ಕೋಪ ಕಂಟ್ರೋಲ್ ಆಗ್ತಿಲ್ಲ. ಏನೂ ಇಲ್ದೆ ಸಿಟ್ ಬರ್ತಿದೆ ಅಂತಾದ್ರೆ ಆಹಾರದ ಬಗ್ಗೆ ಸ್ವಲ್ಪ ಗಮನ ಹರಿಸಿ. ಏನೂ ಒತ್ತಡ ಇಲ್ಲವೆಂದ್ರೂ ನಿಮಗೆ ಕೋಪ ಬರ್ತಿದೆ ಅಂದ್ರೆ ನೀವು ತಿನ್ನುತ್ತಿರೋ ಆಹಾರ ಸರಿಯಿಲ್ಲ ಎಂದರ್ಥ.
ಕೆಲವರಿಗೆ ಮೂಗಿನ ಮೇಲೆ ಕೋಪವಿರುತ್ತದೆ. ಸಣ್ಣ ಸಣ್ಣ ವಿಷ್ಯಕ್ಕೂ ಚೀರಾಡ್ತಾರೆ, ಕಿರುಚಾಡ್ತಾರೆ. ಮತ್ತೆ ಕೆಲವರು ಎಂಥ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಕೋಪಕ್ಕೆ ಅನೇಕ ಕಾರಣವಿದೆ. ಆರ್ಥಿಕ ಒತ್ತಡ, ಕಚೇರಿಯ ಸಮಸ್ಯೆ, ಕೌಟುಂಬಿಕ ಗಲಾಟೆ, ಮೋಸ ಮತ್ತು ಪ್ರೀತಿ ವೈಫಲ್ಯಗಳು ಇದ್ರಲ್ಲಿ ಸೇರಿವೆ. ಆದ್ರೆ ಕೋಪಕ್ಕೆ ಇದು ಮಾತ್ರ ಕಾರಣವಲ್ಲ. ನಾವು ತಿನ್ನುವ ಆಹಾರ ಕೂಡ ನಮ್ಮ ಕೋಪವನ್ನು ಹೆಚ್ಚು ಮಾಡುತ್ತೆ ಅಂದ್ರೆ ನೀವು ನಂಬ್ಲೇಬೇಕು. ಯಾವ ಆಹಾರ ಸೇವನೆ ಮಾಡಿದ್ರೆ ಕೋಪ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಯಾವ ಆಹಾರ ಸಿಟ್ಟನ್ನು ಹೆಚ್ಚು ಮಾಡುತ್ತೆ ಎಂದು ನಾವಿಂದು ಹೇಳ್ತೇವೆ.
ಕೋಪ (Anger) ತರಿಸುವ ಆಹಾರ (Food) :
ಹೂಕೋಸು (Cauliflower) : ಹೂಕೋಸು ತಿನ್ನುವುದರಿಂದ ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿರುವ ರಾಫಿನೋಸ್ ಉತ್ಪತ್ತಿಯಾಗುತ್ತದೆ. ಇದ್ರಿಂದ ಗ್ಯಾಸ್ ಉತ್ಪತ್ತಿಯಾಗುತ್ತದೆ. ಹೊಟ್ಟೆ ಉಬ್ಬುವಿಕೆಯ ಅಪಾಯವಿರುತ್ತದೆ. ಇದು ನಿಮ್ಮ ಕೋಪಕ್ಕೆ ಕಾರಣವಾಗುತ್ತದೆ. ಬ್ರೊಕೊಲಿ ಸೇವನೆ ಮಾಡಿದ್ರೂ ಕೋಪ ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ಡ್ರೈ ಫ್ರೂಟ್ಸ್ (Dry Fruits) : ಉತ್ತಮ ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ ಮಾಡುವಂತೆ ಎಲ್ಲರೂ ಸಲಹೆ ನೀಡ್ತಾರೆ. ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಅವು ಕೂಡ ಕೋಪಕ್ಕೆ ಕಾರಣವಾಗಬಹುದು. ಆದ್ದರಿಂದ ಹೆಚ್ಚು ಕೋಪ ಮಾಡಿಕೊಳ್ಳುವವರು ಡ್ರೈ ಫ್ರೂಟ್ಸ್ ಸೇವನೆ ಮಾಡಬೇಡಿ. ಕೋಪ ಹೆಚ್ಚಿರುವಾಗಂತೂ ಡ್ರೈ ಫ್ರೂಟ್ಸ್ ಸುದ್ದಿಗೆ ಹೋಗ್ಬೇಡಿ.
ಟೊಮೆಟೊ : ಟೊಮೆಟೊ ಇಲ್ಲದೆ ಅಡುಗೆ ಇಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಅತಿ ಹೆಚ್ಚು ಬಳಕೆಯಾಗುವ ತರಕಾರಿಯಲ್ಲಿ ಟೊಮೆಟೊ ಒಂದು. ಟೊಮೆಟೊ ಆಹಾರದ ರುಚಿ ಹೆಚ್ಚಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದು ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯ ಕೋಪಕ್ಕೆ ಕಾರಣವಾಗುತ್ತದೆ. ಬೇಗ ಕೋಪ ಬರುವವರು ಟೊಮೆಟೊ ಕಡಿಮೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
ರಸಭರಿತವಾದ ಹಣ್ಣು : ಸೌತೆಕಾಯಿ ಮತ್ತು ಕಲ್ಲಂಗಡಿ ನಮ್ಮ ದೇಹವನ್ನು ಹೈಡ್ರೀಕರಿಸುತ್ತದೆ. ಇದು ಡಯಟ್ ಆಹಾರ ಕೂಡ ಹೌದು. ಬೇಸಿಗೆಯಲ್ಲಿ ಅತಿ ಹೆಚ್ಚು ಸೇವನೆ ಮಾಡುವ ತರಕಾರಿ ಇದು. ಆದರೆ ಇದು ಕೋಪವನ್ನು ಹೆಚ್ಚಿಸಲು ಕಾರಣವಾಗಬಹುದು. ನೀವು ಒತ್ತಡದಲ್ಲಿದ್ದರೆ ಈ ರಸಭರಿತ ಹಣ್ಣುಗಳನ್ನು ತಿನ್ನಬೇಡಿ.
ಬದನೆಕಾಯಿ : ಬದನೆಯಲ್ಲಿ ಹೆಚ್ಚಿನ ಆಮ್ಲೀಯ ಅಂಶವಿದ್ದು ಅದು ನಿಮ್ಮ ಮನಸ್ಸಿನಲ್ಲಿ ಕೋಪವನ್ನು ಉಂಟುಮಾಡುತ್ತದೆ. ಈ ತರಕಾರಿ ತಿಂದ ನಂತರ ನಿಮಗೆ ಕೋಪ ಬರುತ್ತಿದೆ ಎಂದು ಬದನೆಕಾಯಿ ಸೇವನೆ ಕಡಿಮೆ ಮಾಡಿ.
ಚಿಪ್ಸ್ : ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ನಿಜ. ಆದ್ರೆ ಬಹುತೇಕರು ಚಿಪ್ಸ್ ತಿನ್ನಲು ಇಷ್ಟಪಡ್ತಾರೆ. ನಿಮಗೂ ಕೋಪ ಬರ್ತಾ ಇದ್ದು, ಹೆಚ್ಚು ಚಿಪ್ಸ್ ಸೇವನೆ ಮಾಡ್ತಿದ್ದರೆ ಇಂದೇ ಚಿಪ್ಸ್ ನಿಂದ ದೂರವಿರಿ. ಚಿಪ್ಸ್ ಕೂಡ ನಿಮ್ಮ ಕೋಪವನ್ನು ದುಪ್ಪಟ್ಟು ಮಾಡುತ್ತದೆ.
ಕೆಲವು ಹಣ್ಣನ್ನು ಸಿಪ್ಪೆ ಜೊತೆಯೇ ತಿಂದ್ರೆ ಆರೋಗ್ಯಕ್ಕೆ ಬೆಸ್ಟ್!
ಕಾಫಿ : ಕಾಫಿ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ವರ್ಕೌಟ್ ಮಾಡುವವರು ಕಪ್ಪು ಕಾಫಿ ಸೇವಿಸುವುದನ್ನು ನೀವು ನೋಡಿರಬೇಕು. ಸೋಮಾರಿತನ ಅಥವಾ ಆಯಾಸದಿಂದ ಹೊರಗೆ ಬರಲು ಜನರು ಕಾಫಿ ಸೇವಿಸ್ತಾರೆ. ಕಾಫಿ ತಕ್ಷಣ ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಇದಕ್ಕೆ ಅದ್ರಲ್ಲಿರುವ ಕೆಫೀನ್ ಕಾರಣ. ಶಕ್ತಿಯು ಅಧಿಕವಾಗಿದ್ದಾಗ, ಅದು ಮೆದುಳನ್ನು ಪ್ರಚೋದಿಸುತ್ತದೆ ಮತ್ತು ಆಕ್ರಮಣಶೀಲತೆಯನ್ನು ಹೆಚ್ಚಿಸುತ್ತದೆ. ಇದ್ರಿಂದ ಕೋಪ ಕಾಣಿಸಿಕೊಳ್ಳುತ್ತದೆ.
ಮಾರ್ಕೆಟ್ಟಲ್ಲಿ ಸಿಗೋ ಪ್ರೋಟೀನ್ ಪೌಡರ್ ಬಿಡಿ, ಮನೆಯಲ್ಲೇ ಮಾಡ್ಬಹುದು ನೋಡಿ!
ಹಾಲಿನ ಉತ್ಪನ್ನ – ಗೋಧಿ : ಹಾಲಿನ ಉತ್ಪನ್ನಗಳು ಮತ್ತು ಗೋಧಿಯಲ್ಲಿ ಕಂಡುಬರುವ ಕೇಸೀನ್ ಕೋಪವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಕೇಸಿನ್ ಆಕ್ರಮಣಶೀಲತೆಗೆ ಸಂಬಂಧಿಸಿದೆ. ಆದ್ದರಿಂದ, ಡೈರಿ ಉತ್ಪನ್ನಗಳು ಮತ್ತು ಗೋಧಿಯಿಂದ ಮಾಡಿದ ಆಹಾರವನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು.