
ಕಳೆದೆರಡು ವರ್ಷಗಳನ್ನು ಕೊರೋನಾ ನುಂಗಿ ಹಾಕಿದೆ. ಆದರೆ, ಹೊಸ ವರ್ಷ ಹಾಗಿರೋಲ್ಲ ಎಂಬ ಧನಾತ್ಮಕತೆ(positivity)ಯಿಂದ ಎದುರುಗೊಳ್ಳೋಣ. ಪ್ರತಿ ವರ್ಷಾರಂಭದಲ್ಲಿ ಆ ವರ್ಷ ಏನೆಲ್ಲ ಮಾಡಬೇಕೆಂಬ ರೆಸೊಲ್ಯೂಶನ್(Resolution) ಎಲ್ಲರೂ ತಯಾರಿಸಿಕೊಂಡಿರುತ್ತಾರೆ. ಆದರೆ, ಏನು ಮಾಡಬಾರದು ಎಂದು ಯೋಚಿಸೋರು ಕಡಿಮೆ. ರಾಶಿಗನುಗುಣವಾಗಿ 2022ರಲ್ಲಿ ನೀವೇನು ಮಾಡದಿದ್ರೆ ನಿಮ್ಮ ವ್ಯಕ್ತಿತ್ವ ಹಾಗೂ ಜೀವನ ಚೆನ್ನಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಮೇಷ(Aries): ನಿಮ್ಮ ಹಳೆಯ ಜೀವನ, ನೆನಪುಗಳು ಹಾಗೂ ಮಾಡಿದ ತಪ್ಪುಗಳು(mistakes) ನಿಮ್ಮನ್ನು ಮುಂದಕ್ಕೆ ಹೋಗದಂತೆ ಮಾಡಲು ಬಿಡಬೇಡಿ. ಆ ಎಲ್ಲ ಅನುಭವಗಳಿಂದ ಕಲಿತಿದ್ದನ್ನು ಮಾತ್ರ ತೆಗೆದುಕೊಂಡು ಮುಂದೆ ಹೋದರೆ ಯಶಸ್ಸು ಹಾಗೂ ತೃಪ್ತಿ ನಿಮ್ಮದಾಗುವುದು.
ವೃಷಭ(Taurus): ನಿಮ್ಮ ಆತಂಕ, ಭಯ, ಗೊಂದಲಗಳು ನಿಮ್ಮ ಯಶಸ್ಸಿನ ದಾರಿಗೆ ಅಡ್ಡಿಯಾಗಲು ಬಿಡಬೇಡಿ. ಮಿತಿ(limitation) ಹಾಕಿಕೊಂಡು ಬದುಕಬೇಡಿ. ಮಿತಿಗಳನ್ನು ಮೀರುವ ಪ್ರಯತ್ನವಾಗಿ ಹೊಸ ಹೊಸ ವಿಷಯಗಳನ್ನು ಕಲಿಯಿರಿ, ಹೊಸತಕ್ಕೆ ಮುನ್ನುಗ್ಗಿ. ಸುಲಭದ ಆಯ್ಕೆಗೆ ಸೆಟಲ್ ಆಗದಿರಿ.
ಮಿಥುನ(Gemini): ಮತ್ತೆ ಹಿಂದಿನಂತೆ ಜಂಕ್ ತಿಂದುಕೊಂಡು ಸೋಮಾರಿಯಾಗಿರಬೇಡಿ. ಹೆಚ್ಚು ಆರೋಗ್ಯಕರ ಜೀವನಶೈಲಿ(lifestyle)ಗೆ ನಿಮ್ಮನ್ನು ತಳ್ಳಿ ನೋಡಿ. ಪ್ರತಿ ದಿನ ವ್ಯಾಯಾಮ, ಹಿತಾಹಾರ ತಪ್ಪಿಸದೆ ಆರೋಗ್ಯ ಕಾಯ್ದುಕೊಂಡರೆ ನಿಮ್ಮ ಯಶಸ್ಸನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಕಟಕ(Cancer): ಅವಕಾಶಗಳನ್ನು(oppurtunities) ಕೈ ಚೆಲ್ಲುವ ಅಭ್ಯಾಸ ಬಿಡಿ. ಭಯ ಇಲ್ಲವೇ ದುರಾಸೆ ಕಾರಣಕ್ಕೆ ಒಳ್ಳೆಯ ಅವಕಾಶಗಳಿಗೆ ನೋ ಎನ್ನದಿರಿ. ಮೊದಲು ನಿಮ್ಮ ಬಗ್ಗೆ ನೀವು ಸರಿಯಾಗಿ ಅರಿತುಕೊಳ್ಳಿ. ನಂತರ 2022ರಲ್ಲಿ ಬೀಸುವ ಬದಲಾವಣೆಯ ಗಾಳಿಯನ್ನು ಧನಾತ್ಮಕವಾಗಿ ಸ್ವೀಕರಿಸಿ.
Personality Traits: ಲವ್ವಲ್ಲಿದ್ದಾಗ ಈ ರಾಶಿಯ ವೀಕ್ನೆಸ್ ಏನ್ ಗೊತ್ತಾ?
ಸಿಂಹ(Leo): ತಾಳ್ಮೆಯಿರಲಿ, ಮಾಡಿದ್ದೆಲ್ಲದಕ್ಕೂ ತಕ್ಷಣವೇ ಪ್ರತಿಫಲ ಬರಬೇಕೆಂಬ ಅತಿಯಾದ ನಿರೀಕ್ಷೆ ಬಿಡಿ. ನಿಮ್ಮ ಪ್ರಯತ್ನ(effort)ಕ್ಕೆ ತಕ್ಕ ಫಲ ಇಂದಲ್ಲದಿದ್ದರೆ ನಾಳೆಯಾದರೂ ಬರುತ್ತದೆ. ನಿಮ್ಮಷ್ಟಕ್ಕೆ ನೀವು ಶ್ರದ್ಧೆಯಿಂದ ಪ್ರಯತ್ನ, ಪರಿಶ್ರಮ ಮುಂದುವರಿಸಿ. ಯಾವುದಕ್ಕೂ ಭಯ ಬೀಳದೆ ಮುನ್ನುಗ್ಗಿ.
ಕನ್ಯಾ(Virgo): ಪ್ರೀತಿಪಾತ್ರರಿಗೆ ಸಮಯ ಕೊಡದೆ ಇರಬೇಡಿ. ನೀವು ತುಂಬಾ ಪ್ರೀತಿಸುವ ಜನರಿಗೆ ಸಾಧ್ಯವಾದಷ್ಟು ಹೆಚ್ಚಿನ ಸಮಯ ನೀಡಿ. ಎಲ್ಲರಿಗೂ ಗೆಳೆಯರಾಗಬೇಕಿಲ್ಲ. ಇರೋ ಗೆಳೆಯರಿಗೆ ಸಮಯ ನೀಡಿದರೆ ಸಾಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.
Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ
ತುಲಾ(Libra): ಸಮಯ ವ್ಯರ್ಥ ಮಾಡುವ ಅಭ್ಯಾಸ ಬಿಡಿ. ಕಳೆದೆರಡು ವರ್ಷಗಳಂತೆ ಈ ಹೊಸ ವರ್ಷ ಇರುವುದಿಲ್ಲ, ಹಾಗಾಗಿ, ಸಮಯ ಹಾಳು ಮಾಡದೆ ನಿಮ್ಮ ರೆಸಲ್ಯೂಶನ್ ಪಟ್ಟಿಯಲ್ಲಿರುವುದೆಲಲ್ವನ್ನೂ ಹಟದಿಂದ ಸಾಧಿಸುತ್ತಾ(accomplish) ಸಾಗಿ. ಬದುಕು ಎಷ್ಟೊಂದು ಬದಲಾಗುವುದು ಎಂದು ಸ್ವತಃ ಕಂಡುಕೊಳ್ಳಿ.
ವೃಶ್ಚಿಕ(Scorpio): ಮನಸ್ಸಿಗೆ ಕಿರಿಕಿರಿ ಉಂಟು ಮಾಡುವ ಜನರ ನಡುವೆ ಮತ್ತೆ ಮತ್ತೆ ಹೋಗಿ ಸಿಲುಕುವ ಅಭ್ಯಾಸ ಬಿಡಿ. ಈ ಕೆಟ್ಟ ಗೆಳೆಯರು ಹಾಗೂ ಕುಟುಂಬ ಸದಸ್ಯರಿಂದ ನಿಮಗೆ ಒಳಿತಾಗುವುದು ಅಷ್ಟರಲ್ಲೇ ಇದೆ. ಆದಷ್ಟು ಅವರಿಂದ ದೂರವಿದ್ದು, ಬೇರೆೇನು ಮಾಡಬಲ್ಲಿರಿ ಎಂಬ ಬಗ್ಗೆ ಗಮನ ಹರಿಸಿ.
ಧನುಸ್ಸು(Sagittarius): ಹಣವನ್ನು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ವ್ಯರ್ಥ ಮಾಡದಿರಿ. ಈ ವರ್ಷ ಸೇವಿಂಗ್ಸ್ ಕಡೆ ಹೆಚ್ಚು ಗಮನ ಹರಿಸಿ. ಹಣ ಉಳಿತಾಯ, ಖರ್ಚುಗಳ ಬಗ್ಗೆ ಯೋಜನೆ ಮಾಡಿಕೊಂಡು ಅದರಂತೆಯೇ ಮುನ್ನಡೆಯಿರಿ.
ಮಕರ(Capricorn): ಸಾಮಾಜಿಕ ಜಾಲತಾಣ(social media)ಗಳಲ್ಲಿ ಹೆಚ್ಚಿನ ಸಮಯ ವ್ಯರ್ಥ ಮಾಡುವುದನ್ನು ಬಿಡಲೇಬೇಕು. ಈ ವರ್ಷ ನಿಮ್ಮ ಓದು, ಉದ್ಯೋಗದ ಕಡೆ ಪೂರ್ತಿ ಸಮಯ ನೀಡಿ. ಆಗ ನಿಮ್ಮ ಗುರಿಸಾಧನೆಗೆ ಯಾವುದೂ ತಡೆಯಾಗದು.
ಕುಂಭ(Aquarius): ಮನೆಯಲ್ಲೇ ಕುಳಿತು ಇಡೀ ದಿನ ಕೆಲಸದಲ್ಲೇ ಕಳೆದು ಹೋಗುವುದನ್ನು ಬಿಡಿ. ಆದಷ್ಟು ಹೊರ ಹೋಗಿ, ಪ್ರವಾಸ ಹೋಗಿ, ಹೊಸತನ್ನು ಪ್ರಯತ್ನಿಸಿ. ಹೊಸ ಹೊಸ ಸಾಧ್ಯತೆಗಳಿಗೆ ನಿಮ್ಮನ್ನು ತೆರೆದುಕೊಳ್ಳಿ. ಕಂಫರ್ಟ್ ಝೋನ್(comfort zone) ಬಿಟ್ಟು ಹೊರ ಬನ್ನಿ.
ಮೀನ(Pisces): ಕುಟುಂಬಕ್ಕೆ ಸಮಯ ಕೊಡದೆ ದುಡಿಯುವ ಅಭ್ಯಾಸ ಬಿಡಿ. ಎಲ್ಲವನ್ನೂ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿ. ಕುಟುಂಬಕ್ಕೆ ಹೆಚ್ಚು ಸಮಯ ಕೊಟ್ಟಷ್ಟೂ ನೀವದರಿಂದ ಪಡೆಯುತ್ತಲೇ ಹೋಗುವಿರಿ ಎಂಬುದುಅರಿವಿನಲ್ಲಿರಲಿ.