ಸಚಿನ್ ವಡಾ ಪಾವ್‌ ತಿನ್ತಿದ್ದ ಶಾಪ್‌ನಲ್ಲಿ ಜನವೋ ಜನ, ವೀಡಿಯೋದಲ್ಲಿ ಮಾಹಿತಿ ತಿಳಿಸಿದ ಡಾ.ಬ್ರೋ

By Vinutha Perla  |  First Published Nov 4, 2023, 3:48 PM IST

ಮುಂಬೈ ಅಂದ್ರೆ ತಕ್ಷಣಕ್ಕೆ ನೆನಪಾಗೋದೆ ವಡಾ ಪಾವ್‌. ಆದ್ರೆ ನಗರದಲ್ಲಿ ಸಾವಿರಾರು ಚಾಟ್ಸ್ ಸೆಂಟರ್ ಇದ್ರೂ ಇಲ್ಲೊಂದು ವಡಾ ಪಾವ್‌ ಶಾಪ್‌ ಯಾವಾಗ್ಲೂ ಸಿಕ್ಕಾಪಟ್ಟೆ ರಶ್‌ ಆಗಿರುತ್ತೆ. ಇಲ್ಲೊಂದು ವಡಾ ಪಾವ್‌ ತಗೊಳ್ಳೋಕೆ ಭರ್ತಿ ಒಂದು ಗಂಟೆ ಕಾಯ್ಬೇಕು. ಸಚಿನ್ ತೆಂಡುಲ್ಕರ್ ಫ್ಯಾನ್ಸ್ ಎಲ್ಲಾ ಈ ಶಾಪ್‌ಗೆ ಬರ್ತಾರೆ. ಅದ್ಯಾಕೆ?


ಕ್ರಿಕೆಟ್ ಹಲವರ ಫೇವರಿಟ್. ತಮ್ಮ ನೆಚ್ಚಿನ ಪ್ಲೇಯರ್ಸ್‌ ಬಗ್ಗೆ ಎಲ್ಲಾ ವಿಷಯವನ್ನು ತಿಳಿದುಕೊಳ್ಳಲು ಯತ್ನಿಸುತ್ತಾರೆ. ಅವರ ಬಾಲ್ಯ, ಮೊದಲು ಮಾಡಿದ ಜಾಬ್‌, ಕಷ್ಟಕರ ದಿನಗಳ ಬಗ್ಗೆ ತಿಳಿದುಕೊಂಡಿರುತ್ತಾರೆ. ಹೀಗೆ ಪ್ರತಿಯೊಬ್ಬರಿಗೂ ತಮ್ಮ ನೆಚ್ಚಿನ ಕ್ರಿಕೆಟಿಗರ ಜೀವನಶೈಲಿ, ಇಷ್ಟದ ಆಹಾರದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ.  ಅದರಲ್ಲೂ ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳೋ ಸಚಿನ್ ತೆಂಡುಲ್ಕರ್‌ಗೆ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದಾರೆ. ಅವರ ಜೀವನಕ್ರಮದ ತಿಳಿದುಕೊಳ್ಳಲು ಸಾಕಷ್ಟು ಗೂಗಲ್‌ ಸರ್ಚ್ ಮಾಡುತ್ತಾರೆ. ಆದರೆ ಕ್ರಿಕೆಟ್‌ ದೇವರ ನೆಚ್ಚಿನ ವಡಾ ಪಾವ್ ಶಾಪ್‌ ಬಗ್ಗೆ ಎಷ್ಟು ಮಂದಿಗೆ ಗೊತ್ತಿದೆ?

ಮಾಜಿ ಭಾರತೀಯ ಕ್ರಿಕೆಟಿಗರಾಗಿರುವ ಸಚಿನ್  ತೆಂಡೂಲ್ಕರ್ ತಮ್ಮ ಪವರ್‌ಫುಲ್ ಆಟದಿಂದ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ದೇಶ-ವಿದೇಶಗಳಲ್ಲಿ ಅವರಿಗೆ ಫ್ಯಾನ್ಸ್ ಇದ್ದಾರೆ. ತೆಂಡುಲ್ಕರ್ ಜೀವನದ (Life) ಬಗ್ಗೆ ತಿಳಿದುಕೊಳ್ಳಲು ಯಾರಿಗೆ ತಾನೇ ಕುತೂಹಲ ಇರಲ್ಲ. ನಾವಿಲ್ಲಿ ಕ್ರಿಕೆಟ್‌ ದೇವರ (God of Cricket) ನೆಚ್ಚಿನ ಆಹಾರದ ಬಗ್ಗೆ ತಿಳಿಸುತ್ತಿದ್ದೇವೆ. 

Tap to resize

Latest Videos

undefined

ಗುಜರಾತ್‌ ಫೇಮಸ್ ಫುಡ್‌, ಕ್ರಿಕೆಟಿಗರಿಗೆ ಹೋಲಿಸಿದ ಡಾ.ಬ್ರೋ! ಪಾಂಡ್ಯ ಪಾಪಡ್‌, ಬುಮ್ರಾ ಜಿಲೇಬಿಯಂತೆ!

ಮುಂಬೈನಲ್ಲಿದೆ ಸಚಿನ್‌ ತೆಂಡುಲ್ಕರ್‌ ನೆಚ್ಚಿನ ವಡಾಪಾವ್‌ ಶಾಪ್‌
ಸಚಿನ್ ತೆಂಡುಲ್ಕರ್‌, ಶುದ್ಧ ಮಾಂಸಾಹಾರಿಯಾಗಿದ್ದು, ಕೀಮಾ ಪರಾಠಾಸ್, ಪಾನ್ ಮಸಾಲಾ, ಲಸ್ಸಿ, ಸುಶಿ ಮೊದಲಾದ ಆಹಾರವನ್ನು ಇಷ್ಟಪಡುತ್ತಾರೆ. ಅವರ ಇತ್ತೀಚಿನ ನೆಚ್ಚಿನ ಆಹಾರ (Food)ವೆಂದರೆ ಮಹಾರಾಷ್ಟ್ರದ ರುಚಿಕರವಾದ ಖಾದ್ಯ, ಮಿಸಾಲ್ ಪಾವ್. ಕೆಂಪು ಚಟ್ನಿ, ಸ್ವಲ್ಪ ಹಸಿರು ಚಟ್ನಿ ಮತ್ತು ಇಮ್ಲಿ ಚಟ್ನಿಯೊಂದಿಗೆ ವಡಾ ಪಾವ್ ಸವಿಯಲು ಇಷ್ಟಪಡುತ್ತಾರೆ. ಇದಲ್ಲದೆ, ಮುಂಬೈನಲ್ಲಿರುವ ಸಚಿನ್‌ ತೆಂಡುಲ್ಕರ್‌ ಅವರ ನೆಚ್ಚಿನ ವಡಾಪಾವ್‌ ಅಂಗಡಿಯ ಬಗ್ಗೆ ಡಾ,ಬ್ರೋ ಮಾಹಿತಿ ನೀಡಿದ್ದಾರೆ.

ಮುಂಬೈನಲ್ಲಿರುವ ಸಣ್ಣ ಅಂಗಡಿಯೊಂದರಲ್ಲಿ ಸಚಿನ್‌ ತೆಂಡುಲ್ಕರ್ ಕ್ರಿಕೆಟ್‌ ಪ್ರಾಕ್ಟೀಸ್ ಮುಗಿಸಿ ವಡಾಪಾವ್ ಸವಿಯುತ್ತಿದ್ದರು. ಹೀಗಾಗಿ ಈ ಅಂಗಡಿ ತುಂಬಾ ಫೇಮಸ್ ಆಗಿದೆ. ದಿನಕ್ಕೆ ನೂರಾರು ಮಂದಿ ಇಲ್ಲಿಗೆ ವಡಾ ಪಾವ್ ತಿನ್ನಲು ಬರುತ್ತಾರೆ. ಒಂದು ಗಂಟೆಗೂ ಹೆಚ್ಚು ಕಾಲ ಕ್ಯೂ ನಿಂತು ಸಚಿನ್‌ ನೆಚ್ಚಿನ ವಡಾ ಪಾವ್ ಸವಿಯುತ್ತಾರೆ ಎಂದು ಡಾ.ಬ್ರೋ ತಮ್ಮ ವೀಡಿಯೋದಲ್ಲಿ ತಿಳಿಸಿದ್ದಾರೆ. 'ಇದು 70 ವರ್ಷಕ್ಕೂ ಹಳೆಯ ವಡಾ ಪಾವ್‌ ಶಾಪ್‌. ಪಕ್ಕದಲ್ಲಿರುವ ಗ್ರೌಂಡ್‌ನಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡಿ ಸಚಿನ್‌ ಈ ಶಾಪ್‌ಗೆ ಬಂದು ವಡಾ ಪಾವ್‌ ತಿನ್ನುತ್ತಿದ್ದಂತೆ' ಎಂದು ಡಾ.ಬ್ರೋ ತಿಳಿಸುತ್ತಾರೆ. ವಡಾ ಪಾವ್‌ ಟೇಸ್ಟ್ ಮಾಡಿ ಅದ್ಭುತವಾಗಿದೆ ಎನ್ನುತ್ತಾರೆ. ಸಚಿನ್ ತೆಂಡುಲ್ಕರ್ ಆಡಿದ ಆಟದ ಮೈದಾನವನ್ನು ಸಹ ಡಾ.ಬ್ರೋ ವೀಡಿಯೋದಲ್ಲಿ ತೋರಿಸಿದ್ದಾರೆ.

ಚಿರತೆಯನ್ನು ಡಾ.ಬ್ರೋ ಹೊಗಳ್ತಿದ್ರೆ, ಸಿಟ್ಟಿಗೆದ್ದ ಸಿಂಹ ಅವ್ರ ಮೈಮೇಲೆ ಮೂತ್ರ ಮಾಡೋದಾ?

ವಿರಾಟ್‌ ಕೊಹ್ಲಿ ನೆಚ್ಚಿನ ಆಹಾರ ಚೋಲೆ ಭಟೂರೆ
ವಿರಾಟ್‌ ಕೊಹ್ಲಿ ನೆಚ್ಚಿನ ಆಹಾರ ಚೋಲೆ ಭಟೂರೆ. ಅವರು ಮುಂಬೈಗೆ ಬಂದಾಗ ದೆಹಲಿಯಲ್ಲಿ ಸಿಗೋವಂಥಾ ಚೋಲೆ ಭಟೂರೆ ಸವಿಯಲು ಇಲ್ಲಿನ 'ದೆಲ್ಲಿ ಸೇ' ಹೊಟೇಲ್‌ಗೆ ಬರುತ್ತಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಈ ಹೊಟೇಲ್‌ಗೆ ಬಂದು ಚೋಲೆ ಭಟೂರೆ ಸವಿದು ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕಿದ ನಂತರ ಈ ಹೊಟೇಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ ಎಂದು ಡಾ.ಬ್ರೋ ತಿಳಿಸಿದ್ದಾರೆ.

click me!