
ಭಾರತೀಯರ ಫೆವರೆಟ್ ಸ್ಟ್ರೀಟ್ ಫುಡ್ (Street Food) ಪಟ್ಟಿಯಲ್ಲಿ ಗೊಲ್ಗಪ್ಪಾ ಸ್ಥಾನ ಪಡೆದಿದೆ. ದೇಶದ ಪ್ರತಿಯೊಂದು ಭಾಗದಲ್ಲೂ ಇದನ್ನು ಮಾರಾಟ ಮಾಡಲಾಗುತ್ತೆ. ಎಲ್ಲ ಬೀದಿಗಳಲ್ಲಿ ನೀವು ಗೊಲ್ಗಪ್ಪಾ ಕಾಣ್ಬಹುದು. ಬಿರು ಬಿಸಿಲಿನಲ್ಲೂ ಜನರು ಗೊಲ್ಗಪ್ಪಾ ರುಚಿ ಸವಿತಾರೆ. ವೀಕೆಂಡ್, ಸಂಜೆ ಆಗ್ತಿದ್ದಂತೆ ಗೊಲ್ಗಪ್ಪಾ, ಪಾನಿಪುರಿ ಅಂಗಡಿ ಮುಂದೆ ಜನವೋ ಜನ. ಭಾರತದಲ್ಲಿ ಕೈಗೆಟಕುವ ಬೆಲೆಯಲ್ಲಿಇದು ಲಭ್ಯವಿದೆ. 20 ರೂಪಾಯಿಯಿಂದ ಶುರುವಾಗುವ ಈ ಗೊಲ್ಗಪ್ಪಾ ಬೆಲೆ ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ ಜಾಸ್ತಿ ಇರುತ್ತೆ. ಬರೀ ನಮ್ಮ ದೇಶದಲ್ಲಿ ಮಾತ್ರವಲ್ಲ ಅಮೆರಿಕಾ ಸೇರಿದಂತೆ ಬೇರೆ ದೇಶಗಳಲ್ಲೂ ಗೊಲ್ಗಪ್ಪಾ ಲಭ್ಯವಿದೆ. ಅಲ್ಲಿ ನೆಲೆಸಿರುವ ಭಾರತೀಯರು ಗೊಲ್ಗಪ್ಪಾ ಸವಿ ಸವಿತಾರೆ. ಅಲ್ಲಿ ಇದ್ರ ಬೆಲೆ ಎಷ್ಟು ಎನ್ನುವ ಮಾಹಿತಿ ಇಲ್ಲಿದೆ.
ಭಾರತೀಯ ಸ್ಟ್ರೀಟ್ ಫುಡ್ ಅಮೆರಿಕಾದಲ್ಲೂ ಪ್ರಸಿದ್ಧಿ ಪಡೆದಿದೆ. ಅಮೆರಿಕಾದ ಅನೇಕ ನಗರಗಳಲ್ಲಿ ಗೊಲ್ಗಪ್ಪಾ ಲಭ್ಯವಿದೆ. ಅನೇಕ ಹೊಟೇಲ್, ರೆಸ್ಟೋರೆಂಟ್ ಗಳು ಇದನ್ನು ಮಾರಾಟ ಮಾಡ್ತಿವೆ. ಅಮೆರಿಕಾದಲ್ಲಿ ಒಂದು ಪ್ಲೇಟ್ ಗೊಲ್ಗಪ್ಪಾ ಬೆಲೆ ಎಷ್ಟು ಎನ್ನುವ ಬಗ್ಗೆ ಅನೇಕ ರೀಲ್ಸ್ ಈಗಾಗ್ಲೇ ವೈರಲ್ ಆಗಿದೆ. ಅಲ್ಲಿನ ಭಾರತೀಯರು, ರೀಲ್ಸ್ ಮೂಲಕ ಭಾರತದ ಸ್ಟ್ರೀಟ್ ಫುಡ್ ಗೊಲ್ಗಪ್ಪಾ ಹಾಗೂ ಪಾನಿಪುರಿ ಎಷ್ಟು ರೂಪಾಯಿಗೆ ಸಿಗುತ್ತೆ ಎನ್ನುವ ಮಾಹಿತಿ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿರುವ ರೀಲ್ಸ್ ಹಾಗೂ ಕೆಲ ಮಾಹಿತಿಗಳ ಪ್ರಕಾರ, ಅಮೆರಿಕಾದಲ್ಲಿ ಒಂದು ಪ್ಲೇಟ್ ಗೊಲ್ಗಪ್ಪ ಬೆಲೆ 7 ರಿಂದ 10 ಡಾಲರ್. ಅಂದ್ರೆ ಒಂದು ಪ್ಲೇಟ್ ಗೊಲ್ಗಪ್ಪ ಬೆಲೆ 600 ರೂಪಾಯಿಯಿಂದ 800 ರೂಪಾಯಿ ಆಗಿದೆ. ಇದ್ರಲ್ಲಿ ನಿಮಗೆ 6 ರಿಂದ 8 ಪುರಿ ಸಿಗುತ್ತೆ.
ಇಷ್ಟೇ ಅಲ್ಲ ಅಂಗಡಿಗಳಲ್ಲಿ ಪಾನಿ ಪುರಿ ಪ್ಯಾಕ್ ಕೂಡ ಸಿಗುತ್ತೆ. ಒಂದು ಪ್ಯಾಕೆಟ್ ನಲ್ಲಿ ನಿಮಗೆ 50 ಪುರಿ ಸಿಗುತ್ತೆ. ಅದ್ರ ಜೊತೆ ಮಸಾಲೆ ನಿಮಗೆ ಸಿಗುತ್ತದೆ. ಈ ಗೊಲ್ಗಪ್ಪ ಪ್ಯಾಕೆಟ್ ಬೆಲೆ 5 ಡಾಲರ್. ನೀವೇ ಮನೆಯಲ್ಲೇ ಗೊಲ್ಗಪ್ಪ ಮಾಡಿಕೊಳ್ತೀರಿ ಅಂದ್ರೆ 400 ರೂಪಾಯಿ ಖರ್ಚು ಮಾಡ್ಬೇಕು. ಅಮೆರಿಕಾ ವೈಟ್ ಹೌಸ್ ನಲ್ಲಿ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಅತಿಥಿಗಳಿಗೆ ಗೊಲ್ಗಪ್ಪ ಸರ್ವ್ ಮಾಡಲಾಗಿತ್ತು.
ಬೇರೆ ದೇಶದಲ್ಲಿ ಪಾನಿಪುರಿ ಬೆಲೆ : ಯುಕೆಯಲ್ಲಿ ನೀವು ಒಂದು ಪ್ಲೇಟ್ ಪಾನಿಪುರಿ ಖರೀದಿ ಮಾಡಿದ್ರೆ 3.5 ಡಾಲರ್ ಅಂದ್ರೆ ಸುಮಾರು 300 ರೂಪಾಯಿ ಖರ್ಚು ಮಾಡ್ಬೇಕು. ನಿಮಗೆ ಆರು ಪುರಿ ಇದ್ರಲ್ಲಿ ಸಿಗುತ್ತೆ. ಇನ್ನು ಚೀನಾದಲ್ಲಿ 6 ಪುರಿ ಇರುವ ಪಾನಿಪುರಿಯ ಒಂದು ಪ್ಲೇಟ್ ಬೆಲೆ 350 ರೂಪಾಯಿ. ಅಂದ್ರೆ 4 ಡಾಲರ್. ಕೆನಡಾದಲ್ಲಿ ಪಾನಿಪುರಿ ಮತ್ತಷ್ಟು ದುಬಾರಿ. ಇಲ್ಲಿ ನೀವು ಆರು ಪುರಿ ಇರುವ ಒಂದು ಪ್ಲೇಟ್ ಪಾನಿಪುರಿಗೆ 450 ರೂಪಾಯಿ ಅಂದ್ರೆ 5 ಡಾಲರ್ ಖರ್ಚು ಮಾಡ್ಬೇಕು. ಈ ಪಟ್ಟಿಯಲ್ಲಿ ಜಪಾನ್ ಮತ್ತಷ್ಟು ದುಬಾರಿ ಲೀಸ್ಟ್ ಗೆ ಬರುತ್ತದೆ. ಇಲ್ಲಿ ಒಂದು ಪ್ಲೇಟ್ ಪಾನಿಪುರಿಗೆ ನೀವು 6 ಡಾಲರ್ ಅಂದ್ರೆ 520 ರೂಪಾಯಿ ಖರ್ಚು ಮಾಡ್ಬೇಕಾಗುತ್ತದೆ. ಫ್ರಾನ್ಸ್ ರೇಟ್ ಕೇಳಿದ್ರೆ ದಂಗಾಗೋದು ಸಹಜ. ಯಾಕೆಂದ್ರೆ ಫ್ರಾನ್ಸ್ ನಲ್ಲಿ ಒಂದು ಪ್ಲೇಟ್ ಪಾನಿಪುರಿ ಬೆಲೆ 1089 ರೂಪಾಯಿ. ಆದ್ರೆ ಇಲ್ಲಿ ಒಂದು ಪ್ಲೇಟ್ ಗೆ 8 ಪುರಿಯನ್ನು ನೀವು ತಿನ್ಬಹುದು. ಮಲೇಷಿಯಾದಲ್ಲಿ ಇದ್ರ ಬೆಲೆ 200 ರೂಪಾಯಿ. ಈ ಬೆಲೆ ಆಯಾ ದೇಶದ ಸಂಬಳ, ಜೀವನ ವೆಚ್ಚವನ್ನು ಆಧರಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.