ನಿಮ್ಮ ರಾಶಿಗೆ ಯಾವ ಚಟ ಅಂಟುವ ಸಂಭವ ಜಾಸ್ತಿ ಗೊತ್ತಾ?

By Suvarna NewsFirst Published Apr 17, 2022, 3:45 PM IST
Highlights

ಒಬ್ಬೊಬ್ಬರಿಗೆ ಒಂದೊಂದು ಚಟವಿರುತ್ತದೆ. ಅದೇನು ಕುಡಿತ, ಸ್ಮೋಕಿಂಗ್ ಆಗಿರಬೇಕಿಲ್ಲ. ಯಾವುದೇ ಆದರೂ ಅತಿಯಾದರೆ ಚಟವೇ. ಹಾಗೆ, ಯಾವ ರಾಶಿಗೆ ಯಾವ ಚಟವಿರುತ್ತದೆ ಗೊತ್ತಾ?

ಚಟ(addiction)ಗಳು ಕೆಟ್ಟದ್ದೇ, ಆದರೂ ಬಹುತೇಕರು ಅವುಗಳನ್ನು ಅಂಟಿಸಿಕೊಳ್ಳುತ್ತಾರೆ. ಸದಾ ಕಾಲ ಜಂಕ್ ಫುಡ್ ತಿನ್ನುವುದರಿಂದ ಹಿಡಿದು ಕುಡಿತ, ಲಾಟರಿ, ಸಿಗರೇಟ್ ಸೇವನೆ, ಹುಡುಗಿಯರ ಚಟ- ಹೀಗೆ ಒಬ್ಬೊಬ್ಬರಿಗೆ ಒಂದೊಂದು ಚಟವಿರುತ್ತದೆ. ಕೆಲವರಿಗೆ ಎಲ್ಲವೂ ಇರುತ್ತದೆ. ಈ ಚಟಗಳು ಆರೋಗ್ಯಕ್ಕೆ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಇವು ಮನುಷ್ಯನನ್ನು ಜೀವನದಲ್ಲಿ ಮೇಲೇರಲು ಬಿಡಲಾರವು. ಸಧ್ಯ ಯಾವ ರಾಶಿ(zodiac)ಯವರು ಯಾವ ಚಟಕ್ಕೆ ಬೇಗ ದಾಸರಾಗುತ್ತಾರೆ ನೋಡೋಣ| 

ಮೇಷ(Aries)
ಇವರದು ಯಾರಿಗೂ ಅಂಜದ, ಅಳುಕದ ವ್ಯಕ್ತಿತ್ವ. ಹಾಗಾಗಿ ಇವರು ಬೇಗ ಸ್ಮೋಕಿಂದ್ ಹಾಗೂ ಮದ್ಯದ ಚಟ ಅಂಟಿಸಿಕೊಳ್ಳುತ್ತಾರೆ. ಒಮ್ಮೆ ಇದಕ್ಕೆ ಅಂಟಿಕೊಂಡರೆ ಅದರಿಂದ ಇವರನ್ನು ಹೊರತರುವುದು ಕಷ್ಟವಾಗುತ್ತದೆ. ಯಾರೋ ಹೇಳಿದರೆ ಕೇಳುವವರಲ್ಲ, ತಮಗೇ ಮನಸ್ಸು ಬಂದರೆ ಬಿಡುತ್ತಾರಷ್ಟೇ. 

ವೃಷಭ(Taurus)
ಇವರಿಗೆ ಇಂದ್ರಿಯ ಸುಖವೇ ಎಲ್ಲಕ್ಕಿಂತ ಮುಖ್ಯ. ಹಾಗಾಗಿ, ಅತಿಯಾಗಿ ತಿನ್ನುವುದು ಮತ್ತು ಮದ್ಯ ಸೇವನೆಯಲ್ಲಿ ತೊಡಗುವ ಸಾಧ್ಯತೆ ಹೆಚ್ಚು. ಬದುಕೋಕೋಸ್ಕರ ತಿನ್ನೋದಲ್ಲ, ತಿನ್ನೋಕೋಸ್ಕರನೇ ಬದುಕೋದು ಅಂತ ಹೇಳೋದು ಇವರನ್ನು ನೋಡಿಯೇ. 

ಮಿಥುನ(Gemini)
ಇವರದು ವಾಯು ತತ್ವ. ಹಾಗಾಗಿ ಬೇಗ ಸ್ಮೋಕಿಂಗ್ ಚಟಕ್ಕೆ ಅಂಟಿ ಬಿಡುತ್ತಾರೆ. ಇವರಲ್ಲಿ ತಾಳ್ಮೆ ಕಡಿಮೆ ಹಾಗಾಗಿ ತಮ್ಮ ಪ್ರೇಮಿ ಬೇಗ ಬೋರಾಗುತ್ತಾರೆ. ಇದರಿಂದ ಇವರು ಬೇಗ ಸೋಷ್ಯಲ್ ಮೀಡಿಯಾ, ಅಂತರ್ಜಾಲಕ್ಕೆ ಅಂಟಿಕೊಂಡು ಅದನ್ನೇ ಚಟವಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚು. 

ಕಟಕ(Cancer)
ಈ ರಾಶಿಯನ್ನು ಚಂದ್ರ ಆಳುತ್ತಾನೆ. ಹಾಗಾಗಿ, ಇವರು ಬಹಳ ಭಾವುಕರು ಮತ್ತು ಯಾವಾಗ ಹೇಗೆ ವರ್ತಿಸುತ್ತಾರೆ ಎಂದು ಹೇಳುವುದು ಕಷ್ಟ. ಹೀಗಾಗಿ, ಪ್ರೇಮವೈಫಲ್ಯ, ಕೆಲಸ ಮತ್ತಿತರೆ ವೈಫಲ್ಯಗಳ ನೋವು ಮರೆಯಲು ಎಂದು ಬೇಗ ಡ್ರಗ್ಸ್, ಔಷಧಗಳು, ನೋವು ನಿವಾರಕಗಳಿಗೆ ಅಂಟಿಬಿಡುತ್ತಾರೆ.

ಸಿಂಹ(Leo)
ಈ ರಾಶಿಯವರು ಜಗತ್ತಿನ ಯಾವುದೇ ವಿಷಯಕ್ಕೂ ಅಂಟಬಲ್ಲರು. ಇವರಿಗೆ ಎಲ್ಲವೂ ಹೆಚ್ಚಾಗಿಯೇ ಬೇಕು ಮತ್ತು ಯಾವುದಕ್ಕೂ ಹೆದರದ ಗುಣ. ಹಾಗಾಗಿ ಇವರು ಶಾಪಿಂಗ್, ಸ್ಮೋಕಿಂಗ್, ಡ್ರಿಂಕಿಂಗ್, ಜೂಜು, ಡ್ರಗ್ಸ್ ಸೇರಿದಂತೆ ಯಾವುದನ್ನು ಬೇಕಾದರೂ ಅಂಟಿಸಿಕೊಳ್ಳಬಲ್ಲರು. 

ಕನ್ಯಾ(Virgo)
ಕನ್ಯಾ ರಾಶಿಯವರು ಸೇವೆ, ಕೆಲಸದಲ್ಲೇ ಜೀವನದ ಅರ್ಥ ಕಂಡುಕೊಳ್ಳುವವರು. ಹಾಗಾಗಿ, ಸದಾ ಒಂದಿಲ್ಲೊಂದು ಕೆಲಸ ಮಾಡುತ್ತಿರುವುದೇ ಇವರ ಚಟ. ಎಷ್ಟು ಕೆಲಸ ಮಾಡಿದರೂ ತೃಪ್ತಿ ಸಿಗದವರು ಇವರು. 

ತುಲಾ(Libra)
ಈ ರಾಶಿಗೆ ಎಲ್ಲರೂ ಸಿಹಿ ಮಾತುಗಳನ್ನಾಡಿಕೊಂಡು ಪ್ರೀತಿಯಿಂದಿದ್ದರೆ ತುಂಬಾ ಇಷ್ಟ. ಹಾಗಾಗಿ ಇವರು ಸಿಹಿಗೆ ಅಂಟುವವರು. ಶುಕ್ರ ಗ್ರಹ ಇವರನ್ನಾಳುವುದರಿಂದ ಇವರಿಗೆ ಜೀವನದ ಸೂಕ್ಷ್ಮ ವಿಷಯಗಳಲ್ಲಿ ಆಸಕ್ತಿ ಹೆಚ್ಚು. ಸಿಹಿಯನ್ನೇ ಚಟವಾಗಿಸಿಕೊಳ್ಳಬಲ್ಲರು. 

ಜನಪ್ರಿಯತೆ ಬೇಕೇ? ಇಲ್ಲಿವೆ Vastu Remedies

ವೃಶ್ಚಿಕ(Scorpio)
ಇವರಿಗೆ ಲೈಂಗಿಕಾಸಕ್ತಿ ಹೆಚ್ಚು. ಹಾಗಾಗಿ, ಬೇಗ ಲೈಂಗಿಕ ವಿಷಯಗಳಿಗೆ ಅಡಿಕ್ಟ್ ಆಗಬಲ್ಲರು. ಈ ವಿಷಯದಲ್ಲಿ ಇವರು ತಮ್ಮ ಸಂಗಾತಿಗೆ ಬಹಳ ಖುಷಿ ಪಡಿಸಬಲ್ಲರು. ಇವರ ಪ್ರೀತಿಯ ಭಾಷೆಯೇ ಲೈಂಗಿಕ ವಿಷಯವಾಗಿರುತ್ತದೆ. 

ಧನು(Sagittarius)
ಇವರಿಗೆ ಸದಾ ಬದಲಾವಣೆ ಬೇಕು. ಅದರಲ್ಲೇ ಥ್ರಿಲ್ ಕಾಣುವವರಿವರು. ಹಾಗಾಗಿ, ಸದಾ ಭವಿಷ್ಯದ ಬದಲಾವಣೆಗಾಗಿ ಕಾತರದಿಂದ ಎದುರು ನೋಡುವವರು. ಹೀಗಾಗಿ ಇವರು ಪದೇ ಪದೆ ಕೆಲಸ ಬದಲಿಸುತ್ತಾರೆ, ಸ್ಥಳ ಬದಲಿಸುತ್ತಾರೆ. ಕಡೆಕಡೆಗೆ ಈ ಬದಲಾವಣೆಯ ಆಸೆ ಒಂದು ಚಟವಾದರೂ ಆಶ್ಚರ್ಯವಿಲ್ಲ. 

ಮಕರ(Capricorn)
ಇವರು ಬದುಕು ಹೇಗೇ ಬಂದರೂ ಅದರಲ್ಲಿ ನೋವನುಭವಿಸುವವರು. ಸಂತೋಷ ಬಂದರೂ ಅದರ ಹಿಂದೆ ನೋವು ಇರುತ್ತದೆ ಎಂದುಕೊಂಡವರು. ಜೀವನದಲ್ಲಿ ಅತ್ಯುತ್ತಮವಾದುದನ್ನು ಪಡೆಯಲು ಸಾಕಷ್ಟು ನೋವನುಭವಿಸಬೇಕು ಎಂದು ಅರಿತವರು. ಹಾಗಾಗಿ, ನೋವಿನಲ್ಲಿರುವುದನ್ನೇ ಒಪ್ಪಿ ಅಪ್ಪುವ ಚಟ ಇವರದು. ಇದಲ್ಲದೆ ಅತಿಯಾಗಿ ಕೆಲಸ ಮಾಡುವ ಚಟವೂ ಇವರಿಗಂಟುತ್ತದೆ.

ಕಪ್ಪು ದಾರ ಕಾಲಿಗೆ ಕಟ್ಟೋದು ಒಳ್ಳೆಯದು, ಆದರೆ ಈ 2 ರಾಶಿಯವರು ಕಟ್ಟಕೂಡದು!

ಕುಂಭ(Aquarius)
ಇವರು ಎಲ್ಲರೊಂದಿಗೆ ಸ್ನೇಹಿತರಾಗಿರಲು ಎಷ್ಟೇ ಪ್ರಯತ್ನಿಸಿದರೂ ಕಡೆಗೆ ಒಬ್ಬರಿರುವುದೇ ಸುಖ ಎಂದು ಕಂಡುಕೊಳ್ಳುವವರು. ಹಾಗಾಗಿ, ಒಂಟಿತನಕ್ಕೆ ಅಂಟುವ ಚಟ ಈ ರಾಶಿಗೆ. 

ಮೀನ(Pisces)
ಮೀನ ಜಲ ತತ್ವದ್ದು. ಹಾಗಾಗಿ, ಈ ರಾಶಿ ಬೇಗ ಮದ್ಯ ಸೇವನೆಗೆ ಅಂಟಿಕೊಳ್ಳಬಲ್ಲದು. ವಾಸ್ತವದಿಂದ ದೂರ ಓಡಿ ಹೋಗಿ ಕನಸಿನ ಲೋಕದಲ್ಲಿ ತೇಲಾಡುತ್ತಾ ಸಂತೋಷವಾಗಿರಲು ಬಯಸುತ್ತಾರೆ. ಹಾಗಾಗಿ, ಇವರು ಮದ್ಯದ ಚಟ ಅಂಟಿಸಿಕೊಳ್ಳುತ್ತಾರೆ. 

click me!