Ukraine Russia Crisis: ಉಕ್ರೇನ್- ರಷ್ಯಾ ಯುದ್ಧದ ಬಗ್ಗೆ ಮೊದಲೇ ಹೇಳಿದ್ದ ನಾಸ್ಟ್ರಾಡಾಮಸ್!

By Suvarna News  |  First Published Feb 26, 2022, 12:07 PM IST

ಉಕ್ರೇನ್ ಮೇಲೆ ರಷ್ಯಾ ಮುಗಿಬಿದ್ದಿರುವ ಈ ಸಂದರ್ಭದಲ್ಲಿ, ಈ ಯುದ್ಧ ಮೂರನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂದು ಫ್ರೆಂಚ್ ಭವಿಷ್ಯವಾದಿ ನಾಸ್ಟ್ರಾಡಾಮಸ್ ಹೇಳಿದ್ದ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ.
 


ಕಳೆದ ಕೆಲವು ವರ್ಷಗಳಿಂದ ಆಶ್ಚರ್ಯಕರ ಘಟನೆಗಳು ನಡೆಯುತ್ತಿವೆ ಹಾಗೂ ಇವುಗಳಲ್ಲಿ ಹಲವು ಘಟನೆಗಳನ್ನು ಫ್ರೆಂಚ್ ಭವಿಷ್ಯವಾದಿ (Astrologer) ನಾಸ್ಟ್ರಾಡಾಮಸ್‌ (Nostradamus) ಮೊದಲೇ ಸೂಚಿಸಿರುವುದು ಗೊತ್ತಾಗಿದೆ. ಫ್ರೆಂಚ್ ಜ್ಯೋತಿಷಿ ಮತ್ತು ದ್ರಷ್ಟಾರನಾದ ನಾಸ್ಟ್ರಾಡಾಮಸ್ 1555ರಲ್ಲೇ ತಮ್ಮ ಪುಸ್ತಕ 'ಲೆಸ್ ಪ್ರೊಫೆಟೀಸ್‌'ನಲ್ಲಿ 942 ಮುನ್ಸೂಚನೆಗಳನ್ನು ಒಳಗೊಂಡ ಭವಿಷ್ಯದ ವಿಷಯಗಳನ್ನು ಬರೆದಿದ್ದಾರೆ. 2022ರಲ್ಲಿ ಯುರೋಪ್‌ನಲ್ಲಿ ಯುದ್ಧ ನಡೆಯಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು. ಅವರು ಹೇಳಿದಂತೆಯೇ ಅನೇಕ ಪ್ರಮುಖ ಘಟನೆಗಳು ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಭವಿಷ್ಯವಾಣಿಗಳು ಭಯಾನಕವಾಗಿ ನಿಜವಾಗಿವೆ.   

ಲಂಡನ್‌ನಲ್ಲಿ (London) ಸಂಭವಿಸಿದ ಮಹಾ ಬೆಂಕಿ ಆಕಸ್ಮಿಕ, ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ (Adolf Hitler) ಆಳ್ವಿಕೆ, ಅವನಿಂದ ಎರಡನೇ ಮಹಾಯುದ್ಧ (World war 2), ಫ್ರೆಂಚ್ ಸಾಮ್ರಾಟ ನೆಪೋಲಿಯನ್‌ನ ಉದಯ ಮತ್ತು ಆಡಳಿತ, ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ (John Kennedy) ಹತ್ಯೆ, ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕೇಂದ್ರದ (World Trade center) ಕಟ್ಟಡದ ಮೇಲೆ 9/11 ಭಯೋತ್ಪಾದಕರ ದಾಳಿ ಸೇರಿದಂತೆ ಹಲವಾರು ಮಹಾ ವಿಶ್ವ ಘಟನೆಗಳನ್ನು ಊಹಿಸಿದ ಕೀರ್ತಿ ನಾಸ್ಟ್ರಾಡಾಮಸ್‌ಗೆ ಸಲ್ಲುತ್ತದೆ. ನಾಸ್ಟ್ರಾಡಾಮಸ್ ಈ ವರ್ಷ ಯುದ್ಧದ ಮುನ್ಸೂಚನೆ ನೀಡಿದ್ದಾನೆ. 

Tap to resize

Latest Videos

undefined

ವಿಶ್ವ ಸಮರ 3, ಭೂಕಂಪ ಮತ್ತು ಮೂರನೇ ಧರ್ಮವಿರೋಧಿ ಪ್ರವಾದಿಯ ಜನನ ಇಷ್ಟರಲ್ಲಿ ಸಂಭವಿಸಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದ. 'ನಾಸ್ಟ್ರಾಡಾಮಸ್: ಎಂಡ್ ಆಫ್ ಡೇಸ್' ಎಂಬ ಶೀರ್ಷಿಕೆಯನ್ನು ಹೊಂದಿದ ಸರಣಿಯಲ್ಲಿ, ಬ್ರಿಟಿಷ್ ನಾಸ್ಟ್ರಾಡಾಮಸ್ ತಜ್ಞ ಬಾಬಿ ಶೈಲರ್ ಇದನ್ನು ಹೇಳಿದ್ದಾರೆ. "ಫ್ರೆಂಚ್ ಭವಿಷ್ಯವಾದಿಯ ಮಾತುಗಳನ್ನು ಸರಿಯಾಗಿ ವ್ಯಾಖ್ಯಾನಿಸಿದರೆ, ಅವನು "ಅಂತಿಮ ಘರ್ಷಣೆ" ಎಂದು ಕರೆದ ದುರಂತದ ಸಂದರ್ಭದಲ್ಲಿ ಭೂಮಿಯು ನಾಶವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ಸಂಭವಿಸಬೇಕಿದ್ದರೆ ಇನ್ನೂ 1,772 ವರ್ಷಗಳವರೆಗೆ ಕಾಯಬೇಕು'' ಎಂದಿದ್ದಾರೆ.

Number and Wedding Dates: ದಿನಾಂಕಕ್ಕೂ ಮದುವೆ ಮುರಿಯುವುದಕ್ಕೂ ಸಂಬಂಧವಿದ್ಯಾ?

ಯೆಲ್ಲೊಸ್ಟೋನ್ (Yellowstone) ರಾಷ್ಟ್ರೀಯ ಉದ್ಯಾನವನದಲ್ಲಿ ಜ್ವಾಲಾಮುಖಿ ಸ್ಫೋಟ ಮತ್ತು ಮುಂಬರುವ ವರ್ಷಗಳಲ್ಲಿ ಸಂಭವಿಸಬಹುದಾದ ಬೃಹತ್ ಸೌರ ಜ್ವಾಲೆಯ (Solar Flame) ಬಗ್ಗೆ ಬಾಬಿ ಹೇಳಿದ್ದಾರೆ. "ನಾಸ್ಟ್ರಾಡಾಮಸ್ ಅವರು ಅಂತಿಮ ದಹನ, ಸ್ವರ್ಗದಿಂದ ಬೆಂಕಿ, ಅಳಿವಿನ ಹಂತದ ಘಟನೆಗಳು, ಎರಡು ಅಥವಾ ಮೂರು ಹಂತಗಳಲ್ಲಿ, ಬಹುಶಃ 3797ರ ಸಮೀಪದಲ್ಲಿ ಸಂಭವಿಸಬಹುದು ಎಂದು ಹೇಳುತ್ತಾರೆ. ಆದರೆ ಅದಕ್ಕೂ ಮೊದಲು ಅವರು ಹಲವಾರು ದೇಶಗಳ ನುಡವಿನ ದೊಡ್ಡ ಘರ್ಷಣೆಗಳನ್ನು ಉಲ್ಲೇಖಿಸುತ್ತಾರೆ" ಎಂದು ಬಾಬಿ ಹೇಳುತ್ತಾರೆ. 

ಈ ವರ್ಷ ಮೂರನೇ ಮಹಾಯುದ್ಧ ಸಂಭವನೀಯ. ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಯ ಪ್ರಕಾರ, ಜಗತ್ತಿನ ಜನತೆ ಮೂರನೇ ಮಹಾಯುದ್ಧವನ್ನು ಈಗ ಎದುರಿಸಿದರೆ, ಮುಂದಿನ 1000 ವರ್ಷಗಳ ಶಾಂತಿಯನ್ನು ಅನುಭವಿಸಬಹುದು, ಇದನ್ನು ಶನಿಯ ಯುಗ ಎಂದು ಕರೆಯಲಾಗುತ್ತದೆ ಎಂದು ಶೈಲರ್ ಹೇಳಿದ್ದಾರೆ. ಇದನ್ನು ಸೂಚಿಸುವ ಹಲವು ಭವಿಷ್ಯವಾದಿ ಸೂಕ್ತಿಗಳನ್ನು ಅವರು ಉಲ್ಲೇಖಿಸಿದ್ದಾರೆ.  

Life Lessons: ಮಹಾದೇವನ ಜೀವನದಿಂದ ನಾವು ಕಲಿಯಲೇಬೇಕಾದ ಕನಿಷ್ಠ ವಿಷಯಗಳಿವು..

ಇನ್ನಿತರ ಭವಿಷ್ಯವಾಣಿಗಳು 
2022ರಲ್ಲಿ ಅಣುಬಾಂಬ್‌ (Nuclear Bomnb) ಸ್ಪೋಟ ನಡೆಯಲಿರುವ ಬಗ್ಗೆ ನಾಸ್ಟ್ರಾಡಾಮಸ್‌ ಮುನ್ಸೂಚನೆ ನೀಡಿದ್ದಾನೆ. ಈ ಅಣುಬಾಂಬ್‌ ಸ್ಪೋಟದಿಂದಾಗಿ ಹವಾಮಾನವೇ ಬದಲಾವಣೆ ಆಗಲಿದೆ. ಭಾರಿ ಹಾನಿ ಉಂಟಾಗಲಿದೆ ಎಂದಿದ್ದಾನೆ. ಈ ಸಂದರ್ಭದಲ್ಲಿ ಭೂಮಿಯ ಸ್ಥಿತಿಯಲ್ಲಿಯೂ ಬದಲಾವಣೆ ಉಂಟಾಗಲಿದೆ ಎಂದು ಫ್ರೆಂಚ್‌ ಜ್ಯೋತಿಷಿ ಸೂಚನೆ ನೀಡಿದ್ದಾನೆ. ಬಹುಶಃ ರಷ್ಯಾದಿಂದ ಅಣ್ವಸ್ತ್ರ ಪ್ರಯೋಗ ಸಂಭವಿಸಬಹುದು ಎಂದು ಈಗ ತರ್ಕಿಸಲಾಗುತ್ತಿದೆ. 

Hindu Religion: ಮನೆಯಲ್ಲಿ ಪವಿತ್ರ ಗಂಗಾಜಲವಿದ್ರೆ ಈ ತಪ್ಪು ಮಾಡ್ಬೇಡಿ

ವಿಶ್ವದ ದೊಡ್ಡ ನಾಯಕನೊಬ್ಬ ಹಠಾತ್ ನಿರ್ಗಮಿಸಲಿದ್ದಾನೆ. ಆತನ ಜಾಗದಲ್ಲಿ ಬೇರೆಯವರು ಬರಲಿದ್ದಾರೆ- ಎಂದು ಹೇಳುತ್ತಾನೆ. ಇದು ಯಾರೆಂದು ಸ್ಪಷ್ಟವಾಗಿಲ್ಲ. ಬಹುಶಃ ಉತ್ತರ ಕೊರಿಯದ (North Korea) ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un) ಬಗ್ಗೆ ಹೇಳುತ್ತಿರಬಹುದೆಂಧು ಭಾವಿಸಲಾಗಿದೆ, ಆದರೆ ಅದು ಬ್ರಿಟನ್ ರಾಣಿ ಎಲಿಜಬೆತ್ (Queen Elizabeth) , ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಆಗಿರಬಹುದೆಂದೂ ಕೆಲವರು ಭಾವಿಸಿದ್ದಾರೆ. 2022ರಲ್ಲಿ ಇಡೀ ವಿಶ್ವದಲ್ಲಿ ಸುಮಾರು 72 ಗಂಟೆಗಳ ಕಾಲ ಅಂದರೆ ಮೂರು ದಿನಗಳ ಕಾಲ ಕಗ್ಗತ್ತಲು ಇರಲಿದೆ. ಕಣಿವೆ ಪ್ರದೇಶದಲ್ಲಿ ಹಿಮವು ಬೀಳುವ ಸಾಧ್ಯತೆ ಇದೆ. ಈ ಪ್ರಕೃತಿ ವಿಕೋಪವು ಹಲವಾರು ಪ್ರದೇಶಗಳಲ್ಲಿ ಯುದ್ಧಕ್ಕೆ ಅಂತ್ಯ ಹಾಡಲಿದೆ. ಮೂರು ದಿನಗಳ ಕಾಲ ವಿಶ್ವದಲ್ಲಿ ಕತ್ತಲು ಆವರಿಸಲಿದೆ ಎಂದು ನಾಸ್ಟ್ರಾಡಾಮಸ್‌ ಮುನ್ಸೂಚನೆ ನೀಡಿದ್ದಾರೆ. 

 

click me!