ಪಾಲಕ್​ ಬೇಯಿಸಿದಾಗ ಕಪ್ಪಾಗತ್ತಾ? ಹೋಟೆಲ್​ ಸ್ಟೈಲ್​ನಲ್ಲಿ ಹಸಿರು ಹಸಿರಾಗಿರೋ ಪಾಲಕ್​ ಪನೀರ್​ ಹೀಗೆ ಮಾಡಿ

Published : Oct 07, 2026, 09:46 PM IST
Palak Paneer

ಸಾರಾಂಶ

ಪಾಲಕ್​ ಪನೀರ್​ ಮಾಡುವಾಗ ಪಾಲಕ್​ ಸೊಪ್ಪು ಹಸಿರನ್ನು ಕಳೆದುಕೊಂಡು ಕಂದುಬಣ್ಣಕ್ಕೆ ತಿರುಗಿ ಇಡೀ ಪಾಲಕ್​ ಪನೀರ್​ ನೋಟವನ್ನೇ ಹಾಳುಮಾಡುವುದು ಇದೆ. ಏನು ಮಾಡಿದ್ರೂ ಹೋಟೆಲ್​ ಸ್ಟೈಲ್​ನ ರೀತಿಯಲ್ಲಿ ಹಸಿರು ಹಸಿರಾಗಿ ಇರೋ ಪಾಲಕ್​ ಪನೀರ್​ ಏಕೆ ಮಾಡಲು ಆಗಲ್ಲ ಎಂದು ಅಂದುಕೊಳ್ಳುವವರಿಗೆ ಇಲ್ಲಿ ನೀವು ಮಾಡುವ ತಪ್ಪಿನ ಬಗ್ಗೆ ತಿಳಿಸಲಾಗಿದೆ.

ಪಾಲಕ್​ ಪನೀರ್​ ಎಂದರೆ ಹಲವರ ಬಾಯಲ್ಲಿ ನೀರೂರುವುದು ಸಹಜವೇ. ಪಾಲಕ್​ ಸೊಪ್ಪನ್ನು ಬೇಯಿಸಿ ಒಂದಿಷ್ಟು ಮಸಾಲಾ ಹಾಕಿ ಅದಕ್ಕೆ ಪನೀರ್​ ಸೇರಿಸಿದರೆ ಪಾಲಕ್​ ಪನೀರ್​ ಆಗುತ್ತದೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಎಷ್ಟೋ ಮಂದಿ ಹೀಗೆ ಮಾಡಲು ಹೋದಾಗ, ಪಾಲಕ್​ ಸೊಪ್ಪು ತನ್ನ ಹಸಿರನ್ನು ಕಳೆದುಕೊಂಡು ಕಂದುಬಣ್ಣಕ್ಕೆ ತಿರುಗಿ ಇಡೀ ಪಾಲಕ್​ ಪನೀರ್​ ನೋಟವನ್ನೇ ಹಾಳುಮಾಡುವುದು ಇದೆ. ಏನು ಮಾಡಿದ್ರೂ ಹೋಟೆಲ್​ ಸ್ಟೈಲ್​ನ ರೀತಿಯಲ್ಲಿ ಹಸಿರು ಹಸಿರಾಗಿ ಇರೋ ಪಾಲಕ್​ ಪನೀರ್​ ಏಕೆ ಮಾಡಲು ಆಗಲ್ಲ ಎಂದು ಅಂದುಕೊಳ್ಳುವವರಿಗೆ ಇಲ್ಲಿ ನೀವು ಮಾಡುವ ತಪ್ಪಿನ ಬಗ್ಗೆ ತಿಳಿಸಲಾಗಿದ್ದು, ಹೋಟೆಲ್​ ಸ್ಟೈಲ್​ನಲ್ಲಿ ಗ್ರೀನ್​ ಗ್ರೀನ್​ ಪಾಲಕ್​ ಪನೀರ್​ ಮಾಡುವ ವಿಧಾನ ತಿಳಿಸಲಾಗಿದೆ.

ಈ ತಪ್ಪು ಮಾಡಬೇಡಿ

ಪಾಲಕ್​ ಸೊಪ್ಪನ್ನು ಹೆಚ್ಚು ಬೇಯಿಸುವುದು ಇದಕ್ಕೆ ಒಂದು ಕಾರಣವಾಗಿದೆ. ಅದಕ್ಕಾಗಿ ಪಾಲಕ್​ ಪನೀರ್​ ಮಾಡುವ ಮೊದಲು ದಂಟನ್ನು ಬೇರ್ಪಡಿಸಿ, ಎಲೆಯನ್ನು ಮಾತ್ರ ಹಾಕಿ. ಮೊದಲಿಗೆ ನೀರನ್ನು ಬಿಸಿ ಮಾಡಿ, ಅಪ್ಪಿತಪ್ಪಿಯೂ ಇದಕ್ಕೆ ಉಪ್ಪನ್ನು ಹಾಕಬೇಡಿ. ಇದಕ್ಕೆ ಕಾಲು ಚಮಚ ಸಕ್ಕರೆಯನ್ನು ಸೇರಿಸಿ. ಎರಡೇ ಎರಡು ನಿಮಿಷ ಬೇಯಿಸಿ. ಇದಕ್ಕಿಂತ ಹೆಚ್ಚು ಬೇಯಿಸಿದರೆ ಬಣ್ಣ ಕಪ್ಪಾಗುತ್ತದೆ. ಕೂಡಲೇ ಅದನ್ನು ಐಸ್​ ಇಟ್ಟಿರುವ ನೀರಿನಲ್ಲಿ ಹಾಕಿ. ಹೀಗೆ ಮಾಡುವುದರಿಂದ ಪಾಲಕ್​ ಸೊಪ್ಪಿನ ಹಸಿರು ಬಣ್ಣ ಹಸಿರಾಗಿಯೇ ಇರುತ್ತದೆ. ಬಳಿಕ ಪೂರ್ಣ ತಣ್ಣಗಾಗುವವರೆಗೆ ವೇಟ್​ ಮಾಡಿ.

ಹೀಗೆ ಮಾಡಿ ನೋಡಿ

-ಬಳಿಕ ಮಿಕ್ಸಿಗೆ ಸೊಪ್ಪನ್ನು ಹಾಕಿ. ಎರಡು ಹಸಿರು ಮೆಣಸಿನ ಕಾಯಿ ಹಾಕಿ. ನೀರನ್ನು ಸೇರಿಸಲೇಬೇಡಿ.

- ಒಗ್ಗರಣೆಗೆ ತುಪ್ಪ ಇಟ್ಟು, ಅದಕ್ಕೆ ಸ್ವಲ್ಪ ಜೀರಿಗೆ ಹಾಗೂ ಸ್ವಲ್ಪ ಇಂಗನ್ನು ಸೇರಿಸಿ. ಇದಕ್ಕೆ ಪೇಸ್ಟ್​ ಮಾಡಿದ ಈರುಳ್ಳಿ ಹಾಕಿ. ಕತ್ತರಿಸಿದ ಈರುಳ್ಳಿ ಬೇಡ. ಅದಕ್ಕೆ ಟೊಮ್ಯಾಟೋ ಪೇಸ್ಟ್​ ಹಾಕಿ ಕಲಸಿ.

- ಈಗ ಈ ಮಸಾಲೆ ಸಂಪೂರ್ಣ ತಣ್ಣಗಾಗಲು ಬಿಡಿ.

- ಇದಕ್ಕೆ ದೊಡ್ಡ ಉರಿಯಲ್ಲಿ, ಪಾಲಕ್​ ಪೇಸ್ಟ್​ ಅನ್ನು ಸೇರಿಸಿ. ಇದನ್ನು ಯಾವುದೇ ಕಾರಣಕ್ಕೂ ಮುಚ್ಚಬೇಡಿ.

- ಮೊದಲಿಗೆ ಪನೀರ್​ ಅನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆದು, ಆ ಬಳಿಕ ಪನೀರ್​ ಮಸಾಲೆಗೆ ಸೇರಿಸಿ.

ಹೀಗೆ ಮಾಡುವುದರಿಂದ ಹೋಟೆಲ್ ಸ್ಟೈಲ್​ನ ಹಸಿರು ಹಸಿರಾಗಿರುವ ಪಾಲಕ್​ ಪನೀರ್​ ಸಿದ್ಧವಾಗುತ್ತದೆ.

- ಮೇಲಿನಿಂದ ಕಸೂರಿ ಮೇಥಿ ಹಾಕಿ

- ಮೇಲೆ ಬೆಣ್ಣೆ ಹಾಕಿ. ಅದನ್ನು ಮಿಕ್ಸ್​ ಮಾಡಬೇಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಪರಿಹಾರಕ್ಕೆ ಈ ಆಹಾರ ಸೇವಿಸಿ
‘ಕೇವಲ 5 ನಿಮಿಷದಲ್ಲಿ…’ ಮಗುವಿಗಾಗಿ ರೈಲ್ವೆ ಸಿಬ್ಬಂದಿ ಮಾಡಿದ ಕೆಲಸ ತಾಯಿಯ ಕಣ್ಣಲ್ಲಿ ಸಂತಸ ತಂದಿತು