ಒತ್ತಡ ಹೆಚ್ಚಾದಾಗ, ಕೆಲವೊಂದು ಆಘಾತಕಾರಿ ಸನ್ನಿವೇಶಗಳಲ್ಲಿ ಬಹುತೇಕರು ತಮ್ಮ ಸಮಾಧಾನ ಚಿತ್ತ ಕಳೆದುಕೊಂಡು ಪ್ರತಿಕ್ರಿಯಿಸುತ್ತಾರೆ. ಆದರೆ, ಈ ಐದು ರಾಶಿಗಳು ಎಂಥದೇ ಸನ್ನಿವೇಶದಲ್ಲೂ ತಮ್ಮ ಕಾಮ್‌ನೆಸ್ ಕಳೆದುಕೊಳ್ಳದೇ ಸಂದರ್ಭ ನಿಭಾಯಿಸಬಲ್ಲವು.
ಒತ್ತಡ(stress)ವನ್ನು ನಿಭಾಯಿಸುವುದು ಎಲ್ಲರಿಂದ ಸಾಧ್ಯವಿಲ್ಲ. ಕೆಲವರು ಒತ್ತಡ ಹೆಚ್ಚಾದಾಗ ಬೇಗ ಕೋಪಗೊಳ್ಳುತ್ತಾರೆ, ಮತ್ತೆ ಕೆಲವರಿಗೆ ಅಂಥ ಸಂದರ್ಭದಲ್ಲಿ ಬೇಗ ಅಲು ಬಂದು ಬಿಡುತ್ತದೆ, ಮತ್ತೆ ಕೆಲವರು ತಮ್ಮ ಒತ್ತಡದ ಕಾರಣಕ್ಕೆ ಸುತ್ತಲಿರುವವರ ಮೇಲೆ ಕಿರುಚಾಡುತ್ತಾರೆ. ಇನ್ನೂ ಕೆಲವರು ಒತ್ತಡದಿಂದ ಖಿನ್ನತೆ(depression)ಗೊಳಗಾಗುತ್ತಾರೆ. ಕೆಲವರಲ್ಲಿ ಒತ್ತಡ ಆತಂಕ, ಭಯವನ್ನು ಹುಟ್ಟು ಹಾಕುತ್ತದೆ. ಸಿಕ್ಕಾಪಟ್ಟೆ ಟೆನ್ಷನ್ ಕೊಡುತ್ತದೆ. ಆದರೆ, ಅಪರೂಪದಲ್ಲಿ ಅಪರೂಪದವರು ಎಂಥದೇ ಒತ್ತಡದ ಸಂದರ್ಭಗಳು ಎದುರಾಗಲಿ, ಅದನ್ನು ಬಹಳ ಸಮಾಧಾನ ಚಿತ್ತದಿಂದ ಎದುರಿಸುತ್ತಾರೆ. ಕಾಮ್ ಆಗಿ ಸನ್ನಿವೇಶವನ್ನು ಹ್ಯಾಂಡಲ್ ಮಾಡುತ್ತಾರೆ. ಕಷ್ಟದ ಸಂದರ್ಭಗಳಲ್ಲೂ ಸಂಪೂರ್ಣ ಸಾಮಾನ್ಯ ಚಿತ್ತಸ್ಥಿತಿಯನ್ನೇ ಪ್ರದರ್ಶಿಸುತ್ತಾರೆ. ಅರೆ, ಇಂಥವರು ಎಲ್ಲಾದರೂ ಇರಲು ಸಾಧ್ಯವೇ ಎಂದುಕೊಂಡಿರಾ? ಈ ಐದು ರಾಶಿ(zodiac signs)ಯವರಲ್ಲಿ ಇಂಥ ಸಾಮರ್ಥ್ಯ ಇರುತ್ತದೆ.
ವೃಷಭ ರಾಶಿ(Taurus)
ವೃಷಭ ರಾಶಿಯವರು ಮೊಂಡುತನದವರಾಗಿರಬಹುದು, ಆದರೆ ಒತ್ತಡದ ಸಂದರ್ಭಗಳಲ್ಲಿ ಅವರು ತಾಳ್ಮೆಯಿಂದಿರುತ್ತಾರೆ. ಮತ್ತು ಮಾನಸಿಕವಾಗಿ ಸಾಕಷ್ಟು ಸಂಯೋಜನೆಯನ್ನು ಹೊಂದಿರುತ್ತಾರೆ. ಒತ್ತಡದ ಸಂದರ್ಭದಿಂದ ಕಂಗಾಲಾಗುವ ಬದಲು, ಅವರು ವಿಷಯಗಳನ್ನು ನಿಧಾನವಾಗಿ ತೆಗೆದುಕೊಳ್ಳಲು ಮತ್ತು ಒಂದು ಸಮಯದಲ್ಲಿ ಒಂದೇ ಸಮಸ್ಯೆಯನ್ನು ನಿಭಾಯಿಸಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಅವರು ಹೆಚ್ಚಾಗಿ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ.
undefined
ಈ ಗ್ರಹಗಳು ಅಪಾಯಕಾರಿ, ಬಚಾವಾಗಲು ಹೀಗೆ ಮಾಡಿ
ತುಲಾ ರಾಶಿ(Libra)
ತುಲಾ ರಾಶಿಯವರು ಸಮತೋಲಿತ ಜನರು. ಅವರು ಸಂವೇದನಾಶೀಲರು ಮತ್ತು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಉತ್ತಮರು. ಅವರು ಸಾಮಾನ್ಯವಾಗಿ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗುವಂಥ ಸಂಘರ್ಷಗಳನ್ನು ಹುಟ್ಟುವ ಮೊದಲೇ ತಪ್ಪಿಸುವ ಕೆಲಸಕ್ಕೆ ಆದ್ಯತೆ ಕೊಡುತ್ತಾರೆ. ಇದರಿಂದ ಹೆಚ್ಚಿನ ಬಾರಿ ಅವರು ಒತ್ತಡದ ಪರಿಸ್ಥಿತಿ ಬಾರದಂತೆ ಎಚ್ಚರ ವಹಿಸುತ್ತಾರೆ. ಆದರೆ ಅನಿವಾರ್ಯವಾಗಿ ತೊಂದರೆಗೀಡಾಗುವ ಸಂದರ್ಭ ಎದುರಾದರೆ, ಆಗ ಜಾಣತನದಿಂದ ಪರಿಸ್ಥಿತಿ ನಿಭಾಯಿಸುತ್ತಾರೆ. ಈ ಪರಿಸ್ಥಿತಿಯಿಂದ ಹೇಗೆ ಪಾರಾಗಬಹುದು ಎಂಬ ಬಗ್ಗೆ ಜಾಣತನದ ಉಪಾಯಗಳನ್ನು ಮಾಡಿ, ಎಲ್ಲವನ್ನೂ ಸಮತೋಲನಗೊಳಿಸುತ್ತಾರೆ.
ಧನು ರಾಶಿ(Sagittarius)
ಈ ರಾಶಿಚಕ್ರ ಚಿಹ್ನೆಗೆ ಸೇರಿದ ಜನರು ತುಂಬಾ ನಿರಾತಂಕರೂ ಮತ್ತು ಸಾಹಸಮಯರೂ ಆಗಿರುತ್ತಾರೆ. ಅವರು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾಲಹರಣ ಮಾಡಲು ಇಷ್ಟ ಪಡುವುದಿಲ್ಲ. ಕೊರಗುತ್ತಾ ಕೂರುವುದಿಲ್ಲ. ಬದಲಿಗೆ ಮೌನವಾಗಿ ಪರಿಸ್ಥಿತಿ ತಿಳಿಗೊಳಿಸಬಹುದಾದ ದಾರಿಗಳ ಬಗ್ಗೆ ಯೋಚಿಸುತ್ತಾರೆ. ಮತ್ತು ಅವನ್ನು ಸರಳವಾಗಿ ಪರಿಹರಿಸುತ್ತಾರೆ.
ಮಕರ ರಾಶಿ(Capricorn)
ಮಕರ ರಾಶಿಯವರು ತಮ್ಮ ಒತ್ತಡವನ್ನು ಎಂದಿಗೂ ಜೊತೆಗಿರುವವರಿಗೆ ತೋರಿಸಿಕೊಳ್ಳುವುದಿಲ್ಲ. ತಮ್ಮನ್ನು ಯಾವುದೇ ಒತ್ತಡ ಬಾಧಿಸಿಲ್ಲ ಎಂಬಂತೆ ಇರುತ್ತಾರೆ. ವಿಷಯವು ಕೈ ಮೀರುವವರೆಗೆ ಅಥವಾ ಅವರ ನಿಯಂತ್ರಣವನ್ನು ಮೀರುವವರೆಗೆ ಅವರು ತಮ್ಮ ಶಾಂತತೆಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅವರು ಮಾನಸಿಕವಾಗಿ ತುಂಬಾ ಬಲಶಾಲಿ ಮತ್ತು ತಾಳ್ಮೆಯಿಂದಿರುತ್ತಾರೆ. ಒತ್ತಡದ ಸಂದರ್ಭಗಳಲ್ಲಿ ಕೂಡಾ ಮಾತಾಡುವಾಗ, ಏನಾದರೂ ಕ್ರಮ ತೆಗೆದುಕೊಳ್ಳುವಾಗ ಮುಂದಿನ ಪರಿಣಾಮಗಳನ್ನು ಯೋಚಿಸುತ್ತಾರೆ.
Vastu Tips: ಆನೆಯನ್ನು ಬಳಸಿ, ಮನೆಯ ಸಮೃದ್ಧಿ ನೆಮ್ಮದಿ ಹೆಚ್ಚಿಸುವುದು ಹೀಗೆ..
ಮೀನ ರಾಶಿ(Pisces)
ಮೀನ ರಾಶಿಯವರು ತುಂಬಾ ಸೂಕ್ಷ್ಮವಾಗಿರುತ್ತಾರೆ, ಅದಕ್ಕಾಗಿಯೇ ಅವರು ಚಿಕ್ಕ ವಿಷಯಗಳಿಂದಲೂ ಪ್ರಭಾವಿತರಾಗುವ ಸಾಧ್ಯತೆಯಿದೆ. ಆದಾಗ್ಯೂ, ಒತ್ತಡವು ಅವರ ಮೇಲೆ ತೀವ್ರವಾಗಿ ಪರಿಣಾಮ ಬೀರುವುದಿಲ್ಲ. ಹೆಚ್ಚು ಕೆಲಸ ಮಾಡುವ ಬದಲು, ಅವರು ಶಾಂತವಾಗಿರಲು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಬೆಂಬಲಕ್ಕಾಗಿ ಅವರು ತಮ್ಮ ಪ್ರೀತಿಪಾತ್ರರನ್ನು ಆಶ್ರಯಿಸುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.