ಫುಟ್ಬಾಲ್ ಕ್ರೇಜ್‌ನಲ್ಲಿರುವ ಖ್ಯಾತ ಬಾಣಸಿಗರೊಬ್ಬರು ಚಾಕೋಲೇಟ್‌ನಿಂದ ಪೊಸ್ಬಾಲ್(Foosball) ಟೇಬಲ್ ನಿರ್ಮಿಸಿದ್ದು, ಆ ನಿರ್ಮಾಣ ಕಾರ್ಯದ ವಿಡಿಯೋ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರಸ್ತುತ ಜಗತ್ತಿನಾದ್ಯಂತ ಪುಟ್ಭಾಲ್ ಜ್ವರ ಜೋರಾಗಿದ್ದು, ಖತಾರ್‌ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌ನತ್ತ ಎಲ್ಲರ ಗಮನ ನೆಟ್ಟಿದೆ. ಕೆಲವು ಪ್ರಸಿದ್ಧ ಆಟಗಾರರು ಹಾಗೂ ತಂಡಗಳು ಫಿಪಾ ವಿಶ್ವಕಪ್ ಟ್ರೋಫಿ ಹಿಡಿದೆತ್ತಲು ರೋಚಕವಾಗಿ ಆಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಆಗುಹೋಗುಗಳತ್ತ ಜನ ಅತ್ಯುತ್ಸಾಹದಿಂದ ನೋಡುತ್ತಿದ್ದಾರೆ. ಈ ಬಾರಿಯ ಪುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯೂ ಹಲವು ಆಸಕ್ತಿದಾಯಕ ಪ್ರಥಮಗಳಿಗೆ ಕಾರಣವಾಯ್ತು, ಮೊದಲನೇಯದಾಗಿ ಮೈದಾನಕ್ಕೆ ಬಿಯರ್ ಬಾಟಲ್‌ನ್ನು ನಿಷೇಧಿಸಲಾಗಿತ್ತು. ಇದು ಅನೇಕ ಬಿಯರ್ ಪ್ರಿಯ ಪುಟ್ಬಾಲ್ ಪ್ರೇಮಿಗಳ ಬೇಸರಕ್ಕೆ ಕಾರಣವಾಯ್ತು. ಈ ಮಧ್ಯೆ ಫುಟ್ಬಾಲ್ ಕ್ರೇಜ್‌ನಲ್ಲಿರುವ ಖ್ಯಾತ ಬಾಣಸಿಗರೊಬ್ಬರು ಚಾಕೋಲೇಟ್‌ನಿಂದ ಪೊಸ್ಬಾಲ್(Foosball) ಟೇಬಲ್ ನಿರ್ಮಿಸಿದ್ದು, ಆ ನಿರ್ಮಾಣ ಕಾರ್ಯದ ವಿಡಿಯೋ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಖ್ಯಾತ ಪೇಸ್ಟಿ ಬಾಣಸಿಗ ಅಮೌರಿ ಗುಯಿಚಾನ್ (Amaury Guichon) ಈ ಪೊಸ್ಬಾಲ್ ಕೋರ್ಟ್ ನಿರ್ಮಿಸಿದ್ದು, ಇದನ್ನು ಟೇಬಲ್ ಫುಟ್ಬಾಲ್ ಎಂದು ಕೂಡ ಕರೆಯುತ್ತಾರೆ. ಅವರೇ ತಮ್ಮ ಇನ್ಸ್ಟಾಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರ ಮೇಕಿಂಗ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು 16 ಮಿಲಿಯನ್‌ಗೂ ಹೆಚ್ಚು ಜನ ವೀಕ್ದಿಸಿದ್ದಾರೆ. ಇದೊಂದು ಪುಟ್ಬಾಲ್ ಕೋರ್ಟ್‌ನ ಮಿನಿಯೇಚರ್ (miniature) ರೀತಿ ಕಾಣಿಸುತ್ತಿದೆ. ಇದರಲ್ಲಿ ಕ್ರೀಡಾಪಟುಗಳು ಗೋಲ್ ಸ್ಕೋರ್ ಮಾಡಿ ಪಾಯಿಂಟ್ ಗಳಿಸಲು ಮೆಟಲ್ ರಾಡ್‌ನ ಸಹಾಯದಿಂದ ಈ ಟೇಬಲ್‌ನಲ್ಲಿ ಅತ್ತಿತ್ತ ಸಾಗುತ್ತಾರೆ.
ಚಾಕೋಲೇಟ್ ನೀಡಿದ ಯೋಧರಿಗೆ ಮಕ್ಕಳ ಖಡಕ್ ಸೆಲ್ಯೂಟ್: ಪುಟಾಣಿಗಳ ವಿಡಿಯೋ ವೈರಲ್
ಪೇಸ್ಟ್ರಿ ಬಾಣಸಿಗ ಅಮೌರಿ ಗುಯಿಚಾನ್ ಈ ಪುಸ್ಬಾಲ್ ಟೇಬಲ್ ತಯಾರಿಸಿದ್ದು ಇದು ಸಂಪೂರ್ಣವಾಗಿ ಚಾಕೋಲೇಟ್‌ನಿಂದ ಕೂಡಿದೆ. ಮೊದಲಿಗೆ ಅವರು ಟೇಬಲ್‌ನ ಕೆಳಭಾಗವನ್ನು ದೊಡ್ಡದಾದ ಚಾಕೋಲೇಟ್ (chocolate) ಸ್ಲ್ಯಾಬ್‌ನಿಂದ ತಯಾರಿಸಿ ಅದಕ್ಕೆ ತಿನ್ನಬಹುದಾದ ಬಣ್ಣಗಳಿಂದ ಪೇಂಟ್ ಮಾಡಿದ್ದಾರೆ. ಈ ಟೇವಲ್ ತಯಾರಿಕೆಯ ಪ್ರತಿ ಹಂತವನ್ನು ಅವರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಸಂಪೂರ್ಣ ಚಾಕೋಲೇಟ್‌ನಿಂದ ತಯಾರಿಸಿದ ಈ ವಿಡಿಯೋವಂತೂ ನೋಡಲು ತುಂಬಾ ಸೊಗಸಾಗಿದೆ. ಈ ವಿಡಿಯೋ ನೋಡಿದ ಅನೇಕರು ಈ ಅದ್ಭುತ ಕಲಾಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಅಮೌರಿ ಗುಯಿಚಾನ್ ಅವರ ಕಲಾತ್ಮಕತೆಯನ್ನು ಹೊಗಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ.
ವೈಟ್ ಚಾಕೋಲೇಟ್ ತಿನ್ನಿ, ಇದರಿಂದ ಎಷ್ಟು ಲಾಭಗಳಿವೆ ನೋಡಬನ್ನಿ..!