ಮನೆಯಲ್ಲಿಯೇ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಗರಿಗರಿಯಾದ ಈರುಳ್ಳಿ ಪಕೋಡ

Published : Mar 31, 2026, 08:49 PM IST
Onion Pakoda

ಸಾರಾಂಶ

Food recipe: ಈರುಳ್ಳಿ ಪಕೋಡ ಸಂಜೆಯ ಚಹಾ ಜೊತೆ ಸವಿಯಲು ಇಷ್ಟವಾಗುವ ತಿಂಡಿ. ಇದನ್ನು ತಯಾರಿಸೋದು ಸುಲಭ. ಆದರೆ ಹೆಚ್ಚಿನವರ ದೂರ ಏನಂದ್ರೆ, ಗರಿ ಗರಿಯಾಗೋದಿಲ್ಲ ಎಂದು. ಹಾಗಿದ್ರೆ ಗರಿಗರಿಯಾದ ಈರುಳ್ಳಿ ಪಕೋಡ ಮಾಡೋದು ಹೇಗೆ ನೋಡೋಣ. 

ರುಚಿಯಾದ ಈರುಳ್ಳಿ ಪಕೋಡ ಮಾಡಿ

ನೀವು ಕೂಡ ಈ ಸಂಜೆ ಚಹಾ ಜೊತೆ ಸವಿಯಲು, ಏನಾದರೂ ಫಟಾ ಫಟ್ ಆಗಿ ಮಾಡಲು ಬಯಸಿದ್ದರೆ, ಮನೆಯ ಪ್ರತಿಯೊಬ್ಬ ಸದಸ್ಯರು, ಮಕ್ಕಳು ಅಥವಾ ಹಿರಿಯರು ಎಂಜಾಯ್ ಮಾಡಿಕೊಂಡು ತಿನ್ನಬೇಕು ಎಂದು ನೀವು ಬಯಸಿದರೆ, ನೀವು ಈರುಳ್ಳಿ ಪಕೋಡ ಟ್ರೈ ಮಾಡಬಹುದು. ಇದನ್ನು ಕಡಿಮೆ ಪದಾರ್ಥ ಬಳಸಿ, ಬಹು ಬೇಗನೆ ತಯಾರಿಸಬಹುದು. ಆದರೆ, ಗರಿಗರಿಯಾಗಿ ಮಾಡೋದು ಮಾತ್ರ ಕಷ್ಟ ಎಂದು ಹೆಚ್ಚಿನ ಜನ ಹೇಳುತ್ತಾರೆ.

ಗರಿಗರಿಯಾದ ಈರುಳ್ಳಿ ಪಕೋಡ ಮಾಡುವ ವಿಧಾನ

ಈರುಳ್ಳಿ ಪಕೋಡ ಮಾಡಲು ಬಹಳ ಕಡಿಮೆ ಪದಾರ್ಥಗಳು ಬೇಕಾಗುತ್ತವೆ, ಮತ್ತು ತಯಾರಿಕೆಯ ವಿಧಾನವು ಸಹ ತುಂಬಾನೆ ಸರಳವಾಗಿದೆ.

  • ಮೊದಲು, ನೀವು ದೊಡ್ಡ ಗಾತ್ರದ ಈರುಳ್ಳಿಯನ್ನು ಆರಿಸಿ ಅವುಗಳನ್ನು ತೆಳುವಾಗಿ ಉದ್ದುದ್ದಕ್ಕೆ ಕತ್ತರಿಸಬೇಕು. ಈರುಳ್ಳಿಯನ್ನು ತೆಳ್ಳಗೆ ಹೋಳು ಮಾಡಿದಷ್ಟೂ ಪಕೋಡ ಗರಿಗರಿಯಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
  • ಈಗ, ಕತ್ತರಿಸಿದ ಈರುಳ್ಳಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಮತ್ತು ಮಸಾಲೆಗಳನ್ನು ಸೇರಿಸಲು ಪ್ರಾರಂಭಿಸಿ.
  • ಮೊದಲು, ಒಂದು ಚಿಟಿಕೆ ಅರಿಶಿನ, ನಂತರ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ. ನಂತರ, ಸ್ವಲ್ಪ ಜೀರಿಗೆ ಸೇರಿಸಿ, ಇದು ರುಚಿಯನ್ನು ಹೆಚ್ಚಿಸುವುದಲ್ಲದೆ, ಜೀರ್ಣಕ್ರಿಯೆಗೆ ಸಹ ಪ್ರಯೋಜನಕಾರಿಯಾಗಿದೆ.
  • ಕೊನೆಯದಾಗಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  • ಈಗ ಈರುಳ್ಳಿ ಮತ್ತು ಮಸಾಲೆಗಳ ಮೇಲೆ ಎಷ್ತು ಬೇಕು ಅಷ್ಟು ಕಡ್ಲೆ ಹಿಟ್ಟು ಸೇರಿಸಿ. ಆರಂಭದಲ್ಲಿ ನೀರು ಸೇರಿಸಬೇಡಿ, ಯಾಕಂಡ್ರೆ ಈರುಳ್ಳಿಯಿಂದ ಹೊರಬರುವ ನೀರು ಸಾಕಾಗುತ್ತದೆ. ಅಗತ್ಯವಿದ್ದರೆ ಮಾತ್ರ ಒಂಚೂರು ನೀರನ್ನು ಸೇರಿಸಿ.
  • ಈ ಹಂತದಲ್ಲಿ ನೀವು ಅಕ್ಕಿ ಹಿಟ್ಟನ್ನು ಸೇರಿಸಿದರೆ, ಈರುಳ್ಳಿ ಪಕೋಡ ಗರಿಗರಿಯಾಗುತ್ತವೆ.ಆದರೆ ಹೆಚ್ಚು ಅಕ್ಕಿ ಹಿಟ್ಟು ಸೇವಿಸಬೇಡಿ. ಬದಲಾಗಿ ಸ್ವಲ್ಪ ಪ್ರಮಾಣದಲ್ಲಿ ಅಕ್ಕಿ ಹಿಟ್ಟು ಸೇರಿಸಿ. ಇದರಿಂದ ಈರುಳ್ಳಿ ಪಕೋಡ ಗರಿಗರಿಯಾಗುತ್ತದೆ.
  • ಎಲ್ಲಾ ಚೆನ್ನಾಗಿ ಮಿಕ್ಸ್ ಮಾಡಿದ ಮೇಲೆ ಒಲೆಯ ಮೇಲೆ ಕಡಾಯಿ ಇರಿಸಿ ಮತ್ತು ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಬಿಸಿಯಾದ ನಂತರ, ಸಣ್ಣ ಗಾತ್ರದಲ್ಲಿ ಈರುಳ್ಳಿಯ ಹಿಟ್ಟನ್ನು ಎಣ್ಣೆಯಲ್ಲಿ ಬಿಡಿ.
  • ಮಧ್ಯಮ ಉರಿಯಲ್ಲಿ ಅದು ಬೇಯುತ್ತಿರಲಿ, ಈರುಳ್ಳಿ ಪಕೋಡ ನಸು ಕಂದು ಬಣ್ಣ ಬಂದ ನಂತರ ಅದನ್ನು ಎಣ್ಣೆಯಿಂದ ತೆಗೆಯಿರಿ, ಸ್ವಲ್ಪ ಸಮಯದ ಬಳಿಕ ಮತ್ತೆ ಅದನ್ನು ಎಣ್ಣೆಯಲ್ಲಿ ಉರಿಯಿರಿ. ಇದರಿಂದ ಈರುಳ್ಳಿ ಪಕೋಡ ಮತ್ತಷ್ಟು ಗರಿಗರಿಯಾಗುತ್ತದೆ, ಜೊತೆಗೆ ಹೊಟೇಲ್ ಶೈಲಿಯಂತೆ ಟೇಸ್ಟಿ ಕೂಡ ಆಗುತ್ತದೆ.

ಈಗ ನೀವು ಬಿಸಿ ಬಿಸಿ ಈರುಳ್ಳಿ ಪಕೋಡಗಳನ್ನು ಚಟ್ನಿ, ಟೊಮೆಟೊ ಸಾಸ್, ಅಥವಾ ಚಹಾ ಅಥವಾ ಕಾಫಿಯೊಂದಿಗೆ ಸಹ ಬಡಿಸಬಹುದು. ಇದರ ರುಚಿ ಎಷ್ಟು ಅದ್ಭುತವಾಗಿರುತ್ತದೆ ಎಂದರೆ ನೀವು ಒಮ್ಮೆ ಪ್ರಯತ್ನಿಸಿದರೆ, ಎಲ್ಲರೂ ಇದನ್ನು ಮತ್ತೆ ಮತ್ತೆ ಮಾಡಲು ಕೇಳುತ್ತಾರೆ. ಎಲ್ಲಕ್ಕಿಂತ ಉತ್ತಮವಾಗಿ, ಈ ರುಚಿಕರವಾದ ತಿಂಡಿ ಕೇವಲ 10 ನಿಮಿಷಗಳಲ್ಲಿ ತಿನ್ನಲು ಸಿದ್ಧವಾಗುತ್ತದೆ. ಆದ್ದರಿಂದ, ನೀವು ಬೇಗನೆ ಮತ್ತು ರುಚಿಕರವಾದ ಏನನ್ನಾದರೂ ಮಾಡಬೇಕು ಎಂದು ಬಯಸಿದರೆ, ಈರುಳ್ಳಿ ಪಕೋಡವನ್ನು ಪ್ರಯತ್ನಿಸಲು ಮರೆಯಬೇಡಿ. ಇದನ್ನು ನೀವು ಚಳಿಗಾಲ, ಮಳೆಗಾಲ ಅಥವಾ ಬೇಸಿಗೆಯ ಸಂಜೆಯ ಸ್ನ್ಯಾಕ್ಸ್ ಆಗಿ ಸಹ ಸೇವಿಸಬಹುದು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

9-10 ತಿಂಗ್ಳ ಪುಟ್ಟ ಮಗುವಿಗೂ ಕೊಡ್ಬೋದು ಈ ಸಾಫ್ಟ್ ಇಡ್ಲಿ.. ಕಲ್ಲಾಗದೆ ಸ್ಪಾಂಜಿಯಾಗಿ ಮಾಡಲು ಹೀಗ್ ಮಾಡಿ
ಬ್ಲಿಂಕಿಟ್ ಕಂಪನಿಗೆ FDA ಬಿಗ್ ಶಾಕ್.. ಕಾಕ್ರೋಚ್ ಕಾಟಕ್ಕೆ ಲೈಸೆನ್ಸ್ ರದ್ದು ಮಾಡಿ ಆದೇಶ..!