ನಾಗರಹಾವಿನ ಪಕೋಡಾ ! ಕೋಬ್ರಾ ಮೀಟ್ ಮಾರ್ಕೆಟ್ ನಲ್ಲಿ ಏನೆಲ್ಲ ಸಿಗುತ್ತೆ?

Published : Aug 06, 2026, 03:37 PM IST
Cobra pakoda

ಸಾರಾಂಶ

cobra meat : ಹಾವು ಕಂಡ್ರೆ ಭಯ ಶುರುವಾಗುತ್ತೆ. ಅದ್ರಲ್ಲೂ ನಾಗರಹಾವು ಅಂದ್ರೆ ನಿದ್ರೆಯಲ್ಲೂ ಜನ ಬೆವರ್ತಾರೆ. ಆದ್ರೆ ಈಗ ನಾವು ಹೇಳ್ತಿರೋ ಜಾಗದಲ್ಲಿ ಜನರು ಹಾವನ್ನು ಪಕೋಡಾ ಮಾಡಿ ತಿಂತಾರೆ.

ಚಿಕನ್, ಮಟನ್ ನಿಂದ ಪಕೋಡ, ಟಿಕ್ಕಾ, ಚಾಪ್ಸ್ ,ಕಬಾಬ್ ತಯಾರಿಸಿ ಜನ ಅದ್ರ ಸವಿ ಸವಿತಿದ್ದಾರೆ. ಭಾರತದಲ್ಲೂ ಅನೇಕರು ಇಂಥಹ ಹೊಸ ರುಚಿ ಪ್ರಯೋಗಗಳನ್ನು ಮಾಡ್ತಿದ್ದಾರೆ. ಆದ್ರೆ ಹಾವನ್ನು ಕತ್ತರಿಸಿ ತಿನ್ನೋ ಜಾಗ ಇದೆ ಅಂದ್ರೆ ನೀವು ನಂಬ್ತೀರಾ? ಅದೂ ಹಾವಿನ ಪಕೋಡ, ಟಿಕ್ಕಾ, ಸಮೋಸಾ ಅಂತ ವೆರೈಟಿ ಆಹಾರ ಮಾಡಿ ತಿನ್ನುವ ಮಾರ್ಕೆಟ್ ಒಂದರ ಬಗ್ಗೆ ಮಾಹಿತಿ ಇಲ್ಲಿದೆ.

ಹಾವಿನ ಪಕೋಡಾ !

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದು ಇಂಡೋನೇಷ್ಯಾದ ವಿಡಿಯೋ. ಅಲ್ಲಿ ಹಾವನ್ನು ಹಿಡಿದು ಜನ ತಿಂತಾರೆ. ನಾವು ಯಾವ್ದು ವಿಷ ಅಂತ ದೂರ ಓಡ್ತೀವೋ, ಯಾವುದು ಅತ್ಯಂತ ಅಪಾಯಕಾರಿ ಅಂತ ಹೆದರ್ತೇವೋ ಅದೇ ಕೋಬ್ರಾ ತಿಂತಾರೆ ಜನ.

ವೀಡಿಯೊದಲ್ಲಿ ಕೋಬ್ರಾ ಮಾಂಸದಿಂದ ಮಾಡಿದ ಪಾಕವಿಧಾನಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ನೀವು ನೋಡ್ಬಹುದು. ಒಂದ್ಕಡೆ ಹಾವು ಹಿಡಿದು ನಿಂತಿರುವ ಹುಡುಗಿ ಆದ್ರೆ ಹತ್ತಾರು ಹಾವುಗಳಿರುವ ಡಬ್ಬ ಇನ್ನೊಂದು ಕಡೆ. ಇನ್ನೊಂದು ವಿಡಿಯೋದಲ್ಲಿ ಹಾವಿನ ಮುಖಕ್ಕೆ ಪಟ್ಟಿ ಸುತ್ತಲಾಗ್ತಿದೆ. ಕೋಬ್ರಾದಿಂದ ಯಾವೆಲ್ಲ ಖಾದ್ಯ ತಯಾರಿಸಲಾಗುತ್ತೆ ಎನ್ನುವ ಪಟ್ಟಿ ಕೂಡ ಅಂಗಡಿ ಮುಂದಿದೆ.

ಭಾರತದಲ್ಲಿ ಬೀದಿ ಬದಿಯಲ್ಲಿ ಪಾನಿಪುರಿ, ಸಮೋಸಾ, ಚಾಟ್ಸ್ ಮಾರಾಟ ಮಾಡಿದಂತೆ ಇಂಡೋನೇಷ್ಯಾ ಬೀದಿಯಲ್ಲಿ ಕೋಬ್ರಾ ಪಕೋಡಾ ಮಾರಾಟ ಮಾಡಲಾಗುತ್ತೆ. ಒಂದೇ ಸಾಲಿನಲ್ಲಿ ಕೋಬ್ರಾ ಮಾಂಸ ಮಾರಾಟ ಮಾಡುವ ಅನೇಕ ಅಂಗಡಿಗಳನ್ನು ನೀವು ನೋಡ್ಬಹುದು.

ಪಾಕಿಸ್ತಾನಿ ವ್ಲಾಗರ್ ಒಬ್ಬರು ತಮ್ಮ ವೀಡಿಯೊದಲ್ಲಿ ಇಂಡೋನೇಷ್ಯಾದಲ್ಲಿ ಕೋಬ್ರಾ ಮಾಂಸದಿಂದ ಮಾಡಿದ ಭಕ್ಷ್ಯಗಳನ್ನು ಮಾರಾಟ ಮಾಡುವ ಕೆಲವು ಅಂಗಡಿಗನ್ನು ತೋರಿಸಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ. ಅಲ್ಲಿ, ನಾಗರಹಾವಿನ ಮಾಂಸವನ್ನು ಜನರು ಇಷ್ಟಪಡ್ತಾರಂತೆ. ಸೂಪ್ಗಳಿಂದ ಹಿಡಿದು ಟಿಕ್ಕಾಗಳು, ಸಾಸೇಜ್ಗಳು, ಪಕೋಡಾಗಳು ಮತ್ತು ಸಮೋಸಾಗಳವರೆಗೆ ವಿವಿಧ ಭಕ್ಷ್ಯಗಳಲ್ಲಿ ನಾಗರಹಾವುಗಳನ್ನು ಬಳಸಲಾಗುತ್ತದೆ. ಕೆಲವರು ಇದರಲ್ಲಿ ಸಾಂಪ್ರದಾಯಿಕ ಔಷಧೀಯ ಗುಣಗಳಿವೆ ಎಂದು ನಂಬುತ್ತಾರೆ. Yogyakarta ಮತ್ತು Jakarta ಪ್ರದೇಶದಲ್ಲಿ ನೀವು ಈ ಅಂಗಡಿಗಳನ್ನು ನೋಡ್ಬಹುದು.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಸ್ತೆ ಬದಿ ಪಕೋಡಾವಾಲಾನ ಆದಾಯ ಕೇಳಿ ತಲೆ ಸುತ್ತಿ ಬಿದ್ದ ಟೆಕ್ಕಿ! ವರ್ಷಕ್ಕೆ ಈತ ದುಡೀತಿರೋದು ಎಷ್ಟು ಗೊತ್ತಾ
ಓಲ್ಡ್ ಮಂಕ್‌ ರೀತಿ ಬಣ್ಣ, ಫ್ಲೇವರ್ ಬೆರೆಸಿದ ಕಲಬೆರಕೆ ಮದ್ಯವನ್ನು ಪತ್ತೆ ಹಚ್ಚುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ