Vat Savitri Puja 2022: ಮಹಿಳೆಯರು ಆಲದ ಮರಕ್ಕೆ ಪೂಜಿಸೋದರ ಹಿಂದಿದೆ ವಿಶೇಷ ಕಾರಣ..

Published : May 30, 2022, 02:36 PM IST
Vat Savitri Puja 2022: ಮಹಿಳೆಯರು ಆಲದ ಮರಕ್ಕೆ ಪೂಜಿಸೋದರ ಹಿಂದಿದೆ ವಿಶೇಷ ಕಾರಣ..

ಸಾರಾಂಶ

ವಟ ಸಾವಿತ್ರಿ ಪೂಜೆಯಂದು ಮಹಿಳೆಯರು ಆಲದ ಮರಕ್ಕೆ ಪೂಜಿಸುವುದು ಗೊತ್ತೇ ಇದೆ. ಆದರೆ, ಈ ವ್ರತಕ್ಕೂ, ಆಲದ ಮರಕ್ಕೂ ಇರುವ ವಿಶಿಷ್ಠ ಸಂಬಂಧ ಏನು ಬಲ್ಲಿರಾ?

ತನ್ನ ಪತಿ ಸತ್ಯವಾನ(Satyavan)ನ ಪ್ರಾಣ ಉಳಿಸುವಂತೆ ಯಮನೊಂದಿಗೆ ಸಾವಿತ್ರಿ(Savitri) ಹೋರಾಡಿದ ದಿನ, ಅಂದರೆ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಅಮಾವಾಸ್ಯೆಯಂದು ವಟ ಸಾವಿತ್ರಿ ವ್ರತ(Vat Savitri Vrat) ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಪತಿಯ ಧೀರ್ಘಾಯಸ್ಸಿಗಾಗಿ ಬೇಡಿ ವ್ರತ ಆಚರಣೆ ಮಾಡುತ್ತಾರೆ. ಈ ವರ್ಷ ಈ ದಿನಾಂಕವು ಬಹಳ ಮಹತ್ವದ್ದಾಗಿದೆ. ಏಕೆಂದರೆ ಹಲವು ವರ್ಷಗಳ ನಂತರ, ಸೋಮಾವತಿ ಅಮವಾಸ್ಯೆ(Somavati Amavasye)ಯ ಶುಭ ದಿನದಂದೇ ವಟ ಸಾವಿತ್ರಿ ವ್ರತ ಬರುತ್ತಿದೆ. ಅಂದರೆ ಈ ಕಾಕತಾಳೀಯ ಮೇ 30ರಂದು ಸಂಭವಿಸುತ್ತಿದೆ. ಸೋಮಾವತಿ ಅಮವಾಸ್ಯೆಯ ದಿನ ಮಾಡುವ ಉಪವಾಸ, ಪೂಜೆ-ಪುನಸ್ಕಾರ, ಸ್ನಾನ ಮತ್ತು ದಾನ ಇತ್ಯಾದಿಗಳು ಅಕ್ಷಯ ಫಲ ನೀಡುತ್ತದೆ.

ಮಹಿಳೆಯರು ಈ ದಿನ ಉಪವಾಸವಿದ್ದು, ವಿಶೇಷ ಪೂಜಾ ಸಾಮಗ್ರಿಗಳನ್ನು ಬಳಸಿ ಆಲದ ಮರ(Banyan tree)ವನ್ನು ಪೂಜಿಸುತ್ತಾರೆ. ಆಲದ ಮರ(Banyan tree)ಕ್ಕೆ ಪ್ರದಕ್ಷಿಣೆ ಹಾಕುವ ಮಹಿಳೆಯರು ಅದರ ಸುತ್ತಲೂ ಕೆಂಪು ದಾರ(Kalava)ವನ್ನು ಕಟ್ಟುತ್ತಾರೆ. ಈ ದಿನ ಆಲದ ಮರವನ್ನು ಪೂಜಿಸುವುದು ಬಹಳ ಮಹತ್ವ ಹೊಂದಿದೆ. ಈ ದಿನ ವ್ರತವನ್ನು ಆಚರಿಸುವುದರಿಂದ ಮತ್ತು ಆಲದ ಮರವನ್ನು ಪೂಜಿಸುವುದರಿಂದ ತಮ್ಮ ಗಂಡನ ಆಯುಷ್ಯವು ದೀರ್ಘವಾಗಿರುತ್ತದೆ ಎಂದು ನಂಬಲಾಗಿದೆ. ಅಲ್ಲದೆ ವೈವಾಹಿಕ ಜೀವನ(married life) ಸುಖಮಯವಾಗಿರುತ್ತದೆ. ಹೀಗೆ ಮಹಿಳೆಯರು ಆಲದ ಮರವನ್ನು ಪೂಜಿಸುವುದರ ಹಿಂದಿದೆ ವಿಶಿಷ್ಠ ಕಾರಣ. ಅದೇನು ನೋಡೋಣ. 

ಆಲದ ಮರ
ವಟ ಸಾವಿತ್ರಿ ಉಪವಾಸ(Fast)ದ ದಿನದಂದು ಆಲದ ಮರವನ್ನು ಪೂಜಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ವಿಷ್ಣು(Lord Vishnu)ವು ಆಲದ ಮರದ ಕಾಂಡದಲ್ಲಿ, ಬ್ರಹ್ಮನು ಬೇರುಗಳಲ್ಲಿ ಮತ್ತು ಶಿವನು ಕೊಂಬೆಗಳಲ್ಲಿ ನೆಲೆಸಿದ್ದಾನೆ. ಈ ದಿನದಂದು ಆಲದ ಮರವನ್ನು ಪೂಜಿಸುವ ಜೊತೆಗೆ ವಿಷ್ಣು ಮತ್ತು ಲಕ್ಷ್ಮೀದೇವಿಯನ್ನೂ ಪೂಜಿಸಬೇಕು. ಇದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಮತ್ತು ಅಖಂಡ ಅದೃಷ್ಟ(Luck)ವನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ಆಲದ ಮರವನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ.

ಪತಿಯ ಪ್ರಾಣಕ್ಕಾಗಿ ಯಮನೊಂದಿಗೇ ಹೋರಾಡಿದ ಮಹಾನ್ ಸತಿ ಸಾವಿತ್ರಿ

ಆಲದ ಮರದ ಕೆಳಗೆ ಸಾವಿತ್ರಿಯ ಗಂಡನ ಮರುಜನ್ಮ!
ಆಲದ ಮರದಲ್ಲಿ ಬ್ರಹ್ಮ-ವಿಷ್ಣು-ಮಹೇಶ್ವರರ ವಾಸಸ್ಥಾನದ ಹೊರತಾಗಿ ಮತ್ತೊಂದು ಪ್ರಮುಖ ಘಟನೆ ಈ ದಿನಕ್ಕೆ ಸಂಬಂಧಿಸಿದುದಿದೆ. ಧಾರ್ಮಿಕ ಪುರಾಣಗಳ ಪ್ರಕಾರ, ಆಲದ ಮರದ ಕೆಳಗೆ ಸಾವಿತ್ರಿ ದೇವಿಯು ತನ್ನ ಪತಿಯನ್ನು ಪುನರುಜ್ಜೀವನಗೊಳಿಸಿದಳು. 

Monday Remedies: ತಪ್ಪಿಯೂ ಶಿವಲಿಂಗಕ್ಕೆ ಈ ವಸ್ತುಗಳನ್ನು ಅರ್ಪಿಸಬೇಡಿ!

ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಸಾವಿತ್ರಿ ದೇವಿಯು ಪತಿಯೊಡನೆ ಕಾಡಿಗೆ ಕಟ್ಟಿಗೆ ತರಲು ಹೋದಾಗ, ಅಲ್ಲಿ ಆತ ಸುಸ್ತಾಗಿ ಆಲದ ಮರದ ಕೆಳಗೆ ಸಾವಿತ್ರಿಯ ಮಡಿಲಲ್ಲಿ ಪ್ರಾಣ ಬಿಡುತ್ತಾನೆ. ಆಗಲೇ ಸಾವಿತ್ರಿ ಯಮನೊಂದಿಗೆ ಹೋರಾಡುವುದು. ಮತ್ತು ಪತಿಯ ಪ್ರಾಣವನ್ನು ಮರಳಿ ತರುವುದು. ಆಲದ ಮರದ ಕೆಳಗಿದ್ದ ಸತ್ಯವಾನನ ಜೀವ ಮರಳಿ ಬರುತ್ತದೆ. ಆದ್ದರಿಂದ ಮಹಿಳೆಯರು ಈ ಸಾವಿತ್ರಿ ವ್ರತದಂದು ಆಲದ ಮರಕ್ಕೂ ಪೂಜಿಸುತ್ತಾರೆ. ಇದಲ್ಲದೆ, ಜೈನ ತೀರ್ಥಂಕರ ರಿಷಭದೇವ್ ಕೂಡ ಅಕ್ಷಯ ವಟದ ಅಡಿಗೆ ತಪಸ್ಸು ಮಾಡಿದ್ದರು. ಪ್ರಯಾಗದಲ್ಲಿರುವ ಈ ಸ್ಥಳವನ್ನು ಭಗವಾನ್ ರಿಷಭದೇವ(Rishabdev)ನ ತಪಸ್ಥಳ ಎಂದು ಕರೆಯಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!