ಈಗಿನ ಕಾಲದಲ್ಲಿ ಇನ್ನೊಬ್ಬ ಪ್ರತಿಭಾವಂತ, ಶ್ರೀಮಂತನನ್ನು ಹಗರಣದಲ್ಲಿ ಸಿಕ್ಕಿಸಿ ಹಾಕಲು ಹನಿಟ್ರ್ಯಾಪ್ ಮಾಡುತ್ತಿರುವಂತೆ, ಪುರಾಣ ಕಾಲದಲ್ಲೂ ನಡೆಯುತ್ತಿತ್ತು ಗೊತ್ತೇ?
ಕೌಶಿಕ ಮಹಾರಾಜ, ಬ್ರಹ್ಮರ್ಷಿ ವಸಿಷ್ಠರೊಡನೆ ಛಲಕ್ಕೆ ಬಿದ್ದು ಘೋರ ತಪಸ್ಸು ಮಾಡಿದ. ಇನ್ನೇನು ಆತ ಬ್ರಹ್ಮರ್ಷಿಯಾಗೇ ಬಿಡುತ್ತಾನೆ ಎಂದಾದಾಗ ಸ್ವರ್ಗದಲ್ಲಿದ್ದ ಇಂದ್ರನಿಗೆ ಚಿಂತೆ ಶುರುವಾಯಿತು. ಕೌಶಿಕ ಕ್ಷತ್ರಿಯ ಹಿನ್ನೆಲೆಯಿಂದ ಬಂದವನು. ಅವನು ಬ್ರಹ್ಮರ್ಷಿಯಾದ ಬಳಿಕ ಇಂದ್ರಭೋಗಕ್ಕೆ ಕಣ್ಣು ಹಾಕಲಾರ ಎಂದು ಹೇಗೆ ಹೇಳುವುದು? ಹೀಗಾಗಿ ಅವನ ತಪಸ್ಸನ್ನು ಕೆಡಿಸಲು ಮೇನಕೆ ಎಂಬ ಹೆಸರಿನ ಅಪ್ಸರೆಯನ್ನು ಕಳುಹಿಸಿದ. ಅಪ್ಸರೆಯರೆಂದರೆ ಸ್ವರ್ಗದ ಆಸ್ಥಾನ ನರ್ತಕಿಯರು. ಇಂದ್ರನೂ ಸೇರಿದಂತೆ ದೇವತೆಗು ಬಯಸಿದಾಗ ಭೋಗವನ್ನು ಒದಗಿಸಿಕೊಡುವವರು. ಮೇನಕೆ ನೇರವಾಗಿ ಕೌಶಿಕನ ಬಳಿ ಹೋದಳು, ವಸಂತ ಮಾಸ, ಮನ್ಮಥನ ಬಾಣ ಕೌಶಿಕನಿಗೂ ತಾಗಿತು. ಕಣ್ತೆರೆದರೆ ಎದುರಲ್ಲಿ ಸೆರಗು ಜಾರಿಸಿದ ಮೇನಕೆ. ಮುನಿಯ ಚಿತ್ತ ವಿಚಲಿತವಾಯ್ತು, ತಪಸ್ಸು ಬಿಟ್ಟ. ಮೇನಕೆಯೊಡನೆ ಸಂಸಾರ ಹೂಡಿದ. ಎಷ್ಟೋ ವರ್ಷಗಳ ಕಾಳ ಸಂಸಾರದಲ್ಲಿ ಮುಳುಗಿ ತಪಸ್ಸನ್ನು ಮರೆತೇ ಬಿಟ್ಟ. ಇಂದ್ರ ನಿರಾಳನಾದ.
ಇದೊಂದು ಬಗೆಯ ಹನಿಟ್ರ್ಯಾಪ್. ಹನಿಟ್ರ್ಯಾಪ್ ಅಂದರೆ ಸುಂದರಿಯರನ್ನು ಕಳಿಸಿ, ಇನ್ನೊಬ್ಬ ಶ್ರೀಮಂತ, ಪ್ರತಿಭಾವಂತ ಅಥವಾ ಸಾಧಕನನ್ನು ಅವನ ನೆಲೆಯಿಂದ ಪದಚ್ಯುತಗೊಳಿಸುವುದು, ಸಿಕ್ಕಿಸಿ ಹಾಕುವುದು, ಅಥವಾ ಮನಸ್ಸು ಕ್ಷೋಭೆಗೀಡಾಗಿ ಗುರಿಯಿಂದ ವಿಚಲಿತನಾಗಿ ಹಾಳಾಗುವಂತೆ ಮಾಡುವುದು. ಇದರಲ್ಲಿ ಇಂದ್ರ ಎತ್ತಿದ ಕೈ. ಹಲವು ಮುನಿಗಳ, ರಾಜರ ತಪಸ್ಸುಗಳನ್ನು ಈತ ಹೀಗೆ ಹನಿಟ್ರ್ಯಾಪ್ ಮಾಡಿ ಹಾಳು ಮಾಡಿದ ಕತೆಗಳು ಸಿಗುತ್ತವೆ.
ಮನೆಯೊಳಗಿರೋ ನಕಾರಾತ್ಮಕ ಶಕ್ತಿಯನ್ನು ಪತ್ತೆ ಹಚ್ಚೋದು ಹೇಗೆ?
ಗೌತಮ ಮಹರ್ಷಿಯ ಮೊಮ್ಮಗ ಶರದ್ವನ ಎಂಬ ಋಷಿ ಘೋರ ತಪಸ್ಸನ್ನು ಮಾಡುತ್ತಿದ್ದಾಗ, ಜನಪದಿ ಎಂಬ ಅಪ್ಸರೆಯನ್ನು ಇಂದ್ರ ಕಳಿಸಿದ. ಆಕೆ ಅವನ ಬಳಿಗೆ ಬಂದಾಗ, ಆಕೆಯ ಸೌಂದರ್ಯವನ್ನು ನೋಡಿ ಶರದ್ವನನ ಇಂದ್ರಿಯ ಸ್ಖಲಿಸಿತು. ಅತನ ವೀರ್ಯ ಅಲ್ಲೇ ಇದ್ದ ಬೀಜವೊಂದರ ಮೇಲೆ ಬಿತ್ತು. ಬೀಜ ಎರಡಾಗಿ ಒಡೆದು, ಎರಡು ಮಕ್ಕಳು ಅಲ್ಲೇ ಹುಟ್ಟಿದರು. ಈ ಮಕ್ಕಳೇ ಮಹಾಭಾರತದಲ್ಲಿ ಬರುವ ಕೃಪಾಚಾರ್ಯ ಮತ್ತು ಕೃಪಿ. ಈ ಕೃಪಿ, ದ್ರೋಣಾಚಾರ್ಯರ ಹೆಂಡತಿ. ಅಂತೂ ಶರಧನ್ವರ ಸಂಯಮ ಹಾಳಾದ್ದು ಸುಳ್ಳಲ್ಲ.
undefined
ಕಂಡು ಎಂಬ ಮುನಿ ಘನಘೋರ ತಪಸ್ಸು ಮಾಡುತ್ತಿದ್ದ. ಎಂದಿನಂತೆ ಇಂದ್ರನಿಗೆ ಟೆನ್ಷನ್ ಶುರುವಾಯ್ತು. ಕಂಡುವಿನ ತಪಸ್ಸು ಹಾಳು ಮಾಡಲು ಪ್ರಮ್ಲೋಚಾ ಎಂಬ ಅಪ್ಸರೆಯನ್ನು ಕಳುಹಿಸಿದ. ಆಕೆಯನ್ನು ನೋಡಿ ಅವನ ಮನಸ್ಸು ಚಂಚಲವಾಯಿತು. ಆಕೆಯೊಡನೆ ಸಂಸಾರ ಹೂಡಿದ. ಸುಖೋಪಭೋಗಗಳಲ್ಲಿ ಮುಳುಗಿದ. ನೂರು ವರ್ಷಗಳಾದವು. ನಾನಿನ್ನು ಸ್ವರ್ಗಕ್ಕೆ ಹೋಗಬೇಕು ಎಂದಳು ಪ್ರಮ್ಲೋಚಾ. ಇನ್ನೂ ಇರು ಎಂದ ಕಂಡು. ಆಯ್ತು ಎಂದು ಅಲ್ಲೇ ಇದ್ದಳು. ಹೀಗೇ ಪ್ರತಿ ನೂರು ವರ್ಷಕ್ಕೊಮ್ಮೆ ಅವಳು ಹೊರಟು ನಿಲ್ಲುವುದು, ಮುನಿ ತಡೆಯುವುದು ನಡೆಯುತ್ತಿತ್ತು. ನಾನ್ನೂರು ವರ್ಷಗಳು ಕಳೆದುಹೋದವು. ಒಂದು ಮುಂಜಾನೆ ಇದ್ದಕ್ಕಿದ್ದಂತೆ ಮುನಿಗೆ ಸಂಧ್ಯಾವಂದನೆ ನೆನಪಾಗಿ, ಹೊರಟುನಿಂತ. ಆಗ ಪ್ರಮ್ಲೋಚಾ ನಕ್ಕಳು. ನೀನು ನನ್ನೊಡನೆ ಭೋಗಗಳಲ್ಲಿ ಮುಳುಗಿ ನಾನ್ನೂರು ವರ್ಷ ಸಂಧ್ಯಾವಂದನೆ ಮಾಡಲೇ ಇಲ್ಲ. ನಾನ್ನೂರು ವರ್ಷಗಳ ನಂತರ ನಿನಗೆ ಸಂಧ್ಯಾವಂದನೆ ನೆನಪಾಯಿತೇ ಎಂದು ನಕ್ಕಳು, ಕಂಡುವಿಗೆ ಸಿಟ್ಟು ತನ್ನ ಬಗ್ಗೆಯೇ ಮುಜುಗರ ಎಲ್ಲ ಉಂಟಾದವು. ಅಂತೂ ಇಂದ್ರ ಆತನ ತಪಸ್ಸನ್ನು ಯಶಸ್ವಿಯಾಗಿ ಹಾಳು ಮಾಡಿದ್ದ.
ಕಂಡಿದ್ದೆಲ್ಲಾ ನಮ್ಮದಾಗಬೇಕೆಂದು ಹೋದರೆ ಈ ರಾಜನಿಗಾದ ಗತಿ ನಮಗೂ ಆದೀತು!
ಇತಿಹಾಸದಲ್ಲೂ ಹಲವು ರಾಜರು ಹೀಗೆ ಹನಿಟ್ರ್ಯಾಪ್ ಬಳಸುತ್ತ ಇದ್ದುದಕ್ಕೆ ಕೆಲವು ದೃಷ್ಟಾಂತಗಳು ಸಿಗುತ್ತವೆ. ಚಂದ್ರಗುಪ್ತ ಮೌರ್ಯನ ಮಹಾಮಂತ್ರಿಯಾಗಿದ್ದ ಚಾಣಕ್ಯ, ಶತ್ರುನಾಶಕ್ಕೆ ಹಾಗೂ ಶತ್ರುರಾಜರ ರಹಸ್ಯಗಳನ್ನು ತಿಳಿಯಲು ಅವರೆಡೆಗೆ ಸುಂದರಿಯರಾದ ವೇಶ್ಯೆಯರನ್ನು ಕಳುಹಿಸುತ್ತಿದ್ದನಂತೆ. ಅವರು ಆ ರಾಜ ಅಥವಾ ಮಂತ್ರಿಯೊಡನೆ ಮಲಗಿ, ಅವರ ರಹಸ್ಯಗಳನ್ನು ಇವರಿಗೆ ತಿಳಿಸುತ್ತಿದ್ದರು. ಇದನ್ನು ಚಾಣಕ್ಯ ಅವರ ವಿರುದ್ಧ ಬಳಸಿಕೊಳ್ಳುತ್ತಿದ್ದ. ಇದು ಅವನ ಕೌಟಿಲ್ಯ ನೀತಿಯಲ್ಲೂ ನಿರೂಪಿತವಾಗಿದೆ.
ಅಂತೂ ಈ ಹನಿಟ್ರ್ಯಾಪ್ ಎಂಬುದು ಬರೀ ಇವತ್ತಿನ ಸಂಗತಿ ಅಲ್ಲ ಅಂತ ಆಯ್ತು.
ಸರ್ಪಗಳಿದ್ದಲ್ಲಿ ನಿಧಿ ಇದ್ದೇ ಇರುತ್ತಾ?