
ಭಾರತೀಯರ ಅತಿ ಅಚ್ಚುಮೆಚ್ಚಿನ ಆಹಾರದಲ್ಲಿ ಮೊಸರು ಸೇರಿದೆ. ಊಟದ ಕೊನೆಯಲ್ಲಿ ಅನ್ನದ ಜೊತೆ ಮೊಸರಿಲ್ಲ ಅಂದ್ರೆ ಊಟ ಪೂರ್ಣಗೊಳ್ಳೋದಿಲ್ಲ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಜನರು ಮೊಸರು ಸೇವನೆ ಮಾಡ್ತಾರೆ. ಬೇಸಿಗೆ ಬರ್ತಿದ್ದಂತೆ ಮೊಸರಿನ ಬಳಕೆ ಹೆಚ್ಚಾಗುತ್ತೆ. ಮಜ್ಜಿಗೆ, ಲಸ್ಸಿ,ರಾಯ್ತಾ ಅಂತ ನಾನಾ ರೀತಿಯಲ್ಲಿ ಜನರು ಮೊಸರು ಸೇವನೆ ಮಾಡ್ತಾರೆ. ಮೊಸರನ್ನು ಯಾವುದೇ ರೀತಿಯಲ್ಲಿ ಸೇವನೆ ಮಾಡಿದ್ರೂ ಪ್ರಯೋಜನಕಾರಿ. ಆದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರನ್ನು ಸೇವನೆ ಮಾಡಿದ್ರೆ ಏನಾಗುತ್ತೆ?
ಮೊಸರು (curd) ದೇಹಕ್ಕೆ ಪ್ರಯೋಜನಕಾರಿ. ಆದ್ರೆ ಅದನ್ನು ಸರಿಯಾದ ಸಮಯದಲ್ಲಿ ತಿನ್ನಬೇಕು. ಕೆಲವರು ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನಲು ಇಷ್ಟಪಡ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ಸೇವನೆ ಮಾಡೋದ್ರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮೊಸರಿನಲ್ಲಿ ಕಂಡುಬರುವ ಪ್ರೋಬಯಾಟಿಕ್ಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತವೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ.
ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೇಹದಲ್ಲಿನ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಇರುವವರು ತಮ್ಮ ಉಪಾಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಬೇಕು. ಇದರಲ್ಲಿ ಮೆಗ್ನೀಸಿಯಮ್ ಇದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ರಂಜಕದಂತಹ ಪೋಷಕಾಂಶಗಳು ಸಮೃದ್ಧವಾಗಿವೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ಮತ್ತು ದೇಹವನ್ನು ತಂಪಾಗಿಸುತ್ತದೆ.
ಅನ್ನ ಉಳಿತಾ? ಒಂದು ಪೈಸೆ ಖರ್ಚು ಮಾಡದೆ ಗರಿಗರಿಯಾದ ಸಂಡಿಗೆ ಮಾಡಿ.. ಅಜ್ಜಿ ಕಾಲದ ಉಳಿತಾಯದ ಉಪಾಯವಿದು
ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದು ಎಲ್ಲರಿಗೂ ಸೂಕ್ತವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ವಿಶೇಷವಾಗಿ ಶೀತ, ಸೈನುಟಿಸ್ ಮತ್ತು ಆಮ್ಲೀಯತೆಯಿಂದ ಬಳಲುತ್ತಿರುವವರು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಿತವಾಗಿ ಮೊಸರು ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ. ಮೊಸರಿಗೆ ಹೆಚ್ಚು ಸಕ್ಕರೆ ಸೇರಿಸುವುದು ಅನಾರೋಗ್ಯಕ್ಕೆ ದಾರಿಮಾಡಿ ಕೊಡುತ್ತದೆ. ಖಾಲಿ ಮೊಸರು ಸೇವನೆ ಇಷ್ಟವಿಲ್ಲ ಎನ್ನುವವರು ಅದಕ್ಕೆ ಹಣ್ಣು ಅಥವಾ ಫ್ರೈ ಮಾಡಿದ ಜೀರಿಗೆ ಸೇರಿಸಿ ಸೇವನೆ ಮಾಡಬೇಕು. ತುಂಬಾ ಹುಳಿ ಇರುವ ಮೊಸರನ್ನು ಸೇವನೆ ಮಾಡಬಾರದು. ಹಳಸಿದ ಹಾಗೂ ಹುಳಿ ಮೊಸರು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಆರೋಗ್ಯಕ ದೇಹಕ್ಕೆ ಪ್ರತಿಯೊಬ್ಬರು ತಾಜಾ ಮೊಸರನ್ನು ತಿನ್ನಬೇಕು.
ಮಜ್ಜಿಗೆಗೆ ಈ ಒಂದು ಪುಡಿ ಹಾಕಿ ಕುಡಿದು ನೋಡಿ, ಶುಗರ್ ಲೆವಲ್ ಕಂಟ್ರೋಲ್ ಜೊತೆಗೆ ಯಂಗ್ ಆಗ್ತೀರಾ!
ಮೊಸರಿನಲ್ಲಿರುವ ಪೋಷಕಾಂಶಗಳು
ಮೊಸರಿನಲ್ಲಿ ವಿಟಮಿನ್ಗಳು, ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ರಂಜಕ, ಮೆಗ್ನೀಸಿಯಮ್ ಮತ್ತು ಫೋಲಿಕ್ ಆಮ್ಲದಂತಹ ಅನೇಕ ಪೋಷಕಾಂಶಗಳಿವೆ. ಈ ಎಲ್ಲಾ ಅಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ನಮ್ಮ ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಗಮನಾರ್ಹ ಪ್ರಮಾಣದ ಪ್ರೋಬಯಾಟಿಕ್ಗಳನ್ನು ಸಹ ಹೊಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.