Vastu for prosperity: ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಎಂದೂ ಖಾಲಿಯಾಗೋಲ್ಲ!

By Suvarna NewsFirst Published Apr 23, 2022, 3:38 PM IST
Highlights

ವಾಸ್ತುವಿನ ಪ್ರಕಾರ, ಕೆಲ ವಸ್ತುಗಳನ್ನು ಮನೆಯಿಂದ ಹೊರ ಹಾಕಿದರೆ ಸಮೃದ್ಧಿ ಹೆಚ್ಚುತ್ತದೆ. ಹಾಗೆಯೇ ಮತ್ತೆ ಕೆಲವು ವಸ್ತುಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿಡುವುದರಿಂದ ಕೂಡಾ ಸಮೃದ್ಧಿ ಹೆಚ್ಚುತ್ತದೆ. ಮನೆಯಲ್ಲಿ ಎಂದೂ ಸಂಪತ್ತು ಖಾಲಿಯಾಗಬಾರದೆಂದರೆ ಈ ವಸ್ತುಗಳನ್ನು ಮನೆಯಲ್ಲಿರಿಸಿ. 

ವಾಸ್ತು ಶಾಸ್ತ್ರದ ಪ್ರಕಾರ, ಆರ್ಥಿಕ ಪ್ರಗತಿಯು ಮನೆಯ ಪೂರ್ವ(east) ಮತ್ತು ಈಶಾನ್ಯ ದಿಕ್ಕಿ(northeast)ಗೆ ನೇರವಾಗಿ ಸಂಬಂಧಿಸಿದೆ. ತಜ್ಞರ ಪ್ರಕಾರ, ಈ ದಿಕ್ಕುಗಳಲ್ಲಿ ಯಾವುದೇ ವಾಸ್ತು ದೋಷವಿದ್ದರೆ, ಆಗ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಅದೇ ಸಮಯದಲ್ಲಿ, ಈ ದಿಕ್ಕುಗಳ ತಪ್ಪಾದ ಬಳಕೆಯು ಒಬ್ಬ ವ್ಯಕ್ತಿಗೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಅಂಥ ಪರಿಸ್ಥಿತಿಯಲ್ಲಿ, ಯಶಸ್ವಿ ವೃತ್ತಿ ಜೀವನ ಮತ್ತು ಆರ್ಥಿಕ ಸಮೃದ್ಧಿ(financial prosperity)ಗಾಗಿ ಈ ಎರಡು ದಿಕ್ಕುಗಳನ್ನು ಹೇಗೆ ಬಳಸಬೇಕೆಂದು ತಿಳಿಯಿರಿ.

ನೀಲಿ ಬಣ್ಣದ ಪಿರಮಿಡ್(Blue coloured pyramid)
ಪೂರ್ವ ಹಾಗೂ ಈಶಾನ್ಯ ದಿಕ್ಕುಗಳಲ್ಲಿ ದೋಷವಿದ್ದರೆ ಆಗ ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಬಣ್ಣದ ಪಿರಮಿಡ್ ಇಡುವುದು ಮಂಗಳಕರವೆಂದು ವಾಸ್ತು ಸಲಹೆ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕಿನಲ್ಲಿ ನೀಲಿ ಬಣ್ಣದ ಪಿರಮಿಡ್ ಇಡುವುದರಿಂದ ಹಣದ ಸಂಗ್ರಹ ಎಂದಿಗೂ ಖಾಲಿಯಾಗುವುದಿಲ್ಲ. ಮನೆಯ ಸದಸ್ಯರ ದುಡಿಮೆಯ ಶಕ್ತಿ ಹೆಚ್ಚುತ್ತದೆ. 

ಗಾಜಿನ ಬೌಲ್(Glass bowl)
ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿನ ಅಧಿಪತಿ ಕುಬೇರ, ಸಂಪತ್ತು ಮತ್ತು ಸಮೃದ್ಧಿಯ ದೇವರು. ಹೀಗಾಗಿ ಮನೆಯ ಉತ್ತರ ದಿಕ್ಕಿನಲ್ಲಿ ಗಾಜಿನ ಬಟ್ಟಲನ್ನು ಇಡಬೇಕು. ಅಲ್ಲದೆ, ಈ ಬಟ್ಟಲಿನಲ್ಲಿ ಬೆಳ್ಳಿಯ ನಾಣ್ಯವನ್ನು ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನೆಲೆಸುತ್ತದೆ.

Venus Transit 2022: ಏ.27ಕ್ಕೆ ಈ ನಾಲ್ಕು ರಾಶಿಗಳಿಗೆ ಶುರುವಾಗಲಿದೆ ಅದೃಷ್ಟ

ತುಳಸಿ ಮತ್ತು ನೆಲ್ಲಿಕಾಯಿ(Gooseberry)
ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡ ನೆಡುವುದು ಮಂಗಳಕರವೆಂದು ವಾಸ್ತುವಿನಲ್ಲಿ ಪರಿಗಣಿಸಲಾಗಿದೆ. ಇದರ ಜೊತೆಗೆ ಆಮ್ಲ (ನೆಲ್ಲಿಕಾಯಿ) ಮರವನ್ನು ನೆಡುವುದು ಸಹ ಪ್ರಯೋಜನಕಾರಿಯಾಗಿದೆ. ಇದು ಕುಟುಂಬದ ಆರ್ಥಿಕ ಏಳಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳು
ವಾಸ್ತು ಪ್ರಕಾರ, ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹ(Idols of Lord Ganesha and Goddess Lakshmi)ವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಅಲ್ಲದೆ, ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳ ಮುಂದೆ ಪ್ರತಿ ದಿನ ಮಣ್ಣಿನ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಎಂದಿಗೂ ಹಣದ ಕೊರತೆಯಾಗುವುದಿಲ್ಲ.

ಉತ್ತರ ದಿಕ್ಕು(North Direction)
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕಿನಲ್ಲಿ ಕುಬೇರ ಮೂಲೆ ಇರುವುದು. ಆದ್ದರಿಂದ ಹಣ ಅಥವಾ ಸೇಫ್ ಲಾಕರ್ ಅನ್ನು ಮನೆಯ ಈ ದಿಕ್ಕಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಆಗುವುದಿಲ್ಲ.

ಇನ್ನೆರಡು ದಿನದಲ್ಲಿ ಬುಧ ಗೋಚಾರ; ಈ ಸಂಚಾರವು ನಿಮ್ಮ ಪಾಲಿಗೇನು ತರಲಿದೆ?

ಅಕ್ವೇರಿಯಂ(Aquarium)
ಕಾರಂಜಿಗಳು ಅಥವಾ ಅಕ್ವೇರಿಯಂಗಳಂಥ ಜಲಮೂಲಗಳಿಗೆ ನಿಮ್ಮ ಮನೆಯಲ್ಲಿ ಜಾಗ ನೀಡುವುದು ಸಾಕಷ್ಟು ಮಂಗಳಕರವಾಗಿರುತ್ತದೆ. ಹಣದ ಒಳಹರಿವು ಹೆಚ್ಚಾಗಲು ಈ ವಸ್ತುಗಳನ್ನು ಮನೆಯ ಈಶಾನ್ಯ ಭಾಗದಲ್ಲಿ ಇಡಬೇಕು. ನೀರಿನ ಶುದ್ಧತೆ ಮತ್ತು ಅದರ ಹರಿವನ್ನು ನಿಯಮಿತವಾಗಿ ಪರಿಶೀಲಿಸಬೇಕು ಮತ್ತು ನಿರ್ವಹಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇವುಗಳನ್ನು ನಿರ್ಲಕ್ಷಿಸುವುದರಿಂದ ಆರ್ಥಿಕ ಯಶಸ್ಸಿಗೆ ಅಡೆತಡೆಗಳು ಉಂಟಾಗಬಹುದು.

ಕುಬೇರ ಯಂತ್ರ
ಕುಬೇರನು ಶ್ರೀಮಂತಿಕೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತಾನೆ ಮತ್ತು ನಿಮ್ಮ ಮನೆಯ ಈಶಾನ್ಯ ಮೂಲೆಯನ್ನು ಅವನು ಆಳುತ್ತಾನೆ. ಇಲ್ಲಿ ನೀವು ಕುಬೇರ ಯಂತ್ರವನ್ನು ಇಡಬೇಕು. ನಿಮ್ಮ ಮನೆಯ ಈಶಾನ್ಯ ಪ್ರದೇಶದಿಂದ ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುವ ಎಲ್ಲ ವಸ್ತುಗಳನ್ನು ತೆಗೆದು ಹಾಕಬೇಕು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!