ಬುಧವಾರ ಈ ವಸ್ತುಗಳನ್ನು ಮನೆಗೆ ತಂದರೆ ಶುಭ...

Suvarna News   | Asianet News
Published : Sep 23, 2020, 08:13 PM IST
ಬುಧವಾರ ಈ ವಸ್ತುಗಳನ್ನು ಮನೆಗೆ ತಂದರೆ ಶುಭ...

ಸಾರಾಂಶ

ಖರೀದಿ ಮಾಡಲು ಮುಹೂರ್ತ ನೋಡಬೇಕೆಂದೇನೂ ಇಲ್ಲ. ಆದರೂ ಕೆಲವು ವಸ್ತುಗಳನ್ನು ವಿಶೇಷ ದಿನಗಳಲ್ಲಿ ಖರೀದಿಸಬೇಕಾಗುತ್ತದೆ. ಕೆಲವು ವಾರದಲ್ಲಿ ಯಾವುದನ್ನೂ ಮಾಡಬಾರದು ಎನ್ನಲಾಗುತ್ತದೆ. ಆದರೆ, ಮತ್ತೆ ಕೆಲವು ವಾರದಲ್ಲಿ ಖರೀದಿ ಮಾಡಿದರೆ ಬಹಳ ಒಳ್ಳೆಯದೂ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಒಂದೊಂದು ವಾರಕ್ಕೆ ಒಂದೊಂದು ವಿಶೇಷತೆ ಇದ್ದು, ಅವುಗಳಿಗೆ ಅಧಿಪತಿ ದೇವತೆಗಳೂ ಇರುತ್ತಾರೆ. ಹೀಗಾಗಿ ಬುಧವಾರದಂದು ಇಂಥ ವಸ್ತುಗಳನ್ನು ಕೊಂಡರೆ ಶುಭ ಎಂಬ ಬಗ್ಗೆ ನೋಡೋಣ…

ಕೆಲವೊಂದು ದಿನಗಳು ಮನುಷ್ಯನಿಗೆ ಒಳ್ಳೆಯದನ್ನು ಮಾಡಿದರೆ ಮತ್ತೆ ಕೆಲವು ದಿನಗಳು ಅಶುಭಕಾರಕ ಎಂದು ಹಿಂದು ಧರ್ಮದಲ್ಲಿ ನಂಬಲಾಗಿದೆ. ಅದು ಸತ್ಯವೂ ಹೌದು. ಮನೆಗೆ ಯಾವುದಾದರೂ ವಸ್ತುಗಳನ್ನು ತರಬೇಕಿದ್ದರೆ ವಾರಗಳನ್ನು ನೋಡಲಾಗುತ್ತದೆ. ಕೆಲವು ವಾರದಲ್ಲಿ ವಸ್ತುಗಳನ್ನು ತರುವುದಾಗಲಿ, ಇಲ್ಲವೇ ಯಾವುದೇ ಶುಭ ಕಾರ್ಯಗಳನ್ನು ಮಾಡುವ ಗೋಜಿಗೆ ಹೋಗುವುದಿಲ್ಲ. ಹಾಗಂತ ಖರೀದಿ ಮಾಡಲು ಮುಹೂರ್ತ ನೋಡಬೇಕೆಂದೇನೂ ಇಲ್ಲ. ಆದರೂ ಕೆಲವು ವಸ್ತುಗಳನ್ನು ವಿಶೇಷ ದಿನಗಳಲ್ಲಿ ಖರೀದಿಸಬೇಕಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ವಾರ ಒಂದೊಂದು ದೇವರಿಗೆ ಸಮರ್ಪಿತ ಎಂದು ಹೇಳಲಾಗುತ್ತದೆ. ಹಾಗೆಯೇ ಕೆಲವು ವಸ್ತುಗಳನ್ನು ವಿಶೇಷ ದಿನಗಳಲ್ಲಿ ಖರೀದಿ ಮಾಡುವುದರಿಂದ ವಿಶೇಷ ಫಲ ಲಭಿಸಲಿದೆ. ಇನ್ನು ಕೆಲವು ವಾರದಲ್ಲಿ ಯಾವುದನ್ನೂ ಮಾಡಬಾರದು ಎನ್ನಲಾಗುತ್ತದೆ. ಹಾಗೇ ಈಗ ಬುಧವಾರ ಯಾವ ವಸ್ತುಗಳನ್ನು ಖರೀದಿ ಮಾಡಿದರೆ ಒಳ್ಳೆಯದು ಎಂಬ ಬಗ್ಗೆ ನೋಡೋಣ…
 

ಇದನ್ನು ಓದಿ: ಕೇತು ದೋಷದಿಂದ ಮುಕ್ತಿ ಪಡೆಯಲು ಹೀಗ್ ಮಾಡಿ ನೋಡಿ.. 

ಗಣಪತಿ ಪ್ರತಿಮೆ ಇಲ್ಲವೇ ಫೋಟೋ
ಗಣಪತಿ ಪ್ರತಿಮೆ ಇಲ್ಲವೇ ಫೋಟೋವನ್ನು ಮನೆಗೆ ತರಬೇಕು ಎಂದು ನೀವು ಚಿಂತನೆ ಮಾಡುತ್ತಿದ್ದರೆ, ಬುಧವಾರ ಖರೀದಿ ಮಾಡುವ ಆಯ್ಕೆಯನ್ನಿಟ್ಟುಕೊಳ್ಳಿ. ದೇವರ ಫೋಟೋ ಅಥವಾ ಮೂರ್ತಿಯನ್ನು ಕೊಂಡುಕೊಳ್ಳುವುದು ಎಲ್ಲದಕ್ಕಿಂತ ಒಳ್ಳೆಯ ದಿನ ಬುಧವಾರವಾಗಿದೆ. ಸಿಂಗರಿಸಿದ ಗಣೇಶನ ಮೂರ್ತಿಯನ್ನೂ ತರಬಹುದು, ಹೀಗೆ ತಂದ ಮೂರ್ತಿಗೆ ಮೊದಲು ಪೂಜೆ ಸಲ್ಲಿಸಬೇಕು. ಇಲ್ಲವೇ ಗಣೇಶನ ಫೋಟೋ ಇರುವ ಗಡಿಯಾರವನ್ನೂ ಕೊಳ್ಳಬಹುದು. 



ಗುಲಾಬಿ ಹೂ
ಬುಧವಾರ ದಿನದಂದು ಗುಲಾಬಿ ಹೂವನ್ನು ಖರೀದಿ ಮಾಡುವುದು, ಇಲ್ಲವೇ ಈ ಹೂವಿನ ದಳವನ್ನು ಖರೀದಿಸಿದರೆ ಶುಭ ಪ್ರಾಪ್ತಿಯಾಗುತ್ತದೆ. ಹೀಗಾಗಿ ಬುಧವಾರದಂದು ಅವಶ್ಯವಾಗಿ ಖರೀದಿಸಿ, ಮನೆಯಲ್ಲಿ ಸಿಂಗರಿಸಬಹುದು, ಇಲ್ಲವೇ ದೇವರಿಗೆ ಅರ್ಪಿಸುವುದೋ, ಇನ್ನಾರಿಗೋ ಉಡುಗೊರೆ ರೂಪದಲ್ಲೋ ಕೊಡುವುದನ್ನು ಮಾಡಿದರೆ ಒಳ್ಳೆಯದಾಗುತ್ತದೆ. ಬುಧವಾರ ಗುಲಾಬಿ ಹೂವನ್ನು ಖರೀದಿಸುವುದರಿಂದ ಸಂತೋಷ ಮನೋಭಾವ ನಿಮ್ಮದಾಗುತ್ತದೆ.



ಚಿನ್ನ ಖರೀದಿ
ಚಿನ್ನವನ್ನು ಖರೀದಿ ಮಾಡಬೇಕೆಂದಿದ್ದರೆ ಬುಧವಾರವನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹೀಗೆ ಬುಧವಾರದಂದು ಖರೀದಿಸಿದ ಚಿನ್ನವನ್ನು ಮೊದಲು ಗಣೇಶನ ಮುಂದಿಟ್ಟು ಪೂಜೆಯನ್ನು ಮಾಡಬೇಕು. ಇದರಿಂದ ಗಣೇಶನ ಕೃಪೆ ಸಿಗುವುದಲ್ಲದೆ, ಹಣದ ಕೊರತೆಯೂ ಆಗದು. 



ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ..! 

ನವಿಲು ಗರಿ
ನವಿಲು ಗರಿಯು ಶುಭದ ಸಂಕೇತವಾಗಿದೆ. ಆದರೆ, ಇದನ್ನು ಕೊಳ್ಳಬೇಕೆಂದಿದ್ದರೆ, ಮನೆಯೊಳಗೆ ತಂದಿಟ್ಟುಕೊಳ್ಳಬೇಕೆಂದಿದ್ದರೆ ಬುಧವಾರ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಸಕಾರಾತ್ಮಕ ಪರಿಣಾಮವನ್ನು ಬೀರುವುದಲ್ಲದೆ, ಶಕ್ತಿವಾಹಕ ಎಂದೂ ಕರೆಯಲ್ಪಡುತ್ತದೆ. ಇದನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಹೀಗಾಗಿ ಮನೆಯಲ್ಲಿ ನವಿಲುಗರಿ ಇಟ್ಟುಕೊಳ್ಳಬೇಕು ಎಂದಿದ್ದರೆ ಬುಧವಾರ ಒಳ್ಳೆಯದು.



ಹಳದಿ ವಸ್ತ್ರ
ಹಳದಿ ವಸ್ತ್ರಗಳನ್ನು ಬುಧವಾರ ಕೊಳ್ಳುವುದು, ಇಲ್ಲವೇ ಧರಿಸುವುದರಿಂದ ಗಣೇಶನ ಕೃಪೆಗೆ ಪಾತ್ರರಾಗಬಹುದು. ಹಳದಿ ವಸ್ತ್ರವನ್ನು ಖರೀದಿ ಮಾಡಿ ಗಣೇಶನಿಗೆ ಪೂಜೆ ಮಾಡಿದರೆ ಗಣೇಶ ಪ್ರಸನ್ನನಾಗುತ್ತಾನೆ. ಜೊತೆಗೆ ಸಂಕಲ್ಪ ಸಿದ್ಧಿ ಪ್ರಾಪ್ತವಾಗುತ್ತದೆ ಎಂದು ನಂಬಿಕೆ ಇದೆ. ಬುಧವಾರದಂದು ಎಲ್ಲಿಯಾದರೂ ಹೊರಗೆ ಹೋಗುವುದಿದ್ದರೆ ಹಳದಿ ವಸ್ತ್ರವನ್ನು ಧರಿಸಿ ಹೊರಟರೆ ಶುಭಕಾರಕವಾಗಿದ್ದು, ನಮ್ಮ ಕಾರ್ಯದಲ್ಲಿ ಸಫಲತೆಯನ್ನು ಕಾಣಬಹುದು ಎಂದು ಹೇಳಲಾಗಿದೆ. 

ಇದನ್ನು ಓದಿ: ಅಧಿಕ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿ, ಅದೃಷ್ಟವಂತರಾಗಿ..! 

ಆಮೆ 
ವಾಸ್ತು ಶಾಸ್ತ್ರದಲ್ಲಿ ಆಮೆಗೆ ಬಹಳ ಪ್ರಾಮುಖ್ಯತೆ ಇದ್ದು, ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಹಾಗಾಗಿ ಆಮೆಯ ಮೂರ್ತಿ ಇಲ್ಲವೇ ಪ್ರತಿಮೆಯನ್ನು ಮನೆಗೆ ತರಬೇಕೆಂದುಕೊಂಡಿದ್ದರೆ ಅದಕ್ಕೆ ಬುಧವಾರ ಶ್ರೇಷ್ಠ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚುತ್ತವೆ. ಅಲ್ಲದೆ, ವಿಷ್ಣುವಿನ ಮೂರನೇ ಅವತಾರ ಆಮೆಯಾಗಿರುವುದರಿಂದ ವಿಷ್ಣುವಿನ ಆಶೀರ್ವಾದವೂ ಲಭಿಸುತ್ತದೆ. 

 

PREV
click me!

Recommended Stories

ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ
ಈ ಸಂಖ್ಯೆ ಹೊಂದಿರುವ ವ್ಯಕ್ತಿ ರಾತ್ರೋರಾತ್ರಿ ಸ್ಟಾರ್ ಆಗುತ್ತಾನೆ ಮತ್ತು ಹಣದ ಸುರಿಮಳೆಯೇ ಆಗುತ್ತದೆ!