50 ವರ್ಷದಿಂದ ಕುಡಿದಿಲ್ಲ ನೀರು, ಬರೀ ಕೋಕೇ ಜೀವ ಜಲವಂತೆ ಇವ್ನಿಗೆ, ಹೇಗ್ ಬದುಕಿದ ಅಂತಿದ್ದಾರೆ ನೆಟ್ಟಿಗರು!

By Suvarna News  |  First Published Mar 9, 2024, 12:38 PM IST

ಒಂದು ದಿನ ನೀರಿಲ್ಲದೆ ನಮಗೆ ಇರಲು ಸಾಧ್ಯವಿಲ್ಲ. ನೀರು ಕುಡಿದಷ್ಟು ನೆಮ್ಮದಿ ಮತ್ತೆ ಏನೇ ಕುಡಿದ್ರೂ ಸಿಗೋದಿಲ್ಲ. ಆದ್ರೆ ಜಗತ್ತಿನಲ್ಲಿ ಕೆಲ ವಿಚಿತ್ರ ವ್ಯಕ್ತಿಗಳಿದ್ದಾರೆ. ಅವರು ನೀರೇ ಕುಡಿಯೋದಿಲ್ಲ. 
 


ಕಡಿಮೆ ಅಂದ್ರೂ ದಿನಕ್ಕೆ ಮೂರು ಲೀಟರ್ ನೀರು ಸೇವನೆ ಮಾಡ್ಲೇಬೇಕು ಎಂದು ವೈದ್ಯರು ಸಲಹೆ ನೀಡ್ತಾರೆ. ಬೇಸಿಗೆಯಲ್ಲಿ ನೀರು ಕುಡಿಯೋದನ್ನು ಹೆಚ್ಚಿಗೆ ಮಾಡ್ಬೇಕು. ಅನೇಕ ಬಾರಿ ದೇಹದಲ್ಲಿ ನೀರಿಲ್ಲದೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ನಿರ್ಜಲೀಕರಣದಿಂದ ನಾನಾ ರೀತಿಯ ರೋಗ ಕಾಣಿಸಿಕೊಳ್ಳುತ್ತದೆ. ಹಾಗಾಗಿಯೇ ನೀರಿನ ಜೊತೆ ದ್ರವ ಆಹಾರ ಸೇವನೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ದ್ರವ ಆಹಾರದ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡದಂತೆ ಈಗಿನ ದಿನಗಳಲ್ಲಿ ಸೂಚನೆ ನೀಡಲಾಗುತ್ತದೆ. ಆದ್ರೆ ಅನೇಕರು ಕೋಲ್ಡ್ ಡ್ರಿಂಕ್ಸ್ ಸೇವನೆ ಕಡಿಮೆ ಮಾಡೋದಿಲ್ಲ. ಮತ್ತೆ ಕೆಲವರು ಕೋಲ್ ಡ್ರಿಂಕ್ಸ್ ಮೂಲಕವೇ ಜೀವನ ನಡೆಸ್ತಾರೆ ಅಂದ್ರೆ ನೀವು ನಂಬುತ್ತೀರಾ?. ವ್ಯಕ್ತಿಯೊಬ್ಬ ಈ ವಿಷ್ಯಕ್ಕೆ ಈಗ ಚರ್ಚೆಗೆ ಬಂದಿದ್ದಾನೆ. ಕಳೆದ 50 ವರ್ಷಗಳಿಂದ ಆತ ನೀರಿನ ಸೇವನೆಯನ್ನೇ ಮಾಡಿಲ್ಲ.

50 ವರ್ಷದಿಂದ ನೀರು (Water)  ಸೇವನೆ ಮಾಡಿಲ್ಲ ಈತ : ಬ್ರೆಜಿಲ್ ನ 70 ವರ್ಷದ ವ್ಯಕ್ತಿ ಸುದ್ದಿಗೆ ಬಂದಿದ್ದಾನೆ. ಆತ ಕಳೆದ 50 ವರ್ಷಗಳಿಂದ ಒಂದು ಹನಿ ನೀರು ಕೂಡ ಸೇವನೆ ಮಾಡಿಲ್ಲ. ಆತ ತನ್ನ ದೇಹದಲ್ಲಿ ದ್ರವ ಪದಾರ್ಥ ಹೆಚ್ಚಿಸಿಕೊಳ್ಳಲು ನೀರಿನ ಬದಲು ಕೋಕಾ ಕೋಲಾ (Coca Cola) ಕುಡಿಯುತ್ತ ಬಂದಿದ್ದಾನೆ. 

Tap to resize

Latest Videos

undefined

ಫಿಲ್ಟರ್ ಕಾಫಿ ಪ್ರೇಮಿಗಳಿಗೆ ಗುಡ್ ನ್ಯೂಸ್… ವಿಶ್ವದ ಬೆಸ್ಟ್ ಕಾಫಿ ಲೀಸ್ಟ್ ನಲ್ಲಿ ಸೆಕೆಂಡ್ Rank

ನೀರು ಬಿಟ್ಟು ಕೋಕಾ ಕೋಲಾ ಸೇವನೆ ಮಾಡುತ್ತಿರುವ ಈ ವ್ಯಕ್ತಿ ಹೆಸರು ರಾಬರ್ಟೊ ಪೆಡ್ರೇರಾ. ಬಹುಶಃ ರಾಬರ್ಟೊ ವಿಶ್ವದ ಅತ್ಯಂತ ದೊಡ್ಡ ಕೋಕಾ ಕೋಲಾ ಅಭಿಮಾನಿ ಇರಬೇಕು. ರಾಬರ್ಟೊ ಪೆಡ್ರೇರಾ ಆರೋಗ್ಯವಂತ ವ್ಯಕ್ತಿಯಲ್ಲ. ಆತನಿಗೆ ಮಧುಮೇಹ ಮತ್ತು ಹೃದಯದ ತೊಂದರೆಗಳೆರಡೂ ಇದ್ದರೂ ಕೋಕಾಕೋಲಾ ಕುಡಿದು ಮಾತ್ರ ಬಿಟ್ಟಿಲ್ಲ. ಅದನ್ನೇ ಕುಡಿದು ಆತ ಬದುಕಿರೋದು ಅಚ್ಚರಿ.

ಕೊರೊನಾ (Corona) ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರಾಬರ್ಟೊ ಪೆಡ್ರೇರಾ, ಯಾವುದೇ ದ್ರವ ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ, ಕೋಕಾ-ಕೋಲಾ ಮಾತ್ರ ಕುಡಿಯುತ್ತೇನೆ ಎಂದು ಬರೆದಿದ್ದ. ಆರಂಭದಲ್ಲಿ ಜನರು ಇದು ತಮಾಷೆ ಎಂದುಕೊಂಡಿದ್ದರು. ಯಾವುದೇ ವ್ಯಕ್ತಿ ನೀರಿಲ್ಲದೆ ಬರೀ ಕೋಕಕೋಲಾ ಸೇವನೆ ಮಾಡಿ ಬದುಕಲು ಸಾಧ್ಯವಿಲ್ಲ ಎಂದಿದ್ದರು. ಆದ್ರೆ 27 ವರ್ಷದ ರಾಬರ್ಟ್ ಮೊಮ್ಮಗ, ಅಜ್ಜನ ಬಗ್ಗೆ ಹೇಳಿದ್ದಾನೆ. ಅವರು ನೀರನ್ನು ಕುಡಿದಿದ್ದು ನಾವು ನೋಡಿಲ್ಲ. ದ್ರವ ಆಹಾರ ಎಂದರೆ ಅವರು ಬರೀ ಕೋಕಕೋಲಾ ಸೇವನೆ ಮಾಡುತ್ತಾರೆ ಎಂದಿದ್ದಾನೆ.   

ಸಿಕ್ಕಾಪಟ್ಟೆ ರಾಗಿ ತಿಂತೀರಾ? ಈ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಹುಷಾರ್!

ಕೋಕಾ ಕೋಲಾದಲ್ಲಿ ಮಾತ್ರೆ ಸೇವನೆ ಮಾಡುವ ವ್ಯಕ್ತಿ : ರಾಬರ್ಟೊ ಪೆಡ್ರೇರಾಗೆ ನೀರೆಂದ್ರೆ ಬಹಳ ಕೋಪ. ಇದೇ ಕಾರಣಕ್ಕೆ ಅರ್ಧ ಶತಮಾನದಿಂದ ನಾನು ನೀರು ಸೇವನೆ ಮಾಡಿಲ್ಲ ಎಂದು ಆತ ಹೇಳಿದ್ದಾನೆ. ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ರಾಬರ್ಟೊ ಪೆಡ್ರೇರಾ ಕೋಕಾ ಕೋಲಾವನ್ನು ಹೊಗಳುತ್ತಿದ್ದಾನೆ. ಕೋಕಾ ಕೋಲಾ ಆರೋಗ್ಯಕ್ಕೆ ಹಾನಿಕರವಾಗಿದ್ದರೆ ನಾನು ಇಷ್ಟು ವರ್ಷ ಬದುಕುತ್ತಿರಲಿಲ್ಲ ಎಂದಿದ್ದಾನೆ. 

ವೈದ್ಯರ ಬಳಿ ಹೋದಾಗ ನೀರು ಸೇವನೆ ಮಾಡುವಂತೆ ರಾಬರ್ಟೊ ಪೆಡ್ರೇರಾಗೆ ಸಲಹೆ ನೀಡಲಾಗುತ್ತದೆ. ಆದ್ರೆ ರಾಬರ್ಟೊ ಪೆಡ್ರೇರಾಗೆ ಎಂದೂ ನೀರು ಸೇವನೆ ಮಾಡಿಲ್ಲ. ಮಾತ್ರೆ ಸೇವನೆ ಕೂಡ ಆತ ಕೋಕಾ ಕೋಲಾದಲ್ಲಿ ಮಾಡ್ತಾನೆ. ಮಧುಮೇಹ ಸಮಸ್ಯೆ ನನಗಿದೆ. ಹೃದಯರೋಗ ನನ್ನನ್ನು ಕಾಡುತ್ತಿದೆ. ಹೃದಯದಲ್ಲಿ ಆರು ಸ್ಟೆಂಟ್‌ಗಳಿವೆ. ಆದರೆ ನಾನು ಕೋಕಾ-ಕೋಲಾದಿಂದ ನೀರಿಗೆ ಬದಲಾಗುವ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ನನ್ನ ಈ ಅಭ್ಯಾಸ ನೋಡಿದ ಜನರು ದಂಗಾಗುತ್ತಾರೆ ಎಂದು ರಾಬರ್ಟೊ ಪೆಡ್ರೇರಾ ಹೇಳಿದ್ದಾನೆ. 
 

click me!