
ಬೆಂಗಳೂರು (ಏ.16): ಆನ್‌ಲೈನ್ ಫುಡ್ ಡೆಲಿವರಿ ಫ್ಲಾಟ್‌ಫಾರ್ಮ್ ಜೋಮಾಟೋ ಮಂಗಳವಾರ ಮಹತ್ವದ ಘೋಷಣೆಯನ್ನು ಮಾಡಿದೆ. ಭಾರತದ ಮೊಟ್ಟ ಮೊದಲ ಲಾರ್ಜ್ ಆರ್ಡರ್ ಫ್ಲೀಟ್ ಅನ್ನು ಕಂಪನಿ ಆರಂಭಿಸಿದೆ. ಹೆಚ್ಚೆಂದರೆ, 50 ಜನರಿರುವವ ಬರ್ತ್‌ಡೇ ಪಾರ್ಟಿಗಳು, ಗ್ರೂಪ್ ಇವೆಂಟ್‌ಗಳಿಗೆ ಆರ್ಡರ್‌ಗಳನ್ನು ಈ ಮೂಲಕ ತಲುಪಿಸಲಾಗುತ್ತದೆ. ಅದೇ ರೀತಿಯಲ್ಲಿ ಲಾರ್ಜ್ ಆರ್ಡರ್ ಫ್ಲೀಟ್‌ಅನ್ನು ಆರಂಭಿಸಲಾಗಿದೆ ಎಂದು ಕಂಪನಿ ಘೋಷಣೆ ಮಾಡಿದೆ. ಕಂಪನಿಯ ಸಿಇಒ ದೀಪಿಂದರ್ ಗೋಯಲ್ ಅವರು ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಈ ಕುರಿತಾಗಿ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಕಂಪನಿಯ ಹೊಸ ಸೇವೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆಲ್ ಎಲೆಕ್ಟ್ರಿಕ್ ಫ್ಲೀಟ್‌ಅನ್ನು ಸಂಪೂರ್ಣವಾಗಿ ದೊಡ್ಡ ಆರ್ಡರ್‌ಗಳನ್ನು ಡೆಲಿವರಿ ಮಾಡಲು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಹಿಂದೆ ದೊಡ್ಡ ಆರ್ಡರ್‌ಗಳನ್ನು ತಲುಪಿಸಲು ಬೇರೆ ಬೇರೆ ಫ್ಲೀಟ್ ಡೆಲಿವರಿ ಪಾರ್ಟ್‌ನರ್ ಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈ ಹಂತದಲ್ಲಿ ನಮ್ಮ ಗ್ರಾಹಕರ ಅನುಭವಗಳು ನಮಗೆ ಸಿಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
"ಇಂದು, ನಿಮ್ಮ ಎಲ್ಲಾ ದೊಡ್ಡ (ಗ್ರೂಪ್/ಪಾರ್ಟಿ/ಈವೆಂಟ್) ಆರ್ಡರ್‌ಗಳನ್ನು ಸುಲಭವಾಗಿ ನಿರ್ವಹಿಸಲು ವಿನ್ಯಾಸಗೊಳಿಸಲಾದ ಭಾರತದ ಮೊದಲ ಲಾರ್ಜ್ ಆರ್ಡರ್ ಫ್ಲೀಟ್ ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಇದು ಎಲ್ಲಾ ಎಲೆಕ್ಟ್ರಿಕ್ ಫ್ಲೀಟ್ ಆಗಿದ್ದು, ವಿಶೇಷವಾಗಿ 50 ಜನರ ಸಂತೋಷಕೂಟಕ್ಕಾಗಿ ಆರ್ಡರ್‌ಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
"ಇಂತಹ ದೊಡ್ಡ ಆರ್ಡರ್‌ಗಳನ್ನು ಈ ಹಿಂದೆ ಬಹು ನಿಯಮಿತ ಫ್ಲೀಟ್ ವಿತರಣಾ ಪಾಲುದಾರರಿಗೆ ನೀಡಲಾಗುತ್ತಿತ್ತು. ಆದರೆ, ಗಾಹಕರ ನೈಜ ಅನುಭವ ನಮಗೆ ಸಿಗುತ್ತಿರಲಿಲ್ಲ. ಈ ಹೊಸ ವಾಹನಗಳು Zomato ನಲ್ಲಿ ದೊಡ್ಡ ಆರ್ಡರ್‌ಗಳನ್ನು ನೀಡುವಾಗ ನಮ್ಮ ಗ್ರಾಹಕರು ಎದುರಿಸುವ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಬೇಕು" ಎಂದು ಗೋಯಲ್ ಹೇಳಿದ್ದಾರೆ.
ಸಸ್ಯಹಾರಿಗಳಿಗಾಗಿ 'ಪ್ಯೂರ್ ವೆಜ್ ಮೋಡ್, ಫ್ಯೂರ್ ವೆಜ್ ಫ್ಲೀಟ್' ಪರಿಚಯಿಸಿದ ಜೊಮೋಟೋ!
ವಾಹನಗಳು ವಿನ್ಯಾಸ ಹಾಗೂ ತಯಾರಿ ಇನ್ನೂ ಪ್ರಗತಿಯಲ್ಲಿದೆ ಎಂದೂ ಅವರು ತಿಳಿಸಿದ್ದಾರೆ. ಕಂಪನಿಯೇ ಇಂಥ ವಾಹನಗಳಿಗೆ ಬೇಕಾದ ಕೆಲವೊಂದು ಮಾರ್ಪಾಡುಗಳನ್ನು ಮಾಡಿಸುವ ಹಾದಿಯಲ್ಲಿದೆ. "ಕೂಲಿಂಗ್ ಕಂಪಾರ್ಟ್‌ಮೆಂಟ್‌ಗಳು ಮತ್ತು ತಾಪಮಾನ ನಿಯಂತ್ರಣದೊಂದಿಗೆ ಹಾಟ್ ಬಾಕ್ಸ್‌ಗಳನ್ನು ಇದರಲ್ಲಿ ಸೇರಿಸಲಾಗುತ್ತದೆ. ನೀವು ಆರ್ಡರ್ ಮಾಡಿದ ಫುಡ್, ನಮಗೆ ಬಿಸಿಬಿಸಿಯಾಗಿಯೇ ಬರುವಂತೆ ವಿನ್ಯಾಸ ಮಾಡಲಾಗುತ್ತಿದೆ ಎಂದಿದ್ದಾರೆ.
ಝೊಮ್ಯಾಟೋ ಶುದ್ಧ ಸಸ್ಯಾಹಾರಿ ಮೋಡ್ ಆರಂಭಿಸಿದ್ದೇಕೆ? ಟೀಕೆಗಳ ನಡುವೆ ಕಾರಣ ಬಿಚ್ಚಿಟ್ಟ ಸಿಇಒ ದೀಪಿಂದರ್ ಗೋಯಲ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.