Sadesath: 2022ರಲ್ಲಿ ಶನಿರಾಶಿಯ ಪ್ರಭಾವ ಯಾರ ಮೇಲೆ? ಯಾರಿಗೆ ಕಷ್ಟ, ಯಾರಿಗೆ ಶುಭ ಫಲ?

By Suvarna News  |  First Published Dec 23, 2021, 2:16 PM IST

ಶನಿಯು ಮುಂದಿನ ವರ್ಷ ಏಪ್ರಿಲ್‌ನಲ್ಲಿ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಯಾರ ಮೇಲೆ ಏನು ಪ್ರಭಾವ ಆಗುತ್ತದೆ? ಇಲ್ಲಿ ತಿಳಿಯೋಣ.


ಶನಿಗ್ರಹ (Saturn) ನಿಧಾನವಾಗಿ ಚಲಿಸುತ್ತಾನೆ. ಹೀಗಾಗಿ ಜಾತಕನಿಗೆ ಬಹುಕಾಲ ಒಳ್ಳೆಯ- ಕೆಟ್ಟ ಫಲಗಳನ್ನು ನೀಡುತ್ತಾನೆ. ಜ್ಯೋತಿಷ್ಯದಲ್ಲಿ ಶನಿಯು ನ್ಯಾಯದ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹವು ನಿಧಾನವಾಗಿ ಚಲಿಸುವುದರಿಂದ ಸಾಡೇಸಾತಿಯ ಸಮಯದಲ್ಲಿ ಜಾತಕನ ಮನೆಯಲ್ಲಿ ಏಳುವರೆ ವರ್ಷಗಳವರೆಗೆ ಇರುತ್ತಾನೆ. ಈ ಸಮಯದಲ್ಲಿ, ನಿಮ್ಮ ಕಾರ್ಯಗಳಿಗೆ ನೀವು ಎಷ್ಟೇ ಶ್ರಮಿಸಿದರೂ, ಅದರ ಫಲಿತಾಂಶವು ನಿಮಗೆ ಸಿಗುವುದಿಲ್ಲ. 2022ರ ಏಪ್ರಿಲ್ 29ರಂದು ಶನಿಯು ಮಕರದಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಈ ಕೆಳಗಿನ ನಾಲ್ಕು ರಾಶಿಗಳು ಸಾಡೇಸಾತಿಯ ಪ್ರಭಾವಕ್ಕೊಳಗಾಗುತ್ತದೆ.

​ಮಕರ ರಾಶಿ (Capricorn)

Tap to resize

Latest Videos

undefined

ಈ ರಾಶಿಯು ಸಂಪೂರ್ಣವಾಗಿ ಸಾಡೇಸಾತಿಯ ಪ್ರಭಾವಕ್ಕೆ ಒಳಗಾಗುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಎಲ್ಲಾ ಕೆಲಸಗಳು ನಿಧಾನವಾಗಿ ನಡೆಯುತ್ತವೆ. ಆದರೆ, ನೀವು ಕಷ್ಟಪಟ್ಟು ಕೆಲಸ ಮಾಡಬೇಕಾದ ಸಮಯ ಇದು. ಹಾಗೇ ಹೆಚ್ಚು ತಾಳ್ಮೆಯಿಂದಿರಿ. ಶನಿಯು ಮಕರ ರಾಶಿಯ ಅಧಿಪತಿಯೇ ಆಗಿರುವುದರಿಂದ, ಸರಿಯಾದ ನಿರ್ಣಯವನ್ನು ಹೊಂದಲು ಗ್ರಹವು ನಿಮ್ಮನ್ನು ಪ್ರೇರೇಪಿಸುತ್ತದೆ.

2022 Happy year ಆಗ್ಬೇಕಂದ್ರೆ ಈ ರಾಶಿಯವರು ಹೀಗ್ ಮಾಡ್ಲೇಬಾರ್ದು...

ಕುಂಭ ರಾಶಿ (Aquarius)

ಕುಂಭ ರಾಶಿಯವರಿಗೂ ಸಾಡೇಸಾತಿಯ ಪ್ರಭಾವ ಇರುತ್ತದೆ. ಆದಾಗ್ಯೂ, ಕುಂಭ ರಾಶಿಯನ್ನು ಶನಿಯ ತ್ರಿಕೋನ ರಾಶಿ ಎಂದು ಕರೆಯಲಾಗುತ್ತದೆ. ಆದ್ದರಿಂದ, ಜಾತಕದವರನ್ನು ಶನಿಯು ಕುಂಭ ರಾಶಿಯಲ್ಲಿದ್ದಾಗ ತನ್ನ ಕೋಪದಿಂದ ರಕ್ಷಿಸಬಹುದು. ಆದರೆ ಈ ಸಮಯದಲ್ಲಿ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ತಾಳ್ಮೆಯಿಂದ ಅರ್ಥ ಮಾಡಿಕೊಂಡು ನಡೆಯಬೇಕು. ಕೆಲವೊಮ್ಮೆ ನೀವು ತಾಳ್ಮೆ ಕಳೆದುಕೊಳ್ಳುವ ಪ್ರಸಂಗ ಬರಬಹುದು.

​ಮೀನ ರಾಶಿ (Pisces)

ಮೀನ ರಾಶಿಯವರಿಗೆ, ಶನಿಗ್ರಹದ ರಾಶಿ ಬದಲಾವಣೆಯೊಂದಿಗೆ ಸಾಡೇಸಾತಿ ಪ್ರಾರಂಭವಾಗುತ್ತದೆ. ಇದು ನಿಮಗೆ ಕೆಲವು ಮಾನಸಿಕ ಒತ್ತಡ ಮತ್ತು ಅನಗತ್ಯ ಭಯವನ್ನು ತರಬಹುದು. ನಿಮ್ಮ ಯೋಜನೆಗಳು ಬಹುತೇಕ ಈಡೇರಿದರೂ ಫಲಿತಾಂಶವನ್ನು ಪಡೆಯುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಆದರೆ, ನಿಮ್ಮ ಕೆಲಸದಲ್ಲಿ ದೃಢನಿಶ್ಚಯದಿಂದಿರಿ, ನಿಧಾನವಾಗಿಯಾದರೂ ನೀವು ಪ್ರಯೋಜನಗಳನ್ನು ಪಡೆಯಬಹುದು.

Personality Traits: ಲವ್ವಲ್ಲಿದ್ದಾಗ ಈ ರಾಶಿಯ ವೀಕ್ನೆಸ್ ಏನ್ ಗೊತ್ತಾ?

​ವೃಶ್ಚಿಕ ರಾಶಿ (Scorpio)

ಶನಿಯು ಕುಂಭ ರಾಶಿಯನ್ನು ಪ್ರವೇಶಿಸುವರೆಗೂ ವೃಶ್ಚಿಕ ರಾಶಿಯ ಜಾತಕರು 2022ರಲ್ಲಿ ಸಾಡೇಸಾತಿಯ ಕೊನೆಯ ಹಂತವನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ ನೀವು ಸೋಮಾರಿತನವನ್ನು ಅನುಭವಿಸಬಹುದು. ಆದಾಗ್ಯೂ, ಏಪ್ರಿಲ್‌ನಿಂದ ಜುಲೈವರೆಗೆ ಸಮಯವು ನಿಮಗೆ ಉತ್ತಮವಾಗಿ ಕಾಣುತ್ತದೆ. ಜುಲೈ ನಂತರ, ನೀವು ಸಾಕಷ್ಟು ತಾಳ್ಮೆ ಹೊಂದಿಲ್ಲದಿದ್ದರೆ ಅನಗತ್ಯ ವಿವಾದಗಳಿಗೆ ಒಳಗಾಗಬಹುದು.

ನಾಲ್ಕು ರಾಶಿಗಳಿಗೆ ಶನಿ ದೆಸೆ

2022ರಲ್ಲಿ ಶನಿ ದೆಸೆಗೆ ಒಳಗಾಗುವ ನಾಲ್ಕು ರಾಶಿಗಳು ಯಾವುದೆಂದರೆ ತುಲಾ, ಕಟಕ, ಮಿಥುನ ಮತ್ತು ವೃಶ್ಚಿಕ. ಶನಿ ದೆಸೆಯು ಈ ನಾಲ್ಕು ರಾಶಿಗಳ ಜೀವನವನ್ನು ಅಸ್ತವ್ಯಸ್ತಗೊಳಿಸುವ ಸಾಧ್ಯತೆಯಿದೆ. ಆದರೆ ಈ ಮೇಲೆ ಹೇಳಿದಂತೆ, ಶನಿಯು ನ್ಯಾಯದ ಗ್ರಹವಾಗಿದೆ. ಆದ್ದರಿಂದ, ಇದು ಕಷ್ಟಪಟ್ಟು ಕೆಲಸ ಮಾಡುವ ಮತ್ತು ಪ್ರಾಮಾಣಿಕರಾಗಿರುವ ಜನರನ್ನು ಬೆಂಬಲಿಸಬಹುದು. ಆದ್ದರಿಂದ, ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡಿ, ಮತ್ತು ಶನಿಯು ನಿಮಗೆ ಯಶಸ್ಸನ್ನು ನೀಡಬಹುದು.

click me!