ಸೌದಿ ಜೆರ್ಸಿ ಕಿತ್ತೆಸೆದು ಪೋಲೆಂಡ್ ಪರ ಸಂಭ್ರಮ: ಪುಟ್ಬಾಲ್ ಅಭಿಮಾನಿಯೊಬ್ಬನ ಕಿತಾಪತಿ ವೈರಲ್

By Anusha KbFirst Published Nov 27, 2022, 8:51 PM IST
Highlights

ಈಗ ಜಗತ್ತಿನಾದ್ಯಂತ ಫುಟ್ಬಾಲ್ ಜ್ವರ ಬಿಸಿಯೇರಿಸಿದ್ದು, ಪುಟ್ಬಾಲ್ ಅಭಿಮಾನಿಯೊಬ್ಬನ ಕಿತಾಪತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಕ್ಕು ನಗಿಸುತ್ತಿದ್ದು, ವೈರಲ್ ಆಗಿದೆ. 

ಕ್ರೀಡೆ ಯಾವುದೇ ಇರಲಿ ಮೈದಾನದಲ್ಲಿ ಕ್ರೀಡಾಳುಗಳು ತಮ್ಮ ರೋಚಕ ಆಟದ ಮೂಲಕ ಮನೋರಂಜನೆ ನೀಡಿದರೆ ಇತ್ತ ಸ್ಟೇಡಿಯಂನ ಗ್ಯಾಲರಿಯಲ್ಲಿ ಕ್ರೀಡಾಭಿಮಾನಿಗಳು ತಮ್ಮದೇ ರೀತಿಯಲ್ಲಿ ಮನೋರಂಜನೆ ನೀಡುತ್ತಾರೆ. ಈಗ ಜಗತ್ತಿನಾದ್ಯಂತ ಫುಟ್ಬಾಲ್ ಜ್ವರ ಬಿಸಿಯೇರಿಸಿದ್ದು, ಪುಟ್ಬಾಲ್ ಅಭಿಮಾನಿಯೊಬ್ಬನ ಕಿತಾಪತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಕ್ಕು ನಗಿಸುತ್ತಿದ್ದು, ವೈರಲ್ ಆಗಿದೆ. 

ನಿನ್ನೆ ಫಿಫಾ ವಿಶ್ವಕಪ್‌ 2022ರಲ್ಲಿ  ಪೋಲೆಂಡ್ (Poland) ತಂಡ ಸೌದಿ ಅರೇಬಿಯಾ (Saudi Arabia) ವಿರುದ್ಧ ತುಂಬಾ ಉತ್ತಮ ಪ್ರದರ್ಶನ ನೀಡಿತ್ತು. ಅತಿಥೇಯ ಸೌದಿ ವಿರುದ್ಧ ರಾಬರ್ಟ್ ಲೆವಾಂಡೋವ್ಸ್ಕಿ (Robert Lewandowski) ಅವರ ನೇತೃತ್ವದ ತಂಡ 2-0 ಅಂತರ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲೇ ಲೆವಾಂಡೋವ್ಸ್ಕಿ ಈ ವಿಶ್ವಕಪ್‌ನ ಮೊದಲ ಗೋಲು ಬಾರಿಸಿ ತುಸು ಹೆಚ್ಚೆ ಭಾವುಕರಾಗಿದ್ದರು. 34 ವರ್ಷದ ಸ್ಟಾರ್ ಆಟಗಾರ ಲೆವಾಂಡೋವ್ಸ್ಕಿ ಮೆಕ್ಸಿಕೋ (Mexico) ವಿರುದ್ಧ ಪೆನಾಲ್ಟಿ(Penalty) ತಪ್ಪಿಸಿಕೊಂಡಿದ್ದರು ಹೀಗಾಗಿ ಅವರು ತಮ್ಮ ಮೊದಲ ಗೋಲು ಬಾರಿಸಲು ತುಸು ಹೆಚ್ಚೆ ಕಾಯಬೇಕಾಗಿತ್ತು. ಆದರೆ ತಮಾಷೆಯ ವಿಚಾರ ಏನೆಂದರೆ ಇತ್ತ ರಾಬರ್ಟ್ ಲೆವಾಂಡೋವ್ಸ್ಕಿ ಅವರು ಮೊದಲ ಗೋಲು ಬಾರಿಸುತ್ತಿದ್ದಂತೆ ಸೌದಿ ಅರೇಬಿಯಾದ ಅಭಿಮಾನಿಯೊಬ್ಬ ಕೂಡಲೇ ತಾನು ಸೌದಿ ಅರೇಬಿಯಾ ಪರ ಧರಿಸಿದ ಜೆರ್ಸಿ ಬದಲಾಯಿಸಿ ಪೋಲ್ಯಾಂಡ್ ತಂಡದ ಬಣ್ಣದ ಜೆರ್ಸಿ ಧರಿಸಿ ವಿಶ್ವಕಪ್ ವೀಕ್ಷಕರಿಗೆ ಬಿಟ್ಟಿ ಮನೋರಂಜನೆ ನೀಡಿದರು. ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆಯೂ ಕೆಲ ಅಭಿಮಾನಿಗಳು ಹೀಗೆ ಮಾಡಿದ ಉದಾಹರಣೆ ಇದೆ.

pic.twitter.com/3Ug8Sl4gaX

— Out Of Context Football (@nocontextfooty)

 

ರಾಬರ್ಟ್ ಲೆವಾಂಡೋವ್ಸ್ಕಿ ಗೋಲು ಬಾರಿಸುತ್ತಿದ್ದಂತೆ ತಾವು ಧರಿಸಿದ ಸೌದಿ ಅರೇಬಿಯಾ (Saudi Arabia) ಜೆರ್ಸಿಯನ್ನು ಕೂಡಲೇ ಕಿತ್ತೆಸೆದ ಅಭಿಮಾನಿ ಪೋಲ್ಯಾಂಡ್ ತಂಡ ಪ್ರತಿನಿಧಿಸುವ ಬಣ್ಣದ ಜೆರ್ಸಿ ತೊಟ್ಟು ಮಿಂಚಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗುತ್ತಿದೆ. ಸೌದಿ ಪರ ಇದ್ದ ಜೆರ್ಸಿ ಕಿತ್ತೆಸೆದು ಪೋಲ್ಯಾಂಡ್ ಪರ ಅಭಿಮಾನಿ ಡಾನ್ಸ್ ಮಾಡಿದ ಸಂಭ್ರಮಿಸುತ್ತಿರುವ ವಿಡಿಯೋ ಕ್ರೀಡಾಪ್ರಿಯರನ್ನು ರಂಜಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ರಾಬರ್ಟ್ ಲೆವಾಂಡೋವ್ಸ್ಕಿ ತಮ್ಮ ಮೊದಲ ವರ್ಲ್ಡ್ ಕಪ್ ಗೋಲು ಬಾರಿಸಿದ ಬಳಿಕ ಸೌದಿ ಅರೇಬಿಯಾ ವಿರುದ್ಧ ಪೋಲೆಂಡ್ (Poland) ತಂಡ 2-0 ಅಂತರದ ಗೆಲುವು ದಾಖಲಿಸಿತು. 

FIFA World Cup: ಜರ್ಮನಿ vs ಸ್ಪೇನ್‌ ದೈತ್ಯರ ಕಾಳಗ

ಒಟ್ಟಿನಲ್ಲಿ ಮ್ಯಾಚ್ ನೋಡಲು ಎರೆಡರಡು ಜೆರ್ಸಿ ಧರಿಸಿ ಬರುವ ಅಭಿಮಾನಿಗಳು ತಾವು ಧರಿಸಿದ ಜೆರ್ಸಿಯ ತಂಡ ಸೋಲುತ್ತಿದ್ದಂತೆ ಅದನ್ನು ಕಿತ್ತೆಸೆದು ಗೆದ್ದ ತಂಡದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ತಂಡ ಯಾವುದಾದರೇನೂ ಒಟ್ಟಿನಲ್ಲಿ ಆ ಕ್ಷಣ ಖುಷಿ ಪಡಬೇಕು ಎಂಬುದಷ್ಟೇ ಇವರ ನಿಯಮ. Out Of Context Football ಎಂಬ ಟ್ವಿಟ್ಟರ್ ಪೇಜ್‌ನಿಂದ 18 ಸೆಕೆಂಡ್‌ಗಳ ಈ ವಿಡಿಯೋ ಅಪ್‌ಲೋಡ್ ಆಗಿದ್ದು, 6 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.ಕೆಲವರು ವಿಡಿಯೋಗೆ ಕಾಮೆಂಟ್ ಮಾಡಿದ್ದು, ಈತ ಗೋಸುಂಬೆಗಿಂತಲೂ ವೇಗವಾಗಿ ಬಣ್ಣ ಬದಲಿಸಿದ್ದಾನೆ ಎಂದು ಗೋಸುಂಬೆ ಫೋಟೋ ಹಾಕಿ ಟ್ರೋಲ್ ಮಾಡಿದ್ದಾರೆ. ಕೆಲವರು ಇದನ್ನು ಗಂಭಿರವಾಗಿ ತೆಗೆದುಕೊಂಡಿದ್ದು, ಇದು ಒಳ್ಳೆಯವ ವಿಚಾರವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಆದರೆ ಈ ವಿಡಿಯೋ ಪರಿಸ್ಥಿತಿ ಹೇಗೆಯೇ ಇರಲಿ ಸದಾ ಖುಷಿಯಾಗಿರಿ ಎಂಬುದನ್ನು ಹೇಳುತ್ತಿರುವುದಂತು ನಿಜ. 

FIFA World Cup: ಮೆಸ್ಸಿ ಅದ್ಭುತ ಗೋಲ್‌ಗೆ ಶರಣಾದ ಮೆಕ್ಸಿಕೊ.! ಅರ್ಜೆಂಟೀನಾ ನಾಕೌಟ್ ಕನಸು ಜೀವಂತ

click me!