ಗೋಲ್ ಗಪ್ಪಾ ಅನ್ನಿ, ಪಾನಿಪೂರಿ ಎನ್ನಿ. ಇದನ್ನು ಸವಿಯದ ಭಾರತೀಯರಿಲ್ಲ. ಅತ್ಯಂತ ಜನಪ್ರಿಯ ಸ್ಟ್ರೀಟ್ ಫುಡ್ ಎನ್ನುವ ಖ್ಯಾತಿ ಪಡೆದಿರುವ ಗೋಲ್ ಗಪ್ಪಾದಲ್ಲೂ ವಿಭಿನ್ನ ರುಚಿಯನ್ನು ಪ್ರಯೋಗ ಮಾಡುವವರಿದ್ದಾರೆ. ಜೈಪುರದಲ್ಲಿ ಒಬ್ಬಾತ ಹಣ್ಣುಗಳ ಗೋಲ್ ಗಪ್ಪಾ ಆರಂಭಿಸಿದ್ದಾರೆ. ಆದರೆ, ಇದರ ರುಚಿ ಗ್ರಾಹಕರಿಗೆ ಖುಷಿ ನೀಡಿಲ್ಲ.
ತಿಂಡಿಪ್ರಿಯರ ನಾಡು ನಮ್ಮದು. ಪ್ರತಿದಿನ ಹೊಸ ಹೊಸ ಖಾದ್ಯಗಳನ್ನು ಪರಿಚಯಿಸುತ್ತ, ಹಳೆಯದಕ್ಕೆ ಹೊಸ ರೂಪ ನೀಡುತ್ತ, ಹಳೆಯ ತಿನಿಸುಗಳನ್ನು ಮಗದೊಮ್ಮೆ ಟೇಸ್ಟ್ ಮಾಡುತ್ತ ಖುಷಿ ಪಡುವುದು ನಮ್ಮ ಅಭ್ಯಾಸ. ಇತ್ತೀಚೆಗಂತೂ ಬೀದಿಬದಿ ತಿನಿಸುಗಳಂತೂ ಭಾರೀ ಜನಪ್ರಿಯ. ಅದರಲ್ಲೂ ಭಾರತದ ಗೋಲ್ ಗಪ್ಪಾ ವಿದೇಶಗಳಲ್ಲೂ ಜನಪ್ರಿಯ. ದಕ್ಷಿಣ ಭಾರತದಲ್ಲಿ ಇದು ಪಾನಿಪೂರಿ, ಉತ್ತರದಲ್ಲಿ ಗೋಲ್ ಗಪ್ಪಾ. ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ರುಚಿ ಸೇಮ್. ಕೆಲವೆಡೆ ಇದನ್ನು ಪುಚ್ಕಾ ಎಂದೂ ಹೇಳಲಾಗುತ್ತದೆ. ಆಲೂಗಡ್ಡೆ ಮತ್ತು ಪುದೀನಾ, ಮೆಣಸಿನಕಾಯಿ, ಹುಣಸೇಹಣ್ಣು ಸೇರಿರುವ ಮಸಾಲೆಭರಿತ ಪಾನಿಯೊಂದಿಗೆ ಗೋಲ್ ಗಪ್ಪಾ ಅಥವಾ ಪಾನಿಪೂರಿಯನ್ನು ಸೇವಿಸುವುದೇ ಭಾರೀ ಥ್ರಿಲ್ ನೀಡುವ ಸಂಗತಿ. ದಿನವೂ ಒಂದು ಪ್ಲೇಟ್ ಪಾನಿಪೂರಿಯನ್ನು ಸೇವಿಸುವವರಿದ್ದಾರೆ. ಇದರಲ್ಲೂ ಹಲವು ನಮೂನೆಯನ್ನು ಪರಿಚಯಿಸುವ ಉತ್ಸಾಹವನ್ನು ಹಲವರು ತೋರುತ್ತಾರೆ. ರಾಜಸ್ಥಾನದ ಜೈಪುರದಲ್ಲಿ ಹಣ್ಣಿನ ಗೋಲ್ ಗಪ್ಪಾ ಮಾರುವವರೊಬ್ಬರ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿದೆ. ವಿವಿಧ ನಮೂನೆಯ ಹಣ್ಣುಗಳನ್ನು ಸೇರಿಸಿ ಗೋಲ್ ಗಪ್ಪಾ ಮಾಡುವುದನ್ನು ನೋಡಿದರೆ ಕುತೂಹಲ ಮೂಡುವುದು ಗ್ಯಾರೆಂಟಿ. ಆದರೆ, ಈ ಗೋಲ್ ಗಪ್ಪಾ ಬಗ್ಗೆ ಹೆಚ್ಚಿನ ಜನ ಮೆಚ್ಚುಗೆ ವ್ಯಕ್ತಪಡಿಸಿಲ್ಲ.
ಗೋಲ್ ಗಪ್ಪಾ (Golgappa) ಅತ್ಯಂತ ಜನಪ್ರಿಯ (Popular) ಸ್ಟ್ರೀಟ್ ಫುಡ್ (Street Food). ಯಾವ ಸೀಸನ್ನಿನಲ್ಲೂ ಅದಕ್ಕೆ ಬೇಡಿಕೆ ಕುಗ್ಗುವುದಿಲ್ಲ. ಬೇಯಿಸಿದ ಆಲೂಗಡ್ಡೆ (Aloo) ಹಾಗೂ ಬಟಾಣಿ (Chickpeas) ಕಾಳುಗಳೇ ಅದರ ಜೀವಾಳ. ಆದರೆ, ಜೈಪುರದ ಬೀದಿಬದಿ ವ್ಯಾಪಾರಸ್ಥನೊಬ್ಬ ಹಣ್ಣುಗಳ (Fruits) ಗೋಲ್ ಗಪ್ಪಾವನ್ನು ಆರಂಭಿಸಿದ್ದಾನೆ. ಈತ ಮಾಡುವ ಗೋಲ್ ಗಪ್ಪಾವನ್ನು ಹಲವರು ಟೇಸ್ಟ್ ಮಾಡಿದ್ದಾರೆ. ಈತನ ಹಣ್ಣುಗಳ ಗೋಲ್ ಗಪ್ಪಾ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಕುರಿತ ವೀಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಜೈಪುರ್ ಹಂಗರ್ ಸ್ಟೋರೀಸ್ ಎನ್ನುವ ಖಾತೆಯಿಂದ ಇದನ್ನು ಶೇರ್ ಮಾಡಲಾಗಿದ್ದು, ಕೆಲವೇ ಸಮಯದಲ್ಲಿ ಗೋಲ್ ಗಪ್ಪಾ ಪ್ರಿಯರು ಸಿಕ್ಕಾಪಟ್ಟೆ ಪ್ರತಿಕ್ರಿಯೆ ನೀಡಿದ್ದಾರೆ.
undefined
ದೀರ್ಘಾಯಸ್ಸು ಬೇಕಾ? ಹಾಗಿದ್ರೆ ಪ್ರತಿದಿನ ಈ ಕೆಲಸ ಮಾಡಿ ನೂರು ವರ್ಷ ಬಾಳಿ
ಈ ವೀಡಿಯೋದಲ್ಲಿ ಸ್ಟ್ರೀಟ್ ವ್ಯಾಪಾರಿ ಸೇಬು, ಪೈನಾಪಲ್, ಡ್ರ್ಯಾಗನ್ ಫ್ರೂಟ್ ಸೇರಿ ಕೆಲವು ಹಣ್ಣುಗಳನ್ನು ಕತ್ತರಿಸಿ ಅವುಗಳನ್ನು ಮಿಕ್ಸ್ ಮಾಡುವುದು, ಹಣ್ಣುಗಳ ಸಣ್ಣ ಹೋಳುಗಳನ್ನು ಪೂರಿಯೊಳಗೆ ಸೇರಿಸಿ ಮೇಲಿನಿಂದ ಮೊಸರು (Yogurt) ಮತ್ತು ಇನ್ನಿತರ ಮಸಾಲೆ (Spice) ಸೇರಿಸುವುದು ಕಂಡುಬರುತ್ತದೆ. ಒಟ್ಟು ಆರು ಬಗೆಯ ಹಣ್ಣುಗಳ ಗೋಲ್ ಗಪ್ಪಾ ದೊರೆಯುತ್ತದೆ ಎಂದು ಆತ ಬೋರ್ಡ್ ಹಾಕಿಕೊಂಡಿದ್ದಾನೆ. ಇದನ್ನು ಶೇರ್ (Share) ಮಾಡಿದ ಒಂದೆರಡು ದಿನದಲ್ಲೇ 3 ಲಕ್ಷಕ್ಕೂ ಅಧಿಕ ವೀಕ್ಷಕರು ನೋಡಿದ್ದಾರೆ. 4 ಸಾವಿರಕ್ಕೂ ಅಧಿಕ ಲೈಕ್ಸ್ (Likes) ಬಂದಿವೆ. ವಿವಿಧ ರೀತಿಯ ಕಾಮೆಂಟುಗಳೂ ಸಹಜವಾಗಿ ಬಂದಿವೆ. ಇದೊಂದು ವಿಶೇಷ ಪ್ರಯತ್ನದ ಗೋಲ್ ಗಪ್ಪಾ ಆಗಿದ್ದರೂ ಇದರ ಬಗ್ಗೆ ಹೆಚ್ಚಿನ ಜನ ಒಲವು ತೋರಿಸಿಲ್ಲ.
ಗೋಲ್ ಗಪ್ಪಾ ಅಂದ್ರೆ ಇಮೋಷನ್ಸ್!
ಸಾಕಷ್ಟು ಮಂದಿಗೆ ಗೋಲ್ ಗಪ್ಪಾ ಅಂದರೆ ಭಾವನಾತ್ಮಕ ಸಂಬಂಧವಿದೆ. ಅದರ ಟೇಸ್ಟ್ (Taste) ನೊಂದಿಗೆ ಬೇರೆ ಯಾವುದನ್ನೂ ಮಿಕ್ಸ್ (Mix) ಮಾಡಲು ಅಥವಾ ಬದಲಿಸಲು ಇಷ್ಟವಿರುವುದಿಲ್ಲ. ಹೀಗಾಗಿ, ಒಬ್ಬಾತ, “ಗೋಲ್ ಗಪ್ಪಾ ಅಂದ್ರೆ ಇಮೋಷನ್ಸ್ (Emotions). ಪ್ಲೀಸ್ ಅದರ ಜತೆ ಆಟವಾಡಬೇಡಿʼ ಎಂದು ಗಂಭೀರವಾಗಿ ಹೇಳಿರುವುದು ಈ ತಿನಿಸಿನ ಜತೆಗಿರುವ ಬಾಂಧವ್ಯವನ್ನು (Relation) ವ್ಯಕ್ತಪಡಿಸುತ್ತದೆ. ಮತ್ತೊಬ್ಬರು, “ಇದನ್ನು ಕಳೆದ ರಾತ್ರಿ ಟ್ರೈ ಮಾಡಿದ್ದೇನೆ. ಚೆನ್ನಾಗಿಲ್ಲ. ನಾನಿದನ್ನು ರೆಕಮೆಂಡ್ (Recommend) ಮಾಡುವುದಿಲ್ಲ. ಆಲೂಗಡ್ಡೆ ಹಾಗೂ ಪಾನಿ ಜತೆಗಿರುವ ಗೋಲ್ ಗಪ್ಪಾವೇ ನಮಗೆ ಸರಿ. ಇದನ್ನು ಒಂದು ಪೀಸ್ (Piece) ತಿಂದ ಮೇಲೆ ಮತ್ತೊಂದನ್ನು ತಿನ್ನಲು ಸಾಧ್ಯವಾಗುವುದಿಲ್ಲʼ ಎಂದು ಹೇಳಿದ್ದಾರೆ.
ಬಾಳೆ ಹಣ್ಣಲ್ಲ ಹೂ ತಿಂದ್ನೋಡಿ.. ರುಚಿ ಜೊತೆ ಆರೋಗ್ಯಕ್ಕೂ ಒಳ್ಳೇದು! ಶುಗರ್‌ಗೆ ರಾಮಬಾಣ
ಯಾರೋ ಒಬ್ಬರು “ಇದು ನನ್ನ ಹೊಟ್ಟೆಯಲ್ಲಿ (Stomach) ಏನೋ ಕಿರಿಕಿರಿ ಉಂಟುಮಾಡಿತುʼ ಎಂದು ತಿಳಿಸಿದ್ದಾರೆ. ಒಬ್ಬರ ಕಾಮೆಂಟ್ ಅಂತೂ ಭರ್ಜರಿಯಾಗಿದೆ, “ಹಣ್ಣುಗಳ ಗೋಲ್ ಗಪ್ಪಾ ಮಾಡಿರುವ ನಿಮ್ಮನ್ನು ದೇವರು ಕ್ಷಮಿಸುವುದಿಲ್ಲʼ ಎಂದು ಹೇಳಿ ಗೋಲ್ ಗಪ್ಪಾ ಬಗ್ಗೆ ತಮಗಿರುವ ಪ್ರೀತಿಯನ್ನು (Love) ವ್ಯಕ್ತಪಡಿಸಿದ್ದಾರೆ.