ಮೂಲಂಗಿ ಅಂದ್ರೆ ಕೆಲವರು ಮೂಗು ಮುರಿತಾರೆ. ಮತ್ತೆ ಕೆಲವರು ಜೀರ್ಣಕ್ರಿಯೆಗೆ ಒಳ್ಳೆಯದು ಎನ್ನುವ ಕಾರಣಕ್ಕೆ ಸೇವನೆ ಮಾಡ್ತಾರೆ. ಬರೀ ಮೂಲಂಗಿ ಸೇವನೆ ಮಾಡೋದು ಕಷ್ಟ ಎನ್ನುವ ಕಾರಣಕ್ಕೆ ಅದ್ರ ಜೊತೆ ಕೆಲ ಪದಾರ್ಥ ಸೇರಿಸ್ತಾರೆ. ಆದ್ರೆ ಮೂಲಂಗಿ ಎಲ್ಲ ಆಹಾರದ ಜೊತೆ ಹೊಂದಿಕೊಳ್ಳೋದಿಲ್ಲ. ಆರೋಗ್ಯ ವೃದ್ಧಿ ಬದಲು ಸಮಸ್ಯೆ ತಂದಿಡುತ್ತೆ.
ನಾವು ಸೇವನೆ ಮಾಡುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ತರಕಾರಿ, ಹಣ್ಣಿನ ಸೇವನೆ ಮಾಡ್ತಿದ್ದರೂ ಆರೋಗ್ಯ ಹದಗೆಡುವುದಿದೆ. ಇದಕ್ಕೆ ಕಾರಣ ನಾವು ಸೇವನೆ ಮಾಡುವ ವಿಧಾನ ಹಾಗೂ ಕಾಂಬಿನೇಷನ್. ಹೌದು, ಕೆಲ ಆಹಾರವನ್ನು ಟೀ, ಕಾಫಿ ಜೊತೆ ಸೇವನೆ ಮಾಡುವಂತಿಲ್ಲ. ಹಾಗೆ ಕೆಲ ತರಕಾರಿಗಳನ್ನು ಕೂಡ ಬೇರೆ ಕೆಲ ತರಕಾರಿ ಜೊತೆ ಬೆರೆಸುವಂತಿಲ್ಲ. ಮೂಲಂಗಿ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಮೂಲಂಗಿಯಲ್ಲಿ ಸಲಾಡ್, ಮೂಲಂಗಿ ಕರಿ, ಮೂಲಂಗಿ ಪರಾಠ, ಉಪ್ಪಿನಕಾಯಿ ಹೀಗೆ ಅನೇಕ ಪದಾರ್ಥಗಳನ್ನು ನಾವು ತಯಾರಿಸ್ತೇವೆ. ಮೂಲಂಗಿಯಲ್ಲಿ ಅನೇಕ ಪೋಷಕಾಂಶಗಳಿವೆ. ಆದ್ರೆ ಮೂಲಂಗಿ ಎಲ್ಲ ಆಹಾರದ ಜೊತೆ ಹೊಂದಿಕೊಳ್ಳುವುದಿಲ್ಲ. ಕೆಲವು ಪದಾರ್ಥಗಳ ಜೊತೆ ಮೂಲಂಗಿ ಸೇವನೆ ಮಾಡಿದ್ರೆ ಆರೋಗ್ಯ ಹಾಳಾಗುತ್ತದೆ. ನಾವಿಂದು ಮೂಲಂಗಿ ಜೊತೆ ಯಾವ ಆಹಾರ ಸೇವನೆ ಮಾಡಬಾರದು ಎಂಬುದನ್ನು ನಿಮಗೆ ಹೇಳ್ತೇವೆ.
ಮೂಲಂಗಿ (Radish) ಜೊತೆ ಈ ಆಹಾರ (Food) ಸೇವನೆ ಬೇಡ :
ಮೂಲಂಗಿ ಜೊತೆ ಹಾಲು (Milk) ಕುಡಿಯಬೇಡಿ : ಮೂಲಂಗಿ ತಿನ್ನುತ್ತ ಹಾಲು ಕುಡಿಯುವ ತಪ್ಪನ್ನು ನೀವು ಮಾಡಬೇಡಿ. ಹಾಲು ಹಾಗೂ ಮೂಲಂಗಿ ಹೊಂದಿಕೊಳ್ಳುವುದಿಲ್ಲ. ಇದು ಆರೋಗ್ಯಕ್ಕೆ ಹಾನಿಕರ. ಬರೀ ಹಾಲು ಮಾತ್ರವಲ್ಲ ಹಾಲಿನಿಂದ ಮಾಡಿದ ಯಾವುದೇ ಪದಾರ್ಥವನ್ನು ನೀವು ಸೇವನೆ ಮಾಡಬೇಡಿ. ಇವೆರಡರ ಕಾಂಬಿನೇಷನ್ ನಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ನೀವು ಬೆಳಿಗ್ಗೆ ಹಾಲು ಸೇವಿಸಿದ್ದರೆ ಸಂಜೆಯವರೆಗೂ ಮೂಲಂಗಿ ತಿನ್ನಬೇಡಿ. ಒಂದೇ ದಿನ ಈ ಎರಡನ್ನೂ ಸೇವನೆ ಮಾಡದಿರುವುದು ಒಳ್ಳೆಯದು.
ಸೌತೆಕಾಯಿ ಜೊತೆ ಮೂಲಂಗಿ ಬೇಡ್ವೇಬೇಡ : ಸಲಾಡ್ ತಯಾರಿಸುವಾಗ ಜನರು ಎಲ್ಲ ತರಕಾರಿ ಮಿಕ್ಸ್ ಮಾಡ್ತಾರೆ. ಸೌತೆಕಾಯಿ ಹಾಗೂ ಮೂಲಂಗಿಯನ್ನು ಬೆರೆಸಿ ತಿನ್ನುತ್ತಾರೆ. ಆದರೆ ಇವರೆಡನ್ನೂ ಒಟ್ಟಿಗೆ ಸೇವನೆ ಮಾಡಬಾರದು. ಇದ್ರಿಂದ ಕೂಡ ಚರ್ಮದ ಸಮಸ್ಯೆ ನಿಮ್ಮನ್ನು ಕಾಡಬಹುದು.
ಮೂಲಂಗಿಯೊಂದಿಗೆ ಕಿತ್ತಳೆ ಹಣ್ಣನ್ನು ಸೇವಿಸಬಾರದು : ಕಿತ್ತಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಮೂಲಂಗಿಯೊಂದಿಗೆ ಕಿತ್ತಳೆ ಹಣ್ಣನ್ನು ಸೇವಿಸಬಾರದು. ಇದು ಆರೋಗ್ಯವನ್ನು ಹದಗೆಡಿಸಬಹುದು. ಮೂಲಂಗಿಯಿಂದ ಮಾಡಿದ ಆಹಾರ ಸೇವನೆ ಮಾಡಿದ್ರೆ ತಕ್ಷಣ ಕಿತ್ತಳೆ ಹಣ್ಣನ್ನು ತಿನ್ನಬೇಡಿ. ಇದ್ರಿಂದ ಹೊಟ್ಟೆಗೆ ಸಂಬಂದಿಸಿ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ವೃದ್ಧರಿಗೆ ಸಮಸ್ಯೆ ಕಾಡುವುದು ಹೆಚ್ಚು. ಮೂಲಂಗಿ ಹಾಗೂ ಕಿತ್ತಳೆ ಹಣ್ಣಿನ ಮಧ್ಯೆ 4 -5 ಗಂಟೆ ಅಂತರವಿರಲಿ.
ಹಾಗಲಕಾಯಿ ಜೊತೆ ಮೂಲಂಗಿ ಬೇಡ : ತಜ್ಞರ ಪ್ರಕಾರ, ಹಾಗಲಕಾಯಿ ಜೊತೆ ಮೂಲಂಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಇದರಿಂದ ಉಸಿರಾಟದ ಸಮಸ್ಯೆ ಶುರುವಾಗುವ ಸಾಧ್ಯತೆಯಿದೆ. ಬೆಳಿಗ್ಗೆ ಮೂಲಂಗಿ ಸೇವನೆ ಮಾಡಿದ್ದರೆ ರಾತ್ರಿ ಹಾಗಲಕಾಯಿ ತಿನ್ನಿ ಎನ್ನುತ್ತಾರೆ ತಜ್ಞರು.
ಹಸಿ ಅಥವಾ ಬೇಯಿಸಿದ ತರಕಾರಿ, ಯಾವ ರೀತಿ ತಿನ್ನೋದು ಒಳ್ಳೆಯದು ?
ಟೀ ಹಾಗೂ ಮೂಲಂಗಿ ಒಟ್ಟಿಗೆ ಬೇಡ : ಮೂಲಂಗಿಯೊಂದಿಗೆ ಟೀ ಸೇವನೆ ಮಾಡುವುದ್ರಿಂದ ಅಸಿಡಿಟಿ ಅಥವಾ ಮಲಬದ್ಧತೆ ಕಾಡುತ್ತದೆ. ಟೀ ಕುಡಿದ ನಂತರ ಮೂಲಂಗಿ ತಿನ್ನಬೇಡಿ. ಮೂಲಂಗಿ ದೇಹವನ್ನು ತಂಪಾಗಿಸುವ ಕಾರಣ, ಅದನ್ನು ಬಿಸಿ ಟೀ ಜೊತೆ ತಿನ್ನಬಾರದು. ಮೂಲಂಗಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಇದ್ರ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಫ್ರಿಡ್ಜ್ ಇಲ್ಲದ ಹೊಟೇಲ್, ಅಡುಗೆಗೆ ದೇಸಿ ತುಪ್ಪ ಬಳಕೆ..ಫುಡ್ ಸಖತ್ ಟೇಸ್ಟ್
ಯಾವಾಗ ಮೂಲಂಗಿ ಸೇವನೆ ಮಾಡ್ಬೇಕು ಗೊತ್ತಾ? : ಮೂಲಂಗಿ ತರಕಾರಿಯಾಗಿದ್ದು, ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ರಾತ್ರಿ ಊಟದ ಜೊತೆ ಮೂಲಂಗಿ ಸೇವನೆ ಕೂಡ ಹಾನಿಕಾರಕ. ಮೂಲಂಗಿಯನ್ನು ಬೆಳಗಿನ ಉಪಾಹಾರದ ನಂತರ ಅಥವಾ ಊಟದ ಮೊದಲು ತಿನ್ನಬೇಕು. ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವಿನ ಸಮಯದಲ್ಲಿ ಮೂಲಂಗಿಯನ್ನು ತಿನ್ನಬಹುದು. ಈ ಸಮಯದಲ್ಲಿ ಮೂಲಂಗಿ ಸೇವನೆ ಮಾಡಿದ್ರೆ ಜೀರ್ಣಕ್ರಿಯೆ ಸರಾಗವಾಗುತ್ತದೆ.