
ಛೋಲೆ ಭಟೂರೆ.. ದಕ್ಷಿಣ ಭಾರತದಲ್ಲಿ ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗ್ತಿದೆ. ಆದ್ರೆ ಉತ್ತರ ಭಾರತದ ಪ್ರಸಿದ್ಧ ಆಹಾರದಲ್ಲಿ ಇದು ಒಂದು. ದೆಹಲಿ, ಪಂಜಾಬ್, ಹರಿಯಾಣ, ಯುಪಿ ಸೇರಿದಂತೆ ಉತ್ತರ ಭಾರತದಾದ್ಯಂತ ಛೋಲೆ ಭಟೂರೆ ಜನಪ್ರಿಯವಾಗಿದೆ. ಛೋಲೆ ಭಟೂರೆ ಹೆಸರು ಕೇಳ್ತಿದ್ದಂತೆ ಅನೇಕರ ಬಾಯಲ್ಲಿ ನೀರು ಬರುತ್ತದೆ.
ಛೋಲಾ ಭಟೂರೆ (Chole Bhatura) ಯಲ್ಲಿ ನಾವು ಎರಡು ಖಾದ್ಯವನ್ನು ನೋಡ್ಬಹುದು. ಒಂದು ಛೋಲೆ. ಅಂದ್ರೆ ಚನಾ (Chana) ಮಸಾಲೆ. ಚನಾದಿಂದ ತಯಾರಿಸುವ ಒಂದು ಬಾಜಿ. ಇನ್ನೊಂದು ಭಟೂರೆ. ಅಂದ್ರೆ ಮೈದಾದಿಂದ ಮಾಡುವ ಪುರಿ. ಇದು ಡೀಪ್ ಫ್ರೈ (Deep fry ) ಹೊಂದಿರುತ್ತದೆ. ಉತ್ತರ ಭಾರತೀಯರ ಜೀವನದಲ್ಲಿ ಒಂದು ಭಾಗವಾಗಿರುವ ಛೋಲೆ ಭಟೂರೆಗೆ ಆಸಕ್ತಿದಾಯಕ ಇತಿಹಾಸವಿದೆ. ಇದು ಹಲವು ಶತಮಾನಗಳ ವ್ಯಾಪಿಸಿದೆ. ಛೋಲೆ ಭಟೂರೆ ಬೇರುಗಳು ಮಧ್ಯಪ್ರಾಚ್ಯದಲ್ಲಿ ಕಂಡುಬರುತ್ತವೆ. ಮಧ್ಯಪ್ರಾಚ್ಯ (Middle East) ದಲ್ಲಿ ಚನಾ ಮಸಾಲಾ ಎಂಬ ಇದೇ ರೀತಿಯ ಭಕ್ಷ್ಯ ಬಹಳ ಜನಪ್ರಿಯವಾಗಿತ್ತು. ಚನಾ ಮಸಾಲಾ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್‌ನಂತಹ ದೇಶಗಳಲ್ಲಿ ಜನಪ್ರಿಯ ಬೀದಿ ಆಹಾರವಾಗಿದೆ. ಚನಾ ಮಸಾಲಾ ಆವೃತ್ತಿ ಛೋಲೆ ಭಟೂರೆ ಭಾರತ (India) ದಲ್ಲಿ ಪ್ರಸಿದ್ಧಿಪಡೆದಿದೆ. ನಾವಿಂದು ಛೋಲೆ ಭಟೂರೆ ಇತಿಹಾಸದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
Gold coated Dosa: ವಾವ್ಹ್..ಮಿರಿಮಿರಿ ಮಿನುಗೋ ಚಿನ್ನದ ದೋಸೆ, ಬೆಲೆ ಕೇಳಿದ್ರೆ ದಂಗಾಗ್ತೀರಾ!
ಛೋಲೆ ಭಟೂರೆ ಇತಿಹಾಸ : ಪ್ರಾಚೀನ ಕಾಲದಲ್ಲಿ ಭಾರತ ಮತ್ತು ಪ್ರಪಂಚದ ವಿವಿಧ ಭಾಗಗಳ ನಡುವೆ ವ್ಯಾಪಾರ ಮಾರ್ಗಗಳ ಮೂಲಕ ವ್ಯಾಪಾರ ಪ್ರಾರಂಭವಾಯಿತು. ಈ ಸಮಯದಲ್ಲಿ ಚನಾ ಮಸಾಲಾ ಇತರ ಮಸಾಲೆಗಳು ಮತ್ತು ಇತರ ರುಚಿಕರವಾದ ಭಕ್ಷ್ಯಗಳೊಂದಿಗೆ ಭಾರತಕ್ಕೆ ಬಂತು. ಚನಾ ಮಸಾಲವನ್ನು ಮೊಘಲ್ ದೊರೆಗಳು ಭಾರತದ ಉಪಖಂಡಕ್ಕೆ ತಂದರು ಎನ್ನಲಾಗುತ್ತದೆ. ಮೊಘಲರು ತಂದ ಆಹಾರವು ಪರ್ಷಿಯನ್, ಟರ್ಕಿಸ್ ಮತ್ತು ಭಾರತೀಯ ರುಚಿಗಳ ಮಿಶ್ರಣವಾಗಿತ್ತು ಎನ್ನಲಾಗುತ್ತದೆ.
ಛೋಲೆ ಭಟೂರೆಗೆ ಇದೆ ಇನ್ನೊಂದು ಕಥೆ : 1947 ರಲ್ಲಿ ಭಾರತ ವಿಭಜನೆಯಾದ ನಂತ್ರ ಜನರು ಪಾಕಿಸ್ತಾನ ಮತ್ತು ಭಾರತದಲ್ಲಿ ಹಂಚಿಹೋದ್ರು. ಈ ವೇಳೆ ಪೆಶೋರಿ ಲಾಲ್ ಲಂಬಾ ಎಂಬ ವ್ಯಕ್ತಿಯೊಬ್ಬ ದೆಹಲಿಗೆ ಬಂದ. ಆತ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಗುಣಮಟ್ಟದ ರೆಸ್ಟೋರೆಂಟ್ ಅನ್ನು ಸ್ಥಾಪಿಸಿದ. ಆತ ತನ್ನ ರೆಸ್ಟೋರೆಂಟ್ ನಲ್ಲಿ ಚೋಲೆಯನ್ನೂ ಶುರು ಮಾಡಿದ್ದ ಎನ್ನಲಾಗುತ್ತದೆ. ಪೆಶೂರಿ ಲಾಲ್ ಲಂಬಾನಿಂದ ದೆಹಲಿ ಮೂಲಕ ಇಡೀ ಭಾರತವನ್ನು ಛೋಲೆ ಭಟೂರೆ ತಲುಪಿತು ಎನ್ನಲಾಗುತ್ತದೆ.
ನಾನ್ ವೆಜ್ ಒಳಿತೋ, ವೆಜ್ ಒಳಿತೋ ಬದಿಗಿರಲಿ, ಮಟನ್ ತಿಂದ್ರೇನು ಲಾಭ ನೋಡಿ ಇಲ್ಲಿ!
ಛೋಲೆ ಭಟೂರೆಗಿದೆ ಪಂಜಾಬಿ ನಂಟು : ಯಾರು ಮತ್ತೆ ಯಾವಾಗ ಈ ಖಾದ್ಯ ತಯಾರಿ ಶುರು ಮಾಡಿದ್ರು ಎನ್ನುವ ಬಗ್ಗೆ ಯಾವುದೇ ಸ್ವಷ್ಟ ಮಾಹಿತಿ ಇಲ್ಲ. ಆದ್ರೆ ಭಟೂರೆಯನ್ನು ಪಂಜಾಬಿ ಅಡುಗೆಯವರು ತಯಾರಿಸುತ್ತಾರೆ ಎಂದು ನಂಬಲಾಗಿದೆ. ಈ ಪಂಜಾಬಿ ಬಾಣಸಿಗರು ಸ್ಟಫ್ಡ್ ಭಕ್ಷ್ಯಗಳನ್ನು ತಯಾರಿಸುವಲ್ಲಿ ಪರಿಣಿತರು. ಸೀತಾ ರಾಮ್ ಎಂಬ ಪಂಜಾಬಿ ಸಂಭಾವಿತ ವ್ಯಕ್ತಿ 1947 ರ ವಿಭಜನೆಯ ಸಮಯದಲ್ಲಿ ತನ್ನ ಕುಟುಂಬದೊಂದಿಗೆ ಪಶ್ಚಿಮ ಪಂಜಾಬ್‌ನಿಂದ ವಲಸೆ ಬಂದನಂತೆ. ಆತ ದೆಹಲಿಯಲ್ಲಿ ತನ್ನ ವಾಸ ಶುರು ಮಾಡಿದ್ದನಂತೆ. ದೆಹಲಿಯ ಪಹರ್‌ಗಂಜ್‌ನಲ್ಲಿ ತಮ್ಮ ಅಂಗಡಿ ಶುರು ಮಾಡಿದ್ದ ಎನ್ನಲಾಗಿದೆ. ಆ ಅಂಗಡಿಗೆ ಸೀತಾ ರಾಮ್ ದಿವಾನ್ ಚಂದ್ ಎಂದು ನಾಮಕರಣ ಮಾಡಿದ್ದನಂತೆ. ಇಲ್ಲಿ ಈತ ಹಾಗೂ ಈತನ ಮಗ ಛೋಲೆ ಭಟೂರೆಯನ್ನು 12 ಆಣೆಗೆ ಮಾರಾಟ ಮಾಡ್ತಿದ್ದರು ಎನ್ನಲಾಗಿದೆ. ಅಲ್ಲಿಂದ ದೆಹಲಿ ಜನರಿಗೆ ಛೋಲೆ ಭಟೂರೆ ರುಚಿ ಗೊತ್ತಾಯ್ತು ಎನ್ನಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.