
ಆಹಾರದ ಹೆಸರಿನಲ್ಲಿ ದಿನನಿತ್ಯವೂ ನಾವು ತಿನ್ನುತ್ತಿರುವುದು ವಿಷವೇ ಆಗಿದೆ ಎನ್ನುವ ಆಘಾತಕಾರಿ ಅಂಶವು ಬಯಲಾಗಿದೆ. ಆರೋಗ್ಯಕ್ಕೆ ಹಸಿರು ತರಕಾರಿ ತಿನ್ನಿ, ಸೊಪ್ಪು ತಿನ್ನಿ ಎನ್ನುತ್ತಾರೆ. ಆದರೆ ಇದನ್ನು ಬೆಳೆಯುವಾಗಲೇ ವಿಷಕಾರಕ ರಾಸಾಯನಿಕ ಸಿಂಪಡಣೆ ಮಾಡಲಾಗಿರುತ್ತದೆ. ಸೊಪ್ಪಿಗೆ ಹುಳು ಬೀಳಬಾರದು ಎನ್ನುವ ಕಾರಣಕ್ಕೆ ನೇರವಾಗಿ ಅದಕ್ಕೆ ಕೆಮಿಕಲ್ ಸ್ಪ್ರೇ ಮಾಡುತ್ತಾರೆ. ಗ್ರಾಹಕರಿಗೆ ಸುಂದರವಾಗಿ ಹಸಿರು ಹಸಿರಾಗಿ ಕಾಣಿಸಲಿ ಎನ್ನುವ ಕಾರಣಕ್ಕೆ ಹಸಿರು ಬಣ್ಣದ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತದೆ. ತರಕಾರಿಗಳೂ ಇದಕ್ಕೆ ಹೊರತಾಗಿಲ್ಲ. ಎಲೆಯೇ ಮುಖ್ಯವಾಗಿರುವ ಕೆಲವು ತರಕಾರಿಗಳಲ್ಲಿ ನೇರವಾಗಿಯೇ ವಿಷವನ್ನು ಅಡುಗೆ ಮನೆಗೆ ತರುತ್ತಿರುವುದು ಹೊಸ ವಿಷಯವೇನಲ್ಲ. ಮನೆಗೆ ಬಂದು ಸೊಪ್ಪು, ತರಕಾರಿ ತೊಳೆದಾಗ ಅವುಗಳ ಬಿಡುವ ಬಣ್ಣದ ಬಗ್ಗೆ ನೀವು ನೋಡೇ ಇರುತ್ತೀರಾ ಅಲ್ಲವೆ? ಇಂದು ಅಪಾರ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ಗೆ ಕೂಡ ಇದೇ ವಿಷ ಪ್ರಮುಖ ಅಂಶ ಎನ್ನುವುದು ತಿಳಿದಿದೆ.
ಇವೆಲ್ಲವುಗಳ ನಡುವೆಯೇ ಇದೀಗ ಮತ್ತಷ್ಟು ಆಘಾತಕಾರಿ ಅಂಶವೊಂದು ಆಹಾರ ಇಲಾಖೆ ನೀಡಿದೆ. ಹುರಿದ ಹಸಿರು ಬಟಾಣಿಗಳ ಮಾದರಿಗಳಲ್ಲಿ ನಿಷೇಧಿತ ಕೃತಕ ಬಣ್ಣ ಟಾರ್ಟ್ರಾಜಿನ್ ಪತ್ತೆಯಾಗಿದೆ. ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್‌ಡಿಎ) 114 ಹಸಿರು ಬಟಾಣಿಗಳ ಮಾದರಿ ಪಡೆದಿತ್ತು. ಅದರಲ್ಲಿ 64 ಪ್ಯಾಕೆಟ್ಗಳಲ್ಲಿ ಇದು ಪತ್ತೆಯಾಗಿವೆ. ಇದು ಪ್ಯಾಕೆಟ್ ಬಟಾಣಿ ಮಾತಾದರೆ, ಇನ್ನು ಅಂಗಡಿಯಲ್ಲಿ 10-20 ರೂಪಾಯಿಗೆ ಸಿಗುವ ಹಸಿ ಬಟಾಣಿಯನ್ನು ಮನೆಗೆ ತಂದಾಗ ಅದರಿಂದ ಹಸಿರು ಬಣ್ಣ ಬಿಡುವುದನ್ನು ನೋಡಿರುತ್ತೇವೆ. ಅದು ಕೂಡ ರಾಸಾಯನಿಕ ಸ್ಪ್ರೇ ಮಾಡಿರುವುದೇ ಆಗಿದೆ. ಇಷ್ಟೇ ಅಲ್ಲದೇ, ಈಗ ಬೇಸಿಗೆ ಕಾಲ. ಕಲ್ಲಂಗಡಿಗೆ ಸಕತ್ ಡಿಮಾಂಡ್. ಗ್ರಾಹಕರು ಕಲ್ಲಂಗಡಿಯನ್ನು ಕಟ್ ಮಾಡಿದಾಗ ಕೆಂಪಗೆ ಇದ್ದರೆ ಮಾತ್ರ ಖರೀದಿ ಮಾಡುವುದು ಸಹಜ. ಇದೇ ಕಾರಣಕ್ಕೆ ಅದಕ್ಕೂ ಇಂಜೆಕ್ಷನ್ ಮೂಲಕ ರಾಸಾಯನಿಕ ಸೇರಿಸುತ್ತಿರುವುದು ಕೂಡ ಬಹು ಹಿಂದಿನಿಂದಲೂ ನಡೆದುಬಂದಿದೆ.
ಜಾಹೀರಾತಿಗೆ ಮರುಳಾಗಿ ಅಪಾಯಕಾರಿ ಗೋಧಿಹಿಟ್ಟು ತರಬೇಡಿ! ಶುದ್ಧತೆ ಪರೀಕ್ಷೆಯ ಸಿಂಪಲ್ ವಿಡಿಯೋ ಇಲ್ಲಿದೆ ನೋಡಿ..
ಇದಾಗಲೇ ರಾಜ್ಯ ಸರ್ಕಾರ, ಜನರ ಆರೋಗ್ಯದ ದೃಷ್ಟಿಯಿಂದ ಗೋಬಿಗೆ ಬಳಸುವ ಬಣ್ಣ ಸೇರಿದಂತೆ ಕೆಲವೊಂದಕ್ಕೆ ನಿಷೇಧ ಹೇರಿದೆ. ಇಷ್ಟೇ ಅಲ್ಲದೇ, ಇಡ್ಲಿ ಮತ್ತು ಹೋಳಿಗೆ ಮಾಡುವ ಸಂದರ್ಭದಲ್ಲಿ ಕೆಲವು ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ನೋಡಿರಬಹುದು. ಇದು ಕೂಡ ವಿಷಕಾರಿ ಅಂಶ ಹೊಂದಿದೆ ಎನ್ನುವ ಮಾಹಿತಿಯೂ ಬಂದಿದೆ. ಅಷ್ಟೇ ಅಲ್ಲದೇ, ಸಕ್ಕರೆ ಆರೋಗ್ಯಕ್ಕೆ ಹಾನಿಕರ ಎನ್ನುವ ಕಾರಣಕ್ಕೆ ಬೆಲ್ಲಕ್ಕೆ ಡಿಮಾಂಡ್ ಜಾಸ್ತಿಯಾಗಿದೆ. ಆದರೆ ಆತಂಕಕಾರಿ ಅಂಶ ಏನೆಂದರೆ, ಬೆಲ್ಲದಲ್ಲಿ ಕೂಡ ರಾಸಾಯನಿಕದ ಬಳಕೆ ಆಗುತ್ತಿದೆ. ಇವೆಲ್ಲವೂ ಇಂದು-ನಿನ್ನೆ ಆಗುತ್ತಿರುವ ಕೃತ್ಯಗಳಲ್ಲಿ. ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಇದೀಗ ಅವು ಬೆಳಕಿಗೆ ಬರುತ್ತಿವೆಯಷ್ಟೇ
ಆಹಾರ ಇಲಾಖೆ ಪರೀಕ್ಷೆಯಲ್ಲಿ ಬೆಲ್ಲದ ಗುಣಮಟ್ಟ ಕಳಪೆ ಎನ್ನುವುದು ಕೂಡ ಖಚಿತವಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಬೆಲ್ಲದ ಸ್ಯಾಂಪಲ್ ಪಡೆದ ಆಹಾರ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಇದು ಸಾಬೀತಾಗಿದೆ. ಇದೇ ಫೆಬ್ರವರಿಯಲ್ಲಿ ಬೆಲ್ಲದ ಸ್ಯಾಂಪಲ್ ಪಡೆಯಲಾಗಿತ್ತು. ಆಹಾರ ಇಲಾಖೆ ಬೆಲ್ಲದ 600 ಕ್ಕೂ ಹೆಚ್ಚು ಸ್ಯಾಂಪಲ್ ಪಡೆದಿತ್ತು. ಆದರೆ ಇದರಲ್ಲಿ 200ಕ್ಕೂ ಅಧಿಕ ಸ್ಯಾಂಪಲ್ಗಳು ಅಪಾಯಕಾರಿ ಎನ್ನುವುದು ಸಾಬೀತಾಗಿದೆ. ಎಲ್ಲವೂ ವಿಷವೇ ತುಂಬಿರುವಾಗ ಏನು ತಿಂದು ಬದುಕಬೇಕು ಎನ್ನುವುದು ಈಗ ದೊಡ್ಡ ಪ್ರಶ್ನೆಯಾಗಿದೆ. ಹೀಗೆ ಕಲಬೆರಕೆ ಮಾಡುವವರ ವಿರುದ್ಧ ಕ್ರಮವೊಂದೇ ಇದಕ್ಕಿರುವ ದಾರಿ ಎನ್ನುವ ಜನರ ಅಭಿಮತ.
ಶಂಖಪುಷ್ಪದ ರೈಸ್ ಮಾಡಿದ್ದೀರಾ? ಆಹಾ! ಸವಿದು ನೋಡಿ ಘಮಘಮಿಸುವ ನೀಲಿ ಅನ್ನದ ಈ ಪರಿ ರುಚಿಯ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.