ಸದಾ ಪ್ರೀತಿಸುವ, ಗೌರವಿಸುವ, ಕಾಳಜಿವಹಿಸುವ ಪತಿ ಬೇಕೆಂದು ಎಲ್ಲ ಹೆಣ್ಮಕ್ಕಳೂ ಬಯಸ್ತಾರೆ. ಆದ್ರೆ ಎಲ್ಲರಿಗೂ ಅಂತ ಪತಿ ಸಿಗೋದಿಲ್ಲ. ಈ ಎಲ್ಲ ಗುಣಗಳಿರುವ ಪತಿ ಸಿಗ್ಬೇಕೆಂದ್ರೆ ಪತಿಯಾಗುವವನ ಹೆಸರೂ ಇಲ್ಲಿ ಮಹತ್ವ ಪಡೆಯುತ್ತದೆ. ಹುಡುಗ್ರ ಹೆಸರು ಕೇಳಿಯೇ ನೀವು ಅವ್ರ ಸ್ವಭಾವ ನಿರ್ಧರಿಸಬಹುದು.
ಜ್ಯೋತಿಷ್ಯ (Astrology )ದಲ್ಲಿ ವ್ಯಕ್ತಿಯ ಬಗ್ಗೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಜಾತಕ ನೋಡಿ ಜನರ ಭವಿಷ್ಯದ ಬಗ್ಗೆ ಹೇಳ್ಬಹುದು. ಹಾಗೆ ವ್ಯಕ್ತಿಯ ಹೆಸರಿ (Name) ನಿಂದಲೂ ಆತನ ಸ್ವಭಾವ (Nature) ತಿಳಿಯಬಹುದು. ಅನೇಕರು ಹೆಸರಿನಲ್ಲೇನಿದೆ ಎಂಬ ಪ್ರಶ್ನೆ ಮಾಡ್ತಾರೆ. ಅಯ್ಯೋ ಯಾವುದೋ ಒಂದು ಹೆಸರಿಡಿ ಅಂತಾ ಹೇಳುವವರೂ ಇದ್ದಾರೆ. ಆದ್ರೆ ಹೆಸರು, ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರಬೇಕು. ಹೆಸರು, ವ್ಯಕ್ತಿಯ ವ್ಯಕ್ತಿತ್ವವನ್ನು ತೋರಿಸುತ್ತದೆ. ನಿಮ್ಮ ಹೆಸರಿನ ಮೂಲಕವೇ ನಿಮ್ಮ ಗುಣ-ದೋಷಗಳನ್ನು ತಿಳಿಯಬಹುದು. ಮದುವೆಯಾಗುವ ಪ್ಲಾನ್ ನಲ್ಲಿದ್ದು, ಹುಡುಗನ ಹುಡುಕಾಟ ನಡೆಸ್ತಿದ್ದರೆ, ಹುಡುಗನ ಹೆಸರಿಗೂ ಮಹತ್ವ ನೀಡಿ. ಕೆಲ ಅಕ್ಷರದ ಹುಡುಗರು ತುಂಬಾ ಪ್ರೀತಿ ನೀಡ್ತಾರೆ. ಮತ್ತೆ ಕೆಲ ಅಕ್ಷರದ ಹುಡುಗರು ಪತ್ನಿಯನ್ನು ರಾಣಿಯಂತೆ ನೋಡಿಕೊಳ್ತಾರೆ. ಇನ್ನು ಕೆಲ ಅಕ್ಷರದ ಹುಡುಗರನ್ನು ಮದುವೆಯಾದರೆ ಹುಡುಗಿಯರಿಗೆ ನರಕ ದರ್ಶನವಾಗುತ್ತದೆ. ಹಾಗಾಗಿ, ಮದುವೆಯಾಗುವ ಮೊದಲು, ಹೆಸರು ಹಾಗೂ ಆ ಹೆಸರಿನ ಹುಡುಗರ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದಿರಿ. ಇಂದು ಯಾವ ಹೆಸರಿನ ಹುಡುಗರು ಹೆಚ್ಚು ಪ್ರೀತಿ, ಕಾಳಜಿ ನೀಡ್ತಾರೆ ಎಂಬುದನ್ನು ನಾವು ಹೇಳ್ತೇವೆ.
ಹೆಚ್ಚು ಪ್ರೀತಿ ನೀಡ್ತಾರೆ ಈ ಹೆಸರಿನ ಹುಡುಗರು :
ಎ ಹೆಸರಿನ ಹುಡುಗರು : ನಿಮ್ಮ ಪತಿ (Husband) ಹೆಸರು ಎ ಅಕ್ಷರದಿಂದ ಬರ್ತಿದ್ದರೆ ನೀವು ಖುಷಿಯಾಗಿ. ಯಾಕೆಂದ್ರೆ ಎ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗರು ತಮ್ಮ ಹೆಂಡತಿಯನ್ನು(Wife) ತುಂಬಾ ಪ್ರೀತಿಸುತ್ತಾರೆ. ಪತ್ನಿ ಅಥವಾ ಸಂಗಾತಿಯ ಭಾವನೆಯನ್ನು ಹೃತ್ಪೂರ್ವಕವಾಗಿ ಗೌರವಿಸುತ್ತಾರೆ. ಇದಲ್ಲದೆ ಸಂಗಾತಿ ಜೊತೆ ಸುಮಧುರ ಸಂಬಂಧವನ್ನು ಬಲಪಡಿಸಿಕೊಳ್ಳಲು ಎ ಹೆಸರಿನ ಹುಡುಗರು, ಸ್ವತಃ ಸಂಗಾತಿಗೆ ತಲೆಬಾಗುತ್ತಾರೆ. ಎ ಹೆಸರಿನ ಹುಡುಗರಿಗೆ ಸಂಬಂಧಗಳ ಪ್ರಾಮುಖ್ಯತೆ ಬಹಳಷ್ಟು ಅರ್ಥವಾಗಿರುತ್ತದೆ. ಪತ್ನಿಯಾದವಳಿಗೆ ಗೌರವ, ಪ್ರೀತಿ ನೀಡುವ ಎ ಹೆಸರಿನ ಹುಡುಗರ ಒಳ್ಳೆ ಅಭ್ಯಾಸದಿಂದಾಗಿ ಅವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಜೂನ್‌ನಲ್ಲಿ ಐದು ಗ್ರಹ ಸಂಕ್ರಮಣ; ಎಲ್ಲ ರಾಶಿಗಳ ಮೇಲೂ ಪರಿಣಾಮ
ಡಿ ಹೆಸರಿನ ಹುಡುಗರು : ಡಿ ಹೆಸರಿನ ಹುಡುಗರು ಸ್ವಭಾವತಃ ಕಾಳಜಿಯುಳ್ಳವರಾಗಿರುತ್ತಾರೆ. ಅವರು ತನ್ನ ಹೆಂಡತಿಯನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅವರು ಜೀವನದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಪತ್ನಿಯ ಅಭಿಪ್ರಾಯ ಕೇಳ್ತಾರೆ. ಹಾಗೆಯೇ ಪತ್ನಿಯ ಸಲಹೆಯನ್ನು ಪರಿಗಣಿಸಿ ಅದರಂತೆ ನಡೆದುಕೊಳ್ತಾರೆ. ಹೆಂಡತಿ ಸದಾ ಸಂತೋಷವಾಗಿರಬೇಕೆಂಧು ಅವರು ಬಯಸ್ತಾರೆ. ಇದೇ ಕಾರಣಕ್ಕೆ ತಮ್ಮ ಕೈಲಾದಷ್ಟನ್ನು ಮಾಡ್ತಾರೆ.
ಕೆ ಅಕ್ಷರ ಹೆಸರಿನ ಹುಡುಗರು : ಕೆ ಹೆಸರಿನ ಹುಡುಗರು ಸ್ವಭಾವದಲ್ಲಿ ಕಾಳಜಿಯುಳ್ಳವರಾಗಿರುತ್ತಾರೆ. ಯಾವುದೇ ಸಂಕಷ್ಟದ ಸಂದರ್ಭ ಬಂದರೂ ಅವರು ಪತ್ನಿಯ ಕೈ ಬಿಡುವುದಿಲ್ಲ. ಸದಾ ಪತ್ನಿ ಜೊತೆ ನಿಲ್ಲುತ್ತಾರೆ. ಯಾವುದೇ ಪರಿಸ್ಥಿತಿಯಲ್ಲೂ ಸಂಗಾತಿಯನ್ನು ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಹೆಂಡತಿಯ ಭಾವನೆಗಳನ್ನು ಕೆ ಹೆಸರಿನ ಹುಡುಗರು ಸದಾ ಗೌರವಿಸುತ್ತಾರೆ. ಹೆಂಡತಿಗಾಗಿ, ಆಕೆ ಖುಷಿಗಾಗಿ ಯಾರೊಂದಿಗೆ ಬೇಕಾದ್ರೂ ಜಗಳವಾಡಲು ಅವರು ಸಿದ್ಧವಾಗಿರುತ್ತಾರೆ.
ನಿಕಟ ಸಂಬಂಧದಲ್ಲಿ ಜಗಳಗಳಾಗ್ತಿದ್ರೆ ಈ ಗ್ರಹಗಳೇ ಕಾರಣ.. ನೀವೇನು ಮಾಡಬೇಕು?
ಆರ್ ಅಕ್ಷರದ ಹುಡುಗರು : ಜ್ಯೋತಿಷ್ಯದ ಪ್ರಕಾರ ಆರ್ ಹೆಸರಿನ ಹುಡುಗರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಈ ಹುಡುಗರು ತಮ್ಮ ಸಂಗಾತಿ ಮೇಲೆ ತುಂಬಾ ಕಾಳಜಿ ಹೊಂದಿರುತ್ತಾರೆ. ಸದಾ ಹೆಂಡತಿಯ ಆರೈಕೆ ಮಾಡಲು ಸಿದ್ಧವಿರ್ತಾರೆ. ಆದ್ರೆ ಎಂದೂ ತಾನು, ಹೆಂಡತಿಯನ್ನು ಪ್ರೀತಿಸ್ತೇನೆ, ಆಕೆಯ ಬಗ್ಗೆ ಕಾಳಜಿವಹಿಸ್ತೇನೆ ಎಂಬುದನ್ನು ತೋರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗೆಯೇ ತೋರ್ಪಡಿಕೆ ಜನರು ಅವರಿಗೆ ಇಷ್ಟವಾಗುವುದಿಲ್ಲ. ಆರ್ ಅಕ್ಷರದ ಹುಡುಗರು ಪ್ರವಾಸವನ್ನು ಹೆಚ್ಚು ಇಷ್ಟಪಡ್ತಾರೆ. ಸಂಗಾತಿ ಜೊತೆ ಪ್ರಯಾಣ ಬೆಳೆಸುವುದು ಅವರಿಗೆ ಇಷ್ಟವಾಗುತ್ತದೆ.