ಮಾರುಕಟ್ಟೆಯಲ್ಲಿ ಟಾಟಾ ನಕಲಿ ಉಪ್ಪು ಹಾವಳಿ! ತಿಂದರೆ ಅಪಾಯ: ಖರೀದಿಗೂ ಮುನ್ನ ಹೀಗೆ ಮಾಡಿ ಸೇಫ್​ ಆಗಿರಿ

Published : Nov 08, 2026, 01:14 PM IST
Fake Tata Salt

ಸಾರಾಂಶ

ಹಣದ ದುರಾಸೆಗಾಗಿ ನಕಲಿ ಟಾಟಾ ಉಪ್ಪನ್ನು ಮಾರುಕಟ್ಟೆಗೆ ಬಿಡುತ್ತಿರುವ ಬೃಹತ್ ಜಾಲ ಪತ್ತೆಯಾಗಿದೆ. ಇಂತಹ ನಕಲಿ ಉಪ್ಪಿನ ಸೇವನೆಯಿಂದ ಮಾರಣಾಂತಿಕ ಕಾಯಿಲೆಗಳು ಬರುವ ಅಪಾಯವಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಸಲಿ ಮತ್ತು ನಕಲಿ ಉಪ್ಪನ್ನು ಸುಲಭವಾಗಿ ಪತ್ತೆಹಚ್ಚಬಹುದು.

ದೆಹಲಿ: ಹಣ ಮಾಡುವ ದುರಾಸೆಯಿಂದ ಒಂದಷ್ಟು ಮಂದಿ ಜನರ ಜೀವನದ ಜೊತೆ ಚೆಲ್ಲಾಟ ಆಡುವುದು ಹೊಸ ವಿಷಯವೇ ಇಲ್ಲ. ಈಚೆಗೆ ಸಾವಿರಾರು ಕೋಟಿ ರೂಪಾಯಿಗಳ ನಕಲಿ ಔಷಧಗಳನ್ನು ಸೀಜ್​ ಮಾಡಲಾಗಿತ್ತು. ಅದರಲ್ಲಿಯೂ ಕ್ಯಾನ್ಸರ್​ಗೆ ಎಂದು ಕೊಡುತ್ತಿದ್ದ ಮೆಡಿಸಿನ್​ಗಳು ನಕಲಿ ತಯಾರಿ ಮಾಡುವ ದೊಡ್ಡ ಜಾಲವೇ ಪತ್ತೆಯಾಗಿತ್ತು. ಹಾಗೆಂದು, ಈ ಜಾಲ ಇನ್ನಷ್ಟು ಇಲ್ಲ ಎಂದರ್ಥವಲ್ಲ. ಎಲ್ಲೋ ಒಂದು ಕಡೆ ತಿಳಿಯದಂತೆ ನಕಲಿಗಳ ಹಾವಳಿ ನಡೆಯುತ್ತಲೇ ಇದೆ.ಅದರಲ್ಲಿಯೂ ತಿನ್ನುವ ಪದಾರ್ಥಗಳಲ್ಲಿಯೂ ವಿಷ ಬೆರಸಿ ಜನರ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ಬೃಹತ್​ ಜಾಲವೇ ಇದೆ. ಇದೀಗ ಅಂಥದ್ದೊಂದು ಜಾಲವು ಟಾಟಾ ಉಪ್ಪಿನ ಹೆಸರಿನಲ್ಲಿ ಸೇಮ್​ ಟು ಸೇಮ್​ ಪ್ಯಾಕೇಟ್​ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈಚೆಗಷ್ಟೇ ಮಧ್ಯಪ್ರದೇಶದ ಇಂದೋರ್​ನಲ್ಲಿ ಒಂದು ಘಟಕದ ಮೇಲೆ ದಾಳಿ ನಡೆಸಿ 840 ಪ್ಯಾಕೆಟ್ ನಕಲಿ ಟಾಟಾ ಸಾಲ್ಟ್ ಮತ್ತು ಸುಮಾರು 1,850 ಕೆಜಿ ಸಡಿಲ ಉಪ್ಪನ್ನು ವಶಪಡಿಸಿಕೊಳ್ಳಲಾಗಿತ್ತು

ಸೇಮ್​ ಟು ಸೇಮ್​ ಪ್ಯಾಕೆಟ್​

ಉಪ್ಪನ್ನು ಬ್ರಾಂಡ್ ಉತ್ಪನ್ನದಂತೆ ಕಾಣುವಂತೆ ವಿನ್ಯಾಸಗೊಳಿಸಲಾದ ಚೀಲಗಳಲ್ಲಿ ಪ್ಯಾಕ್ ಮಾಡಲಾಗುತ್ತಿದೆ. ಅದರ ಮೇಲೆ ಟಾಟಾ ಉಪ್ಪಿನ ಮುದ್ರೆ ಒತ್ತಿ ಸ್ವಲ್ಪವೂ ಗೊತ್ತಾಗದಂತೆ ಮಾರಾಟ ಮಾಡಲಾಗುತ್ತಿದೆ. ಅಷ್ಟಕ್ಕೂ ಅಯೋಡಿಕರಿಸಿದ ಉಪ್ಪು ಅಯೋಡಿನ್ ಅನ್ನು ಒದಗಿಸಲು ಉದ್ದೇಶಿಸಲಾಗಿದೆ, ಇದು ಪ್ರಮುಖ ಪೋಷಕಾಂಶವಾಗಿದೆ. ಜನರು ಸೇವಿಸುವ ಉಪ್ಪನ್ನು ಅಯೋಡಿಕರಿಸಬೇಕು ಎಂದು WHO ಶಿಫಾರಸು ಮಾಡುತ್ತದೆ. ಆದರೆ ಈ ನಕಲಿ ಉಪ್ಪಿನಲ್ಲಿ ವಿಷಕಾರಕ ಅಂಶ ಇರುವುದು ಪತ್ತೆಯಾಗಿದೆ.

ಸ್ಕ್ಯಾನ್​ ಮಾಡಿ ಸೇಫ್​ ಆಗಿರಿ

ಇಂಥ ನಕಲಿ ಉಪ್ಪನ್ನು ಅಧಿಕವಾಗಿ ಸೇವಿಸಿದಾಗ ನೀವು ಬಳಿಕ ಸರಿಯಾದ ಉಪ್ಪು ಸೇವಿಸಿದರೂ ಅದು ಹಾನಿಕಾರಕವಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ವಯಸ್ಕರು ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪನ್ನು ಸೇವಿಸಬೇಕೆಂದು WHO ಶಿಫಾರಸು ಮಾಡುತ್ತದೆ. ಹೆಚ್ಚಿನ ಸೋಡಿಯಂ ಸೇವನೆಯು ಹೆಚ್ಚಿದ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಮತ್ತು ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ನಕಲಿ ಉಪ್ಪಿನಿಂದ ಮಾರಣಾಂತಿಕ ಕಾಯಿಲೆ ಬರುತ್ತದೆ.

ಆದ್ದರಿಂದ ನೀವು ಅಂಗಡಿಯಲ್ಲಿ ಅಥವಾ ಇನ್ನು ಯಾವುದೇ ಕಡೆಗಳಲ್ಲಿ, ಉಪ್ಪನ್ನು ಖರೀದಿಸುವಾಗ ಒಂದೇ ರೀತಿ ಇರುವ ಕಾರಣದಿಂದ ನಕಲಿ, ಅಸಲಿ ತಿಳಿಯುವುದು ಕಷ್ಟ. ಆದ್ದರಿಂದ ನೀವು ಮೊಟ್ಟ ಮೊದಲ ಬಾರಿಗೆ ನಿಮ್ಮ ಮೊಬೈಲ್​ನಲ್ಲಿ ಇರುವ ಕ್ಯೂಆರ್​ ಕೋಡ್​ ಸ್ಕ್ಯಾನಿಂಗ್​ನಿಂದ ಪ್ಯಾಕೆಟ್​ ಮೇಲಿರುವ ಸ್ಕ್ಯಾನರ್​ ಸ್ಕ್ಯಾನ್​ ಮಾಡಿ ನೋಡಬೇಕು. ಅದು ಸ್ಕ್ಯಾನ್​ ಆಗಿ ಲಿಂಕ್​ ಓಪನ್​ ಆದರೆ, ಅದು ಅಸಲಿ ಉಪ್ಪಿನ ಪ್ಯಾಕೆಟ್​ ಎಂದೂ, ಒಂದು ವೇಳೆ, ಯಾವುದೇ ಲಿಂಕ್​ ಕಾಣಿಸದಿದ್ದರೆ ಅದು ನಕಲಿ ಎನ್ನುವುದನ್ನು ತಿಳಿಯಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಬ್ಬ-ಹರಿದಿನಕ್ಕೆ ಮಾಡಿ ನೋಡಿ ಬಾಯಲ್ಲಿಟ್ಟರೆ ಕರಗುವ ಬಾದಾಮಿ ಹಲ್ವಾ.. 10 ದಿನ ಇಟ್ರೂ ಹಾಳಾಗಲ್ಲ
ಮಕ್ಕಳಿಗೆ ಮಾಡಿಕೊಡಿ ಕಲರ್​ ಕಲರ್​ ಹೆಲ್ತಿ ಇಡ್ಲಿ: ತಯಾರಿಸೋದು ಸಕತ್​ ಈಸಿ- ಮತ್ತೆ ಮತ್ತೆ ಕೇಳುವ ಪುಟಾಣಿಗಳು