ಎಮ್ಮೆ, ಹಸುಗಿಂತ ಜಿರಳೆ ಹಾಲು ಸೂಪರ್ ಫುಡ್! ಕುಡಿಯೋ ಮುನ್ನ ಡಿಟೇಲ್ ತಿಳ್ಕೊಳ್ಳಿ

Published : Feb 13, 2025, 11:23 AM ISTUpdated : Feb 13, 2025, 11:39 AM IST
ಎಮ್ಮೆ, ಹಸುಗಿಂತ ಜಿರಳೆ ಹಾಲು ಸೂಪರ್ ಫುಡ್! ಕುಡಿಯೋ ಮುನ್ನ ಡಿಟೇಲ್ ತಿಳ್ಕೊಳ್ಳಿ

ಸಾರಾಂಶ

ಜಿರಳೆ ಹಾಲು ಅಚ್ಚರಿಯ ಸೂಪರ್‌ಫುಡ್ ಎಂದು ವಿಜ್ಞಾನಿಗಳು ಘೋಷಿಸಿದ್ದಾರೆ. ಹಸು, ಎಮ್ಮೆ ಹಾಲಿಗಿಂತ ಮೂರು ಪಟ್ಟು ಪೌಷ್ಟಿಕಾಂಶಭರಿತ ಈ ಹಾಲಿನಲ್ಲಿ ಪ್ರೋಟೀನ್, ಅಮೈನೋ ಆಮ್ಲ, ಆರೋಗ್ಯಕರ ಕೊಬ್ಬು ಮತ್ತು ಸಕ್ಕರೆ ಹೇರಳವಾಗಿದೆ. ಆದರೆ, ಪ್ರತಿ 100 ಗ್ರಾಂ ಹಾಲಿಗೆ ಸಾವಿರ ಜಿರಳೆಗಳನ್ನು ಕೊಲ್ಲಬೇಕಾಗಿರುವುದರಿಂದ ಲಭ್ಯತೆ ತೀರಾ ಕಡಿಮೆ.

ಚೀನಾ (China) ಮಂದಿ ಏನೂ ಬಿಡೋದಿಲ್ಲ, ಜಿರಳೆ (Cockroach) ಕೂಡ ಹುರಿದು ತಿಂತಾರೆ, ಯಪ್ಪಾ ಅಂತ ನಾವು ವಾಕರಿಸಿಕೊಳ್ತೇವೆ. ಆದ್ರೆ ಈಗ ವಿಜ್ಞಾನಿ (scientist)ಗಳು ಅಚ್ಚರಿಯಾಗೋ ವಿಷ್ಯ ಒಂದನ್ನ ಹೇಳಿದ್ದಾರೆ. ಮನೆಗೆ ಆಗಾಗ ಬರೋ ಜಿರಳೆನಾ ಸಾಯ್ಸೋ ಮಂದಿ ಇನ್ಮುಂದೆ ಸಾಕಿದ್ರೂ ಅಚ್ಚರಿ ಏನಿಲ್ಲ. ಜಿರಳೆ ಹಾಲಿಗೆ ಇನ್ಮುಂದೆ ಬಹು ಬೇಡಿಕೆ ಬರೋ ಸಾಧ್ಯತೆನಾ ತಳ್ಳಿ ಹಾಕೋಕೆ ಆಗಲ್ಲ. ಅರೇ ಜಿರಳೆ ಹಾಲಿನಲ್ಲಿ ಅಂಥದ್ದು ಏನಿದೆ ಅಂತ ನೀವು ಕೇಳ್ಬಹುದು. ದಿನಾ ನಾವು ಆಕಳ ಹಾಲು, ಎಮ್ಮೆ ಹಾಲನ್ನು ಕುಡಿತೇವೆ. ಅದು ಆರೋಗ್ಯಕ್ಕೆ ಒಳ್ಳೆಯದು, ಅಲ್ಲ ಅನ್ನೋ ವಾದ ವಿಪರೀತವಾಗಿದ್ರೂ ಹಿಂದಿನಿಂದ ಬಂದ ಈ ಆಹಾರನ ಜನರು ತ್ಯಜಿಸೋಕೆ ಆಗ್ತಿಲ್ಲ. ಪ್ರತಿ ದಿನ ಒಂದು ಲೋಟ ಎಮ್ಮೆ ಹಾಲು ಕುಡಿದ್ರೆ ನಿದ್ರೆ ಬರುತ್ತೆ ಅನ್ನೋ ನಿಮ್ಗೆ ಒಂದು ವಿಷ್ಯ ಇದೆ. ಎಮ್ಮೆ ಹಾಲು, ಆಕಳ ಹಾಲಿಗಿಂತ ಜಿರಳೆ ಹಾಲು ಸೂಪರ್ ಫುಡ್ ಅಂತ ವಿಜ್ಞಾನಿಗಳು ಹೇಳಿದ್ದಾರೆ. 

ಜಿರಳೆ ಹಾಲಿನಲ್ಲಿ ಸ್ಪಟಿಕದಂತ ವಸ್ತುವನ್ನು ಉತ್ಪಾದನೆ ಮಾಡುತ್ತೆ. ಅದ್ರಲ್ಲಿ ಪ್ರೋಟಿನ್ ಹೇರಳವಾಗಿರುತ್ತೆ. ಇದು ಹಸು  ಮತ್ತೆ ಎಮ್ಮೆ ಹಾಲಿಗಿಂತ ಮೂರು ಪಟ್ಟು ಪೋಷಕಾಂಶ ಹೊಂದಿರುತ್ತೆ. ಅಷ್ಟೇ ಅಲ್ಲ ಅಮೈನೋ ಆಮ್ಲವನ್ನು ಇದು ಹೊಂದಿರುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಆರೋಗ್ಯಕರ ಕೊಬ್ಬು ಮತ್ತೆ ಸಕ್ಕರೆ ಕೂಡ ಇದ್ರಲ್ಲಿ ಸಾಕಷ್ಟು ಪ್ರಮಾಣದಲ್ಲಿರುತ್ತೆ ಅನ್ನೋದು ವಿಜ್ಞಾನಿಗಳ ವಾದ. ವಿಜ್ಞಾನಿಗಳ ಪ್ರಕಾರ, ಜಿರಳೆ ಹಾಲಿನಲ್ಲಿರೋ ಸ್ಪಟಿಕ, ಕ್ಯಾಲೋರಿ ಮತ್ತೆ ಪೋಷಕಾಂಶದ ಪ್ಯಾಕೇಜ್. ಇದನ್ನು ಪ್ರೋಟಿನ್ ನಿಧಿ ಅಂತಾನೆ ಕರಿಬಹುದು. 

ಮನೆಯಲ್ಲೇ 10 ನಿಮಿಷದಲ್ಲೇ ರೆಡಿ ಮಾಡಿ ಮಾವಿನಕಾಯಿ ಉಪ್ಪಿನಕಾಯಿ

ಜಿರಳೆ ಹಾಲಿನಲ್ಲಿರುವ ಕ್ಯಾಲೋರಿ ಎಷ್ಟು? : ವಿಜ್ಞಾನಿಗಳ ಪ್ರಕಾರ, ಜಿರಳೆಯ 100 ಗ್ರಾಂ ಹಾಲಿನಲ್ಲಿ 232 ಕ್ಯಾಲೋರಿ ಸಿಗುತ್ತೆ. ಅದೇ ಹಸುವಿನ 100 ಗ್ರಾಂ ಹಾಲಿನಲ್ಲಿರೋದು 66 ಕ್ಯಾಲೋರಿ ಮಾತ್ರ. ಇನ್ನು ಜಿರಳೆ ಹಾಲಿನಲ್ಲಿ ಶೇಕಡಾ 45ರಷ್ಟು ಪ್ರೊಟೀನ್ ಇದೆ. ಶೇಕಡಾ 16 -22ರಷ್ಟು ಕೊಬ್ಬಿದೆ. ಶೇಕಡಾ 25ರಷ್ಟು ಕಾರ್ಬೋಹೈಡ್ರೇಟ್ ಇದೆ. ಶೇಕಡಾ 5ರಷ್ಟು ಅಮೈನೋ ಆಮ್ಲ ಇದ್ರೆ ಒಮೆಗಾ 3, ಒಲೀಕ್ ಆಮ್ಲ, ಖನಿಜ, ಜೀವಸತ್ವ ಸೇರಿದಂತೆ ಎಲ್ಲವೂ ಇಲ್ಲಿ ಸಿಗುತ್ತೆ. ಪ್ರೊಟೀನ್ ಸಂಪೂರ್ಣ ಮೂಲವಾದ 9 ಅಮೈನೋ ಆಮ್ಲ ಇದ್ರಲ್ಲಿದೆ. 

ಜಿರಳೆ ಎಷ್ಟು ಹಾಲು ಉತ್ಪಾದಿಸುತ್ತೆ? : ಹಸುವಿನ ಹಾಗೂ ಎಮ್ಮೆ ಹಾಲು ಅನೇಕರಿಗೆ ಜೀರ್ಣಕ್ರಿಯೆ ಸಮಸ್ಯೆಯನ್ನು ತರ್ತಿದೆ. ಹಾಲಿನಲ್ಲಿರೋ ಲ್ಯಾಕ್ಟೋಸ್ ಜೀರ್ಣವಾಗೋದಿಲ್ಲ. ಹಾಗಾಗಿ ಅನೇಕರು ಹಸುವಿನ ಅಥವಾ ಎಮ್ಮೆಯ ಹಾಲನ್ನು ಕುಡಿಯೋದಿಲ್ಲ. ಅಂಥವರಿಗೆ ಜಿರಳೆ ಹಾಲು ಬೆಸ್ಟ್. ಇದ್ರಲ್ಲಿ ಜೀರ್ಣಕ್ರಿಯೆ ಸಮಸ್ಯೆ ಕಾಡೋದಿಲ್ಲ. ಸುಲಭವಾಗಿ ಜೀರ್ಣ ಆಗೋ ಕಾರಣ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಇರ್ಬಹುದು. ಕ್ಯಾಲೋರಿ ಹೆಚ್ಚಿರೋ ಕಾರಣ, ತೂಕ ಹೆಚ್ಚಾಗ್ಬಹುದು. ಆರೋಗ್ಯಕ್ಕೆ ಒಳ್ಳೆದು ಅಂತ ಜಿರಳೆ ಹಾಲು ಹುಡುಕೋಕೆ ಹೋಗ್ಬೇಡಿ. ಜಿರಳೆ ಹಾಲು ಸಿಗೋದು ಬಹಳ ಕಷ್ಟ. 

ಮೊಟ್ಟೆ ಸೇವನೆ ಹೃದ್ರೋಗದ ಅಪಾಯ ಹೆಚ್ಚಿಸುತ್ತದೆಯೇ? ಅಧ್ಯಯನ ಏನು ಹೇಳುತ್ತೆ?

ಮೊದಲನೇಯದಾಗಿ ಜಿರಳೆ ಅತಿ ಕಡಿಮೆ ಹಾಲನ್ನು ಉತ್ಪಾದನೆ ಮಾಡುತ್ತೆ. ನಿಮಗೆ ಹಸು, ಎಮ್ಮೆಯಂತೆ ಜಿರಳೆ ಹಾಲು ಸಿಗೋದಿಲ್ಲ. ನೀವು ಜಿರಳೆ ಹಾಲು ಬೇಕು ಅಂದ್ರೆ ಅದನ್ನು ಸಾಯಿಸ್ಬೇಕು. ಜಿರಳೆ ಕರುಳಿನಲ್ಲಿ ಹಾಲಿನಂತ ವಸ್ತು ಉತ್ಪಾದನೆ ಆಗೋದ್ರಿಂದ ನೀವು ಅದನ್ನು ಕೊಂದು ಹಾಲು ಪಡೀಬೇಕು. ಒಂದು 100 ಗ್ರಾಂ ಹಾಲು ಬೇಕೆಂದ್ರೆ ನೀವು ಸಾವಿರ ಜಿರಳೆ ಕೊಲ್ಬೇಕು. ಸದ್ಯ ವಿಜ್ಞಾನಿಗಳು ಅದ್ರ ಹಾಲು ತೆಗೆಯೋ ಬೇರೆ ವಿಧಾನ ಕಂಡು ಹಿಡಿದಿಲ್ಲ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ