Vastu Tips : ಹೊಸ ಮನೆಯಲ್ಲಿ ಸಂತೋಷ ಉಳೀಬೇಕಂದ್ರೆ ಈ ವಸ್ತು ಬಳಸ್ಬೇಡಿ!

By Suvarna News  |  First Published Apr 30, 2022, 12:26 PM IST

ನೋಡಲು ಸುಂದರವಾಗಿರ್ಬೇಕು, ಐಷಾರಾಮಿ ವ್ಯವಸ್ಥೆ ಇರ್ಬೇಕು ಎಂಬ ಕಾರಣಕ್ಕೆ ಹೆಚ್ಚಿನ ಹಣ ಖರ್ಚು ಮಾಡಿ ಮನೆ ಕಟ್ಟಿರ್ತೇವೆ. ಆದ್ರೆ ಹೊಸ ಮನೆಯಲ್ಲಿ ವಾಸ ಶುರು ಮಾಡ್ತಿದ್ದಂತೆ ಒಂದಲ್ಲ ಒಂದು ಸಮಸ್ಯೆ ಬೆನ್ನು ಹತ್ತುತ್ತದೆ. ಇಷ್ಟೆಲ್ಲ ಖರ್ಚು ಮಾಡಿ ಮನೆ ನಿರ್ಮಾಣ ಮಾಡುವ ವೇಳೆ ವಾಸ್ತು ಬಗ್ಗೆ ಗಮನ ನೀಡಿದ್ರೆ ಸಮಸ್ಯೆ ಕಾಡೋದಿಲ್ಲ.
 


ಮನೆ (Home) ಯಲ್ಲಿ ಯಾವಾಗಲೂ ಸಂತೋಷ (Happiness) ಮತ್ತು ಸಮೃದ್ಧಿ ತುಂಬಿರಬೇಕೆಂದು ಪ್ರತಿಯೊಬ್ಬ ವ್ಯಕ್ತಿಯು ಬಯಸುತ್ತಾನೆ. ತಾಯಿ ಲಕ್ಷ್ಮಿ (Laxmi)ಯ ಆಶೀರ್ವಾದ ಮನೆಯಲ್ಲಿ ಇರಲಿ. ಸಕಾರಾತ್ಮಕ ವಾತಾವರಣ ಮನೆ ತುಂಬಿರಲಿ ಎಂದುಕೊಳ್ತಾರೆ. ಮನೆಯೊಳಗೆ ಬರ್ತಿದ್ದಂತೆ ಮನಸ್ಸು ಉಲ್ಲಾಸಗೊಳ್ಳಬೇಕು, ನೆಮ್ಮದಿ ಕಾಣಬೇಕೇ ವಿನಃ ಕಿರಿಕಿರಿ,ಕೋಪ,ಅಶಾಂತಿ ಕಾಡಬಾರದು. ಜೀವನ ಪರ್ಯಂತ ದುಡಿದ ಹಣವನ್ನು ಹೂಡಿಕೆ ಮಾಡಿ ಇಲ್ಲವೇ ಸಾಲ ಮಾಡಿ ಮನೆ ನಿರ್ಮಾಣ ಮಾಡಿರ್ತೇವೆ. ಮನೆಯಲ್ಲಿ ಎಲ್ಲ ಸೌಕರ್ಯವೂ ಇರುತ್ತದೆ. ಹೊಸ ಮನೆ ಎಂಬ ಸಂಭ್ರಮವಿರುತ್ತದೆಯೇ ಹೊರತು ಮನೆಯಲ್ಲಿ ಶಾಂತಿ – ನೆಮ್ಮದಿ ಇರುವುದಿಲ್ಲ. ಕುಟುಂಬಸ್ಥರ ಮಧ್ಯೆ ಹೊಂದಾಣಿಕೆ ಕಾಣಸಿಗುವುದಿಲ್ಲ. ಅನಾರೋಗ್ಯ, ಆರ್ಥಿಕ ಸಮಸ್ಯೆ ಕಾಡಲು ಶುರುವಾಗಿರುತ್ತದೆ. ಹೊಸ ಮನೆಯಲ್ಲಿ ಯಾವುದೇ ಸಮಸ್ಯೆ ಕಾಡಬಾರದು ಎನ್ನುವವರು ಮನೆ ನಿರ್ಮಾಣದ ವೇಳೆ ವಾಸ್ತು ನಿಯಮಗಳನ್ನು ಪಾಲಿಸಬೇಕು. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಅದು ಮನೆಯ ಸದಸ್ಯರ ಮೇಲೂ ಪರಿಣಾಮ ಬೀರುತ್ತದೆ. ಮನೆಯ ಸಂತೋಷವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕೆಲವು ವಾಸ್ತು ನಿಯಮಗಳನ್ನು ನಾವು ಇಂದು ನಿಮಗೆ ಹೇಳ್ತೇವೆ.

ಭೂಮಿ ಪೂಜೆ ಮರೆಯದಿರಿ : ಮನೆ ನಿರ್ಮಾಣವಾಗುವ ಜಾಗದಲ್ಲಿ ಪೂಜೆ ಮಾಡುವುದು ಬಹಳ ಮುಖ್ಯ. ನಿರ್ಮಾಣಕ್ಕೆ ಮೊದಲು ಭೂತಾಯಿಗೆ ನಮಿಸಬೇಕು. ಹಾಗಾಗಿ ಮನೆ ಕಟ್ಟುವ ಮೊದಲು ಗುದ್ದಲಿ ಪೂಜೆ ಮಾಡಿ. ಭೂತಾಯಿಗೆ ನಮಿಸಿ ಮುಂದಿನ ಕೆಲ ಶುರು ಮಾಡಿ. ಇದ್ರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. 

Tap to resize

Latest Videos

undefined

SOLAR ECLIPSE 2022 LIVE : ಇಂದಿನ ಗ್ರಹಣ ನೋಡುವುದು ಹೇಗೆ? ಎಲ್ಲೆಲ್ಲಿ ಕಾಣಿಸುತ್ತದೆ?

ಹಳೆಯ ವಸ್ತುಗಳನ್ನು ಬಳಸಬೇಡಿ : ನೀವು ಹೊಸ ಮನೆಯನ್ನು ನಿರ್ಮಿಸುತ್ತಿದ್ದರೆ, ಹಳೆಯ ಇಟ್ಟಿಗೆಗಳು, ಮರ ಅಥವಾ ಯಾವುದೇ ರೀತಿಯ ಹಳೆಯ ವಸ್ತುಗಳನ್ನು ಎಂದಿಗೂ ಬಳಸಬೇಡಿ. ಇದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಚಲನೆಗೆ ಕಾರಣವಾಗಬಹುದು. ಮನೆಯ ಸದಸ್ಯರ ಮನಸ್ಥಿತಿಯ ಮೇಲೂ ಇದು ಗಾಢವಾದ ಪರಿಣಾಮ ಬೀರಬಹುದು. ತುಕ್ಕು ಹಿಡಿದ ಯಾವುದೇ ವಸ್ತುವನ್ನು ಮನೆ ನಿರ್ಮಾಣದಲ್ಲಿ ಬಳಸಬೇಡಿ. 

ಖಾಲಿ ಜಾಗದಲ್ಲಿ ಮನೆ ಕಟ್ಟಬೇಡಿ : ಶಾಂತ ವಾತಾವರಣ ಬೇಕೆಂಬ ಕಾರಣಕ್ಕೆ ಅನೇಕರು ಊರ ಹೊರಗೆ ಮನೆ ನಿರ್ಮಾಣ ಮಾಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಊರ ಹೊರಗೆ ಅಥವಾ ಸುತ್ತಮುತ್ತ ಮನೆ ಇರದ ಜಾಗದಲ್ಲಿ ಮನೆ ನಿರ್ಮಾಣ ಮಾಡಬಾರದು. ಇದರ ಜೊತೆಗೆ  ಎಂದಿಗೂ ಮೂರು ದಾರಿ ಅಥವಾ ನಾಲ್ಕು ಮಾರ್ಗವಿರುವ ಜಾಗದಲ್ಲಿ ಮನೆಯನ್ನು ಕಟ್ಟಬಾರದು. 

ಮುಖ್ಯ ದ್ವಾರದ ಮುಂದೆ ಮೆಟ್ಟಿಲು ನಿರ್ಮಾಣ ಬೇಡ : ಮನೆ ಕಟ್ಟುವಾಗ ಮುಖ್ಯ ಬಾಗಿಲಿನ ಮುಂದೆ ಮೆಟ್ಟಿಲುಗಳು ಬರದಂತೆ ನೋಡಿಕೊಳ್ಳಿ. ಯಾವಾಗಲೂ ಮೆಟ್ಟಿಲುಗಳನ್ನು ಪ್ರದಕ್ಷಿಣಾಕಾರವಾಗಿ ನಿರ್ಮಾಣ ಮಾಡಬೇಕು. ಮನೆಯ ಮಧ್ಯದಲ್ಲಿರುವ ಜಾಗವನ್ನು ಯಾವಾಗಲೂ ಖಾಲಿ ಇಡಿ. ಅಲ್ಲಿ ಮೆಟ್ಟಿಲು ನಿರ್ಮಾಣ ಮಾಡಲು ಹೋಗಬೇಡಿ. 

Vastu Tips : ಪತಿ – ಪತ್ನಿ ಮಧ್ಯೆ ಸರಸ ಹೆಚ್ಚಿಸುವ ಕೊಳಲು

ಟೆರೇಸ್ ಮತ್ತು ಬಾಲ್ಕನಿಯಲ್ಲಿ ಕಸ ಇಡಬೇಡಿ : ಮನೆಯಲ್ಲಿ ಬಳಕೆಯಾಗದ ವಸ್ತು ಅಥವಾ ಮನೆಗೆ ಬೇಡವಾದ ವಸ್ತುಗಳನ್ನು ನಾವು ಕಸಕ್ಕೆ ಎಸೆಯುವುದಿಲ್ಲ. ಮುಂದೆ ಎಂದಾದ್ರೂ ಬರಬಹುದು ಎಂಬ ಕಾರಣಕ್ಕೆ ಅದನ್ನು ಎತ್ತಿಡುತ್ತೇವೆ. ಮನೆಯ ಟೆರೆಸ್ ಅಥವಾ ಬಾಲ್ಕನಿಯಲ್ಲಿ ಇದಕ್ಕೆ ಜಾಗ ಮಾಡ್ತಾವೆ. ಬಾಲ್ಕನಿಯಲ್ಲಿ ಇಂಥ ಬೇಡದ ಕಸ ರಾಶಿಯಾಗಿರುತ್ತದೆ. ಎಂದಿಗೂ ಅಲ್ಲಿ ಕಸವನ್ನು ಹಾಕಬಾರದು. ಇದ್ರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಕಾರನ್ನು ಪೂರ್ವ ದಿಕ್ಕಿನಲ್ಲಿ ನಿಲ್ಲಿಸಿ : ಮನೆ ಕಟ್ಟುವಾಗ ದಕ್ಷಿಣ – ಪೂರ್ವ ದಿಕ್ಕಿಗೆ ವಾಹನ ನಿಲುಗಡೆ ಮಾಡುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಇದು ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಇದೇ ದಿಕ್ಕಿನಲ್ಲಿ ನೀವು ನೀರಿನ ಟ್ಯಾಂಕ್ ಕೂಡ ಇಡಬಹುದು. 
 

click me!