ ಓಟ್ಸನ್ನು ನೀವು ಯಾವುದೇ ಸಮಯದಲ್ಲಿ ಸೇವನೆ ಮಾಡಬಹುದು. ಓಟ್ಸ್ ಫೈಬರ್ ನಿಂದ ಸಮೃದ್ಧವಾಗಿದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭ.
ದಿನಾ ಹಸಿ ಖರ್ಜೂರ ತಿಂದ್ರೆ ಹಾರ್ಟ್ ಅಟ್ಯಾಕ್ ಭಯ ಬೇಕಿಲ್ಲ
ಅಣಬೆ : ಕೆಲ ಸಸ್ಯಹಾರಿಗಳು ಅಣಬೆ ಸೇವನೆ ಮಾಡುವುದಿಲ್ಲ. ಮತ್ತೆ ಕೆಲವರು ಅಣಬೆ ತಿನ್ನುತ್ತಾರೆ. ನೀವೂ ಸಸ್ಯಹಾರಿಯಾಗಿದ್ದು, ಅಣಬೆ ಸೇವನೆ ಮಾಡ್ತೀರಿ ಎಂದಾದ್ರೆ ವಿಟಮಿನ್ ಡಿ ಕೊರತೆ ನೀಗಿಸಲು ನೀವು ಅಣಬೆಯನ್ನು ಆಹಾರದ ಭಾಗವನ್ನಾಗಿ ಮಾಡಿಕೊಳ್ಳಿ. ವಿಟಮಿನ್ ಬಿ1, ಬಿ2, ಬಿ5, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ಅಣಬೆಗಳಲ್ಲಿ ಕಂಡುಬರುತ್ತದೆ. ಅಣಬೆಗಳನ್ನು ವಿಟಮಿನ್ ಡಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ.