ರೆಸ್ಟೋರೆಂಟ್‌ನಲ್ಲಿ ಇಬ್ಬರು ಹುಡುಗರು ಸೂಪಲ್ಲಿ ಮೂತ್ರ ವಿಸರ್ಜಿಸಿದ ವಿಡಿಯೋ ವೈರಲ್ ಆಗಿದೆ. ಇದು ನಮ್ಮ ರೆಸ್ಟೋರೆಂಟ್ ಸಿಬ್ಬಂದಿಯಿಂದ ಆಗಿರುವ ತಪ್ಪು ಎಂದು ಒಪ್ಪಿಕೊಂಡ ಮಾಲೀಕರು 4,000 ಗ್ರಾಹಕರಿಗೆ ಪರಿಹಾರ ನೀಡಲು ಮುಂದಾಗಿದ್ದಾರೆ. ಆದರೆ, ಸೂಪ್ ಕುಡಿದವರ ಪಾಡು ಏನಾಗಿದೆ ನೀವೇ ಊಹಿಸಿ..
ಭೋಜನ ಮಾಡಲು ರೆಸ್ಟೋರೆಂಟ್‌ಗೆ ಬಂದ 17 ವರ್ಷ ವಯಸ್ಸಿನ ಇಬ್ಬರು ಹುಡುಗರು ತಮ್ಮ ಸೂಪಲ್ಲಿ ಪರಸ್ಪರ ಮೂತ್ರ ವಿಸರ್ಜಿಸಿ ಅದರ ವಿಡಿಯೋವನ್ನು ಹರಿಬಿಟ್ಟಿದ್ದರಿಂದ, ಚೀನಾದ ಹಾಟ್‌ಪಾಟ್ ದೈತ್ಯ ಹೈಡಿಲಾವ್ ಸುಮಾರು 4,000 ಗ್ರಾಹಕರಿಗೆ ಪರಿಹಾರ ನೀಡಲು ಮುಂದಾಗಿದೆ. ಊಟ ಮಾಡಲು ಬಂದ ಹುಡುಗರು ರೆಸ್ಟೋರೆಂಟ್‌ನ ತಮ್ಮ ಖಾಸಗಿ ಕೋಣೆಯಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಇಬ್ಬರೂ ತಮ್ಮ ಸೂಪಿಗೆ ಮೂತ್ರ ವಿಸರ್ಜಿಸಿ ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆದ ನಂತರ ಹೈಡಿಲಾವ್ ಗ್ರಾಹಕರಿಗೆ ಪರಿಹಾರ ನೀಡುವುದಾಗಿ ತಿಳಿಸಿದೆ.
ಹೈಡಿಲಾವ್ ರೆಸ್ಟೋರೆಂಟ್‌ನ ಖಾಸಗಿ ಕೋಣೆಯಲ್ಲಿ ಊಟ ಮಾಡುವಾಗ ಇಬ್ಬರು ಹುಡುಗರು ತಮ್ಮ ಸೂಪಿಗೆ ಮೂತ್ರ ವಿಸರ್ಜಿಸುವ ವಿಡಿಯೋ ಕಳೆದ ತಿಂಗಳ ಕೊನೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಘಟನೆ ನಡೆದಿದ್ದು ತಮ್ಮ ರೆಸ್ಟೋರೆಂಟ್‌ನಲ್ಲಿ ಎಂದು ಹೈಡಿಲಾವ್ ಕಳೆದ ದಿನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಒಪ್ಪಿಕೊಂಡಿದೆ. ಅಲ್ಲದೆ ಫೆಬ್ರವರಿ 24 ರಂದು ಈ ಘಟನೆ ನಡೆದಿದ್ದು, ನಾಲ್ಕು ದಿನಗಳ ನಂತರ ಸಮಸ್ಯೆಯ ಬಗ್ಗೆ ತಿಳಿದುಬಂದಿದೆ. ಮೊದಲು ಸಮಯ ಮತ್ತು ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಪರಿಹಾರ ವಿಳಂಬವಾಯಿತು ಎಂದು ಹೈಡಿಲಾವ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ರಂಜಾನ ವಿಶೇಷ ಮಟನ್ ದಮ್ ಬಿರಿಯಾನಿ: ತಿನ್ನೋದಕ್ಕೂ ರುಚಿಕರ, ಮಾಡುವುದಕ್ಕೂ ಸುಲಭ!
ಸಿಬ್ಬಂದಿಯ ಕಡೆಯಿಂದ ಲೋಪವಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಶಾಂಘೈ ನಗರದ ಔಟ್‌ಲೆಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ವಿವರಣೆಯಲ್ಲಿ ತಿಳಿಸಲಾಗಿದೆ. ಈ ಘಟನೆಯಿಂದ ಗ್ರಾಹಕರಿಗೆ ಉಂಟಾದ ತೊಂದರೆಗೆ ಕ್ಷಮೆಯಾಚಿಸುತ್ತೇವೆ. ಸಂತ್ರಸ್ತರೆಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ಕಂಪನಿ ಸ್ಪಷ್ಟಪಡಿಸಿದೆ. ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವುದಾಗಿ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಅಂದು ತಮ್ಮ ಗ್ರಾಹಕರಾಗಿದ್ದ 4,000ಕ್ಕೂ ಹೆಚ್ಚು ಜನರಿಗೆ ಕಂಪನಿ ಪರಿಹಾರ ನೀಡಲು ಉದ್ದೇಶಿಸಿದೆ. ಆದರೆ ಪರಿಹಾರದ ಮೊತ್ತವನ್ನು ಕಂಪನಿ ಬಹಿರಂಗಪಡಿಸಿಲ್ಲ. ಮಕ್ಕಳನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶಾಂಘೈ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಜೀವ ಪಣಕ್ಕಿಟ್ಟ ಪಾಲಕರು ! ಸ್ನೇಹಿತರನ್ನು ತುಂಬಿಕೊಂಡು ಮಹೀಂದ್ರಾ XUV700 ಓಡಿಸ್ತಿದ್ದಾನೆ ಬಾಲಕ
ಇದೀಗ ರೆಸ್ಟೋರೆಂಟ್ ಮಾಲೀಕರು ಅಂದು ಸೂಪ್ ಕುಡಿದು ಹೋದ 4 ಸಾವಿರ ಗ್ರಾಹಕರಿಗೆ ಪರಿಹಾರವನ್ನೇನೋ ಕುಡತ್ತಿದೆ. ಆದರೆ, ಮೂತ್ರ ಮಾಡಿದ ಸೂಪ್ ಕುಡಿದವರ ಪಾಡು ಏನಾಗಿದೆ ಎಂಬುದನ್ನು ಊಹಿಸಿದರೆ ಅಹಸ್ಯವಾಗಲಿದೆ. ಇನ್ನು ಸೂಪ್ ಕುಡಿದ ಗ್ರಾಹಕರಿಗೆ ಅನಾರೋಗ್ಯ ಉಂಟಾದಲ್ಲಿ ಅದಕ್ಕೆ ಹೊಣೆಗಾರರು ಯಾರು ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.