
ಭೋಲೇಶಂಕರನನ್ನು ದೇವರುಗಳ ದೇವರು, ಮಹಾದೇವ ಎಂದು ಕರೆಯಲಾಗುತ್ತದೆ. ಆತನನ್ನು ಮೆಚ್ಚಿಸುವುದು ಸುಲಭ. ಭಕ್ತಿಯಿಂದ ನೀರನ್ನು ಅರ್ಪಿಸಿದರೂ ಆತ ಸಂತೋಷಗೊಳ್ಳುತ್ತಾನೆ. ಸೋಮವಾರವನ್ನು ಶಿವ(Lord Shiva)ನಿಗೆ ಸಮರ್ಪಿಸಲಾಗಿದೆ. ಈ ದಿನ, ಶಿವನನ್ನು ಪೂಜಿಸುವ ಮೂಲಕ, ಆತನ ಸ್ಮರಣೆಯಲ್ಲಿ ಕಳೆಯುವುದರಿಂದ ಅವನು ಸಂತುಷ್ಟನಾಗಿ, ಭಕ್ತರ ಮೇಲೆ ಅನುಗ್ರಹವನ್ನು ನೀಡುತ್ತಾನೆ. ಶಿವಲಿಂಗದ ಮೇಲೆ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ಶಿವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಆದರೆ ಕೆಲವು ವಸ್ತುಗಳನ್ನು ಮರೆತ ನಂತರವೂ ಶಿವನಿಗೆ ಅರ್ಪಿಸಬಾರದು.
ಕೇವಲ ಸೋಮವಾರ(Monday)ವಲ್ಲ, ವಾರದ ಯಾವುದೇ ದಿನ ಶಿವಲಿಂಗವನ್ನು ಪೂಜಿಸುವಾಗಲೂ ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಕೆಲ ವಸ್ತುಗಳನ್ನು ಕಂಡರೆ ಶಿವನಿಗೆ ಆಗುವುದಿಲ್ಲ. ಅವುಗಳನ್ನು ಶಿವನ ಪೂಜೆಯಲ್ಲಿ ಬಳಸುವುದರಿಂದ ಆತ ಕೋಪಗೊಳ್ಳುತ್ತಾನೆ ಎಂಬ ನಂಬಿಕೆ ಇದೆ.
ಶಿವಲಿಂಗದ ಮೇಲೆ ಈ ವಸ್ತುಗಳನ್ನು ಅರ್ಪಿಸಬೇಡಿ
ಅರಿಶಿನ(Turmeric): ಹಿಂದೂ ಧರ್ಮದಲ್ಲಿ ಪ್ರತಿ ಪೂಜೆ ಅಥವಾ ಆಚರಣೆಗಳಲ್ಲಿ ಅರಿಶಿನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆದರೆ ಶಿವಲಿಂಗದ ಪೂಜೆಯಲ್ಲಿ ಅರಿಶಿನದ ಬಳಕೆ ಬೇಡ. ಧಾರ್ಮಿಕ ಗ್ರಂಥಗಳ ಪ್ರಕಾರ, ಶಿವಲಿಂಗವು ಪುರುಷ ಅಂಶದ ಸಂಕೇತವಾಗಿದೆ. ಮತ್ತು ಅರಿಶಿನವನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸಿದರೆ, ಚಂದ್ರನು ದುರ್ಬಲನಾಗುತ್ತಾನೆ ಎಂದು ನಂಬಲಾಗಿದೆ.
ಕುಂಕುಮ(Kumkum): ಕುಂಕುಮ ಮತ್ತು ಸಿಂಧೂರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಎಲ್ಲ ಪೂಜೆಗಳಲ್ಲೂ ಬಳಸಲಾಗುತ್ತದೆ. ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಕುಂಕುಮ ಅಥವಾ ಸಿಂಧೂರವನ್ನು ಹಚ್ಚುತ್ತಾರೆ. ಅಲ್ಲದೆ, ಕೆಲವರು ಬೇರೆಲ್ಲ ದೇವರಿಗೆ ಬಳಸಿದಂತೆ ಶಿವಲಿಂಗಕ್ಕೆ ಕೂಡಾ ಸಿಂಧೂರವನ್ನು ಅರ್ಪಿಸುತ್ತಾರೆ. ಆದರೆ ಮರೆತೂ ಶಿವಲಿಂಗಕ್ಕೆ ಸಿಂಧೂರವನ್ನು ಅರ್ಪಿಸಬೇಡಿ ಎಂದು ಶಿವ ಪುರಾಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಜೂನ್‌ನಲ್ಲಿ ಐದು ಗ್ರಹ ಸಂಕ್ರಮಣ; ಎಲ್ಲ ರಾಶಿಗಳ ಮೇಲೂ ಪರಿಣಾಮ
ತುಳಸಿ(Tulsi): ತುಳಸಿ ಎಲೆಗಳನ್ನು ಹಿಂದೂ ಧರ್ಮದಲ್ಲಿ ಅನೇಕ ದೇವತೆಗಳಿಗೆ ಪೂಜೆಯ ಸಮಯದಲ್ಲಿ ಅರ್ಪಿಸಲಾಗುತ್ತದೆ. ಆದರೆ ಶಿವಲಿಂಗಕ್ಕೆ ತುಳಸಿ ಎಲೆಗಳನ್ನು ಅರ್ಪಿಸಬೇಡಿ. ಪುರಾಣಗಳ ಪ್ರಕಾರ, ಶಿವನು ತುಳಸಿಯ ಪತಿ ಶಂಖಚೂರ್ಯಣನನ್ನು ಕೊಂದನು. ಅಂದಿನಿಂದ ತುಳಸಿಗೂ ಶಿವನಿಗೂ ಆಗುವುದಿಲ್ಲ. ಹೀಗಾಗಿ, ಶಿವನಿಗೆ ತುಳಸಿ ಅರ್ಪಿಸುವಂತಿಲ್ಲ.
ಕೆಂಪು ಹೂವುಗಳು(Red flowers): ಪೂಜೆಯ ಸಮಯದಲ್ಲಿಯೂ ಶಂಕರನಿಗೆ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬೇಡಿ. ಕೆಂಪು ಬಣ್ಣದ ಯಾವುದೇ ಪದಾರ್ಥದ ಬಳಕೆಯೂ ಬೇಡ. ಅದರಲ್ಲೂ ಕೆಂಪು ದಾಸವಾಳವನ್ನು ಶಿವನಿಗೆ ಅರ್ಪಿಸಬಾರದು.
ಕೇದಿಗೆ ಹೂವು(Ketaki Flower): ಪೂಜೆಯಲ್ಲಿ ಹೂವುಗಳನ್ನು ಬಳಸುವುದು ಶ್ರೇಷ್ಠವೆಂಬುದು ನಿಜವೇ. ಆದರೆ, ಕೇದಿಗೆ ಹೂವು ಶಿವನಿಂದ ಶಾಪಗ್ರಸ್ಥವಾಗಿದೆ. ಅದನ್ನು ಆತನ ಪೂಜೆಯಲ್ಲಿ ಬಳಸಬಾರದು.
ತೆಂಗಿನ ನೀರು(Coconut water): ತೆಂಗಿನ ಕಾಯಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅಭಿಷೇಕದ ಸಮಯದಲ್ಲಿ ಶಿವನಿಗೆ ತೆಂಗಿನ ನೀರನ್ನು ಅರ್ಪಿಸಬೇಡಿ. ಇದರೊಂದಿಗೆ ಶಿವಲಿಂಗದ ಮೇಲೆ ಅರ್ಪಿಸಿದ ವಸ್ತುಗಳನ್ನು ಪ್ರಸಾದವೆಂದು ಸ್ವೀಕರಿಸುವುದನ್ನು ಕೂಡಾ ನಿಷೇಧಿಸಲಾಗಿದೆ.
ಪತಿಯ ಪ್ರಾಣಕ್ಕಾಗಿ ಯಮನೊಂದಿಗೇ ಹೋರಾಡಿದ ಮಹಾನ್ ಸತಿ ಸಾವಿತ್ರಿ
ಶಂಖ(Conch): ಶಿವ ಪೂಜೆಯಲ್ಲಿ ಎಂದಿಗೂ ಶಂಖದ ಬಳಕೆ ಮಾಡುವಂತಿಲ್ಲ. ಬಹಳಷ್ಟು ಜನರು ಶಿವನಿಗೆ ಶಂಖ ಬಳಸಿ ಜಲಾಭಿಷೇಕ ಮಾಡುತ್ತಾರೆ. ಶಿವನು ಶಂಖಚೂರ್ಣನೆಂಬ ರಾಕ್ಷಸನನ್ನು ಸಂಹರಿಸುತ್ತಾನೆ. ಈ ರಾಕ್ಷಸನ ಪತ್ನಿಯೇ ತುಳಸಿ. ಹಾಗಾಗಿ, ಶಂಖದ ಬಳಕೆ ಮಾಡುವುದಿಲ್ಲ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.