ಹುಟ್ಟಿನಂತೆಯೇ ಸಾವು ಕೂಡಾ ಸಹಜ ಪ್ರಕ್ರಿಯೆ. ಆದರೂ ಆ ಬಗ್ಗೆ ಮಾತಾಡಿದರೆ ಜನ ಅಪಶಕುನ ಎಂದು ಭಾವಿಸುತ್ತಾರೆ. ರಾಶಿಚಕ್ರ ಬಳಸಿ ಯಾರಿಗೆ ಯಾವಾಗ ಮಗುವಾಗುತ್ತದೆ, ಯಾರ ಸ್ವಭಾವ ಏನು ಎಂದು ಹೇಳುವಂತೆಯೇ ಯಾರು ಹೇಗೆ ಈ ಲೋಕಕ್ಕೆ ವಿದಾಯ ಹೇಳುತ್ತಾರೆ ಎಂಬುದನ್ನೂ ಹೇಳಲು ಸಾಧ್ಯವಿದೆ.
ವೈದ್ಯಕೀಯ ಲೋಕದಲ್ಲಿ ಎಂಥದ್ದೇ ಪ್ರಯೋಗಗಳಾಗಲಿ, ಹುಟ್ಟುವ ದಿನಾಂಕವನ್ನು ಹೇಳಬಹುದೇ ಹೊರತು, ಯಾರು ಹೇಗೆ, ಎಷ್ಟೊತ್ತಿಗೆ ಸಾಯುತ್ತಾರೆ ಅನ್ನೋದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನೂ ಭೀಷ್ಮನಂತೆ ಇಚ್ಛಾಮರಣಿಯಾಗೋದು ಇಲ್ಲ ಬಿಡಿ. ಅದರಲ್ಲಿಯೂ ಈಗೀಗ ಯಂಗ್‌ಸ್ಟರ್ಸ್ ಸಾಯೋದ ನೋಡಿದರೆ, ಸಾವು ಕರೆದಾಗ ಹೋಗುವುದು ಎಲ್ಲರಿಗೂ ಅನಿವಾರ್ಯ ಎಂಬುವುದು ಮನವರಿಕೆಯಾಗುತ್ತೆ.
ಮಗುವೊಂದು ಹುಟ್ಟಿದ ಸಮಯಕ್ಕೆ ಅನುಗುಣವಾಗಿ ರಾಶಿ, ನಕ್ಷತ್ರವೆಲ್ಲವೂ ನಿಗದಿಯಾಗುತ್ತೆ. ಅದೇ ರೀತಿ ಹುಟ್ಟಿದ ಮಗು ಸಾಯೋದು ಗ್ಯಾರಂಟಿ. ಅದರ ರಾಶಿ (Sun Sign), ನಕ್ಷತ್ರಕ್ಕೆ (Star) ಅನುಗುಣವಾಗಿ ಸಾವೂ ಸಹ ನಿಶ್ಚಿತವಾಗಿರುತ್ತೆ ಎನ್ನುವುದು ಭಾರತೀಯ ಜ್ಯೋತಿಷ್ಯದ ನಂಬಿಕೆ. ಪ್ರತಿಯೊಂದೂ ರಾಶಿಗೂ ತನ್ನದೇ ಆದ ವಿಶೇಷ ಗುಣವಿರುವುದರೊಂದಿಗೆ ಪಂಚಭೂತಗಳೊಂದಿಗೆ ಕನೆಕ್ಟ್ ಆಗಿರುತ್ತೆ. ಬೆಂಕಿ, ಗಾಳಿ, ನೀರು, ಭೂಮಿ, ಆಕಾಶಗಳಲ್ಲಿ ಒಂದು ತತ್ವದೊಂದಿಗೆ ಪ್ರತೀ ರಾಶಿ(Zodiac sign)ಯೂ ತನ್ನದೇ ಆದ ರೀತಿಯಲ್ಲಿ ಸಂಪರ್ಕ ಹೊಂದಿರುತ್ತೆ. ಹಾಗಾಗಿ ಮಗುವಿನ ಹುಟ್ಟು ರಾಶಿಗೆ ಅನುಗುಣವಾಗಿ ಸತ್ತ ಮೇಲೆ ಎಲ್ಲರೂ ಈ ಪಂಚಭೂತಗಳಲ್ಲಿ ಒಂದಾಗಲೇ ಬೇಕು. ಜನ್ಮ ರಾಶಿಗೂ, ಪಂಚಭೂತಕ್ಕt ಸಂಬಂಧವಿದೆ ಅಂದ ಮೇಲೆ, ಆಯಾ ರಾಶಿಯಲ್ಲಿ ಹುಟ್ಟಿದವರು ಹೀಗೆಯೇ ಸಾಯಬಹುದು ಎಂಬುದನ್ನೂ ನಿರೀಕ್ಷಿಸಬಹುದಾ? ನೂರಕ್ಕೆ ನೂರು ನಿಜವಾಗದೇ ಹೋಗಬಹುದು; ಯಾಕೆಂದರೆ ಜನ್ಮರಾಶಿ ಜೊತೆಗೆ ವ್ಯಕ್ತಿಯ ಲೈಫ್‌ಸ್ಟೈಲ್ ಕೂಡ ಇಲ್ಲಿ ಮಖ್ಯವಾಗಿರುತ್ತೆ. ಇಲ್ಲಿರುವ ಎಲ್ಲ ಬಗೆಯ ಸಾವೂ ಸಾಧ್ಯತೆ ಅಷ್ಟೇ. ; ಜೀವನಶೈಲಿ ಸರಿಯಾಗಿದ್ದರೆ, ಮನುಷ್ಯನ ಆರೋಗ್ಯವೂ ಸರಿಯಾಗಿರುತ್ತೆ. ಅಲ್ಲದೇ ಶನಿಯಂಥ ಗ್ರಹಗಳು ಸೂಕ್ತ ಸ್ಥಾನದಲ್ಲಿದ್ದು, ರಕ್ಷಿಸಿದರೆ, ಅಪಮೃತ್ಯು ಕಾಡುವುದಿಲ್ಲ. ಆದರೆ, ಯಾವ ರಾಶಿಗೆ ಯಾವ ಪಂಚಭೂತದೊಂದಿಗೆ ಲೀನವಾಗಿರುತ್ತೆ ನೋಡೋಣ.
ಮೇಷ (Aries)ರಾಶಿ, ಗುಣ: ಅಗ್ನಿ (Fire)
ಮೇಷ ರಾಶಿಯವರಿಗೆ ಬೆಂಕಿ ಅವಘಡದಲ್ಲಿ (Fire Accident) ಸಾಯುವ ದುರ್ಯೋಗ ಇರಬಹುದು. ಹಾಗಂಥ ಅದೇ ರೀತಿ ಸಾವು ಬರುತ್ತೆ ಅಂತ ಹೇಳಲಾಗೋಲ್ಲ. ಆಯುಷ್ಯ ಮುಗಿದು, ಸಹಜವಾಗಿಯೇ ಕೊನೆಯುಸಿರೆಳೆದು, ಚಿತೆಯ ಬೆಂಕಿಯಲ್ಲಿ ಸುಟ್ಟು ಹೋಗುವ ವಿಧಿಯೂ ಆಗಿರಬಹುದು. ಇದು ನಿಮ್ಮ ಇತರ ಗ್ರಹಗಳ ಪ್ರಭಾವ, ಸ್ಥಾನ, ಜೀವನಶೈಲಿಯನ್ನು (Lifestyle) ಅವಲಂಬಿಸಿರುತ್ತೆ.
ವೃಷಭ (Taurus) ರಾಶಿ, ಗುಣ: ಭೂಮಿ (Earth)
ಈ ರಾಶಿಯಲ್ಲಿ ಹುಟ್ಟಿದವರು ಸಿಕ್ಕಾಪಟ್ಟೆ ಎಮೋಷನಲ್ ಆಗಿರುತ್ತಾರೆ. ಇವರಿಗೆ ಹೃದಯಾಘಾತ (Heart Attack)ದಿಂದ ಸಾವು ಸಂಭವಿಸಬಹುದು. ತುಂಬು ಬಾಳನ್ನು ನಡೆಸುತ್ತಾರೆ ಇವರು. ಈ ರಾಶಿಯವರು ರಕ್ತದೊತ್ತಡ (Blood Pressure), ಹೃದಯಕ್ಕೆ ಸಂಬಂಧಿಸಿದ (Heart Related Diseases) ಕಾಯಿಲೆ ಬಗ್ಗೆ ಜಾಗರೂಕರಾಗಿರಬೇಕು.
ಎಂಥ ಒತ್ತಡದ ಸಂದರ್ಭವನ್ನೂ ಸಮಾಧಾನದಿಂದ ನಿಭಾಯಿಸುವ ರಾಶಿಗಳಿವು..
ಮಿಥುನ (Gemini) ರಾಶಿ, ಗುಣ: ಗಾಳಿ (Air)
ಯಕೃತ್ (Liver)ಗೆ ಸಂಬಂಧಿ ರೋಗಗಳು ಮಿಥುನ ರಾಶಿಯವನ್ನು ಕಾಡಬಹುದು. ಅದೇ ರೋಗದಿಂದಲೇ ಸಾಯಲೂಬಹುದು. ಮತ್ತೆ ಹೇಳುವುದಾದರೆ ಲೈಫ್‌ಸ್ಟೈಲ್ ಸೂಕ್ತವಾಗಿದ್ದರೆ, ಲಿವರ್ ಆರೋಗ್ಯದ ಕಡೆ ಗಮನ ಹರಿಸಿದರೆ ಬಾಳಲ್ಲಿ ಯಾವುದೇ ಆರೋಗ್ಯ ಸಮಸ್ಯೆಯೂ ಇರೋಲ್ಲ. ಈ ರಾಶಿಯವರು ಔಷಧಿಗಳ ಓವರ್‌ಡೋಸ್ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು.
ಕಟಕ (Cancer) ರಾಶಿ, ಗುಣ: ನೀರು (Water)
ಮೂತ್ರಕೋಶ (Kidney)ಕ್ಕೆ ಸಂಬಂಧಿಸಿದ ರೋಗಗಳಿಂದ ಈ ರಾಶಿಯವರು ಬಳಲಬಹುದು. ಯಥೇಚ್ಛ ನೀರು (Water), ದ್ರವ ಪದಾರ್ಥ ಕುಡಿಯಬೇಕು. ಆರಂಭದಿಂದಲೂ ಕಿಡ್ನಿ ಆರೋಗ್ಯಕ್ಕೆ (Kidney Helath) ಸಂಬಂಧಿಸಿದಂತೆ ಜಾಗರೂಕರಾಗಿರಬೇಕು.
ಸಿಂಹ (Leo) ರಾಶಿ, ಗುಣ: ಬೆಂಕಿ (Fire)
ಸಿಂಹದಂತೆಯೇ ಬಾಳು ಈ ರಾಶಿಯವರು ಕ್ಯಾನ್ಸರ್‌ನಂಥ ಮಾರಕ ರೋಗದಿಂದ ಅಸುನೀಗಬಹುದು. ಅದರಲ್ಲಿಯೂ ಕುಡಿಯುವ, ಧೂಮಪಾನದಂಥ ದುಶ್ಚಟಗಳಿದ್ದರಂತೂ ಈ ರಾಶಿಯವರು ದೊಡ್ಡ ಕಾಯಿಲೆಗೆ ಬಲಿಯಾಗೋದು ಗ್ಯಾರಂಟಿ. ದುಶ್ಚಟಗಳಿಂದ ಪಾರಾಗಿ, ಅತ್ಯುತ್ತಮ ಜೀವನಶೈಲಿ ನಡೆಸಿದರೆ ಒಳ್ಳೆ ಸಾವು ಬರಬಹುದು. ಇಲ್ಲದಿದ್ದರೆ ಬೇಗ ರೋಗಗಳು ಇವರನ್ನು ಕಾಡಬಹುದು.
ಕನ್ಯಾ (Virgo) ರಾಶಿ, ಗುಣ: ಭೂಮಿ
ಈ ರಾಶಿಯವರು ಬೇರೆಯವರಿಗೆ ಕಂಪೇರ್ ಮಾಡಿದರೆ ಸ್ವಲ್ಪ ಸಾಫ್ಟ್ ಗುಣ ಹೊಂದಿರುತ್ತಾರೆ. ಹಾಗಾಗಿ ದೀರ್ಘಾಯುಷ್ಯಗಳಾದ ಇವರು, ಎಲ್ಲರೊಟ್ಟಿಗೆ ನಗ್ ನಗ್ತಾ ಇರುವಾಗಲೇ ಸಾವು ಕಾಣುವ ಸಾಧ್ಯತೆ ಹೆಚ್ಚು. ಒಟ್ಟಿನಲ್ಲಿ ಭೂಮಿಯ ಗುಣ ಹೊಂದಿರುವ ಕನ್ಯಾ ರಾಶಿಯವರಿಗೆ ಸಹನೆಯೂ ಹೆಚ್ಚು. ಸಾವೂ ಸುಖವಾಗಿರುತ್ತೆ.
ತುಲಾ (Libra) ರಾಶಿ, ಗುಣ: ಗಾಳಿ
ಇವರು ಚೆನ್ನಾಗಿಯೇ ಜೀವನ ನಡೆಸಿರುತ್ತಾರೆ. ಆದರೆ, ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಯಾರೂ ಜೊತೆಗಿಲ್ಲದಂತಾಗುತ್ತದೆ. ಅವರಿದ್ದರೆ ಜೊತೆಯಲ್ಲಿ, ಸಾವನ್ನೂ ಮುಂದೂಡಬಹುದೇನೋ. ಹಾಗಾಗಿ ತುಲಾ ರಾಶಿಯವರು ತಮ್ಮ ಸಂಗಾತಿಗೆ ತುಂಬು ಪ್ರೀತಿ ನೀಡಿದರೊಳಿತು.
ವೃಶ್ಚಿಕ (Scorpio) ರಾಶಿ, ಗುಣ: ನೀರು
ಉಸಿರುಗಟ್ಟಿ ಸಾಯಬಹುದು. ಇದು ಬಹಳ ಕಾರಣಗಳಿಂದ ಉಂಟಾಗಬಹುದು. ಕೆಲವೊಮ್ಮೆ ಸಹಜ ಸಾವು ಕೂಡ ಉಸಿರುಗಟ್ಟಿಯೇ ನಡೆಯುವುದಾಗಿರುತ್ತದೆ. ಆದರೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಬಹುದು, ಬಂದ್ ಆದ ಸ್ಥಳಗಳಲ್ಲಿ ಕೂಡ ಉಸಿರುಗಟ್ಟಬಹುದು. ಇಕ್ಕಟ್ಟಾದ ಪ್ರದೇಶಗಳಲ್ಲಿ ಹುಷಾರಾಗಿರಬೇಕು.
ಈ ಗ್ರಹಗಳು ಅಪಾಯಕಾರಿ, ಬಚಾವಾಗಲು ಹೀಗೆ ಮಾಡಿ
ಧನು (Sagittarius) ರಾಶಿ, ಗುಣ: ಬೆಂಕಿ
ಆರೋಗ್ಯ, ಆಸ್ತಿ, ಸಂಬಂಧಗಳನ್ನು ಚೆನ್ನಾಗಿಟ್ಟುಕೊಂಡರೆ ಈ ರಾಶಿಯರಿಗೆ ಸಹಜ ಸಾವು ಬರಬಹುದು. ಇಲ್ಲದಿದ್ದರೆ ಧನು ರಾಶಿಯವರು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳು ಸಹಜವಾಗಿಯೇ ಬರುತ್ತೆ. ಹಾಗಾಗಿ ಈ ರಾಶಿಯವರು ಜೀವನವನ್ನು ಚೆನ್ನಾಗಿ ಬ್ಯಾಲೆನ್ಸ್ ಮಾಡುವುದನ್ನು ಕಲಿತರೆ ಒಳ್ಳೆಯದು.
ಮಕರ (Capricorn) ರಾಶಿ, ಗುಣ: ಭೂಮಿ
ಬಹಳ ಬೇಗ ಶತ್ರುಗಳನ್ನು ಸೃಷ್ಟಿಸಿಕೊಳ್ಳುವ ಇವರಿಗೆ, ಅವರಿಂದಲೇ ಸಾವು ಬರುವ ಸಾಧ್ಯತೆ ಹೆಚ್ಚು. ಆದಕ್ಕೆ ಎಲ್ಲರನ್ನೂ ಸ್ನೇಹದಿಂದ ನೋಡುವ ಗುಣವನ್ನು ಮಕರ ರಾಶಿಯವರು ಬೆಳೆಯಿಸಿಕೊಳ್ಳಬೇಕು. ಆಕ್ರೋಶ, ದುಡುಕು, ಬಾಯಿ ಚಪಲ, ಮತ್ತೊಬ್ಬರಿಗೆ ಚಾಡಿ ಹೇಳುವಂಥ ಕೆಟ್ಟ ಗುಣಗಳೊಂದಿಗೆ, ಅರಿಷಡ್ವರ್ಗಗಳನ್ನು ಗೆದ್ದರೆ ಬದುಕು ಚೆನ್ನಾಗಿರುತ್ತೆ. ಯಾರಾದರ ವಿರೋಧ ಕಟ್ಟಿಕೊಂಡರೆ, ಪರಿಸ್ಥಿತಿಯನ್ನು ನಿಭಾಯಿಸುವುದನ್ನೂ ಇವರು ಕಲಿತಿರಬೇಕು.
ಕುಂಭ (Aquarius) ರಾಶಿ, ಗುಣ; ಗಾಳಿ
ಇವರೇನೂ ಸಿಕ್ಕಾಪಟ್ಟೆ ಫುಡ್ಡೀ ಆಗದಿದ್ದರೂ, ಇವರಿಗೆ ಆಹಾರದಿಂದಲೇ ಸಾವು ಬರಬಹುದು. ಅಯ್ಯೋ 'ಆರತಿ ತಗೊಂಡ್ರೆ ಉಷ್ಣ, ತೀರ್ಥ ತಗೊಂಡ್ರೆ ಥಂಡಿ' ಅಂತ ಹೆದರಿಕೊಂಡು ಕೂರುವುದೇನೂ ಬೇಡ. ಯಾವ ಆಹಾರದಿಂದ ಸಾವು ಬರುತ್ತೋ ಅಂತ ಗೆಸ್ ಮಾಡೋದು ಕಷ್ಟ. ಚಿಂತೆ ಬಿಟ್ಟು, ಸರಿಯಾಗಿ ತಿಂದು, ಉಂಡು ಮಾಡಿದರೆ ಒಳ್ಳೆಯದು. ಆಯಸ್ಸು ಮುಗಿಯಿತು ಅಂದ್ರೆ ತಿನ್ನೋದು ಎಲ್ಲವೂ ವ್ಯರ್ಥವೇ. ಹೊಟ್ಟೆ ಆರೋಗ್ಯದ ಕಡೆ ಹೆಚ್ಚು ಗಮನ ಇರಲಿ.
30 ವರ್ಷಗಳ ಬಳಿಕ ಕುಂಭದಲ್ಲಿ ಶನಿ ಜಯಂತಿ; ಈ ಮೂರು ರಾಶಿಗೆ ಮಂಗಳಕರ
ಮೀನ (Pisces) ರಾಶಿ, ಗುಣ: ನೀರು
ಬದುಕಿನಲ್ಲಿ ಎಲ್ಲಾ ರೀತಿಯ ಸುಖವನ್ನೂ ಅನುಭವಿಸಿರುತ್ತಾರೆ ಮೀನಾ ರಾಶಿಯವರು. ಸಾಕಷ್ಟ ಹೆಸರ, ಹೊಗಳಿಕೂ ಇವರಿಗೆ ದಕ್ಕಾಗಿರುತ್ತೆ. ತಮ್ಮವರು ಜೊತೆಯಾಗಿದ್ದಾಗಲೇ ಸುಖ ಮರಣದ ಸಾಧ್ಯತೆ ಈ ರಾಶಿಯವರಿಗೆ ಹೆಚ್ಚು. ಹಾಗಂಥ ಹೇಗಾಯಿತೋ ಹಾಗೆ ಬದುಕಿ, ಜೀವನವನ್ನು ಹಾಳು ಮಾಡಿ ಕೊಳ್ಳಬಾರದು.