ಕೈ ಹಿಡಿದ ಸಿರಿ ಧಾನ್ಯ ಇಡ್ಲಿ ಉದ್ಯಮ, 50 ಸಾವಿರ ಹೂಡಿಕೆ ಮಾಡಿ ಈಗ ತಿಂಗಳಿಗೆ 7.5 ಲಕ್ಷ ರೂ ಆದಾಯ

Published : Nov 26, 2026, 03:33 PM IST
Millet Idli 2

ಸಾರಾಂಶ

ಸಾಮಾನ್ಯ ಇಡ್ಲಿಯಲ್ಲ, ಸಿರಿ ಧಾನ್ಯದ ಇಡ್ಲಿ. ಆರೋಗ್ಯಕ್ಕೂ ಉತ್ತಮ, ರುಚಿಯೂ ಉತ್ತಮ. ಜೊತೆಗೆ ತುಂಬಾ ಕ್ಲೀನ್. ಇದೇ ಇವರ ಇಡ್ಲಿ ಉದ್ಯಮವನ್ನು ಲಕ್ಷಾಧಿಪತಿ ಮಾಡಿದೆ. ಕೇವಲ 50 ಸಾವಿರ ಹೂಡಿಕೆಯಲ್ಲಿಆರಂಭಗೊಂಡ ಉದ್ಯಮ, ಇದೀಗ ತಿಂಗಳಿಗೆ 7.5 ಲಕ್ಷ ರೂ ಆದಾಯ ಗಳಿಸುತ್ತಿದೆ.

ವಿಶಾಖಪಟ್ಟಣಂ(ನ.26) ಸ್ವಂತ ಉದ್ಯಮ ಮಾಡಬೇಕು ಎಂದು ಎಲ್ಲರು ಮಾಡುವಂತೆ ಉದ್ಯಮ ಆರಂಭಿಸಿದರೆ ಯಶಸ್ಸು ಸಿಗುವುದು ಕಷ್ಟ. ಹಾಗಂತೆ ಯಾರೂ ಆರಂಭಿಸದ ಉದ್ಯಮ ಇಲ್ಲ. ಹೀಗಾಗಿ ಇರುವ ಉದ್ಯಮವನ್ನು ಬಿನ್ನವಾಗಿ ಆರಂಭಿಸಿದರೆ ಯಶಸ್ಸು ಸಿಗುತ್ತದೆ. ಹೀಗೆ ಸಾಂಪ್ರದಾಯಿಕ ಇಡ್ಲಿ ಎಲ್ಲೆಡೆ ಸಿಗುತ್ತದೆ. ಇದರ ಜೊತೆಗೆ ಮತ್ತೊಂದು ಇಡ್ಲಿ ಕೌಂಟರ್ ವರ್ಕೌಟ್ ಆಗಲ್ಲ. ಹೀಗಾಗಿ ಹೊಸದು ನೀಡಬೇಕು. ಆದರೆ ಬೆಲೆ ಹೆಚ್ಚಿರಬಾರದು. ಆರೋಗ್ಯಕ್ಕೆ ಉತ್ತಮವಾಗಿರಬೇಕು, ಜೊತೆಗೆ ಶುಚಿತ್ವಕ್ಕೂ ಆದ್ಯತೆ ಇರಬೇಕು ಎಂದು ಸಿರಿಧಾನ್ಯದ ಇಡ್ಲಿ ಉದ್ಯಮ ಆರಂಭಿಸಲಾಯಿತು. ಆರಂಭದಲ್ಲಿ 50,000 ರೂಪಾಯಿ ಹೂಡಿಕೆಯಲ್ಲಿ ಸಿರಿಧಾನ್ಯ ಇಡ್ಲಿ ಉದ್ಯಮ ಆರಂಭಗೊಂಡಿತು. ಇದೀಗ ತಿಂಗಳಿಗೆ 7.5 ಲಕ್ಷ ರೂಪಾಯಿ ಆದಾಯಗಳಿಸುತ್ತಿದೆ.

ವಿಶಾಖಪಟ್ಟಣದ ಎಂಪಿವಿ ಕಾಲೋನಿ ನಿವಾಸಿ ಸುಧೀರ್ ಚಿತ್ತೆಂ ಹೊಸ ಸಿರಿಧಾನ್ಯ ಇಡ್ಲಿ ಉದ್ಯಮ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಕೃಷಿ ಅರ್ಥಶಾಸ್ತ್ರ ಪದವೀಧರ ಸುಧೀರ್ ಉದ್ಯಮ ಆರಂಭಿಸಲು ಪ್ಲಾನ್ ಮಾಡಿದ್ದರು. ರಾಸಾಯನಿಕಗಳ ಆಹಾರ ಸೇವನೆಯಿಂದ ಜನರು ಗಂಭೀರ ಆರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಆರೋಗ್ಯಕರ ಆಹಾರದ ಮೂಲಕ ಉದ್ಯಮ ಆರಂಭಿಸಲು ಮುಂದಾಗಿದ್ದರು. ಇದರಂತೆ ಕೇವಲ 50 ಸಾವಿರ ರೂಪಾಯಿಯಲ್ಲಿ ಸುಧೀರ್ ಇಡ್ಲಿ ಉದ್ಯಮ ಆರಂಭಿಸಿದರು. ಇದು ಸಿರಿ ಧಾನ್ಯ ಇಡ್ಲಿ.

ಎಲೆಯಲ್ಲಿ ಮಡಚಿ ಹಬೆಯಲ್ಲಿ ಬೇಯಿಸಿದ ಇಡ್ಲಿ

ಸಣ್ಣದಾಗಿ ಉದ್ಯಮ ಆರಂಭಗೊಂಡಿತು. ಅಬ್ಬರದ ಪ್ರಚಾರ ಇರಲಿಲ್ಲ. ಪ್ರಮುಖವಾಗಿ ಸಿರಿಧಾನ್ಯದಿಂದ ತಯಾರಿಸಿದ ರುಚಿಯಾದ ಇಡ್ಲಿ. ಜೊತೆಗೆ ಆರೋಗ್ಯಕರ ಆಹಾರವೇ ಇವರ ಪ್ರಮುಖ ಅಸ್ತ್ರವಾಗಿತ್ತು. 8 ಬಗೆಯ ಸಿರಿಧಾನ್ಯ ಇಡ್ಲಿಗೆ ಬಳಸಲಾಗುತ್ತಿದೆ. ಇನ್ನು ಆಂಧ್ರ ಪ್ರದೇಶದಲ್ಲಿ ಸಿಗುವ ವಿಸ್ತರಾಕು (Vistaraku) ಎಲೆಗಳಲ್ಲಿ ಮಡಚಿ ಹಬೆ ಮೂಲಕ ಬೇಯಿಸಲಾಗುತ್ತಿತ್ತು. ಈ ಎಲೆಗಳು ಆರೋಗ್ಯಕ್ಕೆ ಉತ್ತಮ.ಇದಕ್ಕೆ ಸೋರೆಕಾಯಿ, ಕ್ಯಾರೆಟ್, ಶುಂಠಿ ಸೇರಿದಂತೆ ಹಲವು ತರಕಾರಿಗಳ ಚಟ್ನಿ ನೀಡಲಾಗುತ್ತಿತ್ತು.

ಸಿರಿಧಾನ್ಯಗಳನ್ನು ಸಣ್ಣ ರೈತರು, ಬುಡಕಟ್ಟು ಸಮುದಾಯಗಳಿಂದ ಖರೀದಿಸುತ್ತಾರೆ. ವಾಣಿಜ್ಯ ಉತ್ಪಾದಕರು ರಾಸಾಯನಿಕಗಳನ್ನು ಹಾಕುತ್ತಾರೆ. ಹೀಗಾಗಿ ಸಣ್ಣ ರೈತರಿಂದ, ಬುಡಕಟ್ಟು ಸಮುದಾಯದಿಂದ ಯಾವುದೇ ರಾಸಾಯಾನಿಕಗಳನ್ನು ಹಾಕದೆ ಬೆಳೆದ ಸಿರಿಧಾನ್ಯಗಳನ್ನು ಖರೀದಿಸುತ್ತಿದ್ದಾರೆ. ಇದೀಗ ಸಿರಿಧಾನ್ಯ ಇಡ್ಲಿ ಉದ್ಯಮ ತಿಂಗಳಿಗೆ 7.5 ಲಕ್ಷ ರೂಪಾಯಿ ಆದಾಯ ನೀಡುತ್ತಿದೆ. ಉದ್ಯಮ ಯಶಸ್ವಿಯಾಗಿದೆ. ಇದೀಗ ಇದೇ ಸಿರಿಧಾನ್ಯ ಉದ್ಯಮ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಕ್ಕಿ ಬದಲು 8 ಬಗೆಯ ಸಿರಿಧಾನ್ಯಗಳ ಇಡ್ಲಿ ಮಾರಿ ತಿಂಗಳಿಗೆ ₹7.5 ಲಕ್ಷ ಆದಾಯ! ಕೇವಲ ₹50,000ದಲ್ಲಿ ಶುರುವಾದ ಸಕ್ಸಸ್ ಕಥೆ!