
ಬೆಂಗಳೂರು (ಆ.16): ಆನ್‌ಲೈನ್ ಫುಡ್ ಡೆಲಿವರಿ ಫ್ಲಾಟ್‌ಫಾರ್ಮ್ ಸ್ವಿಗ್ಗಿ 2014ರ ಆಗಸ್ಟ್ 14ರಂದು ಲಾಂಚ್ ಆಗಿತ್ತು. ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಕಂಪನಿಗೆ ಈಗ 10 ವರ್ಷದ ಸಂಭ್ರಮ. ಪ್ರತಿ ವರ್ಷದ ಆಗಸ್ಟ್ ತಿಂಗಳನ್ನು ಸ್ವಿಗ್ಗಿ ಬರ್ತ್‌ಡೇ ಮಂತ್ ಆಗಿ ಆಚರಣೆ ಮಾಡುತ್ತದೆ. ಈ ವೇಳೆ ಕಂಪನಿ ಸಾಕಷ್ಟು ರುಚಿಯಾದ ಆಹಾರಗಳನ್ನು ಸ್ಪೆಷಲ್ ಪ್ರೈಸ್‌ನಲ್ಲಿ ತನ್ನ ಗ್ರಾಹಕರಿಗೆ ನೀಡುತ್ತದೆ. ಬರೀದ 19 ರೂಪಾಯಿಯಿಂದ ಇದರ ಆರಂಭವಾಗುತ್ತದೆ. ಕ್ರೇಜಿ ಡೀಲ್ಸ್ ಎನ್ನುವ ಟೈಟಲ್‌ನಲ್ಲಿ ಈ ಆಫರ್‌ಗಳನ್ನು ನೀಡುವ ಸ್ವಿಗ್ಗಿ ಇಡೀ ಆಗಸ್ಟ್ ತಿಂಗಳಲ್ಲಿ ಇದನ್ನು ಚಾಲ್ತಿಯಲ್ಲಿ ಇಡುತ್ತದೆ.ಕಂಪನಿಯು ಟ್ಯಾಗ್‌ಲೈನ್ ಅನ್ನು 'ಕ್ರೇಜಿ ಡೀಲ್ಸ್ ಗೆಟ್ ಕ್ರೇಜಿಯರ್, ಬಿಕಾಜ್ ಇಟ್ಸ್ ಅವರ್ ಬರ್ತ್‌ಡೇ ಮಂತ್' ಎಂದು ಉಲ್ಲೇಖಿಸಿದೆ. ಈ ಆಫರ್‌ಗಳು ಯಾವುದೂ ದುಬಾರಿಯಲ್ಲ, ಗ್ರಾಹಕರ ಜೇಬು ಕೂಡ ಸುಡೋದಿಲ್ಲ. ಸ್ವಿಗ್ಗಿಯ ಜನ್ಮದಿನದ ಸಂಭ್ರಮವನ್ನು ಗ್ರಾಹಕರು ತಮ್ಮ ನೆಚ್ಚಿನ ಫುಡ್‌ಅನ್ನು ಸೇವಿಸುವ ಮೂಲಕ ಆಚರಣೆ ಮಾಡಬಹುದಾಗಿದೆ. ಬಾಯಲ್ಲಿ ನೀರೂರಿಸುವ ಬಿರಿಯಾನಿಯಿಂದ ಫ್ಲೇವರ್ ಆಗಿರುವ ಮೊಮೋಸ್‌ವರೆಗೆ , ಕ್ರಿಸ್ಪಿ ಸ್ನ್ಯಾಕ್ಸ್‌ನಿಂದ ಡೆಲಿಕೇಟ್ ಡೆಸಾರ್ಟ್‌ವರೆಗೆ ಸ್ವಿಗ್ಗಿಯಲ್ಲಿ ಜಸ್ಟ್ 19 ರೂಪಾಯಿಗೆ ನಿಮಗೆ ಎಲ್ಲವೂ ಲಭ್ಯವಿದೆ.
ಈ ಡೀಲ್‌ನಲ್ಲಿ ಕಂಪನಿ ವಿವಿಧ ರೀತಿಯ ಫುಡ್ ಐಟಮ್‌ಗಳನ್ನು ಆಫರ್ ಮಾಡುತ್ತಿದೆ. ಇದರಲ್ಲಿ ಸೌತ್ ಇಂಡಿಯನ್ ಫುಡ್ ಕೂಡ ಸೇರಿದ್ದು, ಇದಕ್ಕೆ ಕೇವಲ 79 ರೂಪಾಯಿ ಆಗಿದೆ. ಕೇವಲ 89 ರೂಪಾಯಿಗೆ ಬರ್ಗರ್ ಸಿಗುತ್ತದೆ. ಕೇಕ್ ಹಾಗೂ ಡೆಸಾರ್ಟ್‌ಗಳು ಕೇವಲ 19 ರೂಪಾಯಿ. ಸ್ನ್ಯಾಕ್ಸ್‌ಗಳು 49 ರೂಪಾಯಿ, ಕಾಂಬೋಸ್‌ಗಳು ಬರೀ 99 ರೂಪಾಯಿಯಲ್ಲಿ ಲಭ್ಯವಿರುತ್ತದೆ.
ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಯೊಂದು ತಮ್ಮ ಆಫರ್‌ಅನ್ನು ಹೇಗೆ ಬಳಸಿಕೊಂಡಿದ್ದಾರೆ ಅನ್ನೋದನ್ನೂ ಕೂಡ ಸ್ವಿಗ್ಗಿ ಟ್ವೀಟ್ ಮಾಡಿದೆ. ಈ ಆಫರ್‌ಅನ್ನು ಬಳಸಿಕೊಂಡು ನಿಶ್ಚಿತಾರ್ಥಕ್ಕೆ ಬಂದ ಎಲ್ಲರಿಗೂ ಊಟ ನೀಡಲಾಗಿರುವ ಪೋಸ್ಟ್‌ಅನ್ನು ಹಂಚಿಕೊಂಡಿದೆ.
ಈ ಆಫರ್‌ಅನ್ನು ಪಡೆಯಲು ಗ್ರಾಹಕರು, Swiggy ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ, ಅವರ ಆದ್ಯತೆಯ ಖಾದ್ಯವನ್ನು ಆಯ್ಕೆ ಮಾಡಿ ಮತ್ತು ಚೆಕ್‌ಔಟ್ ಸಮಯದಲ್ಲಿ ಆದ್ಯತೆಯ ಪ್ರೋಮೋ ಕೋಡ್ ಅನ್ನು ಬಳಸಬೇಕಾಗುತ್ತದೆ. ಆಯ್ದ ರೆಸ್ಟೋರೆಂಟ್‌ಗಳು ಮತ್ತು ಫುಡ್‌ಗಳ ಪ್ರಕಾರ ಆಫರ್‌ಗಳು ವಿಭಿನ್ನವಾಗಿರುವುದರಿಂದ ವಿವರಗಳಿಗಾಗಿ ಅಪ್ಲಿಕೇಶನ್ ಅನ್ನು ಪರಿಶೀಲಿಸಲು ಗ್ರಾಹಕರಿಗೆ ಸಲಹೆ ನೀಡಲಾಗುತ್ತದೆ.
ದೇಶದಲ್ಲಿ ಗರಿಷ್ಠ ಆರ್ಡರ್ ಮಾಡುವ ಫುಡ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಮಟನ್ ಬಿರಿಯಾನಿ!
ಕಳೆದ ತಿಂಗಳು, ಕಂಪನಿಯು ನಿಮ್ಮ ಪ್ರೀತಿಪಾತ್ರರೊಂದಿಗೆ ಫುಡ್‌ಗಳು ಮತ್ತು ರೆಸ್ಟೋರೆಂಟ್‌ಗಳ ಕ್ಯುರೇಟೆಡ್ ಪಟ್ಟಿಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು 'ಈಟ್‌ಲಿಸ್ಟ್‌ಗಳು' ವೈಶಿಷ್ಟ್ಯವನ್ನು ಪರಿಚಯಿಸಿತು. ಕಂಪನಿಯು ಇದನ್ನು ಆಹಾರ ವಿತರಣೆಯಲ್ಲಿ ಜಾಗತಿಕ-ಮೊದಲ ವೈಶಿಷ್ಟ್ಯವೆಂದು ಉಲ್ಲೇಖಿಸಿದೆ ಮತ್ತು ಇದು 'ಆಹಾರ ಉತ್ಸಾಹಿಗಳಿಗೆ ತಮ್ಮ ನೆಚ್ಚಿನ ಫುಡ್‌ಗಳನ್ನು ನೇರವಾಗಿ ಸ್ವಿಗ್ಗಿ ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಅಧಿಕಾರ ನೀಡುತ್ತದೆ' ಎಂದು ಹೇಳಿದೆ. 2014 ರಲ್ಲಿ ಸ್ಥಾಪನೆಯಾದ Swiggy ಪ್ರತಿ ತಿಂಗಳು ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ವೇದಿಕೆಯು 600+ ನಗರಗಳಲ್ಲಿ ಸುಮಾರು 2 ಲಕ್ಷ ರೆಸ್ಟೋರೆಂಟ್‌ಗಳೊಂದಿಗೆ ಸಹಕರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.