Chamarajanagar: ಬಿಳಿಗಿರಿರಂಗಪ್ಪನ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ

By Govindaraj SFirst Published Apr 17, 2022, 4:22 PM IST
Highlights

ಬಿಳಿಗಿರಿರಂಗನ ಬೆಟ್ಟದಲ್ಲಿ ಶನಿವಾರ ನಡೆದ ಬ್ರಹ್ಮ ರಥೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿತು. ಸಾವಿರಾರು ಸಂಖ್ಯೆ ಭಕ್ತರು ಗೋವಿಂದನ ನಾಮಸ್ಮರಣೆ ಮೂಲಕ ಭಕ್ತಿ ಮೆರೆದರು. ಬೆಟ್ಟದ ತೇರಿನ ಬೀದಿಯಲ್ಲಿ ನೂತನ ತೇರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಯಳಂದೂರು (ಏ.17): ಬಿಳಿಗಿರಿರಂಗನ ಬೆಟ್ಟದಲ್ಲಿ (Biligiri Ranganatha Hill) ಶನಿವಾರ ನಡೆದ ಬ್ರಹ್ಮ ರಥೋತ್ಸವಕ್ಕೆ (Bramha Rathotsava) ಭಕ್ತ ಸಾಗರವೇ (Devotees) ಹರಿದು ಬಂದಿತು. ಸಾವಿರಾರು ಸಂಖ್ಯೆ ಭಕ್ತರು ಗೋವಿಂದನ ನಾಮಸ್ಮರಣೆ ಮೂಲಕ ಭಕ್ತಿ ಮೆರೆದರು. ಬೆಟ್ಟದ ತೇರಿನ ಬೀದಿಯಲ್ಲಿ ನೂತನ ತೇರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಥದ ಎರಡೂ ಬದಿಯಲ್ಲಿ ಕಟ್ಟಿದ್ದ ಹಗ್ಗವನ್ನು ಗೋವಿಂದನ ನಾಮಸ್ಮರಣೆಯಲ್ಲಿ ಸಾವಿರಾರು ಭಕ್ತರು ಎಳೆದು ಪುನೀತ ಭಾವನೆ ಮೆರೆದರು. ಬೆಳಗ್ಗೆ 5 ಗಂಟೆಯಿಂದಲೇ ವಿವಿಧ ಧಾರ್ಮಿಕ ವಿಧಿಗಳು ನಡೆದವು. 

ಮೊದಲಿಗೆ ಕಲ್ಯಾಣೋತ್ಸವ, 7ಕ್ಕೆ ಪ್ರಸ್ಥಾನ ಮಂಟಪೋತ್ಸವಗಳು ಅಲ್ಲದೇ ದೇವರಿಗೆ ತುಳಸಿ ಹಾರ ಸೇರಿದಂತೆ ಹೂವಿನ ಅಲಂಕಾರ ಮಾಡಿ ವಿಶೇಷ ಪುಜೆ ನೆರವೇರಿಸಲಾಯಿತು. ಮಧ್ಯಾಹ್ನ 12.10 ಗಂಟೆ ಮೇಲೆ 12.22ಗಂಟೆಯ ಒಳಗೆ ಮಹಾರಥೋತ್ಸವ ಜರುಗಿತು. ಸಾವಿರಾರು ಭಕ್ತರು ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ತೇರನ್ನು ಎಳೆಯುತ್ತಿದ್ದಂತೆ ಉಘೇ ಉಘೇ ರಂಗಪ್ಪ ಎಂಬ ಕೂಗು ಭಕ್ತರಿಂದ ಮೊಳಗಿತು. ಬ್ರಹ್ಮರಥೋತ್ಸವದ ಹಿನ್ನೆಲೆ ಕಾಡಿನ ಅನೇಕ ಪೋಡುಗಳಿಂದ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೋಲಿಗರು ಆಗಮಿಸಿ ನೆಚ್ಚಿನ ಭಾವ ಬಿಳಿಗಿರಿರಂಗಪ್ಪನಿಗೆ ಭಕ್ತಿ ಸಮರ್ಪಿಸಿದರು.

Kollegal: ದೇವಾಲಯಕ್ಕೆ ಅನುದಾನ ಕೊಡಲು ವಿಳಂಬ: ಶಾಸಕರ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು..!

ತೇರು ಎಳೆಯುವ ಸಂದರ್ಭದಲ್ಲಿ ಇಲ್ಲಿ ಗರುಡ ಪಕ್ಷಿ ತೇರಿನ ಸುತ್ತ ಪ್ರದಕ್ಷಿಣೆ ಹಾಕುವುದು ವಾಡಿಕೆಯಾಗಿದ್ದು, ಅದರಂತೆ ಶನಿವಾರ ಸಹ ಈ ವಿಶಿಷ್ಟಘಟನೆಗೆ ಸಾವಿರಾರು ಭಕ್ತರು ಸಾಕ್ಷಿಯಾಯಿತು. ತೇರನ್ನು ಎಳೆಯುವ ವೇಳೆ ಗರಡು ಪಕ್ಷಿ ರಥದ ಸುತ್ತ ಪ್ರದಕ್ಷಿಣೆ ಹಾಕಿದಾಗ ಭಕ್ತರು ಚಪ್ಪಳೆ ತಟ್ಟಿ, ಶಿಳ್ಳೆ ಹೊಡೆದು ರಥವನ್ನು ಭಕ್ತಿ ಪೂರ್ವಕ ಎಳೆದು ಪುನೀತ ಭಾವನೆ ಮೆರೆದರು. 

ಜಾತ್ರೆಗೆ ಆಗಮಿಸಿದ ಭಕ್ತರು ಇಲ್ಲೇ ಸಿಗುವ ಹಣ್ಣು ಜವನ ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದ್ದು ಕಂಡು ಬಂದಿತು. ನವದಂಪತಿಗಳಲ್ಲದೇ ಹರಕೆ ಹೊತ್ತಿದ್ದ ಅನೇಕ ಭಕ್ತರು ಸಹ ಈ ಧಾರ್ಮಿಕ ವಿಧಿಯನ್ನು ನೆರವೇರಿಸಿದರು. ಧೂಪವನ್ನು ಹಾಕುವ ಮೂಲಕ ಭಕ್ತಿ ಮೆರೆದರು. ಹರಕೆ ಹೊತ್ತ ಭಕ್ತರು ತಮ್ಮ ಮಂಟಪಗಳಲ್ಲಿ ಹಸಿರು ಚಪ್ಪರ ತಳಿರು ತೋರಣಗಳಿಂದ ಅಲಂಕರಿಸಿ ದೇವರ ಮೂರ್ತಿಯನ್ನು ಇಲ್ಲಿಟ್ಟು ಪೂಜೆ ಸಲ್ಲಿಸಿದರು. ದೇವರಿಗೆ ಚಿನ್ನಾಭರಣ ಹಾಕಿದ್ದ ಹಿನ್ನೆಲೆ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು.

ಬಸ್‌ ಇಲ್ಲದೆ ಭಕ್ತರ ಪರದಾಟ: ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಕಾಲದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಬಸ್‌ ನಿಲ್ದಾಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಶನಿವಾರ ಬೆಳಗ್ಗೆಯಿಂದಲೇ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಭಕ್ತರಿಗೆ ಸಕಾಲದಲ್ಲಿ ಬಿಳಿಗಿರಿರಂಗನ ದರ್ಶನ ಮತ್ತು ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ತೊಂದರೆ ಆಗದಂತೆ ಎಚ್ಚರಿಕೆವಹಿಸುವಂತೆ ಹಾಗೂ ಉಚಿತ ಪ್ರಯಾಣ ವ್ಯವಸ್ಥೆ ಮಾಡುವಂತೆ ಅ​ಧಿಕಾರಿಗಳಿಗೆ ಸೂಚನೆ ನೀಡಿದರು.  ಸಾರಿಗೆ ಸಂಸ್ಥೆ ಅಧಿಕಾರಿಗಳು ಸೂಕ್ತ ಬಸ್‌ ವ್ಯವಸ್ಧೆ ಮಾಡದ ಹಾಗೂ ಟಿಕೆಟ್‌ ವಿಧಿಸಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿ, ಕೆಲವು ಕಾಲ ಬಸ್‌ ನಿಲ್ದಾಣದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೋರ್ಟ್‌ ಅಂಗಳಕ್ಕೆ ಚಾಮರಾಜನಗರದ ಉಮ್ಮತ್ತೂರು ಉರುಕಾತೇಶ್ವರಿ ದೇವಸ್ಥಾನ ವಿವಾದ

ಉಚಿತ ಪ್ರಯಾಣ ಇಲ್ಲ: ಗುಂಬಳ್ಳಿ ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ ಬಳಿಯಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಉಚಿತ ಪ್ರಯಾಣ ವ್ಯವಸ್ಧೆ ಮಾಡುವಂತೆ ಸಚಿವರು, ಶಾಸಕರು ಸೂಚನೆ ನೀಡಿದ್ದರು. ಸಾರಿಗೆ ಸಂಸ್ಥೆ ಮಾತ್ರ ಬಿಳಿಗಿರಿರಂಗನ ಬೆಟ್ಟಕ್ಕೆ ಉಚಿತ ಪ್ರಯಾಣ ಇಲ್ಲ. ಬದಲಿಗೆ ಸಾರಿಗೆ ಸಂಸ್ಥೆ 40 ರು. ಟಿಕೆಟ್‌ ತೆಗೆದುಕೊಂಡು ಹೋಗಿ, ಇಲ್ಲವಾದ್ರೆ ಬಸ್ಸಿಂದ ಇಳಿದುಕೊಂಡು ಹೋಗಿ ಎಂದು ಸಂಸ್ಥೆ ಸಿಬ್ಬಂದಿ ಹೇಳಿದ್ದರಿಂದ ಭಕ್ತರು ಟಿಕೆಟ್‌ ಪಡೆದು ಪ್ರಯಾಣಿಸಿದರು.

ಟ್ರಾಫಿಕ್‌ ಜಾಮ್‌: ಬಿಳಿಗಿರಿರಂಗನ ಬೆಟ್ಟಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರಿಂದ ಚಾಮರಾಜನಗರ, ಮೈಸೂರು, ಕೊಳ್ಳೇಗಾಲ, ಬೆಂಗಳೂರು ರಸ್ತೆ ಸಂಚಾರ ವ್ಯವಸ್ಥೆ ಬಂದ್‌ ಆದ್ದರಿಂದ ಸಾರ್ವಜನಿಕರು ಪರದಾಡುವಂತಾಗಿತ್ತು.

click me!