ಚಳಿಗಾಲದಲ್ಲಿ(Winter) ಕಾಣಿಸಿಕೊಳ್ಳುವ ಹಲವು ಹಣ್ಣಗಳು ಆರೋಗ್ಯಕ್ಕೆ ಉತ್ತಮವಾಗಿವೆ. ಅದರಲ್ಲೂ ಸೀತಾಫಲ ಹಣ್ಣು(Custard apple) ಎಲ್ಲರಿಗೂ ಇಷ್ಟವಾಗುವಂತಹ ಹಣ್ಣು. ಇದರಲ್ಲಿ ಅದರ ಬೀಜವೇ(Seeds) ಹೆಚ್ಚಾಗಿರುತ್ತವೆ, ಆದರೆ ಹಣ್ಣು ತಿಂದಾಗ ಬೆಣ್ಣೆಯನ್ನೇ(Butter) ಸವಿದಂತಾಗುತ್ತದೆ. ಈ ಹಣ್ಣಿನಿಂದ ಮನೆಯಲ್ಲೇ ಮಾಡಬಹುದಾದ ಪದಾರ್ಥಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸೀತಾಫಲಗಳು ತೆಳುವಾದ, ಗಟ್ಟಿಯಾದ ಚರ್ಮ, ಬಿಳಿ(White), ಹರಳಿನಂತಹ ಮಾಂಸವನ್ನು ಹೊಂದಿರುತ್ತವೆ, ಅದು ಕೆನೆ, ಸಿಹಿ-ರುಚಿಯ, ಆರೊಮ್ಯಾಟಿಕ್(Aromatic) ಮತ್ತು ಒಳಗೆ ಮಾಂಸದಿಂದ ಆವೃತವಾದ ಬೀಜಗಳ ಸಮೂಹವನ್ನು ಹೊಂದಿರುತ್ತದೆ. ಇವು ಉಷ್ಣವಲಯದ ಪಶ್ಚಿಮ ಪ್ರದೇಶಗಳಲ್ಲಿ ಸ್ಥಳೀಯರು ಬೆಳೆಯುತ್ತಾರೆ. ಇವು ರಕ್ತದೊತ್ತಡವನ್ನು(Blod Pressure) ನಿಯಂತ್ರಿಸಲು ಅತ್ಯುತ್ತಮವಾಗಿವೆ ಮತ್ತು ವಿಟಮಿನ್ ಸಿ (Vitamin C) ಹೇರಳವಾಗಿರುತ್ತವೆ. ಇದು ನಮ್ಮ ದೇಹದಲ್ಲಿ Free Radicalsಗಳೊಂದಿಗೆ ಹೋರಾಡುತ್ತದೆ.
ಮಿಲ್ಕ್ ಶೇಕ್ (Milk Shake), ಸಲಾಡ್ (Salad) ಸೇರಿದಂತೆ ಅನೇಕ ಸಿಹಿತಿಂಡಿಗಳಲ್ಲಿ(Sweets) ಬಳಸುವುದರ ಜೊತೆಗೆ ಅವುಗಳನ್ನು ಪ್ರಾಥಮಿಕವಾಗಿ ತಾಜಾವಾಗಿ (Fresh Fruits) ಸೇವಿಸಲಾಗುತ್ತದೆ. ಸೀತಾಫಲ ಹಣ್ಣಿನ ವಾಸನೆಯು ಸೇಬಿನಂತೆಯೇ ಇದ್ದು, ರುಚಿಯು ಅದೇ ರೀತಿ ಇರುವುದರಿಂದ ಸೀತಾಫಲವೆಂದು ಹೆಸರು ಬಂದಿದೆ. ಹಣ್ಣು ರುಚಿಕರವಾಗಿದ್ದರೂ, ಬೀಜವನ್ನು ತಿನ್ನಬಾರದು. ಏಕೆಂದರೆ ಬೀಜ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಹಣ್ಣನ್ನು ಈ ರೆಸಿಪಿಗಳ ಮೂಲಕ ಇನ್ನಷ್ಟು ರುಚಿ ಹೆಚ್ಚಿಸುವ ಬಗ್ಗೆ ಇಲ್ಲಿ ಹೇಳಲಾಗಿದೆ.
1. ಸೀತಾಫಲ ಬಾಸುಂದಿ
ಬೇಕಾಗುವ ಸಾಮಾಗ್ರಿಗಳು: ದೊಡ್ಡ ಬೇಯಿಸಿದ ಸೀತಾಫಲ, ಹಾಲು, 4 ಕಪ್ ಮಂದಗೊಳಿಸಿದ ಹಾಲು, ಏಲಕ್ಕಿ ಪುಡಿ, ಎಲೈಚಿ ಪುಡಿ, ಚಿಟಿಕೆ ಉಪ್ಪು.
ಅಲಂಕಾರಕ್ಕಾಗಿ: ಬಾದಾಮಿ, ಪಿಸ್ತಾ
ಮಾಡುವ ವಿಧಾನ:
ಮೊದಲು ಸೀತಾಫಲ ಹಣ್ಣಿನಲ್ಲಿನ ಬೀಜವನ್ನು ತೆಗೆಯಿರಿ. ಮತ್ತೊಂದು ಪ್ಯಾನ್‌ನಲ್ಲಿ ಹಾಲು ಹಾಕಿ ಅರ್ಧದಷ್ಟು ಬರುವವರೆಗೂ ಕುದಿಸಿ. ನಂತರ ಅದಕ್ಕೆ ಕಂಡೆನ್ಸಡ್ ಮಿಲ್ಕ್ ಸೇರಿಸಿ 2 ನಿಮಿಷಗಳ ಕಾಲ ಚೆನ್ನಾಗಿ ಕಲಸಿ. ನಂತರ ಅದಕ್ಕೆ ಸೀತಾಫಲ ಹಣ್ಣಿನ ತಿರುಳು, ಏಲಕ್ಕಿ ಪುಡಿ ಮತ್ತು ಚಿಟಕಿ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷಗಳ ಕಾಲ ಕುದಿಸಿ. ಮಿಶ್ರಣವು ತಣ್ಣಗಾದ ನಂತರ ಸಣ್ಣಗೆ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾಗಳಿಂದ ಅಲಂಕರಿಸಿ ಸರ್ವ ಮಾಡಿದರೆ ಸೀತಾಫಲ ಬಾಸುಂಡಿ ಸವಿಯಲು ಸಿದ್ಧ.
ವಿಟಮಿನ್ ಆಗರವಾಗಿರುವ ಸೀತಾಫಲವನ್ನು ಸೇವಸಿದರೇನು ಫಲ?
2. ಸೀತಾಫಲ್ ಐಸ್ ಕ್ರೀಮ್
ಬೇಕಾಗುವ ಪದಾರ್ಥಗಳು: 1 ಕಪ್ ಹೆವಿ ಕ್ರೀಮ್, ಹಾಲು, ಸಕ್ಕರೆ, ವೆನಿಲ್ಲಾ ಎಸೆನ್ಸ್, ಸೀತಾಫಲದ ತಿರುಳು.
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಹಾಲು ಮತ್ತು ಕೆನೆ ಮಿಶ್ರಣ ಮಾಡಿ ಮಧ್ಯಮ ಉರಿಯಲ್ಲಿ ಕಾಯಿಸಿ. ಸಕ್ಕರೆ ಸೇರಿಸಿ ಮತ್ತು ಎಲ್ಲಾ ಸಕ್ಕರೆ ಕರಗುವ ತನಕ ಕಾಯಿಸಿ. ಆದರೆ ಕುದಿಸಬೇಡಿ. ನಂತರ ಪಾತ್ರೆಯನ್ನು ಕೆಳಗಿಳಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಅದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿ ಫ್ರಿಡ್ಜನಲ್ಲಿ 2 ಗಂಟೆ ಇಡಿ. ನೀವು ಐಸ್ ಕ್ರೀಮ್ ತಯಾರಿಸುವ ಮುನ್ನ ಐಸ್ ಕ್ರೀಮ್ ಬೇಸ್ ಮತ್ತು ಸೀತಾಫಲದ ತಿರುಳನ್ನು ಮಿಶ್ರಣ ಮಾಡಿ. ಇದನ್ನು ಒಂದು ಏರ್ ಟೈಟ್ ಬಾಕ್ಸ್ನಲ್ಲಿ(Air Tight Box) 2 ಗಂಟೆಗಳ ಕಾಲ ಫ್ರಿಡ್ಜ್ನಲ್ಲಿಡಿ. ನಂತರ ಐಸ್ ಕ್ರೀಮ್ ಅನ್ನು ಸರ್ವ ಮಾಡಿ ಸವಿಯಿರಿ.
3. ಸೀತಾಫಲ ಖೀರ್(Seethaphala Kheer)
ಬೇಕಾಗುವ ಪದಾರ್ಥಗಳು: ಕೊಬ್ಬು ತುಂಬಿದ ಹಾಲು, ದಾಲ್ಚಿನ್ನಿ, ಸೋಂಪು, ಏಲಕ್ಕಿ, ಸಕ್ಕರೆ, ಸೀತಾಫಲ.
ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕುದಿಸಿ. ಇದು ಅರ್ಧಕ್ಕೆ ಕಡಿಮೆಯಾಗುವವರೆಗೂ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಇದಕ್ಕೆ ದಾಲ್ಚಿನ್ನಿ, ಸಕ್ಕರೆ ಮತ್ತು ಸೋಂಪಿನ ಪುಡಿ ಹಾಕಿ 10 ನಿಮಿಷ ಕುದಿಸಿ. ಇದಕ್ಕೆ ಬೇಕಾದಲ್ಲಿ ಕೇಸರಿ ಎಸಳನ್ನು ಹಾಕಿಕೊಳ್ಳಬಹುದು. ಸ್ಟೌ ಆಫ್ ಮಾಡಿ ತಣ್ಣಗಾದ ಮೇಲೆ ಸೀತಾಫಲದ ತಿರುಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸರ್ವ ಮಾಡಿದರೆ ಸೀತಾಫಲದ ಪಾಯಸ ಸವಿಯಲು ಸಿದ್ಧ.