ಮಹಾನಗರ ಯಾವಾಗಲೂ ಜನರಿಂದ ಗಿಜಿಗುಡುತ್ತಲೇ ಇರುತ್ತದೆ. ಎಲ್ಲಿಗೆ ಹೋಗಿ, ಏನು ಬೇಕಾದರೂ ತೆಗೆದುಕೊಳ್ಳಬಹುದು. ಆದ್ರೆ ಮಧ್ಯರಾತ್ರಿ (Night) ಮೀರಿದರೆ ಹೊತ್ತಿನ ಊಟ (Food) ಸಿಗುವುದೂ ಕಷ್ಟ. ಆದ್ರೆ ಇನ್ಮುಂದೆ ಆ ಕಷ್ಟ ಇರಲ್ಲ. ರಾತ್ರಿ ಪಾಳಿ (Night shift) ಕೆಲಸ ಮಾಡುವವರ ಊಟ, ತಿಂಡಿಗೆ ಅನುಕೂಲವಾಗಲೆಂದೆ 24 ಗಂಟೆ ಹೋಟೆಲ್ (Hotel) ತೆರೆಯಲು ಅನುಮತಿ ನೀಡಿ, ಸರ್ಕಾರ ಅಧಿಸೂಚನೆ ಹೊರಡಿಸಿದೆ
ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ಇನ್ಮುಂದೆ 24 ಗಂಟೆ ಹೋಟೆಲ್ (Hotel), ಬೇಕರಿ, ಸ್ವೀಟ್ ಸ್ಟಾಲ್ಗಳು ಹಾಗೂ ಐಸ್ ಕ್ರೀಮ್ ಶಾಪ್ಗಳು ಕಾರ್ಯಾಚರಿಸಲಿವೆ. ಈ ಸಂಬಂಧ ಸರ್ಕಾರ ಅಧಿಸೂಚನೆ (Government Notification ) ಹೊರಡಿಸಿದೆ. ನಿರ್ದಿಷ್ಟ ಪ್ರದೇಶಗಳಲ್ಲಿ ರಾತ್ರಿ ವೇಳೆ ಹೋಟೆಲ್ ಮತ್ತು ರೆಸ್ಟೋರೆಂಟ್ ತೆರೆಯಲು ಪೊಲೀಸರಿಂದ ಅನುಮತಿ ಪಡೆಯಲಾಗಿದೆ. ಸಿಲಿಕಾನ್ ಸಿಟಿ ಯಾವಾಗಲೂ ಜನ ಜನಜಂಗುಳಿಯಿಂದ ಕೂಡಿರುತ್ತೆ. ರಾತ್ರಿ ಪಾಳಿಯಲ್ಲೂ ಸಾವಿರಾರು ಜನರು ಕೆಲಸ ಮಾಡ್ತಿದ್ದಾರೆ. ರಾತ್ರಿ ಪಾಳಿ ಕೆಲಸ (Night Shift Work) ಮಾಡುವವರ ಊಟ, ತಿಂಡಿಗೆ ಅನುಕೂಲವಾಗಲೆಂದೆ 24 ಗಂಟೆ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಹೋಟೆಲ್ಗಳು ರಾತ್ರಿ ಪೂರ್ತಿ ತೆರೆಯಲು ಅವಕಾಶ ನೀಡಲಾಗಿದೆ.
ಬೆಂಗಳೂರಿನಲ್ಲಿ ಕೊರೋನಾ (Corona) ಹರಡಲು ಆರಂಭವಾಗಿದ್ದ ಸಮಯದಲ್ಲಿ ಲಾಕ್‌ಡೌನ್‌ಮ ಕರ್ಪ್ಯೂ ಹೇರಿಕೆಯಿಂದ ಲಕ್ಷಾಂತರ ಮಂದಿ ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ ಬಿಟ್ಟು ಸ್ವಗ್ರಾಮಗಳತ್ತ ತೆರಳಿದ್ದರು. ಹೀಗಾಗಿ ಸಹಜವಾಗಿಯೇ ಜನಸಂದಣಿ ಕಡಿಮೆಯಾಗಿತ್ತು. ಆದ್ರೆ ವರ್ಕ್ ಫ್ರಂ ಹೋಮ್ ಕೊನೆಗೊಂಡು ವರ್ಕ್ ಫ್ರಂ ಆಫೀಸ್ ಆರಂಭವಾಗಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಜನರು ಮಹಾನಗರದತ್ತ ಮುಖ ಮಾಡಿದ್ದಾರೆ. ಕಾಲೇಜು, ಕಚೇರಿ, ಬಿಸಿನೆಸ್ ಕಟ್ಟಡಗಳು ಕಾರ್ಯಾಚರಿಸುತ್ತಿವೆ. ರಾತ್ರಿಪಾಳಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೆಲಸ ಮಾಡುತ್ತಾರೆ. ಹೀಗಾಗಿ 24 ಗಂಟೆ ಹೋಟೆಲ್ (Hotel) ತೆರೆಯಲು ಸರ್ಕಾರ ಅನುಮತಿ ನೀಡಿರುವುದು ಹಲವರಿಗೆ ಖುಷಿ ನೀಡಿದೆ.
ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಪಾನಿಪೂರಿ ನಿಷೇಧ, ಪಾಲಿಕೆಯಿಂದ ಮಹತ್ವದ ಘೋಷಣೆ!
24 ಗಂಟೆ ಹೋಟೆಲ್ ತೆರೆಯಲು ಸರ್ಕಾರದ ಅನುಮತಿ
ಸರ್ಕಾರದ ಅಧಿಸೂಚನೆ ಪ್ರಕಾರ ಬೆಂಗಳೂರಿನಲ್ಲಿ ಎಲ್ಲಾ ಹೋಟೆಲ್ಗಳು ಬೇಕರಿ, ಸ್ಟೀಟ್ ಸ್ಟಾಲ್, ಐಸ್ ಕ್ರೀಮ್ ಪಾರ್ಲರ್ ಹಾಗೂ ಎಲ್ಲಾ ಅಂಗಡಿಗಳನ್ನು 24/7 ತೆರೆದಿಡಬಹುದಾಗಿದೆ. ಸಾಮಾನ್ಯವಾಗಿ ಬೆಂಗಳೂರು ನಗರದಲ್ಲಿ ವ್ಯಾಪಾರಿಗಳು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ರಾತ್ರಿ ಊಟಕ್ಕೆ ಹೋಟೆಲ್ಗಳನ್ನೇ ಅವಲಂಬಿಸಿರುತ್ತಾರೆ. ಹೀಗಾಗಿ ತಡರಾತ್ರಿವರೆಗೆ ಹೋಟೆಲ್ಗಳನ್ನು ತೆರೆದಿಡುವುದರಿಂದ ಅಗತ್ಯವಿರುವವರಿಗೆ ಊಟೋಪಹಾರ ವ್ಯವಸ್ಥೆ ಪೂರೈಸಲಾಗುತ್ತೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಸರ್ಕಾರದ ಆದೇಶವನ್ನು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಸ್ವಾಗತಿಸಿದೆ.
ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಅವಕಾಶ
ಆದರೆ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ರಾತ್ರಿ ಹೋಟೆಲ್ ತೆರೆಯಲು ಅನುಮತಿ ನೀಡಿದ್ದು, ಈ ಕುರಿತು ಸರ್ಕಾರಕ್ಕೆ ಪೊಲೀಸ್ ಇಲಾಖೆ ವರದಿ ಸಲ್ಲಿಸಿದೆ. ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಪ್ರಮುಖ ಬಸ್ ನಿಲ್ದಾಣಗಳಲ್ಲಿ 24 ಗಂಟೆಗಳ ಕಾಲ ಹೋಟೆಲ್ ತೆರೆಯಬಹುದು. ಈ ಜಾಗಗಳನ್ನ ಹೊರತುಪಡಿಸಿ ಬೇರೆಡೆ ತೆರೆಯಲು ಪೊಲೀಸ್ ಇಲಾಖೆ ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.
ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ಗಳಲ್ಲಿ ಪ್ರಯಾಣಿಕರ ಓಡಾಟವಿರುತ್ತದೆ. ಹೀಗಾಗಿ ಈ ಜಾಗಗಳಲ್ಲಿ ಮಾತ್ರ ಹೋಟೆಲ್ ತೆರೆಯಲು ಅವಕಾಶವಿರುತ್ತದೆ. ಇದನ್ನು ಹೊರತುಪಡಿಸಿ ಬೇರೆ ಕೆಡೆ ತೆರೆಯಲು ಅವಕಾಶವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಇನ್ನು ಬೇರೆ ಕಡೆ ಅನುಮತಿ ಕೊಟ್ಟರೆ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಪೊಲೀಸರು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಿದ್ದೂ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಮೊಟ್ಟೆ ಒಡೆದು ಎರಡು ಹಳದಿ ಭಾಗ ಸಿಕ್ಕರೆ ಅವಳಿ-ಜವಳಿ ಮಕ್ಕಳಾಗುತ್ತಂತೆ !
ರಾತ್ರಿ ಪಾಳಿ ಕೆಲಸಗಾರರು ಫುಲ್ ಖುಷ್
ಪ್ರತಿ ದಿನ ಸಾವಿರಾರು ಮಂದಿ ರಾತ್ರಿ ಪಾಳಿ ಕೆಲಸ ಮಾಡ್ತಿರುತ್ತಾರೆ. ಆದ್ರೆ ರಾತ್ರಿ ಹೊತ್ತಿನಲ್ಲಿ ಊಟ ಸಿಗದ ಕಾರಣ ತೊಂದ್ರೆ ಅನುಭವಿಸಬೇಕಾಗುತ್ತೆ. ತಡರಾತ್ರಿಯಾದರೆ ಆನ್‌ಲೈಡ್ ಫುಡ್ ಡೆಲಿವರಿ ಆಪ್‌ಗಳು ಸಹ ಆರ್ಡರ್ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಅದೆಷ್ಟೋ ಬಾರಿ ಉದ್ಯೋಗಿಗಳು ಹಸಿವಿನಿಂದಲೆ ಇರಬೇಕಾಗ್ತಿತ್ತು. ಆದ್ರೆ ಇನ್ಮುಂದೆ 24 ಗಂಟೆ ಹೋಟೆಲ್ ತೆರೆದಿರುವ ಕಾರಣ ಇಂಥಾ ತೊಂದರೆ ಇರುವುದಿಲ್ಲ. ಹೀಗಾಗಿ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡೋ ಅದೆಷ್ಟೋ ಉದ್ಯೋಗಿಗಳು ಸರ್ಕಾರದ ಹೊಸ ಪ್ರಕಟಣೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ ಹೋಟೆಲ್ ಸಂಘ
ಕೊರೊನಾ ಸಮಯದಲ್ಲಿ ಕೋವಿಡ್ ಕಾಲಗಟ್ಟದಲ್ಲಿ 1,500 ಕ್ಕೂ ಹೆಚ್ಚು ಹೋಟೆಲ್ ಬಂದ್ ಆಗಿದ್ದವು. ಇದೀಗ ಚೇತರಿಕೆ ಕಾಣ್ತಿದ್ದು, ಹೋಟೆಲ್ ಮಾಲೀಕರು ನಷ್ಟದಿಂದ ಲಾಭದೆಡೆಗೆ ಮುಖ ಮಾಡ್ತಿದ್ದಾರೆ. 24 ಗಂಟೆ ಹೋಟೆಲ್ ತೆರೆಯುವ ನಿರ್ಧಾರವನ್ನು ಹೋಟೆಲ್ ಮಾಲೀಕರ ಸಂಘ ಸ್ವಾಗತಿಸಿದೆ. ರಾತ್ರಿಯಿಡಿ ಹೋಟೆಲ್ಗಳನ್ನು ಓಪನ್ ಮಾಡಲು ಸಿಬ್ಬಂದಿಗಳು ತೊಂದರೆಯಾಗದಂತೆ ನಿಯಮಗಳನ್ನು ಮಾಡಲು ಸರ್ಕಾರ ಸಲಹೆ ನೀಡಿದೆ. ಹೀಗಾಗಿ ಹೋಟೆಲ್ಗಳಲ್ಲಿ ಕೆಲಸಗಾರರನ್ನು ರಾತ್ರಿ ಪಾಳಿಗೂ ನೇಮಕ ಮಾಡಲಾಗುತ್ತೆ. 24 ಗಂಟೆ ಹೋಟೆಲ್ ತೆರೆಯುವುದರಿಂದ ಹೋಟೆಲ್ ಮಾಲೀಕರು ಹಾಗೂ ಸಾರ್ವಜನಿಕರು ಇಬ್ಬರಿಗೂ ಅನುಕೂಲವಾಗಲಿದೆ.