
ರಸ್ತೆ ಬದಿಯ ತಿಂಡಿಗಳು ಎಂದಾಗ ನಮಗೆ ಒಂದು ಕ್ಷಣಕ್ಕೆ ನೆನಪಿಗೆ ಬರುವುದು ಪಾನಿಪುರಿ. ಪಾನಿಪುರಿ ಯಾರಿಗೆ ಗೊತ್ತಿಲ್ಲ ಹೇಳಿ ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಪಾನಿಪುರಿ ಪ್ರಿಯರೇ. ಅತ್ಯಂತ ಪ್ರಸಿದ್ಧವಾದ ಬೀದಿ ಆಹಾರದ ವಿಷಯಕ್ಕೆ ಬಂದಾಗ, ಪಾನಿ ಪುರಿ ಯಾವಾಗಲೂ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಪಾನಿಪುರಿಯನ್ನ ತಿನ್ನುವ ಶೈಲಿಗೆ ಹಲವರು ಪಾನಿಪುರಿಯ ಪ್ರಿಯರಾಗುತ್ತಾರೆ. ಮನೆಯಲ್ಲಿ ವಿವಿಧ ಬಗೆಯ ಆರೋಗ್ಯಕರ ಆಹಾರಗಳು ಇದ್ದರು ನಾವು ರಸ್ತೆ ಬದಿಯ ತಿಂಡಿಗಳಿಗೆ ಮಾರು ಹೋಗುವುದೆ ಹೆಚ್ಚು. ಈಗಂತು ಬೇಸಿಗೆ ಆಗಿರುವುದರಿಂದ ಪಾನಿಪುರಿಯತ್ತ ಜನ ಹೆಚ್ಚಾಗಿ ಹೋಗುತ್ತಾರೆ.
ಅದರಲ್ಲೂ ಈ ಬೇಸಿಗೆ ಸಮಯದಲ್ಲಿ ಮನೆಯ ಊಟ ತಿಂಡಿ ಬಿಟ್ಟು, ಹೊರಗಿನ ಆಹಾರಗಳನ್ನು ಅದರಲ್ಲೂ ರಸ್ತೆ ಬದಿಯ ಆಹಾರಗಳನ್ನು ಸೇವನೆ ಮಾಡಿದರೆ ಅನಾರೋಗ್ಯ ಸಮಸ್ಯೆಗಳು ಕಟ್ಟಿಟ್ಟಬುತ್ತಿ. ನಿಮಗೆ ಗೊತ್ತಿರಲಿ, ಪಾನಿಪುರಿಗೆ ಬಳಸುವ ನೀರು, ಯಾವುದೊ ಸಂಸ್ಕರಿಸಿದ ಶುದ್ಧ ನೀರು ಆಗಿರುವುದಿಲ್ಲ, ಯಾವುದೋ ನಲ್ಲಿಯ ನೀರನ್ನು ಇವರು ಬಳಸುವುದರಿಂದ, ಆರೋಗ್ಯಕ್ಕೆ ಆಪತ್ತು ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಅದರಲ್ಲಿಯೂ ಪಾನಿಪುರಿಯನ್ನ ಬೀದಿಬದಿಯಲ್ಲಿ ಮಾರುವುದರಿಂದ ರಸ್ತೆಯ ಧೂಳು ಪುರಿ ಮಾತ್ತು ಪಾನಿಯ ಮೇಲೆ ಬಿದ್ದಿರುತ್ತದೆ. ಅದನ್ನೇ ನಾವು ಹೋಗಿ ತಿನ್ನುತ್ತೇವೆ. ಒಂದೆರಡು ಬಾರಿ ತಿನ್ನುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ನಿರಂತರವಾಗಿ ಸೇವಿಸುತ್ತಾ ಹೋದರೆ ವಿವಿಧ ರೀತಿಯ ಖಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಅದು ಚಿಕ್ಕ ಪುಟ್ಟ ಖಾಯಿಲೆಗಳಲ್ಲ ಕ್ಯಾನ್ಸ್‌ರ್‌ನಂತ ದೊಡ್ಡ ಖಾಯಿಲೆಗಳಿಗೆ ತುತ್ತಾಗಬಹುದು. ಪಾನಿಪುರಿಯನ್ನ ಹೆಚ್ಚು ತಿನ್ನುವವರು ಹುಡುಗಿಯರು, ಅನೇಕ ಜನರು ಆನಂದಿಸುವ ಜನಪ್ರಿಯ ಉತ್ತರ-ಭಾರತೀಯ ಬೀದಿ ಆಹಾರ ಪಾನಿ ಪುರಿ, ಅದರಲ್ಲಿ ಬಳಸಲಾದ ಕ್ಯಾನ್ಸರ್-ಉಂಟುಮಾಡುವ ಅಂಶಗಳ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ. ಪಾನಿಪುರಿಯ ನಂತರ ಗೋಭಿ ಮಂಚೂರಿ ಮತ್ತು ಕಬಾಬ್‌ಗಳಲ್ಲಿ ಸಹ ಹಾನಿಕಾರಕ ಅಂಶಗಳು ಪತ್ತೆಯಾಗಿವೆ. ಹಲವಾರು ಏಜೆಂಟ್‌ಗಳ ಬಳಕೆಯನ್ನು ನಿಷೇಧಿಸಿದ ನಂತರ, ಕರ್ನಾಟಕ ಆರೋಗ್ಯ ಸಚಿವಾಲಯವು ಪಾನಿ ಪುರಿಯಲ್ಲಿ ಕ್ಯಾನ್ಸರ್ ಬಣ್ಣ ಏಜೆಂಟ್‌ಗಳ ಬಳಕೆಯ ಬಗ್ಗೆ ತನಿಖೆ ನಡೆಸುತ್ತಿದೆ.
ಹಾಗೇ ರಸ್ತೆಬದಿಗಳಲ್ಲಿ ಮಾರುವಂತಹ ಬಿರಿಯಾನಿಗಳು ಸಹ ಪಾನಿ ಪುರಿಯ ಹಾಗೇ ಹಾನಿಕಾರಕ ಅಂಶಗಳನ್ನ ಹೊಂದಿರುತ್ತದೆ. ಊಟ ,ತಿಂಡಿಗಳನ್ನು ಮಾರುವವರನ್ನು ನೋಡಿ ಚಿಕನ್ ಬಿರಿಯಾನಿ, ಚಿಕನ್ ಕರಿ ಅಥವಾ ಚಿಕನ್ ಐಟಮ್ಸ್‌ಗಳನ್ನೆಲ್ಲಾ ಮೊದಲೇ ತಯಾರು ಮಾಡಿಟ್ಟುಕೊಂಡು ಮಾರುತ್ತಿರುತ್ತಾರೆ.ಯಾರಾದರೂ ಜನರು ಹೋದ ತಕ್ಷಣ ಅವರಿಗೆ ಅದನ್ನು ಬಿಸಿ ಮಾಡಿ ಬಡಿಸುತ್ತಾರೆ. ಇನ್ನು ನೂಡಲ್ಸ್, ಫ್ರೈಡ್ ರೈಸ್,ಎಗ್ ರೈಸ್‌ಗಳಿಗೆಲ್ಲಾ ಕಡಿಮೆ ಬೆಲೆಯ ಅಡುಗೆ ಎಣ್ಣೆ ಬಳಸುತ್ತಾರೆ. ಇಂತಹ ಆಹಾರಗಳನ್ನು ನಾವು ಸೇವಿಸಿದರೆ, ಕೊಲೆಸ್ಟ್ರಾಲ್ ಹೆಚ್ಚಾಗಿ, ಹೃದಯಾಘಾತ ಸಮಸ್ಯೆ ಕಾಡುವುದರ ಜೊತೆಗೆ ಚರ್ಮದ ಸಮಸ್ಯೆ ಸಹ ಬರಬಹುದು. ಅದರಲ್ಲೂ ಮುಖ್ಯವಾಗಿ ಕೆಲವೊಂದು ಬಾರಿ ಮಾಡಿರುವ ಅಡುಗೆಯ ಪಾತ್ರೆಗಳ ಮೇಲೆ ಮುಚ್ಚಳ ಮುಚ್ಚಿರುವುದಿಲ್ಲ.
ಈ ರೀತಿ ಮುಚ್ಚದೇ ಇರುವಂತಹ ಪಾತ್ರೆಗಳ ಮೇಲೆ ರಸ್ತೆಯ ಅಕ್ಕಪಕ್ಕದ ಚರಂಡಿಯಲ್ಲಿ ಕಂಡುಬರುವ ಸೊಳ್ಳೆಗಳು ಮತ್ತು ಕೀಟಗಳು ಆಹಾರದ ಮೇಲೆ ಹೋಗಿ ಕುಳಿತುಕೊಂಡು ಆಹಾರವನ್ನು ಹಾಳುಮಾಡುತ್ತವೆ. ಇನ್ನು ವಿಶೇಷವಾಗಿ ಯಾವುದೇ ಆಹಾರ ಪದಾರ್ಥಗಳು ಆಗಿರಲಿ, ಹೆಚ್ಚು ಸಮಯ ಇಟ್ಟಷ್ಟು ಇವುಗಳಲ್ಲಿ ಸೂಕ್ಷ್ಮಾಣು ಜೀವಿಗಳ ಸಂತತಿ ಅಭಿವೃದ್ಧಿಯಾಗುತ್ತಾ ಹೋಗುತ್ತವೆ.ಇದರಿಂದ ಆಹಾರಪದಾರ್ಥಗಳು ಕೇವಲ ತನ್ನ ಪರಿಮಳ ಹಾಗೂ ರುಚಿಯನ್ನು ಕಳೆದು ಕೊಳ್ಳುವುದರ ಜೊತೆಗೆ ಮನುಷ್ಯನ ಆರೋಗ್ಯವನ್ನು ಕೂಡ ಕಾಯಿಲೆಗಳ ಕೂಪಕ್ಕೆ ದೂಡುತ್ತದೆ. ಕೆಲವೊಮ್ಮೆ ಇಂತಹ ಆಹಾರಗಳನ್ನು ಸೇವಿಸಿದ ಕೂಡಲೇ ಫುಡ್ ಪಾಯ್ಸನಿಂಗ್ ಸಮಸ್ಯೆ ಎದುರಾಗುವ ಸಂಭವ ಕೂಡ ಜಾಸ್ತಿ ಇರುತ್ತದೆ. ಹಾಗಾಗಿ ಮನೆಯಲ್ಲಿಯೇ ಮಾಡಿದಂತಹ ಆಹಾರ ಪದಾರ್ಥಗಳನ್ನ ಸೇವಿಸುವುದು ಉತ್ತಮ. ಮನೆಯ ಆಹಾರಗಳನ್ನೇ ಸೇವಿಸುವುದರಿಂದ ಹಣವನ್ನ ಉಳಿಸುವುದರೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.