
ಪ್ರತಿ ವರ್ಷ ಕೃಷ್ಣ ಪಕ್ಷದ ಚತುರ್ದಶಿಯಂದು ಶಿವರಾತ್ರಿ (Shivaratri)ಯನ್ನು ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್ (March) ಒಂದರಂದು ಶಿವರಾತ್ರಿ ಹಬ್ಬ (Festival) ಬಂದಿದೆ. ಇದಕ್ಕೆ ಭಕ್ತರು ಕಾತರದಿಂದ ಕಾಯ್ತಿದ್ದಾರೆ. ಜನರು ಭೋಲೇನಾಥನನ್ನು ಮೆಚ್ಚಿಸಲು ಮತ್ತು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಶಿವರಾತ್ರಿಯಂದು ಉಪವಾಸವನ್ನು ಆಚರಿಸುತ್ತಾರೆ. ರಾತ್ರಿಪೂರ್ತಿ ಶಿವನ ಪ್ರಾರ್ಥನೆ ನಡೆಯುತ್ತದೆ. ಕೇವಲ ಇಷ್ಟಾರ್ಥ ಸಿದ್ಧಿಗೆ ಮಾತ್ರವಲ್ಲ ವಾಸ್ತು ದೋಷವಿದ್ದರೆ ಅಥವಾ ಮಾಡಿದ ಕೆಲಸಗಳು ಕೈಗೂಡದೆ ಹೋದ್ರೆ ಮಹಾಶಿವರಾತ್ರಿಯ ದಿನದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಶಿವರಾತ್ರಿಯು ಸಾಧನೆಯ ರಾತ್ರಿಯಾಗಿದೆ. ಆದ್ದರಿಂದ ಈ ದಿನ ಮಾಡುವ ಕೆಲವು ಕೆಲಸಗಳು ತ್ವರಿತ ಫಲಿತಾಂಶವನ್ನು ನೀಡುತ್ತದೆ. ಶಿವರಾತ್ರಿಯಂದು ಹೀಗೆ ಮಾಡಿ..
ಶಿವಲಿಂಗ ಸ್ಥಾಪನೆ : ಶಿವರಾತ್ರಿಯಂದು ಮನೆಯಲ್ಲಿ ಶಿವಲಿಂಗ ಸ್ಥಾಪನೆಯನ್ನು ಬ್ರಾಹ್ಮಣರ ಮೂಲಕ ಮಾಡಬೇಕು. ನಂತ್ರ ಪ್ರತಿ ದಿನ ಪದ್ಧತಿಯಂತೆ ಶಿವಲಿಂಗವನ್ನು ಪೂಜಿಸಬೇಕು. ಇದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಶಿವಲಿಂಗ ಸ್ಥಾಪನೆಗೆ ಶಿವರಾತ್ರಿ ಶುಭದಿನ.
ಬಡವರಿಗೆ ದಾನ : ಶಿವರಾತ್ರಿಯಂದು ಬಡವರಿಗೆ ಅನ್ನದಾನ ಮಾಡಬೇಕು. ಮನೆಯಲ್ಲಿ ಎಂದಿಗೂ ಅನ್ನದ ಕೊರತೆ ಉಂಟಾಗುವುದಿಲ್ಲ ಮತ್ತು ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪ್ರಸಾದ, ಆಹಾರ, ಬಟ್ಟೆ ಮತ್ತು ಇತರ ವಸ್ತುಗಳನ್ನು ದಾನ ಮಾಡಬಹುದು. ಇದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಸದಾ ಪೂರ್ವಜರ ರಕ್ಷಣೆ ನಿಮ್ಮ ಮೇಲಿರುತ್ತದೆ.
PANCHANGA: ಕುಜನ ಸ್ಥಾನಪಲ್ಲಟ, ಭಯ ನಿರ್ಮೂಲನೆಗೆ ಈಶ್ವರನ ಈ ಮಂತ್ರ ಪಠಿಸಿದರೆ ಅನುಕೂಲವಾಗುವುದು
ಮನಸ್ಸಿಗೆ ನೆಮ್ಮದಿ ಸಿಗಬೇಕೆಂದ್ರೆ ಹೀಗೆ ಮಾಡಿ : ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ಮತ್ತು ‘ಓಂ ನಮಃ ಶಿವಾಯ’ ಮಂತ್ರವನ್ನು ಪಠಿಸಿ. ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಮಕ್ಕಳ ಭಾಗ್ಯ : ಶಿವರಾತ್ರಿಯ ದಿನ ಗೋಧಿ ಹಿಟ್ಟಿನಿಂದ 11 ಶಿವಲಿಂಗವನ್ನು ಮಾಡಿ 11 ಬಾರಿ ಸುಡಬೇಕು. ಈ ಪರಿಹಾರದ ಮೂಲಕ, ಮಕ್ಕಳನ್ನು ಪಡೆಯುವ ಅವಕಾಶಗಳನ್ನು ಮಾಡಲಾಗುತ್ತದೆ.
ರೋಗದಿಂದ ಮುಕ್ತಿ ಸಿಗಲು ಹೀಗೆ ಮಾಡಿ : ಶಿವರಾತ್ರಿಯಂದು 101 ಬಾರಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ಇದ್ರ ಜೊತೆ ಮೃತ್ಯುಂಜಯ ಮಂತ್ರ ಹೇಳಬೇಕು. ಇದು ರೋಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಇಷ್ಟಾರ್ಥ ಈಡೇರಿಸುತ್ತಾನೆ ಶಿವ : ಶಿವರಾತ್ರಿಯಂದು, 21 ಬಿಲ್ವ ಪತ್ರೆಗಳ ಮೇಲೆ ಶ್ರೀಗಂಧವನ್ನಿಟ್ಟು ಶಿವಲಿಂಗಕ್ಕೆ ಅರ್ಪಿಸಿ. ಶಿವನ ಮಂತ್ರವನ್ನು ಜಪಿಸಿ. ಇದರಿಂದ ಇಷ್ಟಾರ್ಥಗಳನ್ನು ಈಡೇರುತ್ತವೆ.
ದಾಂಪತ್ಯದಲ್ಲಿ ಪ್ರೀತಿ : ಪತಿ-ಪತ್ನಿಯರ ನಡುವೆ ಪ್ರೀತಿ ಹೆಚ್ಚಾಗಬೇಕೆಂದ್ರೆ ಶಿವರಾತ್ರಿಯ ಮಂಗಳಕರ ದಿನದಂದು ಗಂಡ ಮತ್ತು ಹೆಂಡತಿ ಒಟ್ಟಿಗೆ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸಬೇಕು. ಸಂಬಂಧದಲ್ಲಿ ಮಧುರತೆ ಹೆಚ್ಚಾಗುತ್ತದೆ.
ಶಿವನಿಗೆ ದೀಪ ಬೆಳಗಿ : ಶಿವರಾತ್ರಿಯಂದು ದೇವಾಲಯದಲ್ಲಿ ದೀಪವನ್ನು ಬೆಳಗಿಸಬೇಕು. ಶಿವರಾತ್ರಿ ಯಾವುದೇ ಶಿವನ ದೇವಸ್ಥಾನದಲ್ಲಿ ದೀಪವನ್ನು ಬೆಳಗಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ತೊಂದರೆ ನಿವಾರಣೆಗೆ ಹನುಮಂತನ ಆರಾಧನೆ : ಹನುಮಂತನ್ನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶಿವರಾತ್ರಿಯಂದು ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಭಕ್ತರ ಎಲ್ಲಾ ತೊಂದರೆಗಳು ದೂರವಾಗುತ್ತವೆ.
Festive Tips: ಶಿವರಾತ್ರಿಯಂದು ಈ ರುದ್ರಾಕ್ಷಿ ಧರಿಸಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದೇ!
ಗಟ್ಟಿಯಾಗುತ್ತೆ ವೈವಾಹಿಕ ಸಂಬಂಧ : ತಾಯಿ ಪಾರ್ವತಿಯನ್ನೂ ಶಿವರಾತ್ರಿಯಂದು ಪೂಜೆ ಮಾಡಬೇಕು. ಪಾರ್ವತಿ ದೇವಿಗೆ ಕೆಂಪು ಸೀರೆ, ಕೆಂಪು ಬಳೆಗಳು, ಕುಂಕುಮ ಮತ್ತು ಜೇನು ತುಪ್ಪವನ್ನು ಅರ್ಪಿಸುವುದರಿಂದ ವೈವಾಹಿಕ ಸಂಬಂಧಗಳಲ್ಲಿ ಮಧುರತೆ ಉಳಿಯುತ್ತದೆ ಎಂದು ನಂಬಲಾಗಿದೆ.
ಕೆಲಸದಲ್ಲಿ ಯಶಸ್ಸು : ಕೆಲಸದಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗಬೇಕೆಂದರೆ ವಾಸ್ತು ಪ್ರಕಾರ, ಮಹಾಶಿವರಾತ್ರಿಯ ದಿನ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. ಹೀಗೆ ಮಾಡಿದ್ರೆ ನೀವು ಮಾಡುವ ಎಲ್ಲ ಕೆಲಸಗಳು ಯಾವುದೇ ಅಡ್ಡಿಯಿಲ್ಲದೆ ನೆರವೇರುತ್ತವೆ.