Wedding Superstitions: ಮದುವೆ ದಿನ ವಧು ಅತ್ರೆ ಒಳ್ಳೇದಾ ಕೆಟ್ಟದ್ದಾ?

By Suvarna News  |  First Published Dec 23, 2021, 12:36 PM IST

ವಿವಾಹದ ದಿನ ವಧು ಅಳ್ಬೇಕು, ಮಳೆ ಬಂದ್ರೆ ಶುಭ, ಕೆಲ ಉಡುಗೊರೆಗಳು ಅಶುಭ, ಹಾಲು ಚೆಲ್ಲಿದ್ರೆ ದುರದೃಷ್ಟ ... ಹೀಗೆ ಹಲವು ಮೂಢನಂಬಿಕೆಗಳು ನಮ್ಮ ನಡುವೆ ಇವೆ. ಅಂಥ ಕೆಲ ಆಸಕ್ತಿಕರ ಮೂಢನಂಬಿಕೆಗಳ ಬಗ್ಗೆ ಇಲ್ಲಿದೆ.  


ಭಾರತೀಯರಲ್ಲಿ ಕೂರೋಕೆ, ನಿಲ್ಲೋಕೆ, ಹೊರ ಹೋಗೋಕೆ, ಮಲಗೋಕೂ ಹಲವು ಮೂಢನಂಬಿಕೆ(superstition)ಗಳಿವೆ. ಸುತ್ತಮುತ್ತ ಆಗುವ ಎಲ್ಲ ವಿಷಯಗಳನ್ನೂ ಸೂಚನೆಯಾಗೇ ನೋಡೋ ಅಭ್ಯಾಸ ನಮ್ಮದು. ಅಂಥದರಲ್ಲಿ ವಿವಾಹ ಎಂಬ ದೊಡ್ಡ ಸಂಭ್ರಮ ಇಂಥ ನಂಬಿಕೆಗಳಿಂದ ಹೊರಗುಳಿಯೋದಾದ್ರೂ ಹೇಗ್ ಸಾಧ್ಯ? 

ಹೌದು, ವಿವಾಹ(wedding)ದ ವಿಷಯದಲ್ಲೂ ನಮ್ಮಲ್ಲಿ ಹಲವು ಮೂಢನಂಬಿಕೆಗಳಿವೆ. ನಮ್ಮಲ್ಲಿ ಮಾತ್ರವಲ್ಲ, ಜಗತ್ತಿನ್ನೆಲ್ಲೆಡೆ ಇಂಥ ವಿವಿಧ ನಂಬಿಕೆಗಳಿವೆ. ಅಂಥ ಕೆಲ ಆಸಕ್ತಿಕರ ನಂಬಿಕೆಗಳೇನೇನು ನೋಡೋಣ..

Tap to resize

Latest Videos

ಮದುವೆ ದಿನ ಮಳೆ
ಮದುವೆ ದಿನವೇ ಮಳೆ ಧೋ ಎಂದು ಸುರೀತಿದೆ ಅಂದ್ರೆ ಅದು ಸ್ವರ್ಗದಲ್ಲಿನ ದೇವತೆಗಳೆಲ್ಲ ನಿಂತು ವಿವಾಹವಾಗುತ್ತಿರುವ ಜೋಡಿಗೆ ಮಾಡುತ್ತಿರುವ ಆಶೀರ್ವಾದ ಎಂದು ನಂಬಲಾಗಿದೆ. ಹೀಗೆ ಮಳೆ ಬಂದರೆ ಆ ಜೋಡಿಯ ಬದುಕು ಯಾವುದೇ ಸಮಸ್ಯೆಯಿಲ್ಲದೆ ಸಂತೋಷದಿಂದಿರುತ್ತದೆ ಎಂದರ್ಥ. 

ಚಾಕು ಉಡುಗೊರೆ(Knives as gifts)
ಸಾಮಾನ್ಯವಾಗಿ ಮದುವೆಗಳಲ್ಲಿ ವಧುವರರಿಗೆ ಉಡುಗೊರೆ ಕೊಡುವಾಗ ಹೆಚ್ಚಿನವರು ಕಟ್ಲೆರಿ ಸೆಟ್ ಕೊಡುತ್ತಾರೆ. ಕೆಲವೊಮ್ಮೆ ಇದರಲ್ಲಿ ತಟ್ಟೆ, ಲೋಟ, ಚಮಚದ ಜೊತೆ ಚಾಕು ಕೂಡಾ ಇರುತ್ತದೆ. ಹೀಗೆ ಚಾಕುವನ್ನು ಕೊಡುವುದು ಬಹಳ ಅಶುಭ ಎಂಬ ನಂಬಿಕೆ ಇದೆ. ಒಂದು ವೇಳೆ ಕಟ್ಲೆರಿ ಸೆಟ್ ಜೊತೆ ಚಾಕು ಹೋಗಿದ್ದು ತಿಳಿದು ಬಂದರೆ, ಜೋಡಿಯ ಕಡೆಯಿಂದ ಆ ಚಾಕುವಿನ ಹಣವನ್ನು ವಸೂಲಿ ಮಾಡಲಾಗುತ್ತದೆ. ಇದರಿಂದ ಚಾಕು ಉಡುಗೊರೆಯಾಗಿಯಲ್ಲ, ಸ್ವತಃ ಅವರೇ ಕೊಂಡದ್ದಾಗಿ ಮನೆ ಸೇರುತ್ತದೆ. 

Auspicious Signs : ದಾರಿಯಲ್ಲಿ ಈ ವಸ್ತುಗಳು ಕಣ್ಣಿಗೆ ಬಿದ್ರೆ ಮಂಗಳ ಎಂದರ್ಥ

undefined

ವಧುವನ್ನು ಎತ್ತುವುದು
ಬಹಳಷ್ಟು ಸಂಪ್ರದಾಯಗಳಲ್ಲಿ ಮನೆಯ ಹೊಸಿಲು ದಾಟುವಾಗ ವರ(groom)ನು ವಧು(bride)ವನ್ನು ಎತ್ತಿಕೊಂಡು ಹೋಗುವುದನ್ನು ನೀವು ನೋಡಿರಬಹುದು. ವಧುವು ಬಹಳ ನಾಜೂಕಾಗಿದ್ದು ಕೆಟ್ಟ ಆಕೆ ಮೊದಲ ಬಾರಿ ಕಾಲಿಟ್ಟು ಒಳ  ದಾಟಿದಾಗ ಕೆಟ್ಟ ಶಕ್ತಿ(evil spirits)ಗಳು ಅವಳನ್ನು ಆವರಿಸಿಕೊಳ್ಳಬಹುದು ಎಂಬ ನಂಬಿಕೆಯ ಮೇಲೆ ಈ ಆಚರಣೆ ಬೆಳೆದು ಬಂದಿದೆ. 

Self care tips for 2022: ನಿಮ್ಮ ರಾಶಿಗೆ ಈ ಅಭ್ಯಾಸ ಒಳ್ಳೇದು..

ಅಳುವುದು(The crying)
ವಿವಾಹದ ಬಳಿಕ, ವರನ ಮನೆಗೆ ಹೊರಡುವ ವೇಳೆ ಮಧುಮಗಳು ಅಳುವುದು ಸಾಮಾನ್ಯ. ತವರನ್ನು ತೊರೆದು ಪತಿಯ ಮನೆಗೆ ಹೋಗಿ ಹೊಂದಿಕೊಳ್ಳುವ ದುಃಖ ಅವರನ್ನಾವರಿಸಿರುತ್ತದೆ. ಹೀಗೆ ವಧು ಅತ್ತರೆ ಒಳ್ಳೆಯದಾಗುತ್ತದೆ. ಅವಳ ಅಳು ಅಂದಿಗೇ ಕೊನೆಯಾಗುತ್ತದೆ. ಒಂದು ವೇಳೆ ಅಳಲಿಲ್ಲವೆಂದರೆ ಮುಂದೆ ಅಲುತ್ತಲೇ ಇರಬೇಕಾಗುತ್ತದೆ ಎಂಬ ನಂಬಿಕೆ ಇದೆ. 

ಗ್ಲೌಸ್ ಒಳಗೆ ಸಕ್ಕರೆ(Putting sugar cube in the gloves)
ಕ್ರೈಸ್ತರ ವಿವಾಹದಲ್ಲಿ ವಧುವು ಗ್ಲೌಸ್ ಧರಿಸುವುದು ಗೊತ್ತೇ ಇದೆ. ಆಕೆ ಅದರೊಳಗೆ ಸಕ್ಕರೆ ಅಚ್ಚನ್ನಿಟ್ಟುಕೊಳ್ಳಬೇಕು ಎಂಬ ಸಂಪ್ರದಾಯವಿದೆ. ಇದರಿಂದ ಆ ಸಕ್ಕರೆಯಚ್ಚು ಜೋಡಿಯ ಬಾಳನ್ನು ಸಿಹಿಯಾಗಿಸುತ್ತದೆ ಎಂಬ ನಂಬಿಕೆ ಅವರದು. 

ವಧುವಿಗೆ ಚೂಟುವುದು(Pinching the bride)
ಈಜಿಪ್ಟಿನಲ್ಲಿ ವಧುವಿಗೆ ವಿವಾಹದ ದಿನದಂದು ಚೂಟುವುದರಿಂದ ಅವಳ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ. 

ಹಾಲುಕ್ಕುವುದು
ಗೃಹಪ್ರವೇಶವಾದಾಗ ಹಾಲುಕ್ಕಿಸುವುದು ಶುಭವಾಗಿದೆ. ಅದೇ ವಿವಾಹದ ದಿನ ಹಾಲುಕ್ಕಿದರೆ ಮಾತ್ರ ಅದು ದುರದೃಷ್ಟದ ಸೂಚನೆ ಎಂಬ ನಂಬಿಕೆ ಹಲವರಲ್ಲಿದೆ. 

ಬೊಕೆ(bouquet)
ಪಾಶ್ಚಾತ್ಯ ಸಂಸ್ಕೃತಿಯ ವಿವಾಹಗಳಲ್ಲಿ ವಧುವು ಇತರೆ ಯುವತಿಯರಿಗೆ ಬೆನ್ನು ಹಾಕಿ ನಿಂತು ಬೊಕೆ ಹಿಂದೆ ಎಸೆಯಬೇಕು. ಹೀಗೆ ಎಸೆದಾಗ ಯಾರ ಕೈಗೆ ಬೊಕೆ ಸಿಗುತ್ತೋ ಅವರ ಮದುವೆ ಸಧ್ಯದಲ್ಲೇ ನಿಶ್ಚಿತವಾಗುತ್ತದೆ ಎಂದು ನಂಬಲಾಗಿದೆ. 

ಚಾಕು
ಚಾಕುವಿನ ಕುರಿತ ಮತ್ತೊಂದು ಮೂಢನಂಬಿಕೆ ಇದಾಗಿದೆ. ವಿಶೇಷವಾಗಿ ಪಂಜಾಬಿ ಸಂಪ್ರದಾಯದಲ್ಲಿ ವಧುವು ತನ್ನ ನಿಶ್ಚಿತಾರ್ಥದಿಂದ ವಿವಾಹದ ದಿನದವರೆಗೆ ಎಲ್ಲೇ ಹೋದರೂ ಚಾಕುವನ್ನು ಜೊತೆಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ದುಷ್ಟ ಶಕ್ತಿಗಳು ಅವಳಿಗೆ ತೊಂದರೆ ಕೊಡುತ್ತವೆ. 

click me!