ನಿಮ್ಮ ಮಕ್ಕಳು ಮೊಟ್ಟೆ ತಿನ್ನಲ್ವಾ? ಹಾಗಿದ್ದರೆ ಚೆಟ್ಟಿನಾಡ್ ಸ್ಟೈಲ್ ಎಗ್ ಪೆಪ್ಪರ್ ಡ್ರೈ ಮಾಡಿಕೊಡಿ!

Published : Mar 04, 2025, 02:55 PM ISTUpdated : Mar 04, 2025, 03:15 PM IST
ನಿಮ್ಮ ಮಕ್ಕಳು ಮೊಟ್ಟೆ ತಿನ್ನಲ್ವಾ? ಹಾಗಿದ್ದರೆ ಚೆಟ್ಟಿನಾಡ್ ಸ್ಟೈಲ್ ಎಗ್ ಪೆಪ್ಪರ್ ಡ್ರೈ ಮಾಡಿಕೊಡಿ!

ಸಾರಾಂಶ

ಮಕ್ಕಳಿಗಾಗಿ ಪೌಷ್ಠಿಕಾಂಶಯುಕ್ತ ಚೆಟ್ಟಿನಾಡ್ ಶೈಲಿಯ ಎಗ್ ಪೆಪ್ಪರ್ ಡ್ರೈ ಮಾಡುವ ಸುಲಭ ವಿಧಾನ ಇಲ್ಲಿದೆ. ಇದು ರುಚಿಕರ ಸೈಡ್ ಡಿಶ್ ಆಗಿದ್ದು, ಎಲ್ಲರೂ ಇಷ್ಟಪಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಬೇಕಾದ ಅಗತ್ಯತೆ ಹೆಚ್ಚಾಗಿದೆ. ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಕೊಡುವುದಕ್ಕಾಗಿ ಮೊಟ್ಟೆ ತಿನ್ನಿಸಿ ಎಂದು ಹೇಳಿದರೂ ತಿನ್ನುವುದಿಲ್ಲ. ಹೀಗಾಗಿ, ಈ ಸುಲಭವಾಗಿ ಚೆಟ್ಟಿನಾಡ್ ಸ್ಟೈಲ್‌ನಲ್ಲಿ ಎಗ್ ಪೆಪ್ಪರ್ ಡ್ರೈ ಮಾಡಿಕೊಡಿ. ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಇಲ್ಲಿದೆ ನೋಡಿ ಎಗ್ ಪೆಪ್ಪರ್ ಡ್ರೈ ಮಾಡುವ ಸರಳ ವಿಧಾನ..

ಅಂಗಡಿಯಿಂದ ಖರೀದಿ ಮಾಡಿ ತಂದಿರುವ ಮೊಟ್ಟೆಗಳಲ್ಲಿ 6 ರಿಂದ 10 ಮೊಟ್ಟೆಗಳನ್ನು (ನಿಮಗೆ ಅಗತ್ಯತೆ ಅನುಸಾರ) ತೆಗೆದುಕೊಳ್ಳಿ. ಜೊತೆಗೆ, ಒಂದು ಬಟ್ಟಲು ತೆಗೆದುಕೊಂಡು ಅದರ ಒಳಭಾಗದಲ್ಲಿ ಎಣ್ಣೆಯನ್ನು ಸವರಿಕೊಂಡು ಅದಕ್ಕೆ ಮೊಟ್ಟೆಗಳನ್ನು ಒಡೆದು ಬಟ್ಟಲಿಗೆ ಹಾಕಿಕೊಳ್ಳಿ. ಒಡೆದು ಹಾಕಿದ ಮೊಟ್ಟೆಗಳಿಗೆ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಟೀ ಸ್ಪೂನ್ ಪೆಪ್ಪರ್ ಪುಡಿ ಹಾಗೂ ಅರ್ಧ ಟೀ ಸ್ಪೂನ್ ಖಅಚ್ಚ ಖಾರದ ಪುಡಿಯನ್ನು ಹಾಖಿ ಚೆನ್ನಾಗಿ ಮಿಶ್ರಣ ಮಾಡಬೇಕು. ಎಲ್ಲಿಯೂ ಕೂಡ ಹಳದಿ ಉಂಡೆಗಳು ಉಳಿಯದಂತೆ ಮಿಶ್ರಣ ಮಾಡಬೇಕು. 

ಇದಾದ ನಂತರ ಗ್ಯಾಸ್ ಸ್ಟೌವ್ ಮೇಲೆ ಇಡ್ಲಿ ಬೇಯಿಸುವ ಒಂದು ಕುಕ್ಕರ್‌ ಅನ್ನು ಇಟ್ಟು, ಇಡ್ಲಿ ಬೇಯಿಸುವ ರೀತಿಯಲ್ಲಿ ಮೊಟ್ಟೆ ಮಿಶ್ರಣದ ಬಟ್ಟಲನ್ನು ಇಡ್ಲಿ ಕುಕ್ಕರ್‌ನಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಬೇಕು. 8-10 ನಿಮಿಷ ಆದ ನಂತರ ಅದನ್ನು ತೆಗೆದು ತಣ್ಣಗಾಗಲು ಬಿಟ್ಟು ನಂತರ ಬಟ್ಟಲಿನಲ್ಲಿದ್ದ ಮೊಟ್ಟೆ ಬೇಯಿಸಿದ ಬನ್‌ನ ರೀತಿಯಲ್ಲಿ ಸಿದ್ಧಗೊಂಡ ಮೊಟ್ಟೆಯನ್ನು ಒಂದು ತಟ್ಟೆಗೆ ಹಾಕಿಕೊಳ್ಳಿ. ನಂತರ ಕ್ಯೂಬ್ ಶೇಪ್‌ನಲ್ಲಿ ಚಾಕುವಿನಿಂದ ಕತ್ತರಿಸಬೇಕು.

ಇದನ್ನೂ ಓದಿ: ತೂಕ ಇಳಿಕೆಗೆ ರಾಗಿಯಲ್ಲಿದೆ ದಿವ್ಯೌಷಧ; ರಾಗಿಯಿಂದ ಮಾಡೋ ತಿಂಡಿಗಳಾವುವು?

ಇನ್ನು ಮೊಟ್ಟೆಯನ್ನು ಬೇಯಿಸುವ ಅವಧಿಯಲ್ಲಿ ಒಂದು ಸಣ್ಣ ಬಾಣಲೆಯಲ್ಲಿ ಕಡ್ಲೆ ಬೀಜ, ಧನಿಯಾ ಕಾಳು (ಕೊತ್ತಂಬರಿ ಕಾಳು), ಜೀರಿಗೆ, ಕಾಳು ಮೆಣಸು, ಸೋಂಪು, ಒಂದೆರಡು ಅರ್ಧ ಇಂಚು ಚಕ್ಕೆ, 3 ಲಾವಂಗ, 1 ಏಲಕ್ಕಿ, ಎರಡರಿಂದ ಮೂರು ಬ್ಯಾಡಗಿ ಮೆಣಸಿನಕಾಯಿ ಎಲ್ಲವನ್ನೂ ಹುರುದುಕೊಂಡು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪೌಡರ್ ಮಾಡಿಕೊಳ್ಳಬೇಕು. ನೀವು ಕಲ್ಲಿನಿಂದ ಸಣ್ಣದಾಗಿ ಜಜ್ಜಿ ಪುಡಿ ಮಾಡಿದರೆ ಇನ್ನೂ ಉತ್ತಮ ರುಚಿ ಬರಲಿದೆ. ಎಲ್ಲವನ್ನು ಸಿದ್ಧಗೊಳಿಸಿದ ನಂತರ ಮೊಟ್ಟೆಗೆ ಒಗ್ಗರಣೆ ಹಾಕಬೇಕು.

ಒಂದು ಸಣ್ಣ ಬಟ್ಟಲಿಗೆ ಎಣ್ಣೆ ಹಾಕಿ, ಅದಕ್ಕೆ ಒಂದೆರಡು ಕರಿಬೇವು ಎಲೆ, ಕತ್ತರಿಸಿಕೊಂಡು ಇಟ್ಟಿದ್ದ ಬೇಯಿಸಿದ ಮೊಟ್ಟೆಯ ಕ್ಯೂಬ್ ತುಂಡುಗಳನ್ನು ಹಾಕಬೇಕು. ನಂತರ ಅದರ ಮೇಲೆ ಈಗಾಗಲೇ ಪುಡಿ ಮಾಡಿ ಇಟ್ಟುಕೊಂಡಿದ್ದನ್ನು ಮೊಟ್ಟೆಯ ಮೇಲೆ ಹಾಕಿ ಹಸಿ ವಾಸನೆ ಹೋಗುವವರೆಗೂ ಸಣ್ಣ ಫ್ಲೇಮ್‌ನಲ್ಲಿ ಬೇಯಿಸಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ ಸಾಕು. ರುಚಿ ರುಚಿಯಾದ ಮನೆ ಮಂದಿಯೆಲ್ಲಾ ಬಾಯಿ ಚಪ್ಪರಿಸಿ ತಿನ್ನುವ ಚೆಟ್ಟಿನಾಡ್ ಸ್ಟೈಲ್ ಎಗ್ ಪೆಪ್ಪರ್ ಡ್ರೈ ಸಿದ್ಧವಾಗುತ್ತದೆ. ಎಲ್ಲ ಊಟಕ್ಕೂ ಇದು ಉತ್ತಮ ಸೈಡ್ ಡಿಶ್ ಆಗುತ್ತದೆ. 

ಇದನ್ನೂ ಓದಿ: Soft Mutton Recipe: ಬೆಣ್ಣೆಯಂತೆ ಮೃದುವಾದ ಮಟನ್ ಮಾಡೋದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ