ಬೆಂಗಳೂರಿನ ಈ ರೆಸ್ಟೋರೆಂಟ್‌ನಲ್ಲಿ ರಾಜಕೀಯ, ರಿಯಲ್ ಎಸ್ಟೇಟ್ ಮಾತನಾಡುವಂತಿಲ್ಲ

Published : Mar 06, 2025, 06:51 PM ISTUpdated : Mar 06, 2025, 07:32 PM IST
ಬೆಂಗಳೂರಿನ ಈ ರೆಸ್ಟೋರೆಂಟ್‌ನಲ್ಲಿ ರಾಜಕೀಯ, ರಿಯಲ್ ಎಸ್ಟೇಟ್ ಮಾತನಾಡುವಂತಿಲ್ಲ

ಸಾರಾಂಶ

ಬೆಂಗಳೂರಿನ ಈ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಬಗೆ ಬಗೆಯ ಆಹಾರ ಖಾದ್ಯಗಳನ್ನು ಸವಿಯಬಹುದು. ಆದರೆ ನೀವು ರಾಜಕೀಯ, ರಿಯಲ್ ಎಸ್ಟೇಟ್ ವಿಷಗಳ ಕುರಿತು ಮಾತನಾಡುವಂತಿಲ್ಲ. ಈ ಕುರಿತ ಖಡಕ್ ಸೂಚನೆಯನ್ನು ರೆಸ್ಟೋರೆಂಟ್ ನೀಡಿದೆ. ಅಷ್ಟಕ್ಕೂ ಈ ಸೂಚನೆ ನೀಡಿದ್ದೇಕೆ? ರೆಸ್ಟೋರೆಂಟ್ ಯಾವುದು?

ಬೆಂಗಳೂರು(ಮಾ.05) ಕೆಫೆ, ರೆಸ್ಟೋರೆಂಟ್‌ಗಳಲ್ಲಿ ಜನ ಹರಡೆ ಹೊಡೆಯುತ್ತಾ ಆಹಾರ ಸವಿಯುತ್ತಾರೆ. ಹಲವು ಕಫೆಗಳು ಹರಟೆ ಹೊಡೆಯಲು ಅವಕಾಶ ನೀಡುತ್ತದೆ. ನೀವು ಒಂದು ಕಾಫಿ ಆರ್ಡರ್ ಮಾಡಿ ಎಷ್ಟು ಹೊತ್ತು ಬೇಕಾದರೂ ಇರಬಹುದು. ಹಲವು ಮಾತುಗಳು, ಡೀಲ್ ಸೇರಿದಂತೆ ಮಹತ್ವದ ವಿಚಾರಗಳು ಈ ರೀತಿ ಕೆಫೆ, ರೆಸ್ಟೋರೆಂಟ್‌ಗಳಲ್ಲಿ ಚರ್ಚೆಯಾಗುತ್ತದೆ. ಆದರೆ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ಇದೀಗ ಮಹತ್ವದ ಸೂಚನೆ ನೀಡಿದೆ. ಈ ರೆಸ್ಟೋರೆಂಟ್‌ನಲ್ಲಿ ನೀವು ಆಹಾರ ಖಾದ್ಯಗಳನ್ನು ಸವಿಯುವಾಗ ರಾಜಕೀಯ, ರಿಯಲ್ ಎಸ್ಟೇಟ್ ಕುರಿತ ಮಾತನಾಡುವಂತಿಲ್ಲ. 

ಆಹಾರ ಸವಿಯಲು ರೆಸ್ಟೋರೆಂಟ್‌ಗೆ ಬಂದ ಮೇಲೆ ಉತ್ತಮ ಆಹಾರ ಸವಿದು ಖುಷಿಪಡಬೇಕು. ಆದರೆ ರಾಜಕೀಯ, ರಿಯಲ್ ಎಸ್ಟೇಟ್ ಸೇರಿದಂತೆ ಸುದೀರ್ಘ ಸಮಯ ಚರ್ಚೆಯಲ್ಲಿ ತೊಡಗಬೇಡಿ ಎಂದು ಸ್ಪಷ್ಟವಾಗಿ ಸೂಚನೆ ನೀಡಿದೆ. ಹೌದು, ಬೆಂಗಳೂರಿನಲ್ಲಿರುವ ಪಾಕಾಶಾಲ ರೆಸ್ಟೋರೆಂಟ್ ಈ ಸೂಚನೆಯನ್ನು ಹೊಟೆಲ್ ಒಳಗೆ ಹಾಕಿದೆ.  ಈ ಕುರಿತು ಗ್ರಾಹಕರೊಬ್ಬರು ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಚಾಕೋಲೇಟ್ ತಿನ್ನೋ ಸರಿಯಾದ ವಿಧಾನ ಹೇಗೆ? 92ರ ಅಜ್ಜ ಹೇಳಿಕೊಡ್ತಾರೆ ನೋಡಿ

ರೆಸ್ಟೋರೆಂಟ್‌ನಲ್ಲಿ ಹಾಕಿರುವ ಸೂಚನ ಫಲಕದ ಬೋರ್ಡ್ ಪೋಸ್ಟ್ ಮಾಡಲಾಗಿದೆ. ಈ ಬೋರ್ಡ್‌ನಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸೂಚನೆ ನೀಡಲಾಗಿದೆ. ಇಲ್ಲಿನ ಪೀಠೋಪಕರಣಗಳು ಉಟೋಪಚಾರಕ್ಕೆ ಮಾತ್ರ. ಭೂ ವ್ಯವಹಾರ, ರಾಜಕೀಯ ನಿಷ್ಕರ್ಷೆಗಳಿಗೆ ಅಲ್ಲ. ದಯವಿಟ್ಟು ಅರ್ಥ ಮಾಡಿಕೊಂಡು ಸಹಕರಿಸಿ ಎಂದು ಸೂಚನಾ ಫಲಕ ಹಾಕಲಾಗಿದೆ.

ಈ ಸೂಚನಾ ಫಲಕದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ರಾಜಕೀಯ, ರಿಯಲ್ ಎಸ್ಟೇಟ್ ಚರ್ಚೆಗಳನ್ನು ಮಾಡುವ ಜನ ಕನಿಷ್ಠ 3 ರಿಂದ 4 ಗಂಟೆ ಕುಳಿತಿರುತ್ತಾರೆ. ನಾಲ್ಕು ಕಾಫಿ ಆರ್ಡರ್ ಮಾಡಿ 4 ಗಂಟೆ ಕುಳಿತರೆ ರೆಸ್ಟೋರೆಂಟ್ ವ್ಯವಹಾರ ನಡೆಸುವುದು ಹೇಗೆ? ಆಹಾರ ಸವಿಯಲು ಬಂದ ಇತರ ಗ್ರಾಹಕರಿಗೂ ಸಮಸ್ಯೆಯಾಗಲಿದೆ. ಇಷ್ಟೇ ಅಲ್ಲ ಆಹಾರ ಸವಿಯಲು ಆಗಮಿಸಿದವರಿಗೆ ಸಮಸ್ಯೆಯಾಗಲಿದೆ. ಜೊತೆಗೆ ಆಹರಾ ಸವಿಯಲು ಕಾಯುವಂತೆ ಮಾಡಲಿದೆ. ಹೀಗಾಗಿ ಹೊಟೆಲ್ ಹಾಕಿದ ಸೂಚನಾ ಫಲಕ ಸರಿ ಎಂದು ಹಲವರು ಸಮರ್ಥಿಸಿದ್ದಾರೆ.

 

 

ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಜನರು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸವಿಯುವಾಗ ಆಹಾರ ಬೆಲೆ, ಸರ್ವೀಸ್, ಅಲ್ಲಿನ ವಾತಾವರಣ, ಸ್ಥಳ ಎಲ್ಲದಕ್ಕೂ ಪಾವತಿ ಮಾಡಿರುತ್ತಾರೆ. ಜನರು ಏನು ಮಾತನಾಡುತ್ತಿದ್ದಾರೆ ಎಂದು ಗಮನಿಸುವುದು, ಕೇಳಿಸಿಕೊಳ್ಳುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಪರ ವಿರೋಧಗಳು ಚರ್ಚೆಯಾಗುತ್ತಿದೆ. ಆದರೆ ಈ ಸೂಚನಾ ಫಲಕ ಮಾತ್ರ ಇದೀಗ ವೈರಲ್ ಆಗಿದೆ. ಯಾವುದೇ ರೆಸ್ಟೋರೆಂಟ್ ಈ ರೀತಿ ಮಾತನಾಡಬೇಡಿ ಎಂಬ ಸೂಚನಾ ಫಲಕಾ ಹಾಕಿದ ಉದಾಹರಣೆ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಈ ಸೂಚನಾ ಫಲಕ ದೇಶದಲ್ಲೇ ಸದ್ದು ಮಾಡುತ್ತಿದೆ.  


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ