Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?

By Suvarna News  |  First Published Feb 26, 2022, 11:53 AM IST

ಭಾನುವಾರ ಜನಿಸಿದವರ ಮೇಲೆ ಸೂರ್ಯದೇವನ ಕೃಪೆ ಸದಾ ಇರುತ್ತದೆ. ಜೊತೆಗೆ ಸದಾ ತಾವು ಆಕರ್ಷಣೆಯ ಕೇಂದ್ರಬಿಂದು ಆಗಬೇಕೆನ್ನುವುದು ಇವರ ಬಯಕೆ ಆಗಿರುತ್ತದೆ. ಸದಾ ತಮ್ಮನ್ನು ಜನರು ಸುತ್ತುವರಿದಿರಬೇಕೆಂದು ಆಸೆ ಪಡುವ ಇವರ ಸುತ್ತ ಜನರೂ ಹಾಗೇ ಸುತ್ತುವರಿದಿರುತ್ತಾರೆ. ಇಂಥ ವ್ಯಕ್ತಿತ್ವ ಹೊಂದಿರುವ ಇವರ ಇನ್ನಷ್ಟು ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ನೋಡೋಣ.


ಭಾನುವಾರವೆಂದರೆ (Sunday) ಎಲ್ಲರಿಗೂ ಅಚ್ಚುಮೆಚ್ಚು. ಅದೊಂಥರ ಜಾಲಿ ಡೇ. ಯಾಕಂದ್ರೆ ಅದು ರಜಾ ದಿನವಾಗಿದ್ದರಿಂದ (Holiday) ಎಲ್ಲರೂ ರಿಲ್ಯಾಕ್ಸ್ ಮೂಡ್ (Relax mood), ಶಾಪಿಂಗ್ ಮೋಡ್‌ನಲ್ಲಿ ಇರುತ್ತಾರೆ. ಈ ಭಾನುವಾರಕ್ಕೆ ರವಿವಾರ, ಆದಿತ್ಯವಾರ ಎಂದೆಲ್ಲ ಕರೆಯಲಾಗುತ್ತದೆ. ಈ ದಿನಕ್ಕೆ ಅದರದ್ದೇ ಆದ ಮಹತ್ವವೂ ಇದೆ. 

ಈ ದಿನದ ಅಧಿಪತಿ ಗ್ರಹ ಸೂರ್ಯವಾಗಿದೆ (Sun Planet). ಭಾನುವಾರ ಜನಿಸಿದವರು ನಿಜಕ್ಕೂ ಸೂರ್ಯನಂತೆ ಪ್ರಖರತೆಯನ್ನು ಹೊಂದಿರುವವರು. ಇವರು ಅಲ್ಪತೃಪ್ತರಲ್ಲ. ಮಹತ್ವಾಕಾಂಕ್ಷಿಗಳಾಗಿದ್ದು (Ambitious), ಸಾವಿರ ಜನರಿದ್ದರೂ ಅವರೊಂದಿಗೆ ತಾವು ವಿಶಿಷ್ಟವಾಗಿ ಹೊರಹೊಮ್ಮಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಅಲ್ಲದೆ, ಇವರು ಸಖತ್ ಕ್ರಿಯೇಟಿವ್ (Creative) ಆಗಿದ್ದು, ತುಂಬಾ ಕಾನ್ಫಿಡೆನ್ಸ್‌ನಲ್ಲಿ ಇರುತ್ತಾರೆ. 

ವ್ಯಕ್ತಿತ್ವ ಹೇಗೆ...? (Personality)
ಭಾನುವಾರ ಜನಿಸಿದವರಿಗೆ ಮೋಜಿನ ಜೀವನ ಎಂದರೆ ಅಚ್ಚುಮೆಚ್ಚು. ಇವರಿಗೆ ಆತ್ಮವಿಶ್ವಾಸದ (Confidence) ಕೊರತೆ ಖಂಡಿತಾ ಇಲ್ಲ. ಆದರೆ, ಒಮ್ಮೊಮ್ಮೆ ಎದುರಾಗುವ ಸಮಸ್ಯೆಗಳು (Problems), ಸವಾಲುಗಳನ್ನು (Challenges) ಎದುರಿಸುವಾಗ ಮಾತ್ರ ಬಹಳ ಚಿಂತಿತರಾಗುತ್ತಾರೆ. ತಮಗೆ ಬಹುಪರಾಕ್ ಹೇಳುವ ಮಂದಿಯ ಬಳಿ ಮಾತ್ರ ಸ್ನೇಹ ಮಾಡುವ ಇವರು, ಮಿಕ್ಕವರನ್ನು ಅಷ್ಟಾಗಿ ಹಚ್ಚಿಕೊಳ್ಳುವವರಲ್ಲ. ಇವರ ಅದೃಷ್ಟ ಸಂಖ್ಯೆ (Lucky Number) 1. ಪ್ರತಿದಿನ ಬೆಳಗ್ಗೆ ಅಥವಾ ಕನಿಷ್ಠ ಭಾನುವಾರವಾದರೂ ಸೂರ್ಯ ದೇವರ ಆರಾಧನೆ ಮಾಡಿದರೆ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತವೆ. 

ಇದನ್ನು ಓದಿ : Astro Mantra: ಶುಕ್ರವಾರ ಲಲಿತಾ ಸಹಸ್ರನಾಮವ ಜಪಿಸಿದರೆ ಫಲ ಹೆಚ್ಚು!

ವೃತ್ತಿ ಜೀವನ (Career) ಹೀಗಿದೆ... 
ಇನ್ನು ಭಾನುವಾರ ಜನಿಸಿದವರ ವೃತ್ತಿ ಜೀವನವನ್ನು ಗಮನಿಸುವುದಾದರೆ, ಅವರು ತಮ್ಮ ಉದ್ಯೋಗದಲ್ಲಿ ಸ್ವತಂತ್ರವನ್ನು ಬಯಸುತ್ತಾರೆ. ತಮ್ಮನ್ನು ಇನ್ನೊಬ್ಬರು ನಿಯಂತ್ರಣ (Control) ಮಾಡುವುದು ಇವರಿಗೆ ಅಷ್ಟಾಗಿ ಸರಿಬರದು. ಇದು ಒಮ್ಮೊಮ್ಮೆ ಭಿನ್ನಾಭಿಪ್ರಾಯಗಳಿಗೂ (Differences) ಕಾರಣವಾಗಬಹುದು. ಆದರೆ, ರಾಜಿ ಮಾಡಿಕೊಳ್ಳಲು ಇವರಿಗೆ ಮನಸ್ಸು ಒಪ್ಪದು. ಕೆಲಸದ ವಿಚಾರಕ್ಕೆ ಬಂದರೆ ಬಹಳ ಶ್ರಮ ಪಡುವ ಇವರು, ಕಷ್ಟಪಡುತ್ತಾರೆ. ಹಾಗಾಗಿ ಇವರು ತಮ್ಮ ಬುದ್ಧಿವಂತಿಕೆಗೆ ತಕ್ಕ ಕೆಲಸವನ್ನು ಆಯ್ದುಕೊಂಡರೆ ಉತ್ತಮ. ಇವರಿಗೆ ನಾಯಕತ್ವದ ಗುಣಗಳು ಉತ್ತಮವಾಗಿಯೇ ಇದ್ದು, ಆ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಹಾಕಿ ಆ ಸ್ಥಾನವನ್ನು ಪಡೆಯಬೇಕಿದೆ. ಇವರಿಗಿರುವ ಜಾಣ್ಮೆಯು ವೃತ್ತಿ ಜೀವನದಲ್ಲಿ ಉತ್ತಮ ಮಟ್ಟದ ಯಶಸ್ಸನ್ನು ತಂದು ಕೊಡುತ್ತದೆ. ಇನ್ನು ಉದ್ಯೋಗ (Job), ಕಚೇರಿ (Office) ಎಂದು ಬಂದಾಗ ಎಲ್ಲರೊಳಗೆ ನಾನೂ ಒಬ್ಬ ಎಂಬ ಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಬಹುಬೇಗ ಸಿಗುತ್ತದೆ. 

Name Astrology: ಈ ಅಕ್ಷರಗಳ ಹೆಸರಿನವರು ಉತ್ತಮ ಪತಿಯಾಗಬಲ್ಲರು

ಪ್ರೀತಿಯ ಜೀವನ (Love Life)
ಇವರದ್ದು ಅಂತರ್ಮುಖಿ ವ್ಯಕ್ತಿತ್ವವಾಗಿದ್ದು, ಹೆಚ್ಚಿನ ಸ್ನೇಹಿತರು (Friends) ಇವರ ಬಳಗದಲ್ಲಿರುವುದಿಲ್ಲ. ಹಾಗಾಗಿ ಇವರಿಗೆ ಕ್ಲೋಸ್ ಸರ್ಕಲ್ ಎಂಬುದು ಸೀಮಿತ ಆಗಿರುತ್ತದೆ. ಯಾಕೆಂದರೆ ಇವರು ಯಾರನ್ನು ಸಹ ಅಷ್ಟು ಸುಲಭವಾಗಿ ನಂಬಲಾರರು (Trust). ಮೋಸವಾಗಿಬಿಟ್ಟರೆ ಎಂಬ ಭಯ ಇವರನ್ನು ಸದಾ ಕಾಡುತ್ತಿರುತ್ತದೆ. ಹೀಗಾಗಿ ತಮ್ಮ ಸಂಗಾತಿಯನ್ನು (Partner) ಹುಡುಕುವುದು ಸಹ ಇವರಿಗೆ ಬಹಳವೇ ಕಷ್ಟ. ಮೊದಲು ಸಂಗಾತಿಯನ್ನು ನಂಬಿದರು ಎಂದಾದರೆ ಬಳಿಕ ಅವರ ಮೇಲೆ ಪ್ರೀತಿಯ ಮಳೆಯೇ ಸುರಿಯಲಿದೆ. ಆದರೆ, ಇವರ ಹಠಮಾರಿ ಸ್ವಭಾವದವರಾಗಿರುವುದರಿಂದ ಸಂಗಾತಿ ಜೊತೆಗೆ ಆಗಾಗ ಭಿನ್ನಾಭಿಪ್ರಾಯಗಳು ಬರುತ್ತವೆ. ಹೀಗಾಗಿ ಕೆಲವೊಂದು ಸನ್ನಿವೇಶದಲ್ಲಿ ಇನ್ನೊಬ್ಬರ ಮಾತುಗಳಿಗೂ ಗೌರವ, ಮನ್ನಣೆ ಕೊಡುವುದನ್ನು ರೂಢಿಸಿಕೊಳ್ಳಬೇಕು. ಅಲ್ಲದೆ, ಸಂಗಾತಿಯ ಭಾವನೆಗಳಿಗೆ (Emotions) ಬೆಲೆ ಕೊಡಬೇಕು. 

Tap to resize

Latest Videos

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!